ಸಾಧನೆ ಮಾಡೋ ಮನಸ್ಸಿದ್ದರೆ ಎಂಥಾ ಕೆಲಸ ಮಾಡೋದು ಸಹ ಅಸಾಧ್ಯವಲ್ಲ ಅಂತ ನಮ್ಮ ಹಿರಿಯರು ಹೇಳೋದನ್ನು ನಾವು ಕೇಳಿರಬಹುದು. ಅದು ಅಕ್ಷರಶಃ ನಿಜ ಅನ್ನೋದು ಸಾಬೀತಾಗಿದೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಈಗ ಎರಡು ಸ್ಟಾರ್ಟ್‌ಅಪ್‌ಗಳ ಸಿಇಒ ಆಗಿದ್ದಾರೆ. ಆ ಕುರಿತಾದ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
ದಾದಾಸಾಹೇಬ್ ಭಗತ್ ಅವರು ಈ ಹಿಂದೆ ಇನ್ಫೋಸಿಸ್‌ನಲ್ಲಿ ಆಫೀಸ್ ಬಾಯ್ ಆಗಿ ಸೇವೆ ಸಲ್ಲಿಸಿದ್ದರು, ಈಗ ಅವರ ಸ್ವಂತ ಸ್ಟಾರ್ಟ್‌ಅಪ್‌ಗಳ ಸಿಇಒ ಆಗಿದ್ದಾರೆ ಮತ್ತು ಪ್ರಧಾನಿ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಶೆಡ್‌ನಿಂದ "ಮೇಡ್-ಇನ್-ಇಂಡಿಯಾ" ಕ್ಯಾನ್ವಾವನ್ನು ನಿರ್ಮಿಸಿದ ವ್ಯಕ್ತಿಯ ಪ್ರಯಾಣವನ್ನು ನೋಡೋಣ.
ಜೀವನದಲ್ಲಿ ಎಷ್ಟೇ ಅಡೆತಡೆಗಳು ಎದುರಾದರೂ, ದೃಢವಾದ ಇಚ್ಛಾಶಕ್ತಿ, ಸಾಧಿಸುವ ಮನಸ್ಸಿದ್ದರೆ ಎಂಥಾ ಸಾಧನೆ (Achievement)ಯನ್ನು ಸಹ ಮಾಡಬಹುದು. ಅದಕ್ಕೇ ಇನ್ಫೋಸಿಸ್‌ನ ಈ ಉದ್ಯೋಗಿ ಸ್ಪಷ್ಟ ಉದಾಹರಣೆ. ಈ ಹಿಂದೆ ಇನ್ಫೋಸಿಸ್ ಸಂಸ್ಥೆಯಲ್ಲಿ ಆಫೀಸ್ ಬಾಯ್ ಆಗಿದ್ದ ದಾದಾಸಾಹೇಬ್ ಭಗತ್, ಈಗ ತಮ್ಮದೇ ಸ್ಟಾರ್ಟ್‌ಅಪ್‌ಗಳ ಸಿಇಒ ಆಗಿದ್ದಾರೆ. 'ಮೇಡ್-ಇನ್-ಇಂಡಿಯಾ' ಕ್ಯಾನ್ವಾವನ್ನು ನಿರ್ಮಿಸಿದ ಭಗತ್ ಅವರನ್ನು ಪ್ರಧಾನಿ ನರೇಂದ್ರ ಮೋದಿಯವರೇ ಹೊಗಳಿದ್ದಾರೆ. ಕಡಿಮೆ ವಿದ್ಯಾಭ್ಯಾಸ (Education) ಹೊಂದಿದ್ದರೂ ಉದ್ಯಮದಲ್ಲಿ ಉನ್ನತ ಸ್ಥಾನಕ್ಕೇರಿದ ದಾದಾಸಾಹೇಬ್ ಭಗತ್ ಬಗ್ಗೆ ತಿಳಿಯೋಣ.
10ನೇ ಕ್ಲಾಸ್‌ಗೆ ಸ್ಕೂಲ್ ಬಿಟ್ಟ ಹುಡುಗ, ಈಗ ಭಾರತದ ಅತ್ಯಂತ ಕಿರಿಯ ಬಿಲಿಯನೇರ್!
