ಯಾವುದೇ ಡಿಗ್ರಿ ಬೇಡ, ಮನೆಯಂಗಳದಲ್ಲಿಯೇ ವ್ಯವಹಾರ ಆರಂಭಿಸಿ, ವಾರಕ್ಕೆ ₹9 ಸಾವಿರ ಲಾಭ ಸಂಪಾದಿಸಿ
ಬಾಳೆ ಕಾಗದ ತಯಾರಿಕಾ ಘಟಕ ಆರಂಭಿಸುವ ಮೂಲಕ ವಾರಕ್ಕೆ ₹9,000 ಗಳಿಸಬಹುದು. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಆರ್ಥಿಕ ಸಹಾಯ ಲಭ್ಯ. ಮನೆಯಲ್ಲಿಯೇ ಈ ವ್ಯವಹಾರ ಆರಂಭಿಸಿ, ನಿಯಮಿತ ಲಾಭ ಗಳಿಸಿ.
ಬೆಂಗಳೂರು: ಯಾರಿಗೆ ಆಗಲಿ ಸ್ವಂತ ವ್ಯವಹಾರ ಆರಂಭಿಸಬೇಕು ಎಂದು ಕನಸು ಕಂಡಿರುತ್ತಾರೆ. ಆದ್ರೆ ಯಾವ ವ್ಯವಹಾರ ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇರಲ್ಲ. ಕೆಲವೊಮ್ಮೆ ಬಂಡವಾಳ ಕೊರತೆಯಿಂದ ಜನರು ಸ್ವಂತ ವ್ಯವಹಾರ ಮಾಡೋದರ ಹಿಂದೆ ಸರಿಯುತ್ತಾರೆ. ಯಾವುದೇ ಸ್ವಂತ ವ್ಯವಹಾರ ಆರಂಭಿಸುವ ಮುನ್ನ ಸಾಧಕ-ಬಾಧಕಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕಾಗುತ್ತದೆ. ಇಲ್ಲವಾದ್ರೆ ಇಡೀ ಆರ್ಥಿಕ ಜೀವನ ಸಾಲದಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ. ಇಂದು ನಾವು ನಿಮಗೆ ಮನೆಯಂಗಳದಲ್ಲಿಯೇ ಆರಂಭಿಸಬಹುದಾದ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಈ ವ್ಯವಹಾರ ಆರಂಭಿಸಲು ನಿಮಗೆ ಸರ್ಕಾರದಿಂದಲೂ ಆರ್ಥಿಕ ಸಹಾಯ ಸಿಗುತ್ತದೆ. ಈ ವಸ್ತುವಿಗೆ ಮಹಾನಗರಗಳಿಂದ ಹಿಡಿದು ಚಿಕ್ಕ ಪಟ್ಟಣದಲ್ಲಿಯೂ ಉತ್ತಮ ಬೇಡಿಕೆ ಹೊಂದಿರುತ್ತದೆ.
ಒಮ್ಮೆ ಈ ವ್ಯವಹಾರ ಆರಂಭಿಸಿದ್ರೆ ನಿಮಗೆ ಜೀವನದುದ್ದಕ್ಕೂ ನಿಯಮಿತ ಲಾಭ ಸಿಗುತ್ತದೆ. ಈ ವ್ಯವಹಾರ ನಷ್ಟದ ಪ್ರಮಾಣ ಸಹ ಕಡಿಮೆಯಾಗಿರುತ್ತೆ ಎಂಬುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿರುತ್ತದೆ. ಈ ವ್ಯವಹಾರವನ್ನು ನೀವು ಎಲ್ಲಿ ಬೇಕಾದ್ರೂ ಆರಂಭಿಸಬಹುದು. ಕಚ್ಚಾವಸ್ತು ಸಂಗ್ರಹ ಮತ್ತು ಯಂತ್ರೋಪಕರಣ ಅಳವಡಿಸಲು ಸ್ಥಳದ ಅವಶ್ಯಕತೆ ಇರುತ್ತದೆ. ಹಾಗೆ ನಿಮ್ಮ ಉತ್ಪನ್ನವನ್ನು ಎಲ್ಲಿ ಮತ್ತು ಹೇಗೆ ಮಾರಾಟ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಂಡಿರಬೇಕು.
ಇಂದು ನಾವು ಬಾಳೆ ಕಾಗದ ತಯಾರಿಕಾ ಘಟಕ ಆರಂಭಿಸಿರುವ ಕುರಿತು ಹೇಳುತ್ತಿದ್ದೇವೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ (ಕೆವಿಐಸಿ) ಬಾಳೆ ಕಾಗದ ತಯಾರಿಕೆ ಕುರಿತು ವರದಿಯೊಂದನ್ನು ಸಿದ್ಧಪಡಿಸಿದೆ. ಬಾಳೆಗಿಡದ ತೊಗಟೆ ಅಥವಾ ಬಾಳೆ ಸಿಪ್ಪೆಯ ನಾರುಗಳಿಂದ ಈ ಕಾಗದವನ್ನು ತಯಾರಿಸಲಾಗಿದೆ. ಬಾಳೆ ಕಾಗದ ಹೆಚ್ಚು ಸಾಂದ್ರತೆ ಮತ್ತು ಶಕ್ತಿಯನ್ನು ಹೊಂದಿದೆ. ಹಾಗಾಗಿ ಸದ್ಯ ವಿಲೇವಾರಿಗಳಲ್ಲಿ ಬಾಳೆ ಕಾಗದ ಹೆಚ್ಚು ಬಳಕೆಯಾಗುತ್ತದೆ.
