ಸ್ನೇಹಿತರೆಲ್ಲಾ ವಿದೇಶಕ್ಕೆ ಹೋದ್ರೆ, ಊರಲ್ಲಿದ್ದುಕೊಂಡೇ ವರ್ಷಕ್ಕೆ ₹2.5 ಕೋಟಿ ಗಳಿಸುತ್ತಿರೋ 34ರ ಯುವಕ

ಪಂಜಾಬ್‌ನ ಯುವ ರೈತ ಬೋಹರ್ ಸಿಂಗ್ ಗಿಲ್, ಆಧುನಿಕ ಕೃಷಿ ತಂತ್ರಜ್ಞಾನ ಬಳಸಿ ವಾರ್ಷಿಕ ₹2.5 ಕೋಟಿಗೂ ಹೆಚ್ಚು ಗಳಿಸುತ್ತಿದ್ದಾರೆ. ಸಿಂಚನ ನೀರಾವರಿ ಮತ್ತು ಆಲೂಗಡ್ಡೆ ಬೆಳೆಯ ಮೂಲಕ 250 ಎಕರೆ ಜಮೀನಿನಲ್ಲಿ ಯಶಸ್ಸು ಕಂಡಿದ್ದಾರೆ.

The farming story of a 34 year old man who is earning more than 2 Crore Rupees mrq

ಚಂಡೀಗಢ: ಕೋವಿಡ್ ಕಾಲಘಟ್ಟದ ಬಳಿಕ  ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗುತ್ತಿದ್ದಾರೆ. ಸಾಮಾನ್ಯವಾಗಿ ಪದವಿ ಬಳಿಕ ಯುವಕರು ಕೆಲಸ ಅರಸಿ ನಗರದತ್ತ ವಲಸೆ ಹೋಗುತ್ತಾರೆ. ಆದ್ರೆ ಕೋವಿಡ್ ಸಾಂಕ್ರಾಮಿಕ ಬಳಿಕ ಯುವ ಸಮುದಾಯ ತಮ್ಮ ಕುಟುಂಬದೊಂದಿಗೆ ಇರಲು, ಪೂರ್ವಜರಿಂದ ಬಂದಿರೋ ಜಮೀನಿನಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಆಧುನಿಕ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಕಡಿಮೆ ಜಮೀನಿನಲ್ಲಿಯೇ ಹೆಚ್ಚು ಇಳುವರಿಯನ್ನು ಪಡೆದುಕೊಂಡು ಕೈ ತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆದ್ರೆ ಇಲ್ಲೋರ್ವ ಯುವಕನ ಗೆಳೆಯರೆಲ್ಲಾ ಕೆಲಸ ಅರಸಿ ವಿದೇಶಕ್ಕೆ ಹೋದ್ರೆ, ಈತ ಊರಿನಲ್ಲಿಯೇ ಇದ್ದು ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಪಂಜಾಬ್ ರಾಜ್ಯದ ಫರಿದಾಕೋಟ್ ಜಿಲ್ಲೆಯ ಸೈದೆಕೆ ಗ್ರಾಮದ ಯುವ ರೈತ ಬೋಹರ್ ಸಿಂಗ್ ಗಿಲ್ ಉರ್ಫ್ ಯದವೀರ್ ಸಿಂಗ್ ಗಿಲ್ (34) ಆಧುನಿಕ ಕೃಷಿ ಮೂಲಕ ವಾರ್ಷಿಕ 2 ಕೋಟಿಗೂ ಅಧಿಕ ಹಣ ಸಂಪಾದಿಸುತ್ತಿದ್ದಾರೆ.

ಬೋಹರ್ ಸಿಂಗ್ ಪೂರ್ವಜರಿಂದ ಬಂದ 37 ಎಕರೆಯಲ್ಲಿ ಕೃಷಿ ಆರಂಭಿಸಿದರು. ಆರಂಭದಲ್ಲಿ 2 ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆದುಕೊಂಡರು. ಇದರಿಂದ ಮುಂದೆ ಗೋಧಿ ಬಿಟ್ಟು ಸಂಪೂರ್ಣವಾಗಿ ಆಲೂಗಡ್ಡೆ ಬೆಳೆದರು.  ನಂತರ ಸುತ್ತಲಿನ ಜಮೀನು ಗುತ್ತಿಗಗೆ ಪಡೆಯುತ್ತಾ ಇಂದು 37 ರಿಂದ 250 ಎಕರೆಯಲ್ಲಿ ಕೃಷಿ ಮಾಡುತ್ತಿದ್ದಾರೆ. ನೀರು ಉಳಿಸುವ ದೃಷ್ಟಿಯಿಂದ ಸಿಂಚನ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಡೈಮಂಡ್ ಮತ್ತು ಎಲ್‌ಆರ್ ಮಾದರಿಯ ಶುಗರ್ ಫ್ರೀ ಆಲೂಗಡ್ಡೆ  ಬೆಳೆಯುತ್ತಿದ್ದಾರೆ. 

