ನಿವೃತ್ತಿ ವಯಸ್ಸಲ್ಲಿ ಬ್ಯುಸಿನೆಸ್ ಶುರು ಮಾಡಿ, ಯಶಸ್ವಿಯಾದ ಮಹಿಳೆ

ಯಾವುದೇ ಕೆಲಸ ಶುರು ಮಾಡಲು ವಯಸ್ಸು ಅಡ್ಡಿಯಾಗ್ಬಾರದು. ದೃಢ ಸಂಕಲ್ಪದ ಜೊತೆ ಧೈರ್ಯಮಾಡಿ ಮುನ್ನುಗ್ಗಿದ್ರೆ ಮನೆ ಅಂಗಳದಲ್ಲಿ ಶುರುವಾದ ಕೆಲಸ ಕಾರ್ಖಾನೆಯ ಹಂತಕ್ಕೆ ತಲುಪಬಹುದು. ಅದಕ್ಕೆ ಈ ಮಹಿಳೆ ಸಾಕ್ಷ್ಯ.
 

How Kalpana Jha Of Jhaji Store Achieved Her Dream To Be Independent roo

ಹೊಸ ಕನಸಿಗೆ, ಹೊಸ ಸಂಕಲ್ಪಕ್ಕೆ ಯಾವುದೇ ಮಿತಿ ಇಲ್ಲ. ಯಾವುದಾದ್ರೂ ಹೊಸದನ್ನು ಪ್ರಾರಂಭಿಸಲು ಸಮಯದ ಗಡಿ ಇಲ್ಲ. ಈಗ ನನಗೆ ವಯಸ್ಸಾಯ್ತು, ಈ ಕ್ಷೇತ್ರದಲ್ಲಿ ಕೆಲಸ ಮಾಡೋದು ಕಷ್ಟ, ಆ ಕ್ಷೇತ್ರದಲ್ಲಿ ಸಾಧಿಸಿ ತೋರಿಸುವ ಕನಸು ಕಾಣುವುದು ವ್ಯರ್ಥ ಎಂಬ ಮಾತುಗಳಿಗೆ ಅರ್ಥವಿಲ್ಲ. ನೀವು ಯಾವುದೇ ವಯಸ್ಸಿನಲ್ಲಿ ಕನಸು ಕಾಣಬಹುದು, ಅದನ್ನು ಈಡೇರಿಸಿಕೊಳ್ಳಬಹುದು. ಅದನ್ನು ಕಲ್ಪನಾ ಝಾ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ. ತಮ್ಮ ನಿವೃತ್ತಿಯ ವಯಸ್ಸಿನಲ್ಲಿ ಹೊಸ ಆರಂಭಕ್ಕೆ ಮುನ್ನುಡಿ ಬರೆಯುವ ಮೂಲಕ ಸಾಧಿಸಿ ತೋರಿಸಿದ್ದಾರೆ. ಯಶಸ್ವಿ ಉದ್ಯಮಿ ಎಂಬ ಪಟ್ಟಕ್ಕೇರಿದ್ದಾರೆ. 

ವಯಸ್ಸು ಕೇವಲ ಲೆಕ್ಕಕ್ಕೆ ಮಾತ್ರ ಎನ್ನುವ ಮಾತು ಕಲ್ಪನಾ ಝಾ (Kalpana Jha ) ಗೂ ಅನ್ವಯಿಸುತ್ತದೆ. ಉತ್ಸಾಹ ಹಾಗೂ ಧೈರ್ಯ ಕಲ್ಪನಾ ಝಾ ಇಲ್ಲಿಗೆ ಬಂದು ನಿಲ್ಲಲು ಕಾರಣವಾಗಿದೆ.  ದರ್ಭಾಂಗ (Darbhanga)ದ ನಿವಾಸಿ ಕಲ್ಪನಾ ಝಾ  ಪವಾಡ ಮಾಡಿದ್ದಾರೆ. ಕಲ್ಪನಾ ಝಾ ಉಪ್ಪಿನಕಾಯಿ ಮತ್ತು ಚಟ್ನಿಗಳನ್ನು ಮಾರಾಟ ಮಾಡುವ ಮೂಲಕ ಸಾಧಿಸಿ ತೋರಿಸಿದ್ದಾರೆ. ಝಾಜಿ ಸ್ಟೋರ್ ಹೆಸರಿನಲ್ಲಿ ದೊಡ್ಡ ಉದ್ಯಮ ಸ್ಥಾಪಿಸಿದ ಕಲ್ಪನಾ ಝಾ ಕಥೆ ಅನೇಕರಿಗೆ ಸ್ಫೂರ್ತಿಯಾಗಲಿದೆ.

