ಲಕ್ಷಾಂತರ ರೂ. ವೇತನದ ಉದ್ಯೋಗ ತೊರೆದು ಕಂಪನಿ ಸ್ಥಾಪಿಸಿದ ದಂಪತಿಗೆ ರತನ್ ಟಾಟಾ ನೆರವು; ಇವರೀಗ 100 ಕೋಟಿ ಒಡೆಯರು

ಸ್ವಂತ ಉದ್ಯಮ ಸ್ಥಾಪಿಸುವ ಕನಸಿನಿಂದ ಲಕ್ಷಾಂತರ ರೂ.ವೇತನದ ಉದ್ಯೋಗ ತೊರೆದ ದಂಪತಿಗೆ ಉದ್ಯಮಿ ರತನ್ ಟಾಟಾ ನೆರವು ನೀಡಿದ್ದರು. ಪರಿಣಾಮ ಇಂದು ಈ ಸಂಸ್ಥೆ ಭಾರತದ ಅತ್ಯಂತ ಯಶಸ್ವಿ ಡೇಟಾ  ಟ್ರ್ಯಾಕಿಂಗ್ ಪ್ಲಾಟ್ ಫಾರ್ಮ್ ಆಗಿ ಬೆಳೆದು ನಿಂತಿದೆ. 

This husband wife duo left high paying jobs formed Rs 100 crore firm with Ratan Tatas help anu

Business Desk:ಕೆಲವರಿಗೆ ಒಳ್ಳೆಯ ಉದ್ಯೋಗ, ಕೈತುಂಬಾ ಸಂಪಾದನೆಯಿದ್ದರೂ ಹೊಸತೇನಾದರೂ ಮಾಡಬೇಕೆಂಬ ತುಡಿತವಿರುತ್ತದೆ. ಇದೇ ಕಾರಣಕ್ಕೆ ರಿಸ್ಕ್ ತೆಗೆದುಕೊಂಡಾದರೂ ಏನಾದರೂ ಹೊಸತು ಮಾಡಲು ಮುಂದಾಗುತ್ತಾರೆ. ಈ ಸಾಹಸದಲ್ಲಿ ಅನೇಕರು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದರೂ ಯಶಸ್ಸಿನ ಮೆಟ್ಟಿಲು ಹತ್ತಲು ಸಫಲರಾಗುತ್ತಾರೆ. ಅಂಥವರ ಸಾಲಿಗೆ ಐಐಟಿ ಪದವೀಧರೆ ನೇಹಾ ಸಿಂಗ್ ಹಾಗೂ ಅವರ ಪತಿ ಅಭಿಷೇಕ್ ಗೋಯಲ್ ಕೂಡ ಸೇರುತ್ತಾರೆ. ಇವರಿಬ್ಬರೂ ಭಾರತದ ಅತ್ಯತ ಯಶಸ್ವಿ ಡೇಟಾ  ಟ್ರ್ಯಾಕಿಂಗ್ ಪ್ಲಾಟ್ ಫಾರ್ಮ್ ಸಂಸ್ಥೆ ಟ್ರ್ಯಾಕ್ಸನ್ ಸ್ಥಾಪಕರು. ಇವರಿಬ್ಬರ ಈ ಉದ್ಯಮಕ್ಕೆ ಬೆಂಗವಾಲಾಗಿ ನಿಂತವರು ಖ್ಯಾತ ಉದ್ಯಮಿ ರತನ್ ಟಾಟಾ. ಇಂದು ಇವರ ಸಂಸ್ಥೆ ಭಾರತದ ಜನಪ್ರಿಯ ಡೇಟಾ ಟ್ರ್ಯಾಕಿಂಗ್ ಪ್ಲಾಟ್ ಫಾರ್ಮ್ ಎಂದು ಗುರುತಿಸಿಕೊಂಡಿದೆ. 2013ರಲ್ಲಿ ನೇಹಾ ಸಿಂಗ್ ಹಾಗೂ ಅವರ ಪತಿ ಒಟ್ಟಾಗಿ ಟ್ರ್ಯಾಕ್ಸನ್ ಸಂಸ್ಥೆ ಪ್ರಾರಂಭಿಸುತ್ತಾರೆ. ಇದು ಕ್ಲೌಡ್ ಆಧಾರಿತ ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾಗಿದೆ. 

