ಕೊರೊನಾ ನಂತ್ರ ₹1 ಸಂಬಳ ಪಡೆಯದ ಮುಕೇಶ್ ಅಂಬಾನಿ ಒಂದು ದಿನದ ಆದಾಯ ಎಷ್ಟು?
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಷಿಯಾದ ಶ್ರೀಮಂತ ವ್ಯಕ್ತಿ. ಅವರ ಒಟ್ಟು ಆಸ್ತಿ 116 ಬಿಲಿಯನ್ ಡಾಲರ್. ಹಾಗಾದ್ರೆ ಮುಕೇಶ್ ಅಂಬಾನಿಯವರ ಪ್ರತಿದಿನದ ಆದಾಯ ಎಷ್ಟು?
ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ, ಎಂಡಿ ಮುಕೇಶ್ ಅಂಬಾನಿ ಕೇವಲ ಭಾರತ ಮಾತ್ರವಲ್ಲ ಏಷಿಯಾದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಕೆಲ ವರದಿಗಳ ಪ್ರಕಾರ ಮುಕೇಶ್ ಅಂಬಾನಿಯವರ ಒಟ್ಟು ಆಸ್ತಿ 116 ಬಿಲಿಯನ್ ಡಾಲರ್ ಆಗಿದೆ. ಬ್ಲೂಮ್‌ಬರ್ಗ ಬಿಲಿಯೇನರ್ ಇಂಡೆಕ್ಸ್ ಪ್ರಕಟಿಸುವ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಕೇಶ್ ಅಂಬಾನಿ 12ನೇ ಸ್ಥಾನದಲ್ಲಿದ್ದಾರೆ. ಇದೇ ಪಟ್ಟಿಯಲ್ಲಿ ಭಾರತದ ಮತ್ತೋರ್ವ ಉದ್ಯಮಿ ಗೌತಮ್ ಅದಾನಿ ಸ್ಥಾನ ಪಡೆದುಕೊಂಡಿದ್ದು, ಇವರ ಒಟ್ಟು ಆಸ್ತಿ ಮೌಲ್ಯ 104 ಬಿಲಿಯನ್ ಡಾಲರ್ ಆಗಿದೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಮುಕೇಶ್ ಅಂಬಾನಿಯವರ ಒಂದು ದಿನದ ಆದಾಯ ಎಷ್ಟಿರಬಹುದು ಗೊತ್ತಾ? ಆ ಕುರಿತ ವಿವರ ಇಲ್ಲಿದೆ.
ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬಸ್ಥರು ದಿನಕ್ಕೆ ನೂರಾರು ಕೋಟಿ ಖರ್ಚು ಮಾಡ್ತಾರೆ. ಪುತ್ರ ಅನಂತ್ ಮದುವೆಗೆ ಮುಕೇಶ್ ಅಂಬಾನಿ ಬರೋಬ್ಬರಿ 5 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಿದ್ದರು. ಒಬ್ಬ ಸಾಮಾನ್ಯ ವ್ಯಕ್ತಿ ಪ್ರತಿ ವರ್ಷ 4 ಲಕ್ಷ ರೂ. ಆದಾಯ ಗಳಿಸುತ್ತಾನೆ ಅಂದ್ರೆ ಮುಕೇಶ್ ಅಂಬಾನಿ ಲೆವಲ್ ತಲುಪಲು 1.74 ಕೋಟಿ ವರ್ಷಗಳು ಬೇಕಾಗುತ್ತದೆ ಎಂದು ಲೆಕ್ಕ ಹಾಕಲಾಗುತ್ತದೆ. ಕೆಲ ವರದಿಗಳ ಪ್ರಕಾರ, ತಮ್ಮ ಕಂಪನಿಗಳಿಂದ ಮುಕೇಶ್ ಅಂಬಾನಿ ಪ್ರತಿ ವರ್ಷ 15 ಕೋಟಿ ರೂ. ಸಂಬಳ ಪಡೆಯುತ್ತಾರೆ. ಆದ್ರೆ ಕೊರೊನಾದ ಬಳಿಕ ಮುಕೇಶ್ ಅಂಬಾನಿ ಯಾವುದೇ ಸಂಬಳ ಪಡೆದುಕೊಂಡಿಲ್ಲ. ಸಂಬಳದ ಹೊರತಾಗಿಯೂ ಮುಕೇಶ್ ಅಂಬಾನಿ ಪ್ರತಿದಿನ 163 ಕೋಟಿ ರೂ. ಹಣ ಸಂಪಾದಿಸುತ್ತಾರೆ.