ಕಲ್ಪನಾ ಝಾ `ಝಾಜಿ’ ಸ್ಟೋರ್ ಶುರುವಾಗಿದ್ದು ಹೇಗೆ? : ಕಲ್ಪನಾ ಉಪ್ಪಿನ ಕಾಯಿ ಮಾಡೋದ್ರಲ್ಲಿ ಪ್ರವೀಣರು. ಅವರು ಅಜ್ಜಿ ಮಾಡ್ತಿದ್ದ ಉಪ್ಪಿನಕಾಯಿಯಿಂದ ಪ್ರೇರಣೆಗೊಂಡಿದ್ದರು. ಭರಣಿಯಲ್ಲಿ ಉಪ್ಪಿನ ಕಾಯಿ ಹಾಕ್ತಿದ್ದ ಕಲ್ಪನಾ, ಸಂಬಂಧಿಕರ ಮೆಚ್ಚುಗೆ ಗಳಿಸಿದ್ದರು. ಮನೆಗೆ ಬಂದವರು ಸಿಹಿ ತಿಂಡಿ ಡಬ್ಬ ನೀಡುವ ಬದಲು ಉಪ್ಪಿನಕಾಯಿ ಪಾರ್ಸಲ್ ನೀಡಿ ಎನ್ನುತ್ತಿದ್ದರು. ಇದನ್ನೇ ಬ್ಯುಸಿನೆಸ್ ಮಾಡುವ ಆಸೆ ಕಲ್ಪನಾರಿಗೆ ಇತ್ತು. ಆದ್ರೆ ಪತಿ ಕೆಲಸದ ಕಾರಣಕ್ಕೆ ಊರಿಂದ ಊರಿಗೆ ವರ್ಗವಾಗ್ತಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ. ಪತಿಯ ನಿವೃತ್ತಿ ನಂತ್ರ ಅವರ ಬೆಂಬಲ ಹಾಗೂ ಸಹಕಾರದಿಂದ ಕಲ್ಪನಾ ಹೊಸ ಹೆಜ್ಜೆ ಇಡಲು ಮುಂದಾದ್ರು.

ಸಲೂನ್ ಇಟ್ಕೊಂಡಿದ್ದ ವ್ಯಕ್ತಿಯೀಗ ಬಿಲಿಯನೇರ್‌, ರೋಲ್ಸ್‌ ರಾಯ್ಸ್‌, ಬೆಂಜ್‌ ಸೇರಿ 400 ಲಕ್ಸುರಿಯಸ್‌ ಕಾರುಗಳ ಒಡೆಯ!

ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಕಲ್ಪನಾ ಝಾ, ಉಪ್ಪಿನಕಾಯಿ ತಯಾರಿ, ಮಾರಾಟ ಶುರು ಮಾಡಿದ್ರು. 6 ಮಹಿಳೆಯರ ಜೊತೆ ಅವರು ಈ ವ್ಯವಹಾರ ಆರಂಭಿಸಿದ್ರು. ಕೆಲವೇ ದಿನಗಳಲ್ಲಿ ಬೇಡಿಕೆ ಹೆಚ್ಚಾಗಿದ್ದರಿಂದ ಕಲ್ಪನಾ ಈಗ 75 ಮಹಿಳೆಯರ ಜೊತೆ ಉಪ್ಪಿನಕಾಯಿ ವ್ಯವಹಾರ ನಡೆಸುತ್ತಿದ್ದಾರೆ. ತಮ್ಮ ಪತಿಯನ್ನು ಝಾಜಿ ಎಂದು ಕರೆಯುವ ಕಲ್ಪನಾ, ಉಪ್ಪಿನ ಕಾಯಿಗೆ ಅದೇ ಹೆಸರನ್ನು ಇಟ್ಟಿದ್ದಾರೆ. 
ಮಹಿಳೆ ತನ್ನ ಪ್ರತಿಭೆಯನ್ನು ಗುರುತಿಸಿ, ದೊಡ್ಡ ಹೆಜ್ಜೆಗಳನ್ನು ಇಡಲು ಸಿದ್ಧವಾದ್ರೆ ಪ್ರಪಂಚದ ಯಾವುದೇ ಶಕ್ತಿ ಅವಳನ್ನು ತಡೆಯಲು ಸಾಧ್ಯವಿಲ್ಲ. ಇದಕ್ಕೆ ಕಲ್ಪನಾ ಝಾ ನಿದರ್ಶನ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ನರ್ವಸ್ ಆಗುವುದು ಸಹಜ. ಆಹಾರ ಉದ್ಯಮಕ್ಕೆ ಬಂದಾಗ ನಾನು ತುಂಬಾ ಭಯಪಟ್ಟುಕೊಂಡಿದ್ದೆ. ಯಾವುದೇ ಕೆಲಸವಾದ್ರೂ ಸರಿ ಧೈರ್ಯದಿಂದ ಮಾಡಿದರೆ,  ವಿಫಲರಾಗಲು ಸಾಧ್ಯವಿಲ್ಲ ಎಂದು ಕಲ್ಪನಾ ಝಾ ಹೇಳುತ್ತಾರೆ. ಇದು ಆನ್ಲೈನ್ ಯುಗವಾಗಿರುವ ಕಾರಣ ಕೆಲಸ ತುಂಬಾ ಸುಲಭ ಎನ್ನುತ್ತಾರೆ.

ದೇಶದ ಪ್ರತಿಷ್ಟಿತ ಐಟಿ ಸಂಸ್ಥೆ ಉನ್ನತ ಹುದ್ದೆಗೆ ಮತ್ತೊಬ್ಬ ಮಹಿಳೆ; ಅಪರ್ಣಾ ಐಯ್ಯರ್ ವಿಪ್ರೋ ನೂತನ ಸಿಎಫ್ ಒ

ಯುವಕರನ್ನು ಪ್ರೋತ್ಸಾಹಿಸುವ ಕಲ್ಪನಾ, ಮನೆಯ ಅಂಗಳದಲ್ಲಿ ಶುರುವಾದ ನಮ್ಮ ಉಪ್ಪಿನಕಾಯಿ ವ್ಯವಹಾರ ಈಗ ಕಾರ್ಖಾನೆಯವರೆಗೆ ಸಾಗಿದೆ. ಅಂದ್ರೆ ಇದನ್ನೆಲ್ಲ ಮಾಡಲು ಯೋಜನೆ ಮುಖ್ಯ ಎನ್ನುತ್ತಾರೆ. ವ್ಯವಹಾರ ಯಾವುದೇ ಇರಲಿ ಯೋಜನೆಯೊಂದನ್ನು ಇಟ್ಟುಕೊಂಡು, ವ್ಯವಸ್ಥಿತವಾಗಿ ಮುಂದುವರೆದರೆ ಯಶಸ್ಸು ಸಾಧ್ಯ ಎನ್ನುತ್ತಾರೆ ಕಲ್ಪನಾ. ದೃಢ ಸಂಕಲ್ಪವಿದ್ದರೆ ನಿಮ್ಮ ಕೌಶಲ್ಯವನ್ನು ಜಗತ್ತಿಗೆ ಪಸರಿಸಿ ಮುನ್ನಡೆಯಬಹುದು. ಇಲ್ಲಿ ವಯಸ್ಸು ಮುಖ್ಯವಲ್ಲ ಎಂಬುದು ಕಲ್ಪನಾ ಝಾ ಹೇಳಿಕೆ. ಯಾವುದೇ ವ್ಯಕ್ತಿ ಏನನ್ನಾದರೂ ಮಾಡಲು ಮನಸ್ಸು ಮಾಡಿದರೆ ಮತ್ತು ಏಕಾಂಗಿಯಾಗಿ ಮುನ್ನುಗ್ಗಿದರೆ ಅದನ್ನು ಸಾಧಿಸಿ ತೋರಿಸಲು ಸಾಧ್ಯ ಎನ್ನುತ್ತಾರೆ ಕಲ್ಪನಾ ಝಾ. 
 

Latest Videos
Follow Us:
Download App:
  • android
  • ios