ತಂತ್ರಜ್ಞಾನ ಅಭಿವೃದ್ಧಿಗೊಂಡಂತೆ ರಿಯಲ್ ಎಸ್ಟೇಟ್ ಮಾರುಕಟ್ಟೆ ಮಾಡುವ ವಿಧಾನವೂ ಬದಲಾಗಿದೆ
ನೀವು ಹೊಸ ವಿಧಾನ ನಿರ್ಲಕ್ಷಿಸಲು ಯಾಕೆ ಸಾಧ್ಯವಿಲ್ಲ: ಈ ಹಿಂದೆ ರಿಯಲ್ ಎಸ್ಟೇಟ್ ಮಾರ್ಕೆಟಿಂಗ್ ಸಾಂಪ್ರಾದಾಯಿಕ ವಿಧಾನಗಳ ಮೇಲೆ ಅವಲಂಬಿತವಾಗಿತ್ತು. ಪ್ರಮುಖವಾಗಿ ಮುದ್ರಣ ಮಾಧ್ಯಮದ ಜಾಹೀರಾತುಗಳು, ಬಿಲ್‌ಬೋರ್ಡ್, ದೂರವಾಣಿ ಕರೆಗಳ ಮೇಲೆ ಹೆಚ್ಚು ಅವಲಂಬಿತವಾಗಿತ್ತು. ಆದರೆ ತಂತ್ರಜ್ಞಾನದ ಅಭಿವೃದ್ದಿ ಹಾಗೂ ಬಳಕೆ ಹೆಚ್ಚಾದಂತೆ ನಾವು ರಿಯಲ್ ಎಸ್ಟೇಟ್ ಮಾರುಕಟ್ಟೆ ಮಾಡುವ ವಿಧಾನವೂ ಬದಲಾಗಿದೆ. https://www.indianrealty.co/
ಕಂಟೆಂಟ್ ಮಾರ್ಕೆಟಿಂಗ್ ಟೂಲ್: ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ವ್ಯವಹಾರಗಳು ನಿರ್ಲಕ್ಷಿಸಲು ಸಾಧ್ಯವಾಗದ ಪ್ರಮುಖ ಸಾಧನ ಆಗಿದೆ. ಕಂಟೆಂಟ್ ಮಾರ್ಕೆಂಟಿಂಗ್ ಎಂದರೆ ಮೌಲ್ಯಯುತ ಮಾಹಿತಿ ಹಾಗೂ ವಿಷಯಗಳನ್ನು ರಚಿಸಿ ಅದನ್ನು ಉದ್ದೇಶಿತ ಗ್ರಾಹಕರ ಜೊತೆ ಹಂಚಿಕೊಳ್ಳುವುದಾಗಿದೆ. ಇದರಲ್ಲಿ ಹಲವು ವಿಧಾನಗಳಿವೆ. ಪ್ರಮುಖವಾಗಿ ವಿಷಾಯಾಧಾರಿತ ಮಾರ್ಕೆಟಿಂಗ್ ಬ್ಲಾಗ್ ಪೋಸ್ಟ್‌ಗಳು, ಸಾಮಾಜಿಕ ಮಾಧ್ಯಮದಲ್ಲಿನ ವಿಷಯ ಹಂಚಿಕೊಳ್ಳುವಿಕೆ, ವಿಡಿಯೋ ಹಾಗೂ ಇತರ ಹಲವು ರೂಪದಲ್ಲಿ ಮಾರುಕಟ್ಟೆ ಮಾಡುವುದಾಗಿದೆ.