ಟ್ರ್ಯಾಕ್ಸನ್ ಸಂಸ್ಥೆ ವಿವಿಧ ತಂತ್ರಜ್ಞಾನ ವಲಯಗಳ ಸ್ಟಾರ್ಟ್ ಅಪ್ ಗಳನ್ನು ಪತ್ತೆ ಹಚ್ಚಲು ಹಾಗೂ ಅವುಗಳ ಬಗ್ಗೆ ವಿಶ್ಲೇಷಣೆ ನಡೆಸಲು ವೆಂಚರ್ ಕ್ಯಾಪಿಟಲ್, ಪ್ರೈವೇಟ್ ಈಕ್ವಿಟಿ ಹಾಗೂ ಕಾರ್ಪೋರೇಟ್ ಡೆವಲಪ್ ಮೆಂಟ್ ಸಂಸ್ಥೆಗಳಿಗೆ ನೆರವು ನೀಡುತ್ತದೆ. ಈ ಸಂಸ್ಥೆಗೆ ಭವಿಷ್ಯವಿದೆ ಎಂಬುದನ್ನು ಗುರುತಿಸಿದ ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ ಹೂಡಿಕೆ ಮಾಡುತ್ತಾರೆ. ಇದು ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ.

ಬಿಲಿಯನೇರ್ ಆಗಿದ್ರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್‌ ಟಾಟಾ ಹೆಸರಿಲ್ಲ, ಯಾಕೆ?

ದೊಡ್ಡ ವೇತನದ ಉದ್ಯೋಗ ತ್ಯಾಗ
ಐಐಟಿ ಬಾಂಬೆಯಿಂದ ಪದವಿ ಪಡೆದಿರುವ ನೇಹಾ ಸಿಂಗ್, ಆ ಬಳಿಕ ಲೆಲ್ಯಾಂಡ್ ಸ್ಟ್ಯಾನ್ ಫೋರ್ಡ್ ಬ್ಯುಸಿನೆಸ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರ್ಣಗೊಳಿಸುತ್ತಾರೆ. ಆ ಬಳಿಕ ವೆಂಚರ್ ಕ್ಯಾಪಿಟಲ್ ಸಂಸ್ಥೆಯೊಂದರಲ್ಲಿ ದೊಡ್ಡ ವೇತನದ ಉದ್ಯೋಗಕ್ಕೆ ಸೇರುತ್ತಾರೆ. ಆದರೆ, ಸ್ವಂತ ಉದ್ಯಮ ಪ್ರಾರಂಭಿಸಬೇಕೆಂಬ ಬಯಕೆ ನೇಹಾ ಸಿಂಗ್ ಅವರನ್ನು ಉದ್ಯೋಗಕ್ಕೆ ರಾಜೀನಾಮೆ ನೀಡುವಂತೆ ಮಾಡುತ್ತದೆ. ಪತ್ನಿಯ ಕನಸಿಗೆ ಬೆಂಬಲ ನೀಡಲು ಅವರ ಪತಿ ಅಭಿಷೇಕ್ ಗೋಯಲ್ ಕೂಡ ಉತ್ತಮ ವೇತನದ ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರೆ.

