ಸಾಲ ಮಾಡದೆ ಬದುಕುತ್ತೇನೆ ಎಂಬ ಚಾಲೆಂಜ್‌ ಮಾಡೋ ಧೈರ್ಯ ಈ ಜಮಾನದ ಜನರಿಗೆ ಇಲ್ಲವೇ ಇಲ್ಲಬಿಡಿ.ಅಷ್ಟಕ್ಕೂ ದೊಡ್ಡವರೇ ಹೇಳಿದ್ದಾರಲ್ಲ,ಸಾಲ ಮಾಡಿಯಾದ್ರೂ ತುಪ್ಪತಿನ್ನು ಎಂದು.ಹೀಗಾಗಿ ಸಾಲ ಮಾಡೋದು ಅಪರಾಧವೇನಲ್ಲಬಿಡಿ.ಆದ್ರೆ ಮೈ ತುಂಬಾ ಸಾಲ ಮಾಡಿಕೊಂಡುತೀರಿಸಲಾಗದೆ ನೆಮ್ಮದಿ ಹಾಳಾಗಬಾರದು ಅಷ್ಟೇ.

ಅದಕ್ಕೇ ಹೂಡಿಕೆ ಮಾಡೋವಾಗ ಎಷ್ಟು ಲೆಕ್ಕಾಚಾರ ಹಾಕುತ್ತೀರೋ ಅಷ್ಟೇ ಗುಣಾಕಾರ,ಭಾಗಾಕಾರ ಸಾಲತೆಗೆದುಕೊಳ್ಳುವಾಗಲೂ ಮಾಡಬೇಕು.ಇಲ್ಲವಾದ್ರೆ ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡಬೇಕಾಗುತ್ತೆ. ಹಾಗಾದ್ರೆ ಸಾಲ ಮಾಡೋವಾಗ ಯಾವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು,ನೋಡೋಣ ಬನ್ನಿ. 

ಅಗತ್ಯಕ್ಕಿಂತ ಹೆಚ್ಚು ಸಾಲ ಬೇಡ

ಹಾಸಿಗೆಯಿದ್ದಷ್ಟೇ ಕಾಲು ಚಾಚಬೇಕು ಎಂದು ಹಿರಿಯರು ಹೇಳಿದ್ದಾರೆ.ಈ ಮಾತನ್ನು ಖರ್ಚು ಮಾಡೋವಾಗ ಮಾತ್ರವಲ್ಲ,ಸಾಲ ಮಾಡೋವಾಗಲೂ ನೆನಪಿಟ್ಟುಕೊಳ್ಳಬೇಕು.ಸುಖಾಸುಮ್ಮನೆ ಸಾಲ ಮಾಡಲು ಹೋಗಬೇಡಿ.ಸಾಲ ಕೊಡೋಕೆ ಬ್ಯಾಂಕ್‌, ಹಣಕಾಸು ಸಂಸ್ಥೆಗಳು ತುದಿಗಾಲಲ್ಲಿ ನಿಂತಿರುತ್ತವೆ. ಹಾಗಂತ ಅವರು ಕೊಡ್ತಾರೆ,ನಾನು ತೆಗೆದುಕೊಳ್ಳುತ್ತೇನೆ ಎಂಬ ಮನಸ್ಥಿತಿ ಬೇಡ.ನಿಮ್ಮ ಉಳಿತಾಯ ಅಥವಾ ಆದಾಯದಲ್ಲೇ ಎಲ್ಲವನ್ನೂ ನಿರ್ವಹಣೆ ಮಾಡೋಕೆ ಆಗುತ್ತೆ ಎಂದಾದ್ರೆ ಸಾಲ ಮಾಡಬೇಡಿ.

ವೈರಸ್‌ ಹಬ್ಬಿಸಿದ ಚೀನಾದಲ್ಲಿ ಈಗ ಭರ್ಜರಿ ಆರ್ಥಿಕ ಪ್ರಗತಿ!