ಭಾರತದ ಶ್ರೀಮಂತರ ಪಟ್ಟಿ; ಅಂಬಾನಿಗೆ ಕೈತಪ್ಪಿದ ಪಟ್ಟ, ಟಾಪ್ 10 ಲಿಸ್ಟ್‌ನಲ್ಲಿ 21 ವರ್ಷದ ಉದ್ಯಮಿ!
ಈ ಹಣ ರಿಲಯನ್ಸ್ ಇಂಡಸ್ಟ್ರೀಸ್‌ನ ಶೇರುಗಳಿಂದ ಬರುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಪೆಟ್ರೋಕೆಮಿಕಲ್, ತೈಲ, ಟೆಲಿಕಾಂ, ರಿಟೇಲ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನ ವ್ಯವಹಾರವನ್ನು ನಡೆಸುತ್ತದೆ. ಇದಲ್ಲದೇ ಮುಂಬೈನಲ್ಲಿರುವ ತಮ್ಮ ಮನೆ ಆಂಟಿಲಿಯಾ ಸೇರಿದಂತೆ ರಿಯಲ್ ಎಸ್ಟೇಟ್ ನಲ್ಲಿ ಹಲವು ಕಡೆ ಮುಕೇಶ್ ಅಂಬಾನಿ ಹೂಡಿಕೆ ಮಾಡಿದ್ದಾರೆ. ಅಂಬಾನಿ ಕುಟುಂಬದ ಅಧಿಕೃತ ನಿವಾಸವಾಗಿರು ಆಂಟಿಲಿಯಾ ಮೌಲ್ಯ ಸುಮಾರು 15 ಸಾವಿರ ಕೋಟಿ ಎಂದು ವರದಿಯಾಗಿದೆ.
2020ರಿಂದಲೇ ಮುಖೇಶ್ ಅಂಬಾನಿ ಪ್ರತಿ ಗಂಟೆಗೆ 90 ಕೋಟಿ ರೂ. ಹಣ ಸಂಪಾದಿಸಲು ಆರಂಭಿಸಿದರು ಎಂದು ಕೆಲ ವರದಿಗಳು ಹೇಳುತ್ತವೆ. ಆದರೆ ಭಾರತದಲ್ಲಿ ಸುಮಾರು ಶೇ.24 ರಷ್ಟು ಜನರು ಮಾಸಿಕ ಕೇವಲ 3,000 ರೂಪಾಯಿ ಗಳಿಸಲು ಶಕ್ತರಾಗಿದ್ದಾರೆ. ಮುಕೇಶ್ ಅಂಬಾನಿ ಮಡದಿ ನೀತಾ ಅಂಬಾನಿ ಧರಿಸುವ ಬಟ್ಟೆ, ಚಿನ್ನಾಭರಣಗಳು ಸಹ ಕೋಟಿ ಕೋಟಿ ಲೆಕ್ಕದಲ್ಲಿಯೇ ಇರುತ್ತವೆ. ಅನಂತ್ ಅಂಬಾನಿ ಮದುವೆ ಇಡೀ ವಿಶ್ವದ ಗಮನವನ್ನು ಸೆಳೆದಿತ್ತು. ಮೂರು ತಿಂಗಳಿಗೂ ಅಧಿಕ ಕಾಲ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಗಳು ನಡೆದಿದ್ದವು.
67ನೇ ವಯಸ್ಸಿನ ಮುಕೇಶ್ ಅಂಬಾನಿ ಆರೋಗ್ಯದ ಸೀಕ್ರೆಟ್ ಏನು? ಪ್ರತಿದಿನ ಸೇವಿಸುವ ಆಹಾರ ಏನು?