ಮಹಿಳೆಯರು ಈ ನಾಲ್ಕು ಮಾರ್ಗದಲ್ಲಿ ಟ್ಯಾಕ್ಸ್ ಉಳಿಸಬಹುದು!

Income tax for female: ಇಂದು ದುಡಿಯುವ ಅನೇಕ ಮಹಿಳೆಯರು (Working Women) ಲಭ್ಯವಿರೋ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ. 

Tax  Saving tips for working women mrq

ಬೆಂಗಳೂರು: ಆರ್ಥಿಕ ವರ್ಷದ ಅಂತ್ಯದಲ್ಲಿ (Financial Year) ತೆರಿಗೆ ಹೇಗೆ ಉಳಿಸಬೇಕು ಎಂದು ಎಲ್ಲರೂ ಯೋಚಿಸಿರುತ್ತಿರುತ್ತಾರೆ. ತೆರಿಗೆಯನ್ನು (Tax Saving Tips) ಉಳಿಸುವ ಮಾರ್ಗ ಯಾವುದು ಎಂದು ಎಲ್ಲರೂ ಹುಡುಕುತ್ತಿರುತ್ತಾರೆ. ಪುರುಷು ಮಾತ್ರವಲ್ಲ ಮಹಿಳೆಯರು ಸಹ ಟ್ಯಾಕ್ಸ್ ಪ್ಲಾನಿಂಗ್ ಮಾಡುತ್ತಾರೆ. ಮಹಿಳೆಯರು ಕೆಲವು ವಿಶೇಷ ಯೋಜನೆಗಳಲ್ಲಿ ಹಣ ವಿನಿಯೋಗಿಸುವ ಮೂಲಕ ತೆರಿಗೆಯನ್ನು ಉಳಿಸಬಹುದಾಗಿದೆ. ಆದ್ರೆ ಇದಕ್ಕೆ ಸರಿಯಾದ ಹೂಡಿಕೆಯ ಪ್ಲಾನ್ (Money Investment Plan) ಮಾಡಿಕೊಳ್ಳಬೇಕಾಗುತ್ತದೆ. ಇಂದು ದುಡಿಯುವ ಅನೇಕ ಮಹಿಳೆಯರು (Working Women) ಲಭ್ಯವಿರೋ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ಹಣವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಿದ್ದಾರೆ. 

ಗೃಹಿಣಿಯರು ಆದಾಯ ತೆರಿಗೆ ಸಲ್ಲಿಕೆ ಮಾಡೋದು ಹೇಗೆ? 

ಗೃಹಿಣಿಯರು ಲಾಭಾಂಶ, ಬಡ್ಡಿ, ಬಾಡಿಗೆ, ವೇತನ ಹೀಗೆ ವಿವಿಧ ಮೂಲಗಳಿಂದ ಆದಾಯ ಪಡೆಯುತ್ತಿದು, ಇದು ತೆರಿಗೆ ವಿನಾಯ್ತಿಗಿಂತ ಹೆಚ್ಚಾಗಿದ್ರೆ ತೆರಿಗೆ ಪಾವತಿಸಬೇಕಾಗುತ್ತದೆ.ಹಳೆಯ ತೆರಿಗೆ ಪದ್ಧತಿಯಲ್ಲಿ ಈ ವಿನಾಯಿತಿ 2.5 ಲಕ್ಷ ರೂಪಾಯಿವರೆಗೆ ಇದೆ. ಹೊಸ ಪದ್ಧತಿಯಲ್ಲಿ ಮೂರು ಲಕ್ಷ ರೂ.ಗಳವರೆಗೆ ವಿನಾಯಿತಿ ಇದೆ. ಮಹಿಳೆಯರು ಈ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಮೂಲಕ ತೆರಿಗೆ ಉಳಿಸಬಹುದಾಗಿದೆ. 

1.ಸುಕನ್ಯಾ ಸಮೃದ್ಧಿ ಯೋಜನೆ 

ಇದು ಕೇಂದ್ರ ಸರ್ಕಾರದ ಉಳಿತಾಯ ಯೋಜನೆಯಾಗಿದೆ. 10 ವರ್ಷದೊಳಗಿನ ಹೆಣ್ಣು ಮಗುವಿನ ಹೆಸರಿನಲ್ಲಿ ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು. ಈ ಖಾತೆಯಲ್ಲಿ ವರ್ಷಕ್ಕೆ ಗರಿಷ್ಠ 1 ಲಕ್ಷ 50 ಸಾವಿರ ರೂಪಾಯಿವರೆಗೂ ಹೂಡಿಕೆ ಮಾಡಬಹುದಾಗಿದೆ. ಈ ಹಣವನ್ನು ಭವಿಷ್ಯದಲ್ಲಿ ಮಕ್ಕಳ ಶಿಕ್ಷಣ ಅಥವಾ ಮದುವೆಗೂ ಬಳಸಬಹುದಾಗಿದೆ. ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ 80 ಸಿ ಅನ್ವಯಯಡಿಯಲ್ಲಿ ವಿನಾಯ್ತಿ ಸಿಗುತ್ತದೆ. 


