ಟೆಲಿಕಾಂ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು, ಭಾರತದ 238 ನಗರದಲ್ಲಿ 5G ಸೇವೆ ಲಭ್ಯ!

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದೆ. ಇದೀಗ ಭಾರತದ ಬಹುತೇಕ ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ. ಈ ಕುರಿತು ಸಂಸತ್ತಿನಲ್ಲಿ ಸಂವಹನ ರಾಜ್ಯ ಸಚಿವ ಅಧಿಕೃತ ಮಾಹಿತಿ ನೀಡಿದ್ದಾರೆ. ಭಾರತದ 238 ನಗರದಲ್ಲಿ ಇದೀಗ 5ಜಿ ಸೇವೆ ಲಭ್ಯವಿದೆ. 

Telecom revolution 5G service available at 238 Indian cities says minister of state for communications in parliament ckm

ನವದೆಹಲಿ(ಫೆ.08): ಭಾರತದಲ್ಲಿ ಡಿಜಿಟಲ್ ಇಂಡಿಯಾ ಹಾಗೂ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿನ ಅಭಿವೃದ್ಧಿಯಿಂದ ಡಿಜಿಟಲ್ ಇಂಡಿಯಾ ಮಹತ್ತರ ಅಭಿವೃದ್ಧಿಯಾಗುತ್ತಿದೆ. ಇದೀಗ ಮತ್ತೊಂದು ಮೈಲಿಗಲ್ಲು ಭಾರತ ನಿರ್ಮಿಸಿದೆ. ಭಾರತದ 238 ನಗರದಲ್ಲಿ ಇದೀಗ 5ಜಿ ಸೇವೆ ಲಭ್ಯವಿದೆ. ಅತೀ ವೇಗದ 5ಜಿ ಸೇವೆ ಇದೀಗ ಹಳ್ಳಿ ಹಳ್ಳಿಗೂ ತಲುಪುತ್ತಿದೆ ಎಂದು ಸಂವಹನ ಖಾತೆಯ ರಾಜ್ಯ ಸಚಿವ ದೇವುಸಿನ್ಹ ಚೌವ್ಹಾಣ್ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದಾರೆ. 2023ರ ಜನವರಿ ಅಂತ್ಯದೊಳಗೆ 238 ನಗರದಲ್ಲಿ 5ಜಿ ಸೇವೆ ಲಭ್ಯವಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಸ್ಪೆಕ್ಟ್ರಂ ಹರಾಜು ಯಶಸ್ವಿಯಾಗಿ ನಡೆಸಲಾಗಿದೆ. ಬಳಿಕ ಭಾರತದಲ್ಲಿ 5 ಜಿ ಸೇವೆ ಕುರಿತ ರೋಡ್ ಮ್ಯಾಪ್ ಸಿದ್ದಪಡಿಸಿ ಕೆಲಸ ಆರಂಭಿಸಲಾಗಿದೆ ಎಂದು ದೇವುಸಿನ್ಹ ಚೌವ್ಹಾಣ್ ಹೇಳಿದ್ದಾರೆ.

2022ರ ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ 5ಜಿ ಸೇವೆ ಆರಂಭಿಸಲಾಗಿದೆ. ಆರಂಭಿಕ ಹಂತದಲ್ಲಿ ಪ್ರಮುಖ ನಗರಗಳಲ್ಲಿ 5ಜಿ ಸರ್ವೀಸ್ ನೀಡಲಾಗಿತ್ತು. ಇದೀಗ ದೇಶದ ಬಹುತೇಕ ನಗರದಲ್ಲಿ 5ಜಿ ಸರ್ವೀಸ್ ಲಭ್ಯವಾಗಿದೆ. ಅತೀ ವೇಗದ ನೆಟ್‌ವರ್ಕ ದೇಶದ ಎಲ್ಲಾ ಭಾಗದಲ್ಲಿ ಲಭ್ಯವಾಗುವಂತೆ ಮಾಡಲು ಕೆಲಸ ನಡೆಯುತ್ತಿದೆ. ನಿಗದಿತ ಸಮಯಕ್ಕೂ ಮೊದಲೇ ಭಾರತ ಈ ಸಾಧನೆ ಮಾಡಲಿದೆ ಎಂದು ದೇವುಸಿನ್ಹ ಚೌವ್ಹಾಣ್ ಹೇಳಿದ್ದಾರೆ.

ದಾವಣಗೆರೆ, ಶಿವಮೊಗ್ಗ ಸೇರಿ ಕರ್ನಾಟಕದ 5 ನಗರದಲ್ಲಿ ಜಿಯೋ 5ಜಿ ಸೇವೆ!