ಇದನ್ನೂ ಓದಿ: ಯಾವುದೇ ಡಿಗ್ರಿ ಬೇಡ, ಮನೆಯಂಗಳದಲ್ಲಿಯೇ ವ್ಯವಹಾರ ಆರಂಭಿಸಿ, ವಾರಕ್ಕೆ ₹9 ಸಾವಿರ ಲಾಭ ಸಂಪಾದಿಸಿ

ಸಿಂಚನ ನೀರಾವರಿಯಿಂದ ಶೇ.50ರಷ್ಟು ನೀರು ಉಳಿತಾಯವಾಗುತ್ತದೆ. ಈ ರೀತಿಯ ಕೃಷಿಯಿಂದ ಮಣ್ಣಿನ ಗುಣಮಟ್ಟ ಸಹ ಹಾಳಾಗುವುದಿಲ್ಲ. ಸ್ಪ್ರಿಂಕ್ಲರ್ ನೀರಾವರಿಯಿಂದಾಗಿ ಗಾಳಿಯಲ್ಲಿರುವ ಸಾರಜನಕವು ನೀರಿನ ಒತ್ತಡದಿಂದ ಮಣ್ಣನ್ನು ತಲುಪುತ್ತದೆ. ಇದರಿಂದಾಗಿ ಯೂರಿಯಾದ ಬಳಕೆ 40% ರಷ್ಟು ಕಡಿಮೆಯಾಗುತ್ತದೆ ಎಂದು ಯುವ ರೈತ ಬೋಹರ್ ಸಿಂಗ್ ಗಿಲ್ ಹೇಳುತ್ತಾರೆ. ಸ್ಪ್ರಿಂಕ್ಲರ್ ನೀರಾವರಿಯಿಂದಾಗಿ ಎಕರೆಯಲ್ಲಿ 25 ಕ್ವಿಂಟಲ್ ಆಲೂ ಬೆಳೆಯಬಹುದು. ಈ ವಿಧಾನದಿಂದ ಎಕರೆಗೆ ಹೆಚ್ಚುವರಿಯಾಗಿ 10 ಕ್ವಿಂಟಲ್ ಫಸಲು ಬರುತ್ತದೆ. 

ಇನ್ನು ಸಿಂಚನ ನೀರಾವರಿ ಸಾಮಾಗ್ರಿ ಖರೀದಿಗೆ ಸರ್ಕಾರ ಶೇ.80ರಷ್ಟು ಸಬ್ಸಿಡಿ ನೀಡುತ್ತದೆ. ಮಹಿಳಾ ರೈತರಿಗೆ ಶೇ.90ರಷ್ಟು ಸಬ್ಸಿಡಿ ಲಭ್ಯವಾಗುತ್ತದೆ. ಸಬ್ಸಿಡಿ ಬಳಿಕ ಅಳವಡಿಕೆ ವೆಚ್ಚ ಎಕರೆಗೆ 15,000 ರೂಪಾಯಿ ಬರುತ್ತದೆ. ಪ್ರತಿ ಎಕರೆ ಭೂಮಿಯ ಗುತ್ತಿಗೆ ವರ್ಷಕ್ಕೆ 70,000 ರೂಪಾಯಿ ನೀಡಬೇಕು. ಎಲ್ಲಾ ಖರ್ಚುಗಳನ್ನು ತೆಗೆದಾಗ ವರ್ಷಕ್ಕೆ ಒಂದು ಎಕರೆಗೆ 1 ಲಕ್ಷ ರೂಪಾಯಿ ಉಳಿತಾಯವಾಗುತ್ತದೆ. ಸದ್ಯ 250 ಎಕರೆಗೆ ವಾರ್ಷಿಕ 2.5 ಕೋಟಿ ರೂಪಾಯಿ ಹಣ ಉಳಿಯುತ್ತೆ ಎಂದು ರೈತ ಬೋಹರ್ ಸಿಂಗ್ ಹೇಳುತ್ತಾರೆ. 

ಇದನ್ನೂ ಓದಿ: 2025ಕ್ಕೆ ಕಡಿಮೆ ಬಂಡವಾಳದ 10 ಬ್ಯುಸಿನೆಸ್ ಐಡಿಯಾಗಳು: ಪ್ರತಿದಿನ ಎಣಿಸಬಹುದು ಹಣ

Latest Videos
Follow Us:
Download App:
  • android
  • ios