ಅಡಕೆ ಆಮದು ಮೇಲಿನ ಕನಿಷ್ಠ ದರ​ವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರುಪಾ​ಯಿ​ಯಷ್ಟು ಹೆಚ್ಚಿಸಿ ಆದೇಶ ಹೊರ​ಡಿ​ಸಿ​ದೆ. ಈ ಹಿಂದೆ ಕೆ.ಜಿ.ಗೆ 251 ರುಪಾಯಿ ಕನಿಷ್ಠ ಆಮದು ದರ ನಿಗದಿಯಾಗಿತ್ತು.

ನವ​ದೆ​ಹ​ಲಿ: ಅಡಕೆ ಆಮದು ಮೇಲಿನ ಕನಿಷ್ಠ ದರ​ವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರುಪಾ​ಯಿ​ಯಷ್ಟು ಹೆಚ್ಚಿಸಿ ಆದೇಶ ಹೊರ​ಡಿ​ಸಿ​ದೆ. 
ಈ ಹಿಂದೆ ಕೆ.ಜಿ.ಗೆ 251 ರುಪಾಯಿ ಕನಿಷ್ಠ ಆಮದು ದರ ನಿಗ​ದಿ​ಯಾ​ಗಿತ್ತು. ಇದೀಗ ಕೇಂದ್ರ ಸರ್ಕಾರ ಅದನ್ನು ಇದೀಗ 351 ರುಪಾ​ಯಿ​ಗ​ಳಿಗೆ ಹೆಚ್ಚಿ​ಸಿದೆ. ಕೇಂದ್ರ ಸರ್ಕಾ​ರದ ಈ ನಡೆ​ಯನ್ನು ಅಂತಾರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋ ಸ್ವಾಗ​ತಿ​ಸಿ​ದೆ. ವಿದೇಶದಿಂದ ಭಾರತಕ್ಕೆ ಅಡಕೆ ಆಮದು ಕನಿಷ್ಠ ದರವನ್ನು ಉತ್ಪಾದನಾ ವೆಚ್ಚ ಪರಿಗಣಿಸಿ ಹೆಚ್ಚಳಗೊಳಿಸುವಂತೆ ಕ್ಯಾಂಪ್ಕೋ ಹಾಗೂ ಇನ್ನಿತರ ಸಹಕಾರಿ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದ್ದವು.

ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್‌ ಶಾ (Amit Shah) ಹಾಗೂ ಕೃಷಿ ಯಂತ್ರ ಮೇಳ ಉದ್ಘಾಟನೆಗೆ ಆಗಮಿಸಿದ್ದ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಜತೆ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ (Campco President Kishore Kumar Kodgi) ಅವರು ಪ್ರತ್ಯೇಕವಾಗಿ ಮಾತನಾಡಿ ಮನವಿ ಮಾಡಿದ್ದರು.

ಅಡಿಕೆಯಲ್ಲಿದೆ ಮುಖದ ಸುಕ್ಕು ನಿವಾರಿಸಿ, ಸೌಂದರ್ಯ ಹೆಚ್ಚಿಸುವ ಸೂಪರ್ ಸೀಕ್ರೆಟ್

ಅಡಿಕೆ ಆಮದು ನಿಷೇಧ ಸಾಧ್ಯವಿಲ್ಲ: ಆರಗ

ವಿಧಾನಸಭೆ: ಭೂತಾನ್‌ (Bhutan) ಸೇರಿದಂತೆ ವಿವಿಧ ದೇಶಗಳಿಂದ ಆಗುತ್ತಿರುವ ಅಡಿಕೆ ಆಮದಿನಿಂದ ಅಡಿಕೆ ಬೆಲೆ ಕುಸಿದು ಅಡಿಕೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಅಡಿಕೆ ಆಮದನ್ನು ನಿಷೇಧಿಸಿ ಇಲ್ಲದಿದ್ದರೆ ಆಮದು ಅಡಿಕೆಗೆ ಕರ್ನಾಟಕದ ಮಾರುಕಟ್ಟೆಯಿಂದ ನಿರ್ಬಂಧ ಹೇರಿ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ. ಆದರೆ, ಇದನ್ನು ನಿರಾಕರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ವಿದೇಶಗಳಿಂದ ಅಡಿಕೆ ಆಮದು ತಡೆಯಲು ಸಾಧ್ಯವಿಲ್ಲ. ಸೌಹಾರ್ದ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿರುತ್ತದೆ. ಹೀಗಾಗಿ ಅಡಿಕೆ ಆಮದು ನಿಷೇಧ ಮಾಡಲಾಗದು. ಇನ್ನು ಹೀಗೆ ಬಂದ ವಿದೇಶಿ ಅಡಿಕೆಯನ್ನು ರಾಜ್ಯದ ವರ್ತಕರು ಖರೀದಿ ಮಾಡುತ್ತಾರೆ. ಅದನ್ನೂ ತಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಸಿದ್ದರಾಮಯ್ಯ ಹಾಗೂ ಆರಗ ಜ್ಞಾನೇಂದ್ರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಯಿತು. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅಡಿಕೆಗೆ ಎಲೆಚುಕ್ಕೆ ರೋಗ ಬಂದು ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇದನ್ನು ನಿವಾರಣೆ ಮಾಡಿಲ್ಲ. ಜತೆಗೆ ಸೂಕ್ತ ಪರಿಹಾರವನ್ನೂ ನೀಡಿಲ್ಲ. ಬೆಲೆ ಕುಸಿತದಿಂದ ಎಂಟು ಮಂದಿ ಅಡಿಕೆ ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಿರುವಾಗಿ ಭೂತಾನ್‌ನಿಂದ 17 ಸಾವಿರ ಟನ್‌ ಅಡಿಕೆ ಆಮದಿಗೆ ನಿರ್ಧರಿಸಲಾಗಿದೆ. ಅಡಿಕೆ ಬೆಳೆಗಾರರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲವೇ ಎಂದು ಕಿಡಿ ಕಾರಿದರು.

