Asianet Suvarna News Asianet Suvarna News

ಅಕ್ಟೋಬರ್ 1ರಿಂದ ದೇಶದಲ್ಲಿ ಅಸ್ತಿತ್ವಕ್ಕೆ ಬರಲಿವೆ 10 ಹೊಸ ನಿಯಮಗಳು; LPG ಗ್ಯಾಸ್, UPI, GSTಯಲ್ಲಿ ದೊಡ್ಡ ಬದಲಾವಣೆಗಳು

ಅಕ್ಟೋಬರ್ 1, 2024 ರಿಂದ LPG ಗ್ಯಾಸ್, UPI, GST ಸೇರಿದಂತೆ ಹಲವು ನಿಯಮಗಳು ಬದಲಾಗಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಮೇಲೆ ನೇರ ಪರಿಣಾಮ ಬೀರಲಿದ್ದು, ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ.

This financial rules will change 1st october 2024 mrq
Author
First Published Sep 30, 2024, 11:51 AM IST | Last Updated Sep 30, 2024, 11:51 AM IST

ನವದೆಹಲಿ: ಅಕ್ಟೋಬರ್ 1,2024ರಿಂದ ಹಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ಇದು ನೇರವಾಗಿ ಸಾಮಾನ್ಯ ಜನರ ಮೇಲೆ ಪ್ರಭಾವ ಬೀರಲಿದೆ. ಆದ್ದರಿಂದ ಸಾಮಾನ್ಯ ಜನರು ಬದಲಾಗುತ್ತಿರುವ ಮತ್ತು ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯವಾಗಿದೆ. ಇದರಲ್ಲಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ, ಕ್ರೆಡಿಟ್ ಕಾರ್ಡ್, ಯುಪಿಐ, ಪಿಪಿಎಫ್ ಸಹ ಸೇರಿದೆ. ಈ ಲೇಖನದಲ್ಲಿ ಈ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ 
ಅಕ್ಟೋಬರ್ 1ರಿಂದ ಎಲ್‌ಪಿಜಿಯ ಗೃಹ ಮತ್ತು ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಬದಲಾಗುತ್ತವೆ. ಹೊಸ ಬೆಲೆಗಳು ಅಕ್ಟೋಬರ್ 1ರಿಂದಲೇ ಅನ್ವಯವಾಗುತ್ತವೆ. ಬೆಲೆ ಏರಿಕೆ ಅಥವಾ ಇಳಿಕೆಯಾದರೂ ನೇರವಾಗಿ ಸಾಮಾನ್ಯ ಜೇಬಿನಲ್ಲಿರುವ ಹಣದ ಮೇಲೆ ಪರಿಣಾಮ ಬೀರುತ್ತದೆ. 

ಸುಕನ್ಯಾ ಸಮೃದ್ಧಿ ಯೋಜನೆ
ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆಯಡಿ ಹಣ ಉಳಿತಾಯ ಮಾಡುತ್ತಾರೆ. ಈ ಯೋಜನೆಯಲ್ಲಿ ಅಕ್ಟೋಬರ್ 1ರಿಂದ ಕೆಲವು ಬದಲಾವಣೆಯಾಗಲಿದ್ದು, ಬಡ್ಡಿದರ ಹೆಚ್ಚು ಅಥವಾ ಕಡಿಮೆಯಾಗುವ ಸಾಧ್ಯತೆಗಳಿವೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವರು ಬದಲಾಗುತ್ತಿರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. 

ಪಿಪಿಎಫ್ ಖಾತೆ ನಿಯಮಗಳು 
ಅಕ್ಟೋಬರ್ 1ರಿಂದ ಪಿಪಿಎಫ್ ನಿಯಮಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿವೆ. ಸರ್ಕಾರ ಬಡ್ಡಿದರ ಇಳಿಸುವ ಕುರಿತು ಚಿಂತನೆ ನಡೆಸಿದ್ದು ಎನ್ನಲಾಗಿದ್ದು, ಈ ಬಗ್ಗೆ ಸಮೀಕ್ಷೆ ನಡೆಸಿ ವರದಿಯನ್ನು ಪಡೆದುಕೊಂಡಿದೆ. ಬಡ್ಡಿದರ ಏರಿಕೆ/ಇಳಿಕೆ ಸಹ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. 

ಸಿಮ್ ಕಾರ್ಡ್ ನಿಯಮಗಳು
ಸಿಮ್ ಖರೀದಿ ಮತ್ತು ಟೆಲಿಕಾಂ ನಿಯಮಗಳಲ್ಲಿ ಭಾರೀ ಬದಲಾವಣೆ ಆಗಲಿದೆ. ಟೆಲಿಕಾಂ ಕಂಪನಿಗಳಿ ಎಲ್ಲಿ, ಯಾವ ಸೇವೆ ನೀಡುತ್ತಿವೆ ಎಂಬ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸುವಂತೆ ಟ್ರಾಯ್ ಆದೇಶಿಸಿದೆ. 

ಕ್ರೆಡಿಟ್ ಕಾರ್ಡ್ ನಿಯುಮಗಳು
ನೀವು ಕ್ರೆಡಿಟ್ ಕಾರ್ಡ್ ಉಪಯೋಗಿಸುತ್ತಿದ್ದರೆ ಅಕ್ಟೋಬರ್ 1ರಿಂದ ಬದಲಾಗುವ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಬ್ಯಾಂಕ್‌ಗಳು ಬಡ್ಡಿದರ ಮತ್ತು ಶುಲ್ಕದಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಮಾಡುತ್ತಿರುತ್ತದೆ. ನಿಯಮಗಳನ್ನ ತಿಳಿದುಕೊಳ್ಳದಿದ್ದರೆ ಅನಗತ್ಯವಾಗಿ ದಂಡ ಪಾವತಿಸಬೇಕಾಗುತ್ತದೆ. ನಿಮ್ಮ ಬ್ಯಾಂಕ್‌ ವೆಬ್‌ಸೈಟ್‌ಗೆ ಹೋಗಿ ಕ್ರೆಡಿಟ್ ಕಾರ್ಡ್ ಶುಲ್ಕಗಳ ಮಾಹಿತಿ ಪಡೆದುಕೊಳ್ಳಿ.