ರಿಯಲ್ ಎಸ್ಟೇಟ್ ವ್ಯವಾಹರಕ್ಕೆ ಕಂಟೆಂಟ್ ಮಾರ್ಕೆಂಟ್ ಏಕೆ ಮುಖ್ಯ?: ಕಂಟೆಂಟ್ ಮಾರ್ಕೆಟಿಂಗ್‌ನಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಿಮ್ಮನ್ನು ನಾಯಕನಾಗಿ ಗುರುತಿಸಿಕೊಳ್ಳಲು ನೆರವಾಗುತ್ತದೆ. ಮಾಹಿತಿಗಳನ್ನು ಹಂಚಿಕೊಳ್ಳವುದು, ವಿಷಯಗಳ ಆಳವಾದ ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ತಜ್ಞರಾಗಿ ಹಾಗೂ ಗ್ರಾಹಕರ ನಂಬಿಕಸ್ಥ ಸಂಸ್ಥೆಯಾಗಿ ಗೌರವ ಪಡೆಯಬಹುದು. ಆದರೆ ಇಲ್ಲಗೆ ಎಲ್ಲವೂ ಮುಗಿದಿಲ್ಲ. ಸಾಂಪ್ರದಾಯಿಕ ಮಾರ್ಕೆಟಿಂಗ್ ವಿಧಾನದಲ್ಲಿ ತಲುಪಲು ಸಾಧ್ಯವಾಗದೇ ಇರುವ ಗ್ರಾಹಕರನ್ನು ಕಂಟೆಂಟ್ ಮಾರ್ಕೆಟಿಂಗ್ ಮೂಲಕ ಸುಲಭವಾಗಿ ತಲುಪಬಹುದು. ಈ ಮೂಲಕ ಗ್ರಾಹಕರ ಜೊತೆ ನಿರಂತರ ಸಂಪರ್ಕ, ಅವರನ್ನು ವ್ಯವಾಹಾರದಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಸಾಧ್ಯವಿದೆ. ಭರಪೂರ ಜಾಹೀರಾತುಗಳ ಮೂಲಕ ಜನರಿಗೆ ಕಿರಿಕಿರಿ ಮಾಡುವ ಬದಲು ಮೌಲ್ಯಯುತ ಮಾಹಿತಿ ನೀಡುವುದು ಉತ್ತಮ. ಇದು ಮನೆ ಖರೀದಿಗೆ ಸಲಹೆ ಆಗಿರಬಹುದು, ಅಥವಾ ಖರೀದಿಸಲು ಇಚ್ಚಿಸುವ ಆಸ್ತಿಯ ವರ್ಚುವಲ್ ನೋಟ ಸೇರಿದಂತೆ ಇತರ ಮೌಲ್ಯಯುತ ಮಾಹಿತಿ ನೀಡಬಹುದು. ಇದರಿಂದ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಬೆಳೆಸಲು ಸಾಹಯ ಮಾಡುತ್ತದೆ.
ರಿಯಲ್ ಎಸ್ಟೇಟ್ ವ್ಯಹಾರಕ್ಕೆ ಯಾವ ರೀತಿ ಕಂಟೆಂಟ್ ಉತ್ತಮ?: ಈ ಪ್ರಶ್ನೆಗೆ ಉತ್ತರ ನಿಮ್ಮ ಉದ್ದೇಶಿತ ಗ್ರಾಹಕರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ನೀವು ಮೊದಲ ಬಾರಿಗೆ ಮನೆ ಖರೀದಿಸುವ ಗ್ರಾಹಕರನ್ನು ಟಾರ್ಗೆಟ್ ಮಾಡಿಕೊಂಡರೆ, ಬ್ಲಾಗ್ ಪೋಸ್ಟ್, ಸಾಮಾಜಿಕ ಮಾಧ್ಯಮ ಅಪ್‌ಡೇಟ್ ಮೇಲೆ ಕಂಟೆಟ್ ರಚಿಸುವುದು ಉತ್ತಮ. ಇದರಲ್ಲಿ ಮನೆ ಖರೀದಿ ಪ್ರಕ್ರಿಯೆ ಪ್ರಾಯೋಗಿಕ ಸಲಹೆ, ಜಾಗರೂಕತೆ ಕುರಿತ ಮಾಹಿತಿಯನ್ನೂ ನೀಡಬೇಕು. ಒಂದು ವೇಳೆ ಐಷಾರಾಮಿ ಮನೆ ಖರೀದಿದಾರರನ್ನು ಗುರಿಯಾಗಿಸಿದರೆ, ಉತ್ತಮ ಗುಣಮಟ್ಟ ವಿಡಿಯೋ, ವರ್ಚುವಲ್ ಮೂಲಕ ಐಷಾರಾಮಿ ಮನೆಗಳನ್ನು ಗ್ರಾಹಕರಿಗೆ ತೋರಿಸುವುದು ಸೇರಿದಂತೆ ಇತರ ಮೌಲ್ಯಯುತ ಮಾಹಿತಿ ನೀಡಬಹುದು.
ಯಶಸ್ವಿ ಕಂಟೆಂಟ್ ಮಾರ್ಕೆಟಿಂಗ್ ಪ್ರಮುಖ ಮಂತ್ರ ಎಂದರೆ ನಿಮ್ಮ ಉದ್ದೇಶಿತ ಗ್ರಾಹಕರನ್ನು ಅರ್ಥಮಾಡಿಕೊಂಡು ಅವರ ನಿರ್ದಿಷ್ಟ ಅಗತ್ಯಗಳು, ಆಸಕ್ತಿಗೆ ಅನುಗುಣವಾಗಿ ಕಂಟೆಂಟ್ ರಚಿಸಬೇಕು. ಇದಕ್ಕೆ ಸಂಶೋಧನೆ, ಅಧ್ಯಯನ ಹಾಗೂ ಪ್ರಯೋಗದ ಅಗತ್ಯವಿದೆ. ಆದರೆ ಇದರಿಂದ ಸಿಗುವ ಪ್ರತಿಫಲ ಅಷ್ಟೇ ಉತ್ತಮವಾಗಿರುತ್ತದೆ.