ದಾದಾಸಾಹೇಬ್ ಭಗತ್ ಯಾರು?
ದಾದಾ ಸಾಹೇಬ್ ಭಗತ್, ಮಹಾರಾಷ್ಟ್ರದ ಬೀಡಿನಿಂದ ಬಂದವರು, 1994ರಲ್ಲಿ ಜನಿಸಿದರು. ಭಗತ್ ಅವರು ವೃತ್ತಿಜೀವನವನ್ನು ಮುಂದುವರಿಸುವ ಸಲುವಾಗಿ ಹೈಸ್ಕೂಲ್ ಮುಗಿಸಿದ ನಂತರ ತಮ್ಮ ಹಳ್ಳಿಯಿಂದ ಪುಣೆಗೆ ಸ್ಥಳಾಂತರಗೊಂಡರು. ಐಟಿಐ ಡಿಪ್ಲೊಮಾ ಕಲಿಕೆಯನ್ನು ಪೂರ್ಣಗೊಳಿಸಿದ ನಂತರ ರೂಮ್ ಸರ್ವಿಸ್ ಬಾಯ್ ಆಗಿ ಸೇರಿಕೊಂಡರು. ಆ ಸಂದರ್ಭದಲ್ಲಿ ಅವರಿಗೆ ತಿಂಗಳಿಗೆ 9,000 ಆದಾಯ (Salary)ವಿತ್ತು. ಆದರೂ ಅವರು ಕೈಗಾರಿಕಾ ಉದ್ಯೋಗವನ್ನು ಆಯ್ಕೆ ಮಾಡುವ ಬದಲು ಇನ್ಫೋಸಿಸ್ ಅತಿಥಿ ಗೃಹಕ್ಕೆ ಸೇರಿದರು.
ಇನ್ಫೋಸಿಸ್ ಅತಿಥಿ ಗೃಹದಲ್ಲಿ ಅತಿಥಿಗಳಿಗೆ ಕೊಠಡಿ ಸೇವೆ, ಚಹಾ ಮತ್ತು ನೀರನ್ನು ನೀಡುವ ಜವಾಬ್ದಾರಿಯನ್ನು ಹೊಂದಿದ್ದರು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುವಾಗ ಸಾಫ್ಟ್‌ವೇರ್‌ನ ಮೌಲ್ಯವನ್ನು ಕಲಿತು ಉದ್ಯಮದಲ್ಲಿ ಆಸಕ್ತಿ ಹೆಚ್ಚಿತು. ಭಗತ್ ಕಾರ್ಪೊರೇಟ್ ಜಗತ್ತಿನತ್ತ ಆಕರ್ಷಿತರಾಗಿದ್ದರು. ಆದರೆ ನನಗೆ ಕಾಲೇಜು ಶಿಕ್ಷಣವಿಲ್ಲದ ಯಾರೂ ನನಗೆ ಕೆಲಸ (Work) ನೀಡಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡರು. ಹೀಗಾಗಿ ತಮ್ಮ ಸ್ಕಿಲ್‌ಗಳನ್ನು ಹೆಚ್ಚಿಸಿಕೊಳ್ಳಲು ನಿರ್ಧರಿಸಿದರು. ರಾತ್ರಿಯಲ್ಲಿ ಕೆಲಸ ಮಾಡಿ, ಹಗಲಿನಲ್ಲಿ ಅನಿಮೇಷನ್‌ನಲ್ಲಿ ತಮ್ಮ ಅಧ್ಯಯನವನ್ನು ಮುಂದುವರಿಸಿದರು. ಕೋರ್ಸ್ ಮುಗಿದ ನಂತರ, ಭಗತ್ ಅವರನ್ನು ಮುಂಬೈನಲ್ಲಿ, ಆ ನಂತರ ಹೈದರಾಬಾದ್‌ನಲ್ಲಿ ಕೆಲಸ ಸಿಕ್ಕಿತು.