Chitradurga: ಜೇನು ತುಪ್ಪದಿಂದ ಸಾಬೂನು ಫೇಶ್‌ವಾಶ್: ರೈತನ ಉತ್ಪನ್ನಗಳಿಗೆ ಭಾರಿ ಡಿಮ್ಯಾಂಡ್

ಆಮದು ನಿಷೇಧ ಸಾಧ್ಯವಿಲ್ಲ:

ಆರಗ ಜ್ಞಾನೇಂದ್ರ ಮಾತನಾಡಿ, ಸೌಹಾರ್ದ ದೇಶಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಆಗಿರುತ್ತದೆ. ಹೀಗಾಗಿ ಅಡಿಕೆ ಆಮದು ನಿಷೇಧ ಮಾಡಲಾಗದು. ಈ ಒಪ್ಪಂದಗಳನ್ನು ಯಾವ ಸರ್ಕಾರದಿಂದಲೂ ಬದಲಿಸಲಾಗದು ಎಂದು ಸ್ಪಷ್ಟಪಡಿಸಿದರು. ಈ ವೇಳೆ ಸಿದ್ದರಾಮಯ್ಯ, ಹಾಗಾದರೆ ಕೇಂದ್ರ ಅಡಿಕೆ ಆಮದು ನಿರ್ಧಾರ ಮಾಡಿದಾಗ ರಾಜ್ಯದಿಂದ ಅಡಿಕೆ ಬೆಳೆಗಾರರ ನಿಯೋಗವನ್ನು ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರಲ್ಲಾ ಯಾಕೆ ಕರೆದುಕೊಂಡು ಹೋಗಿದ್ದಿರಿ? ನೀವು ಆಮದು ನಿಷೇಧಕ್ಕೆ ಒತ್ತಾಯಿಸಲಿಲ್ಲವೇ? ಎಂದು ಪ್ರಶ್ನಿಸಿದರು.

ಆಗ ಆರಗ ಜ್ಞಾನೇಂದ್ರ, ನಿಷೇಧ ಮಾಡಲು ಒತ್ತಾಯ ಮಾಡಿಲ್ಲ. ಬದಲಿಗೆ ಕೆಲವೊಂದು ಮಾನದಂಡಗಳನ್ನು ನಿಗದಿ ಮಾಡುವಂತೆ ಹೇಳಿದ್ದೇವೆ. ನಮ್ಮಲ್ಲಿ ಅಡಿಕೆ ಉತ್ಪಾದನೆಗೆ ತಗಲುವ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಆಮದಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ಕಾಳು ಅಡಿಕೆಯೂ ಆಮದಾಗಿಲ್ಲವೆಂದ ಆರಗ, 65,000 ಟನ್‌ ಅಮದಿನ ಲೆಕ್ಕ ನೀಡಿದ ಸಿದ್ದು

ಅಡಿಕೆ ಆಮದು ನಿಷೇಧಿಸುವಂತೆ ಸಿದ್ದರಾಮಯ್ಯ ಒತ್ತಾಯಿಸುವಾಗ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ನಾನು ಅಡಿಕೆ ಬೆಳೆಗಾರರ ಕಾರ್ಯಪಡೆ ಅಧ್ಯಕ್ಷನಾಗಿದ್ದೇನೆ. ಒಂದು ಕಾಳು ಅಡಿಕೆಯೂ ಆಮದಾಗಿಲ್ಲ ಎಂದರು. ಇದಕ್ಕೆ ಸಂಸತ್‌ನಲ್ಲಿ ಬಿಜೆಪಿ ಸಂಸದ ನಳಿನ್‌ಕುಮಾರ್‌ ಕಟೀಲ್‌ (BJP MP Nalin Kumar Kateel) ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಉತ್ತರ ಪ್ರದರ್ಶಿಸಿದ ಸಿದ್ದರಾಮಯ್ಯ, ವಿದೇಶಗಳಿಂದ 65 ಸಾವಿರ ಟನ್‌ ಅಡಿಕೆ ಆಮದು ಮಾಡಿಕೊಂಡಿರುವುದಾಗಿ ನಿಮ್ಮ ಸರ್ಕಾರವೇ ಹೇಳಿದೆ ಎಂದರು. ಆಗ ನಾನು ಭೂತಾನ್‌ ದೇಶದಿಂದ ಮಾತ್ರ ಆಗಿಲ್ಲ ಎಂದು ಹೇಳಿದ್ದೆ ಎಂದು ಆರಗ ಜ್ಞಾನೇಂದ್ರ ಸಮರ್ಥನೆ ನೀಡಿದರು.

ಅಡಿಕೆ ಬೆಳೆಗಾರರು ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ

ಆತ್ಮಹತ್ಯೆ ಮಾಡಿಕೊಂಡಿರುವ ಎಂಟು ಮಂದಿ ಅಡಿಕೆ ಬೆಳೆಗಾರರು ಬೆಲೆ ಕುಸಿತದಿಂದ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬೇರೆ ಬೇರೆ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಹಾಗಾದರೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಹೇಳಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದಾಗ, ಕಾರಣ ಗೊತ್ತಿಲ್ಲ ಎಂದರು.