ಆದ್ರೆ ಕೆಲವೊಂದು ಸಂದರ್ಭಗಳಲ್ಲಿ ಸಾಲ ಮಾಡಲೇಬೇಕಾಗುತ್ತೆ.ಉದಾಹರಣೆಗೆ ಮನೆ ಖರೀದಿಸೋವಾಗ,ಕಾರು ಕೊಳ್ಳೋವಾಗ.ಇಂಥ ಸಂದರ್ಭಗಳಲ್ಲಿ ಸಾಲವನ್ನು ಹೊರೆಯಾಗದಂತೆ ನಿರ್ವಹಿಸಲು ಯೋಜನೆ ಹಾಕಿಕೊಳ್ಳೋದು ಅಗತ್ಯ.ಸಾಲ ತೆಗೆದುಕೊಳ್ಳೋವಾಗ ಮಾಸಿಕ ಇಎಂಐ ನಿಮ್ಮ ಕೈಗೆ ಸಿಗೋ ಮಾಸಿಕ ಒಟ್ಟು ಆದಾಯದ ಶೇ.4೦ಕ್ಕಿಂತ ಹೆಚ್ಚಿರದಂತೆ ಎಚ್ಚರ ವಹಿಸಿ. ಒಂದು ವೇಳೆ ಇಎಂಐ ಮೊತ್ತ ಆದಾಯದ ಶೇ.5೦-7೦ರಷ್ಟಿದ್ದರೆ,ಭವಿಷ್ಯಕ್ಕೆ ಒಂದಿಷ್ಟು ಹಣ ಕೂಡಿಡೋದು ನಿಮಗೆ ಕಷ್ಟವಾಗುತ್ತೆ.ಹೀಗಾಗಿ ಸಾಲ ತೆಗೆದುಕೊಳ್ಳೋ ಮುನ್ನ ಮರೆಯದೆ ಇಎಂಐ ಕ್ಯಾಲ್ಕುಲೇಟರ್‌ ಬಳಸಿ.ತಜ್ಞರ ಪ್ರಕಾರ ನಿಮ್ಮಸಾಲ-ಆದಾಯ ಅನುಪಾತವನ್ನು ಸರಿದೂಗಿಸಬಲ್ಲ ಮೊತ್ತವನ್ನಷ್ಟೇ ಸಾಲವಾಗಿ ಪಡೆಯೋದು ಒಳ್ಳೆಯದು.ಎಲ್ಲಕ್ಕಿಂತ ಮುಖ್ಯವಾಗಿ ತೀರಿಸಲು ಸಾಧ್ಯವಿಲ್ಲ ಎಂಬಷ್ಟು ಸಾಲವನ್ನು ಪಡೆದುಕೊಳ್ಳಬೇಡಿ.

ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ

ಹೂಡಿಕೆಗಾಗಿ ಸಾಲ ಮಾಡೋ ಮುನ್ನ ಯೋಚಿಸಿ
ಕೆಲವರು ಮೈ ತುಂಬಾ ಸಾಲ ಮಾಡಿಕೊಂಡು ಹೊಸ ಉದ್ಯಮ ಪ್ರಾರಂಭಿಸುತ್ತಾರೆ.ಈ ರೀತಿ ಸಾಲ ಮಾಡಿ ಬಂಡವಾಳ ಹೂಡಿದ್ರೆ ಆಮೇಲೆ ಲಾಭ ಬರುತ್ತೆ.ಕೈ ತುಂಬಾ ಹಣ ಸಿಗುತ್ತೆ ಎಂಬೆಲ್ಲ ಲೆಕ್ಕಾಚಾರ ಹಾಕಿರುತ್ತಾರೆ. ಆದ್ರೆ ಹೊಸ ಉದ್ಯಮದಲ್ಲಿ ಸಾಕಷ್ಟು ರಿಸ್ಕ್‌ಗಳು ಇದ್ದೇಇರುತ್ತವೆ. ಹೀಗಾಗಿ ಹೂಡಿಕೆ ಮಾಡೋ ಉದ್ದೇಶದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಲ ಮಾಡೋದು ಅಪಾಯವನ್ನು ಮೈ ಮೇಲೆ ಎಳೆದುಕೊಂಡಂತೆ. ಇನ್ನು ಕೆಲವರು ಮದುವೆ, ಟೂರ್‌, ಐಷಾರಾಮಿ ಬದುಕಿಗೆ ಆಸೆಪಟ್ಟು ಸಾಲ ಮಾಡುತ್ತಾರೆ. ಇದು ಕೂಡ ಅಪಾಯಕಾರಿ.ಇಂಥ ಸಾಲಗಳು ಹೊರೆಯಾಗೋ ಸಾಧ್ಯತೆ ಹೆಚ್ಚು.

