ದಸರಾ ಹಬ್ಬಕ್ಕೂ ಮುನ್ನವೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ದೆಹಲಿ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದರ ಹೆಚ್ಚಳವಾಗಿದೆ. ಆದರೆ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ನವದೆಹಲಿ: ದಸರಾ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಬೆಲೆ ಏರಿಕೆಯ (Price Hike) ಬಿಸಿ ತಾಗಿದೆ. ಪ್ರತಿ ತಿಂಗಳು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪರಿಷ್ಕೃತಗೊಳಿಸುತ್ತವೆ. ಇಂದು ಅಕ್ಟೋಬರ್ 1 ಆಗಿದ್ದು, ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಮಹತ್ವದ ಬದಲಾವಣೆಗಳು ಕಂಡು ಬಂದಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 62.50 ರೂ.ಗಳಷ್ಟು ಏರಿಕೆ ಕಂಡು ಬಂದಿದೆ. ಸೆಪ್ಟೆಂಬರ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರದಲ್ಲಿ 9.50 ರೂ. ಹೆಚ್ಚಳ ಮಾಡಲಾಗಿತ್ತು. ಅಕ್ಟೋಬರ್‌ನಲ್ಲಿಯೂ ಬೆಲೆ ಏರಿಕೆಯ ಪರ್ವ ಮುಂದುವರಿದಿದೆ. ಈಗ ದೆಹಲಿಯಲ್ಲಿ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ ಬರೋಬ್ಬರಿ 2747.50 ರೂ.ಗಳಿಂದ 2810 ರೂ.ಗಳಷ್ಟಾಗಿದೆ.
ಯಾವ ನಗರದಲ್ಲಿ ಎಷ್ಟು ಏರಿಕೆ?
| ನಗರ | ಸೆಪ್ಟೆಂಬರ್ 2026 | ಅಕ್ಟೋಬರ್ 2026 | ಎಷ್ಟು ಏರಿಕೆ? |
| ಚೆನ್ನೈ | ₹2,916.50 | ₹2,983 | 63 ರೂಪಾಯಿ |
| ಮುಂಬೈ | ₹2,701 | ₹2,764 | 63 ರೂಪಾಯಿ |
| ಬೆಂಗಳೂರು | ₹2,831 | ₹2,898 | 67 ರೂಪಾಯಿ |
ಇನ್ನು ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇನ್ನುಳಿದ ನಗರಗಳಲ್ಲಿ ಗೃಹ ಮತ್ತು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಈ ಕೆಳಗಿನಂತಿದೆ.
ಅಹಮದಾಬಾದ್:
ವಾಣಿಜ್ಯ ಸಿಲಿಂಡರ್ (19 ಕೆಜಿ): ₹2,831.50
ಗೃಹಬಳಕೆ ಸಿಲಿಂಡರ್ (14.2 ಕೆಜಿ): ₹949 (ಬದಲಾವಣೆಯಿಲ್ಲ)
ಕನ್ಯಾಕುಮಾರಿ:
ವಾಣಿಜ್ಯ ಸಿಲಿಂಡರ್ (19 ಕೆಜಿ): ₹3,046
ಗೃಹಬಳಕೆ ಸಿಲಿಂಡರ್ (14.2 ಕೆಜಿ): ₹1,026 (ಬದಲಾವಣೆಯಿಲ್ಲ)
ತವಾಂಗ್ (ಅರುಣಾಚಲ ಪ್ರದೇಶ):
ವಾಣಿಜ್ಯ ಸಿಲಿಂಡರ್ (19 ಕೆಜಿ): ₹3,073.50 (ಏರಿಕೆ)
ಗೃಹಬಳಕೆ ಸಿಲಿಂಡರ್ (14.2 ಕೆಜಿ): ₹1,007.50 (ಬದಲಾವಣೆಯಿಲ್ಲ)