ಯುಪಿಐ ವಹಿವಾಟು
ತಿಂಗಳ ಆರಂಭದಿಂದಲೇ ಯುಪಿಐ ವಹಿವಾಟಿನ ಮೇಲೆ ಕೆಲ ಹೊಸ ನಿಯಮಗಳಿ ಅನ್ವಯವಾಗುವ ಸಾಧ್ಯತೆಗಳಿವೆ. ಅಕ್ಟೋಬರ್ 1ರಿಂದ ದೊಡ್ಡ ಮೊತ್ತದ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ಅನ್ವಯವಾಗುವ ಸಾಧ್ಯತೆಗಳಿವೆ. ವಿಶೇಷವಾಗಿ ಬ್ಯುಸಿನೆಸ್ ಟ್ರಾನ್ಸಾಕ್ಷನ್ ಮೇಲೆ ಹೊಸ ನಿಯಮಗಳು ಪ್ರಭಾವ ಬೀರಲಿವೆ. 

ಜಿಎಸ್‌ಟಿ ನಿಯಮಗಳು
ಅಕ್ಟೋಬರ್ 1ರಿಂದ ಜಿಎಸ್‌ಟಿ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ನಿಯಮ ನೇರವಾಗಿ ವ್ಯಾಪಾರಿ 
ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಹೊಸ ಜಿಎಸ್‌ಟಿ ಸ್ಲ್ಯಾಬ್ಸ್ ಮತ್ತು ದರಗಳು ದೈನಂದಿನ ಖರ್ಚುಗಳ ಮೇಲೆ ಪ್ರಭಾವ ಬೀರಲಿದೆ. ಇದರಿಂದ ಕೆಲವು ವಸ್ತುಗಳ ಬೆಲೆಯುಲ್ಲಿ ವ್ಯತ್ಯಾಸ ಉಂಟಾಗುತ್ತದೆ.

ಆಧಾರ್ ಕಾರ್ಡ್ ನಿಯಮಗಳು
ಕೆವೈಸಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್‌ ನ ಕೆಲವು ನಿಯಮಗಳು ಅಕ್ಟೋಬರ್ 1ರಿಂದ ಹೊಸ ನಿಯಮಗಳು ಅನ್ವಯವಾಗಲಿವೆ. ಕೆಲವು ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಅಪ್‌ಡೇಟ್ ಮಾಡಬೇಕಾಗುತ್ತದೆ. ಕೆಲವು ವಿಶೇಷ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕಾಗುತ್ತದೆ.

21 ವರ್ಷಕ್ಕೆ 71 ಲಕ್ಷ ರೂಪಾಯಿ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಹೇಗೆ?

ಕ್ರೆಡಿಟ್ ಸ್ಟೋರ್ ನಿಯಮಗಳು 
ಸಾಲ ಪಡೆಯಲು ನೀವು ಕ್ರೆಡಿಟ್ ಸ್ಟೋರ್ ಪಡೆಯಲು ಮುಂದಾದ್ರೆ, ಅಕ್ಟೋಬರ್ 1ರಿಂದ ಜಾರಿಗೆ ಬರುವ ನಿಯಮಗಳ ಬಗ್ಗೆ ತಿಳಿದುಕೊಳ್ಳಿ. ಕ್ರೆಡಿಟ್ ಸ್ಟೋರ್ ಸಾಲ ಪಡೆಯುವ ಮೊತ್ತ, ಬಡ್ಡಿದರ ಮತ್ತು ಶುಲ್ಕದ ಮೇಲೆ ಎಫೆಕ್ಟ್ ಆಗುತ್ತದೆ. 

ರಸ್ತೆ ಸುರಕ್ಷಾ ನಿಯಮಗಳು
ಪರಿಸರ ಸಂರಕ್ಷಣೆ ಹಾಗೂ ಸಂಚಾರಿ ನಿಯಮಗಳಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ವಾಹನ ನೋಂದಣಿ, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ಬದಲಾವಣೆಯುಂಟಾಗುವ ಸಾಧ್ಯತೆಗಳಿದ್ದು, ಚಾಲಕರು ಮತ್ತು ವಾಗಹನಗಳ ಮಾಲೀಕರ ಮೇಲೆ ಪರಿಣಾಮ ಬೀರಲಿವೆ. 

ಅಕ್ಟೋಬರ್ 1ರಿಂದ ಬದಲಾಗುವ ಮತ್ತು ಜಾರಿಗೆ ಬರುವ  ಹಣಕಾಸಿಗೆ ಸಂಬಂಧಿಸಿದ ನಿಯಮಗಳು ನೇರ ಅಥವಾ ಪರೋಕ್ಷವಾಗಿ ಸಾಮಾನ್ಯ ಜನರ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ಬದಲಾಗುವ ನಿಯಮಗಳ ಬಗ್ಗೆ ಜಾಗರೂಕರಾಗಿರಬೇಕು.

ಕೊರೊನಾ ನಂತ್ರ ₹1 ಸಂಬಳ ಪಡೆಯದ ಮುಕೇಶ್ ಅಂಬಾನಿ ಒಂದು ದಿನದ ಆದಾಯ ಎಷ್ಟು?

Latest Videos
Follow Us:
Download App:
  • android
  • ios