2.ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್

ಇದು ಅಂಚೆ ಕಚೇರಿಯ ಯೋಜನೆಯಾಗಿದ್ದು, ಇಲ್ಲಿ ನ್ಯಾಶನಲ್ ಸೇವಿಂಗ್ ಸರ್ಟಿಫಿಕೇಟ್ ನಲ್ಲಿ ಹಣ ವಿನಿಯೋಗಿಸಬಹುದು. ಈ ಯೋಜನೆಯಲ್ಲಿ ಕನಿಷ್ಠ 1 ಸಾವಿರ ರೂ.ಗಳಿಂದ ಹೂಡಿಕೆ ಆರಂಭಿಸಬಹುದು. 1.5 ಲಕ್ಷ ರೂಪಾಯಿ ಗರಿಷ್ಠ ಮಿತಿಯಾಗಿದೆ. ಇಲ್ಲಿ ನಿಮಗೆ ಶೇ.7.7ರಷ್ಟು ಬಡ್ಡಿ ಸಿಗುತ್ತದೆ. ಆದಾಯ ತೆರಿಗೆ ನಿಯಮ 80 ಸಿ ಅಡಿಯಲ್ಲಿ ಟ್ಯಾಕ್ಸ್ ಸೇವ್ ಮಾಡಬಹುದು. 

ಬೆಂಗಳೂರಿನಲ್ಲಿ ಗೂಗಲ್‌ನ ಹೊಸ ಕಚೇರಿ, ಅಬ್ಬಬ್ಬಾ ತಿಂಗಳ ಬಾಡಿಗೆ ಇಷ್ಟೊಂದು ಕೋಟಿನಾ?


3.ಪಬ್ಲಿಕ್ ಪ್ರಾವಿಡೆಂಟ್ ಫಂಡ್

ದೀರ್ಘಾವಧಿ ಹೂಡಿಕೆಯ ಯೋಜನೆ ಹೊಂದಿರೋರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇಲ್ಲ ಕನಿಷ್ಠ 500 ರೂಪಾಯಿಯಿಂದ ಹೂಡಿಕೆ ಆರಂಭಿಸಬಹುದು. ಈ ಖಾತೆಯಲ್ಲಿ ವರ್ಷಕ್ಕೆ ಗರಿಷ್ಠ 1 ಲಕ್ಷ 50 ಸಾವಿರ ರೂಪಾಯಿವರೆಗೂ ಹೂಡಿಕೆ ಮಾಡಬಹುದಾಗಿದೆ. ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡುವ ಹಣಕ್ಕೆ ಆದಾಯ ತೆರಿಗೆ 80 ಸಿ ಅನ್ವಯಯಡಿಯಲ್ಲಿ ವಿನಾಯ್ತಿ ಸಿಗುತ್ತದೆ. 

ಇಸ್ರೋ ಮಾಜಿ ವಿಜ್ಞಾನಿ ಸ್ಟಾರ್ಟಪ್‌ ಮಾಲೀಕನಾದ ರೋಚಕ, ಸ್ಪೂರ್ತಿದಾಯಕ ಕಥೆ

4.ವಿಮೆ

ಮಹಿಳೆಯರು ತಂದೆ-ತಾಯಿ, ಪತಿ ಹಾಗೂ ಮಕ್ಕಳ ಹೆಸರಿನಲ್ಲಿ ವಿಮೆ ಖರೀದಿಸಬಹುದು. ವಿಮೆ ಖರೀದಿಸುವ ಮೂಲಕ ತೆರಿಗೆ ಉಳಿಸಬಹುದಾಗಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80U ಅಡಿಯಲ್ಲಿ 10% ರಿಂದ 15% ರಷ್ಟು ರಿಯಾಯಿತಿ ಲಭ್ಯವಿದೆ.

Latest Videos
Follow Us:
Download App:
  • android
  • ios