ಸಾಲದ ಅವಧಿ ಕೂಡ ನಿರ್ಣಾಯಕ
ಕೆಲವರು ಇಎಂಐ ಮೊತ್ತ ಕಡಿಮೆ ಮಾಡಲು ದೀರ್ಘಾವಧಿ ಸಾಲ ಪಡೆಯುತ್ತಾರೆ.ಬ್ಯಾಂಕ್‌ಗಳು ಕೂಡ ದೀರ್ಘಾವಧಿ ಸಾಲ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತವೆ.ಆದ್ರೆ ಸಾಲದ ಮರುಪಾವತಿ ಅವಧಿ ಆದಷ್ಟು ಚಿಕ್ಕದಾಗಿದ್ರೆ ಒಳ್ಳೆಯದು.ಗೃಹಸಾಲಗಳ ಅವಧಿ ದೀರ್ಘಾವಾಗಿರುತ್ತೆ.3೦ ವರ್ಷಗಳ ಅವಧಿಯನ್ನೂ ಹೊಂದಿರುತ್ತವೆ.ಆದ್ರೆ ಈ ರೀತಿ ದೀರ್ಘಾವಧಿ ಸಾಲ ಪಡೆಯೋದ್ರಿಂದ ಅಧಿಕ ಬಡ್ಡಿಪಾವತಿಸಬೇಕಾಗುತ್ತೆ.ಇದೊಂಥರ ಹೊರೆಯೇ.ಆದಕಾರಣ ಸಾಲ ಪಡೆಯೋ ಮುನ್ನ ಇಎಂಐ ಕ್ಯಾಲ್ಕುಲೇಟರ್‌ ಬಳಸಿ ಬಡ್ಡಿಗೆ ಎಷ್ಟು ಹಣ ಹೋಗುತ್ತೆ ಎಂಬುದನ್ನು ಕೂಡ ಲೆಕ್ಕ ಹಾಕಿ. ಆ ಬಳಿಕ ನಿಮ್ಮ ಆದಾಯಕ್ಕೆ ಹೊಂದುವ ಆದಷ್ಟು ಕಡಿಮೆ ಅವಧಿಯ ಸಾಲ ಪಡೆಯಿರಿ.

10 ರೂ. ನೋಟ್ ಇದ್ಯಾ..? ಮನೆಯಲ್ಲಿದ್ದೇ ನೀವು ಗಳಿಸ್ಬೋದು 25 ಸಾವಿರ

ಬಡ್ಡಿದರ ಪರಿಶೀಲಿಸಿ
ಸಾಲ ತೆಗೆದುಕೊಳ್ಳೋ ಮುನ್ನ ಬಡ್ಡಿದರವನ್ನು ಪರಿಶೀಲಿಸಲು ಮರೆಯಬೇಡಿ.ಸಾಲ ತೆಗೆದುಕೊಳ್ಳೋ ಮುನ್ನ 3-4 ಬ್ಯಾಂಕ್‌ಗಳ ಬಡ್ಡಿ ದರವನ್ನು ಪರಿಶೀಲಿಸಿ ಕಡಿಮೆ ಬಡ್ಡಿ ವಿಧಿಸೋ ಬ್ಯಾಂಕ್‌ ಆರಿಸಿಕೊಳ್ಳಿ.ಇನ್ನು ಬಡ್ಡಿ ದರ ಆಗಾಗ ಬದಲಾವಣೆಗೊಳ್ಳುತ್ತೆ ಕೂಡ.ಹೀಗಾಗಿ ಅಂಥ ಅವಕಾಶ ಸಿಕ್ಕಾಗ ಸದುಪಯೋಗಪಡಿಸಿಕೊಳ್ಳಿ.ಇಲ್ಲವಾದ್ರೆ ಸಾಲಕ್ಕಿಂತ ಬಡ್ಡಿಗೇ ಹೆಚ್ಚಿನ ಹಣ ಕಟ್ಟಬೇಕಾಗುತ್ತೆ.

ಅವಧಿಗೂ ಮುನ್ನ ತೀರಿಸಲು ಪ್ರಯತ್ನಿಸಿ
ಕೆಲವರು ಸಾಲದ ಅವಧಿ ಇನ್ನೂ ಅನೇಕ ವರ್ಷಗಳಿವೆ. ಈಗಾಗಲೇ ಯಾಕೆ ಕಟ್ಟಿ ಕ್ಲೋಸ್‌ ಮಾಡೋದು ಎಂದು ಸುಮ್ಮನಿದ್ದು ಬಿಡುತ್ತಾರೆ. ಅಲ್ಲದೆ, ಗೃಹ ಸಾಲ ಸೇರಿದಂತೆ ಕೆಲವು ವಿಧದ ಸಾಲಗಳಿಗೆ ತೆರಿಗೆ ವಿನಾಯ್ತಿ ಇರೋ ಕಾರಣ ಸಾಲವನ್ನು ಮರುಪಾವತಿಸುವಷ್ಟು ಹಣವಿದ್ರೂ  ಕಟ್ಟೋದಿಲ್ಲ.ಆದ್ರೆ ಇದು ತಪ್ಪು.ತೆರಿಗೆ ವಿನಾಯ್ತಿ ಪಡೆಯಲು ಇನ್ನೂ ಅನೇಕ ಅವಕಾಶಗಳಿವೆ.ಆ ಕಾರಣಕ್ಕೆ ಸುಮ್ಮನೆ ಬಡ್ಡಿ ಕಟ್ಟೋದು ನಿಮ್ಮ ಜೇಬಿಗೇ ಹೊರೆ.