ಸ್ವಿಟ್ಜರ್‌ಲ್ಯಾಂಡ್ ಮೂಲದ ರತನ್ ಟಾಟಾ ಮಲತಾಯಿ, 70000 ಕೋಟಿ ಉದ್ಯಮದ ಒಡತಿ
ಟೆಂಪ್ಲೇಟ್‌ಗಳ ಲೈಬ್ರರಿಯನ್ನು ರಚಿಸುವ ಕೆಲಸ
ಭಗತ್ ಹೈದರಾಬಾದ್‌ನ ಗ್ರಾಫಿಕ್ಸ್ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದಾಗ ಪೈಥಾನ್ ಮತ್ತು C++ ಅನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಮರುಬಳಕೆ ಮಾಡಬಹುದಾದ ಟೆಂಪ್ಲೇಟ್‌ಗಳ ಲೈಬ್ರರಿಯನ್ನು ರಚಿಸುವುದು ಅದ್ಭುತವಾಗಿದೆ ಎಂದು ಅವರು ಅರಿತುಕೊಂಡರು. ಈ ವಿನ್ಯಾಸದ ಟೆಂಪ್ಲೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ (Sale) ಮಾಡಲು ಅವರು ತಮ್ಮ ಕಲ್ಪನೆಯನ್ನು ಬೆಳೆಸಿಕೊಂಡರು. ಆದರೆ ಅದಕ್ಕಿಂತಲೂ ಮೊದಲು ಭಗತ್ ಅವರಿದ್ದ ಕಾರು ಅಪಘಾತ (Accident)ಕ್ಕೊಳಗಾಯಿತು. ಮಲಗಿದ್ದ ಸ್ಥಿತಿಯಲ್ಲಿದ್ದರೂ ಭಗತ್, ತಮ್ಮ ಕೆಲಸವನ್ನು ತೊರೆದು ತನ್ನ ಡಿಸೈನ್ ಲೈಬ್ರರಿ ಬೆಳೆಸುವುದರ ಮೇಲೆ ತನ್ನ ಸಮಯವನ್ನು ಕೇಂದ್ರೀಕರಿಸಲು ಪ್ರಾರಂಭಿಸಿದರು.
ಭಗತ್, 2015ರಲ್ಲಿ Ninthmotion ಎಂಬ ಕಂಪೆನಿ ಸ್ಥಾಪಿಸಿದರು. ನಂತರದ ದಿನಗಳಲ್ಲಿ BBC ಸ್ಟುಡಿಯೋಸ್ ಮತ್ತು 9XM ಸಂಗೀತ ಚಾನೆಲ್‌ನಂತಹ ಪ್ರಸಿದ್ಧ ಕಂಪನಿಗಳನ್ನು ಒಳಗೊಂಡಂತೆ ಕಡಿಮೆ ಅವಧಿಯಲ್ಲಿ ಜಾಗತಿಕವಾಗಿ ಸುಮಾರು 6,000 ಗ್ರಾಹಕರಿಗೆ ಸೇವೆ ಸಲ್ಲಿಸಿದರು. ಆನ್‌ಲೈನ್ ಗ್ರಾಫಿಕ್ ವಿನ್ಯಾಸಕ್ಕಾಗಿ ಕ್ಯಾನ್ವಾ ಮಾದರಿಯ ವೇದಿಕೆಯನ್ನು ರಚಿಸಲು ಭಗತ್ ನಿರ್ಧರಿಸಿದ್ದಾರೆ. ಭಗತ್‌ನ ಎರಡನೇ ವ್ಯವಹಾರವಾದ ಡೂಗ್ರಾಫಿಕ್ಸ್ ಇದರ ಪರಿಣಾಮವಾಗಿ ಹುಟ್ಟಿಕೊಂಡಿತು. ಪ್ಲಾಟ್‌ಫಾರ್ಮ್ ಸರಳವಾದ ಡ್ರ್ಯಾಗ್ ಮತ್ತು ಡ್ರಾಪ್ ಇಂಟರ್‌ಫೇಸ್ ಅನ್ನು ಹೊಂದಿದೆ ಅದು ಬಳಕೆದಾರರಿಗೆ ಟೆಂಪ್ಲೇಟ್‌ಗಳು ಮತ್ತು ವಿನ್ಯಾಸಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