ಉತ್ತಮ ಕಂಟೆಂಟ್ ರಚಿಸುವುದು ಮೊದಲ ಹಂತವಾಗಿದೆ. ಬಳಿಕ ಈ ಕಂಟೆಂಟನ್ನು ಪರಿಣಾಮಕಾರಿಯಾಗಿ ಪ್ರಚಾರ ಮಾಡಬೇಕು. ವಿಷಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವುದು, ಇಮೇಲ್ ಮಾಡುವುದು, ನಿಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹಂಚಿಕೊಳ್ಳುವುದು ಪ್ರಮುಖವಾಗಿದೆ. ಇದರಿಂದ ಹೆಚ್ಚಿನ ಗ್ರಾಹಕರನ್ನ ತಲುಪಲು ಸಾಧ್ಯವಿದೆ. ಇಷ್ಟೇ ಅಲ್ಲ ವೆಬ್‌ಸೈಟ್ ಮೂಲಕ ಹೊಸ ಹೊಸ ಗ್ರಾಹಕರನ್ನು ಸೆಳೆಯಲು ಸಾಧ್ಯವಿದೆ. ಸಂಭಾವ್ಯ ಗ್ರಾಹಕರು ನಿಮ್ಮ ವ್ಯಾಪರ ಹಾಗೂ ಸೇವೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ನೆರವಾಗುತ್ತದೆ.
ಕಂಟೆಂಟ್ ಮಾರ್ಕೆಟಿಂಗ್ ಬಳಿಕ ಅದರ ಯಶಸ್ಸು ಅಳೆಯುವುದು ಮುಖ್ಯವಾಗಿದೆ. ವೆಬ್‌ಸೈಟ್ ಟ್ರಾಫಿಕ್, ಸಾಮಾಜಿಕ ಮಾಧ್ಯಮಗಳಲ್ಲಿ ಎಂಗೇಜ್‌ಮೆಂಟ್ ಪ್ರತಿಕ್ರಿಯೆಗಳು, ಸಲಹೆಗಳನ್ನು ಪರಿಶೀಲಿಸುವುದು ಮುಖ್ಯ. ನಿಗದಿತ ಸಮಯದಲ್ಲಿ ಇವುಗಳ ಪರಿಶೀಲನೆ ನಡೆಸಿ ಅಗತ್ಯಕ್ಕೆ ತಕ್ಕಂತೆ ಕಂಟೆಂಟ್ ಪರಿಷ್ಕರಿಸಬಹುದು ಇದರ ಜೊತೆಗೆ ನಿಮ್ಮ ಸಂಪನ್ಮೂಲಗಳನ್ನು ಹೇಗೆ ನಿಯೋಜಿಸಬೇಕು ಅನ್ನೋದರ ಡೇಟಾವನ್ನು ಪಡೆದುಕೊಂಡು ಸುಲಭವಾಗಿ ನಿರ್ವಹಣೆ ಮಾಡಬಹುದು.
ಅಂತಿಮವಾಗಿ, ರಿಯಲ್ ಎಸ್ಟೇಟ್ ವ್ಯವಾಹರಕ್ಕೆ ಕಂಟೆಂಟ್ ಮಾರ್ಕೆಂಟಿಂಗ್ ಪ್ರಮುಖ ಸಾಧನ. ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮೌಲ್ಯಯುತ, ಅಗತ್ಯ ಹಾಗೂ ಸಮಯಕ್ಕೆ ತಕ್ಕಂತೆ ನೀಡುವ ಕಂಟೆಂಟ್ ಹಂಚಿಕೊಳ್ಳುವುದರಿಂದ ಈ ಉದ್ಯಮ ಕ್ಷೇತ್ರದಲ್ಲಿ ನಾಯಕರಾಗಿ ಗುರುತಿಸಿಕೊಳ್ಳಬಹುದು. ಉದ್ದೇಶಿತ ಗ್ರಾಹಕರನ್ನು ತಲುಪುವ ಮೂಲಕ ವ್ಯಾಪಾರ ವಹಿವಾಟನ್ನು ವೃದ್ಧಿಕೊಳ್ಳಬಹುದು. ಹಾಗಾಗರೆ ನೀವು ಯಾವುದಕ್ಕಾಗಿ ಕಾಯುತ್ತಿದ್ದೀರೀ? ಇಂದೇ ಉತ್ತಮ ಕಂಟೆಂಟ್ ರಚಿಸಿ ವ್ಯವಹಾರ ಆರಂಭಿಸಿ(ಇಂಡಿಯನ್ ರಿಯಾಲ್ಟಿ) https://www.indianrealty.co/
