Asianet Suvarna News Asianet Suvarna News

ಅಮೆಜಾನ್, ರಿಲಯನ್ಸ್‌ಗೆ ಟಾಟಾ ಸಡ್ಡು, ಬರುತ್ತಿದೆ 'ಸೂಪರ್ ಆ್ಯಪ್'!

ಲಾಂಚ್ ಆಗಲಿದೆ ಸೂಪರ್ ಆ್ಯಪ್| 2021ರ ಆರಂಭದಲ್ಲಿ ಲಾಂಚ್ ಮಾಡುವ ಸಾಧ್ಯತೆ| ಅಮೆಜಾನ್, ರಿಲಯನ್ಸ್‌ಗೆ ಬೀಳುತ್ತಾ ಪೆಟ್ಟು?

Tata group poised to take on RIL Amazon
Author
Bangalore, First Published Aug 24, 2020, 2:59 PM IST

ಮುಂಬೈ(ಆ.24): Tata Group ನೂತನ ಸೂಪರ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸುವ ಹಂತದಲ್ಲಿದೆ. ಸ್ಮಾರ್ಟ್‌ಫೋನ್‌ನಲ್ಲಿ ಈ ಒಂದು ಆ್ಯಪ್‌ನಿಂದ ಅನೇಕ ಉತ್ಪನ್ನಗಳು ಹಾಗೂ ಸೇವೆಗಳು ಲಭ್ಯವಾಗಲಿದೆ. ಇನ್ನು Tata Group ಈ ಆ್ಯಪ್ 2021ರ ಆರಂಭದಲ್ಲಿ ಲಾಂಚ್ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ಬಿಡುಗಡೆಗೊಳ್ಳಲಿರುವ ಈ ಆ್ಯಪ್ ಭಾರತದಲ್ಲಿ ಅಬಿವೃದ್ಧಿ ಕಾಣುತ್ತಿರುವ ರಿಲಯನ್ಸ್ ಹಾಗೂ ಅಮೆಜಾನ್ ಸಡ್ಡು ಹೊಡೆಯುವ ಅನುಮಾನ ವ್ಯಕ್ತವಾಗಿದೆ.

ಅಮೆಝಾನ್ ಪ್ರೈಂ ಜೊತೆ ಪ್ರಿಯಾಂಕ ಚೋಪ್ರಾ ಡೀಲ್..!

ಟಾಟಾ ಗ್ರೂಪ್ ಲಾಂಚ್‌ ಮಾಡಲಿರುವ ಸೂಪರ್ ಆ್ಯಪ್ನಲ್ಲಿ ತಿಂಡಿ, ಆಹಾರ, ದಿನಸಿ, ಫ್ಯಾಷನ್, ಲೈಫ್‌ಸ್ಟೈಲ್ ಉತ್ಪನ್ನಗಳು, ಎಲೆಕ್ಟ್ರಿಕ್ ಉಪಕರಣಗಳು, ವಿಮೆ ಹಾಗೂ ಹಣಕಾಸು ಸೌಲಭ್ಯಗಳು, ಹೆಲ್ತ್‌ ಕೇರ್ ಹಾಗೂ ಬಿಲ್ ಪಾವತಿ ಸೇರಿದಂತೆ ಅನೇಕ ಸೇವವೆಗಳು ಲಭ್ಯವಿರಲಿವೆ ಎನ್ನಲಾಗಿದೆ. ಈ ಸಂಬಂಧ ಫೈನಾನ್ಶಿಯಲ್ ಟೈಮ್ಸ್‌ಗೆ ಪ್ರತಿಕ್ರಿಯಿಸಿರುವ ಟಾಟಾ ಸನ್ಸ್‌ ಚೇರ್ಮನ್ ಎನ್. ಚಂದ್ರಶೇಖರನ್ 'ಅನೇಕ ಆ್ಯಪ್‌ಗಳನ್ನು ಒಳಗೊಂಡ ಸೂಪರ್ ಆ್ಯಪ್ ಇದು. ಇದೊಂದು ಬಹುದೊಡ್ಡ ಅವಕಾಶ' ಎಂದಿದ್ದಾರೆ. 

ಟಿಕ್‌ಟಾಕ್‌ ಸ್ಟಾರ್, ಡ್ಯಾನ್ಸರ್ ಸಿಯಾ ಕಕ್ಕರ್ ಆತ್ಮಹತ್ಯೆ

ಇತ್ತ Amazon ಕೂಡಾ ಭಾರತದಲ್ಲಿ ತನ್ನ ಸೇವಾ ವಲಯವನ್ನು ವಿಸ್ತರಿಸುತ್ತಿದೆ. Amazon Pay ಮೂಲಕ ಗ್ರಾಹಕರು ಈಗ ಡಿಜಿಟಲ್ ಗೋಲ್ಡ್‌ ಕೂಡಾ ಖರೀದಿಸುವ ಅವಕಾಶವಿದೆ. Reliance Industries Ltd ಕೂಡಾ 13 ವಿದೇಶೀ ಹೂಡಿಕೆದಾರರಿಂದ 20 ಬಿಲಿಯನ್ ಡಾಲರ್ ಹೂಡಿಕೆ ಮಾಡಿಸಿಕೊಂಡಿದೆ. ಇದರಲ್ಲಿ ಫೇಸ್‌ಬುಕ್, ಗೂಗಲ್ ಹಾಗೂ ಕಾಲ್‌ ಕಾಂನಂತಹ ಟೆಕ್ ಕಂಪನಿಗಳೂ ಇವೆ. ಕಂಪನಿ ತನ್ನ ಈ ಹಿಂದಿನ ಅಪ್ಡೇಟ್ನಲ್ಲಿ MyJio ಆಪ್‌ನಲ್ಲಿ ಅನೇಕ ಹೊಸ ಫೀಚರ್ಸ್‌ಗಳನ್ನೂ ಪರಿಚಯಿಸಿದೆ.

Follow Us:
Download App:
  • android
  • ios