1.5 ಲಕ್ಷ ಕೋಟಿಗೆ ಹರಾಜಾಗಿತ್ತು 5ಜಿ ಸ್ಪೆಕ್ಟ್ರಂ
 5ಜಿ ಸೇವೆ ನೀಡಲು ಅಗತ್ಯವಾದ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯನ್ನು 2022ರ ಜೂನ್ ತಿಂಗಳಲ್ಲಿ ನಡೆದಿತ್ತು. ರಿಲಯನ್ಸ್, ಅದಾನಿ ಗ್ರೂಪ್, ಭಾರ್ತಿ ಏರ್ಟೆಲ್, ವೋಡಾಫೋನ್ ಪ್ರಮುಖ ಟಿಲಿಕಾಂ ಕಂಪನಿಗಳು ಈ ಹರಾಜಿನಲ್ಲಿ ಪಾಲ್ಗೊಂಡಿತ್ತು.  ದಾಖಲೆಯ 1,50,173 ಕೋಟಿ ರು.ಮೊತ್ತಕ್ಕೆ ವಿವಿಧ ಕಂಪನಿಗಳು ಸ್ಪೆಕ್ಟ್ರಂ ಖರೀದಿ ಮಾಡಿತ್ತು.. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಅತ್ಯಧಿಕ ಪ್ರಮಾಣದ ತರಂಗಾಂತರ ಖರೀದಿ ಮೂಲಕ ಟಾಪ್‌ ಬಿಡ್ಡರ್‌ ಆಗಿ ಹೊರಹೊಮ್ಮಿತ್ತು. ಬಳಿಕ ಅಷ್ಟೇ ವೇಗದಲ್ಲಿ ಜಿಯೋ 5ಜಿ ಸೇವೆ ಆರಂಭಿಸಿತು. ಕರ್ನಾಟಕದ ಹಲವು ನಗರಗಳಲ್ಲಿ ಜಿಯೋ ಈಗಾಗಲೇ 5ಜಿ ಸೇವೆ ಆರಂಭಿಸಿದೆ.

ಜಿಯೋ ನಂತರದಲ್ಲಿ ಏರ್‌ಟೆಲ್‌, ವೊಡಾಫೋನ್‌-ಐಡಿಯಾ ಕಂಪನಿಗಳು ಬಿಡ್‌ ಮಾಡಿವೆ. ಗೌತಮ್‌ ಅದಾನಿ ಒಡೆತನದ ಕಂಪನಿ ಕೇವಲ 26 ಗಿಗಾಹಟ್‌್ರ್ಜ ಸ್ಪೆಕ್ಟ್ರಂ ಮಾತ್ರ ಖರೀದಿ ಮಾಡಿತ್ತು. 4ಜಿಗಿಂತ 10 ಪಟ್ಟು ಹೆಚ್ಚು ವೇಗ ಟೆಲಿಕಾಂ ಸೇವೆ ನೀಡುವ ಸಾಮರ್ಥ್ಯ ಹೊಂದಿರುವ 5ಜಿ ಸೇವೆಗಾಗಿ, ಸರ್ಕಾರ 4.3 ಲಕ್ಷ ಕೋಟಿ ರು.ಮೌಲ್ಯದ 10 ವಿವಿಧ ಮೆಗಾಹಟ್‌್ರ್ಜಗಳ ಸ್ಪೆಕ್ಟ್ರಂ ಹರಾಜಿಗೆ ಇಟ್ಟಿತ್ತು. ಈ ಪೈಕಿ ಶೇ.75ರಷ್ಟುಬಿಡ್ಡಿಂಗ್‌ ಕೇವಲ 3300 ಮೆಗಾಹಟ್ ಮತ್ತು 26 ಗಿಗಾಹಟ್‌ ಸ್ಪೆಕ್ಟ್ರಂಗೆ, ಶೇ.25ರಷ್ಟು700 ಮೆಗಾಹಟ್‌ ಬ್ಯಾಂಡ್‌ಗೆ ವ್ಯಕ್ತವಾಯಿತು.

ಜಿಯೋದಿಂದ ಬಂಪರ್ ಆಫರ್, ಕೇವಲ 61 ರೂಪಾಯಿಗೆ 5G ಡೇಟಾ ಪ್ಯಾಕ್!

4ಜಿ ಸೇವೆಗಿಂತ 10 ಪಟ್ಟು ಹೆಚ್ಚು ವೇಗದ ಇಂಟರ್ನೆಟ್‌ ಸೌಲಭ್ಯ. ಅತ್ಯುತ್ತಮ ಗುಣಮಟ್ಟದ ಒಂದಿಡೀ ಚಲನಚಿತ್ರವನ್ನು ಕೆಲವೇ ಸೆಕೆಂಡ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇ- ಆರೋಗ್ಯ ಸೇವೆಗಳು, ವಾಹನಗಳ ನಡುವೆ ಸಂಪರ್ಕ, ಆಗ್ಯುಮೆಂಟೆಡ್‌ ರಿಯಾಲಿಟಿ, ಮೆಟಾವರ್ಸ್‌ ಅನುಭವ, ಹೊಸ ಮೊಬೈಲ್‌ ಗೇಮಿಂಗ್‌ ಸೇರಿದಂತೆ ನೂರಾರು ಹೊಸತನಗಳಿಗೆ 5ಜಿ ಸೇವೆ ಅವಕಾಶ ಕಲ್ಪಿಸಿಕೊಡುತ್ತದೆ.

Latest Videos
Follow Us:
Download App:
  • android
  • ios