ಹೊಸ ಭರವಸೆ ಮೂಡಿಸಿದ ರತನ್ ಟಾಟಾ 
ಟ್ರ್ಯಾಕ್ಸನ್ ಸ್ಥಾಪಿಸುವಾಗ ನೇಹಾ ಸಿಂಗ್ ಹಾಗೂ ಅವರ ಪತಿಗೆ ತುಂಬಾ ನಂಬಿಕೆಯಿತ್ತು. ಆದರೆ, ಮೊದಲ ಒಂದು ವರ್ಷ ಅವರಿಬ್ಬರು ಸಾಕಷ್ಟು ಸಂಕಷ್ಟ ಎದುರಿಸಬೇಕಾಯಿತು. ಕಂಪನಿಗೆ ಅತೀ ಕಡಿಮೆ ಆದಾಯ ಅಥವಾ ಯಾವುದೇ ಆದಾಯ ಇಲ್ಲದ ಕಾರಣ ಇಬ್ಬರಿಗೂ ಯಾವುದೇ ವೇತನ ಇರಲಿಲ್ಲ. ಈ ಸಮಯದಲ್ಲಿ ಕಂಪನಿಯ ಕುರಿತ ಅವರ ಭರವಸೆ ಕುಸಿಯತೊಡಗಿತ್ತು. ಆದರೆ, ಟಾಟಾ ಸಮೂಹ ಸಂಸ್ಥೆ ರತನ್ ಟಾಟಾ ಇವರಿಬ್ಬರ ಪಾಲಿಗೆ ಭರವಸೆಯ ಆಶಾಕಿರಣವಾಗಿ ಕಾಣಿಸಿಕೊಂಡರು. ಟಾಟಾ ಟ್ರ್ಯಾಕ್ಸನ್ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಮೂಲಕ ಅದನ್ನು ಹೊಸ ಎತ್ರಕ್ಕೆ ಕೊಂಡೊಯ್ಯದರು. 

ನಿವೃತ್ತಿ ವಯಸ್ಸಲ್ಲಿ ಬ್ಯುಸಿನೆಸ್ ಶುರು ಮಾಡಿ, ಯಶಸ್ವಿಯಾದ ಮಹಿಳೆ

100 ಕೋಟಿ ಮೌಲ್ಯದ ಸಂಸ್ಥೆ
ಟ್ರ್ಯಾಕ್ಸನ್ ಸಂಸ್ಥೆಯಲ್ಲಿ ಕೇವಲ ರತನ್ ಟಾಟಾ ಮಾತ್ರವಲ್ಲ, ಇನ್ನೂ ಅನೇಕ ಉದ್ಯಮಿಗಳು ಹೂಡಿಕೆ ಮಾಡಿದ್ದಾರೆ. ಫ್ಲಿಪ್ ಕಾರ್ಟ್ ಸ್ಥಾಪಕ ಸಚಿನ್ ಹಾಗೂ ಬೆನ್ನಿ ಬನ್ಸಾಲ್, ಡೆಲ್ಲಿವೆರಿಯ ಸಹಿಲ್ ಬರುವ, ಮೋಹನ್ ದಾಸ್ ಪೈ ಹಾಗೂ ನಂದನ್ ನೀಲಕಣಿ ಕೂಡ ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದಾರೆ. 2022ರಲ್ಲಿ ಟ್ರ್ಯಾಕ್ಸನ್ ಸಂಸ್ಥೆ ಒಟ್ಟು 10 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 83 ಕೋಟಿ ರೂ.ಗಿಂತಲೂ ಅಧಿಕ ಆದಾಯವನ್ನು ವರದಿ ಮಾಡಿತ್ತು. ಈ ಕಂಪನಿಯ ಮೌಲ್ಯ ಇಂದು 100 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ, ಈ ದಂಪತಿಯ ನಿಖರವಾದ ನಿವ್ವಳ ಸಂಪತ್ತು ಎಷ್ಟು ಎಂಬುದು ಇನ್ನೂ ತಿಳಿದಿಲ್ಲ. ನೇಹಾ ಸಿಂಗ್ ಹಾಗೂ ಅಭಿಷೇಕ್ ಗೋಯಲ್ ಒಟ್ಟಾಗಿ ನಿವ್ವಳ 26 ಕೋಟಿ ರೂ. ಮೌಲ್ಯದ ಒಟ್ಟು ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. 
 

Latest Videos
Follow Us:
Download App:
  • android
  • ios