ಎಷ್ಟು ಬಂಡವಾಳ ಬೇಕು?
ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ವರದಿ ಪ್ರಕಾರ, ಬಾಳೆ ಕಾಗದದ ಘಟಕ ಆರಂಭಿಸಲು 16.47 ಲಕ್ಷ ರೂಪಾಯಿ ಬೇಕಾಗುತ್ತದೆ. ಆದ್ರೆ ಈ ಬ್ಯುಸಿನೆಸ್ ಆರಂಭಿಸಲು ನಿಮಗೆ ಬಂಡವಾಳದ ಸಹಾಯ ಸಿಗುತ್ತದೆ. ಈ ವ್ಯವಹಾರ ಆರಂಭಿಸಲು ನಿಮಗೆ ಎರಡು ವಿಧದಲ್ಲಿ ಸಾಲ ಸಿಗುತ್ತದೆ. ಅವಧಿ ಸಾಲವಾಗಿ 11.93 ಲಕ್ಷ ರೂಪಾಯಿ ಮತ್ತು ವರ್ಕಿಂಗ್ ಕ್ಯಾಪಿಟಲ್ ಅಗಿ 2.9 ಲಕ್ಷ ರೂಪಾಯಿ ಸಾಲ ಸಿಗುತ್ತದೆ. ಈ ಸಾಲ ನಿಮಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಲ್ಲಿ ಲಭ್ಯವಾಗುತ್ತದೆ. ಗ್ರಾಮೀಣ/ನಗರ ಪ್ರದೇಶ ಅಲ್ಲದ ಸ್ಥಳದಲ್ಲಿ ವ್ಯವಹಾರ ಆರಂಭಕ್ಕೆ 10 ಲಕ್ಷದವರೆಗೂ ಸಾಲ ಸಿಗುತ್ತದೆ. ವ್ಯವಹಾರದ ಗಾತ್ರಕ್ಕೆ ಅನುಸಾರವಾಗಿ ಸಾಲದ ಪ್ರಮಾಣ ಹೆಚ್ಚಾಗುತ್ತದೆ.
ಇದನ್ನೂ ಓದಿ: ಈ ಯಂತ್ರ ಅಳವಡಿಸಿ ಬ್ಯುಸಿನೆಸ್ ಆರಂಭಿಸಿದ್ರೆ ಪ್ರತಿ ತಿಂಗಳು 2 ಲಕ್ಷ ರೂಪಾಯಿ ಲಾಭ
ಬಾಳೆ ಕಾಗದ ಮಾರಾಟದಿಂದ ವಾರ್ಷಿಕವಾಗಿ 5 ಲಕ್ಷ ರೂಪಾಯಿಗಿಂತ ಹೆಚ್ಚು ಹಣ ಗಳಿಸಬಹುದು. ಮೊದಲ ವರ್ಷದಲ್ಲಿ 5.03 ಲಕ್ಷ, ಎರಡನೇ ವರ್ಷ 6.01 ಲಕ್ಷ ಮತ್ತು ಮೂರನೇ ವರ್ಷದಲ್ಲಿ 6.86 ಲಕ್ಷ ರೂಪಾಯಿ ಲಾಭ ಸಿಗುತ್ತದೆ. ಈ ಲಾಭದ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತದೆ. ಈ ವ್ಯವಹಾರವನ್ನು ಪ್ರಾರಂಭಿಸಲು ಜಿಎಸ್‌ಟಿ ನೋಂದಣಿ, ಎಂಎಸ್‌ಎಂಇ ಎಂಟರ್‌ಪ್ರೈಸ್ ಆನ್‌ಲೈನ್ ನೋಂದಣಿ, ಬಿಐಎಸ್ ಪ್ರಮಾಣೀಕರಣ, ಮಾಲಿನ್ಯ ಇಲಾಖೆಯಿಂದ ಎನ್‌ಒಸಿ ಅಗತ್ಯವಿರುತ್ತದೆ. ವರ್ಷಕ್ಕೆ 5 ಲಕ್ಷ ಅಂದ್ರೆ ವಾರಕ್ಕೆ 9 ಸಾವಿರ ರೂಪಾಯಿ ಲಾಭ ನಿಮ್ಮದಾಗುತ್ತದೆ.
Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವುದಿಲ್ಲ. ಯಾವುದೇ ವ್ಯವಹಾರ ಆದ್ರೂ ಅದು ಮಾರುಕಟ್ಟೆಯ ಅಪಾಯಗಳನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: ನೀವೇ ಆರಂಭಿಸಬಹುದು TATA ZUDIO, ಬಂಡವಾಳ, ಲಾಭದ ಪ್ರಮಾಣ ಎಷ್ಟು?