ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್, ಕ್ರೈಂ ಪೆಟ್ರೋಲ್ ನಟಿ ಪ್ರೇಕ್ಷಾ ಮೆಹ್ತಾ ಸಾವಿನ ನಂತರ ಇದೀಗ ಮನೋರಂಜನಾ ಲೋಕದ 16ರ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಡ್ಯಾನ್ಸರ್ ಹಾಗೂ ಟಿಕ್‌ಟಾಕ್ ಸ್ಟಾರ್ ಸಿಯಾ ಕಕ್ಕರ್ ಜೂನ್ 25ರಂದು ದೆಹಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಯ ಮ್ಯಾನೇಜರ್ ಅರ್ಜುನ್ ಸರಿನ್ ಇವರ ನಿಧನ ಸುದ್ದಿಯನ್ನು ದೃಢಪಡಿಸಿದ್ದಾರೆ.

ಅಮೆಜಾನ್ ಪ್ರೈಂನಲ್ಲಿ ಮೊದಲಬಾರಿಗೆ ಕನ್ನಡ ಸಿನಿಮಾ ಬಿಡುಗಡೆ

ಇದು ವೈಯಕ್ತಿಕ ಕಾರಣಕ್ಕಿರಬೇಕು. ಔದ್ಯೋಗಿಕವಾಗಿ ಅವರು ಖುಷಿಯಾಗಿದ್ದರು. ನಿನ್ನೆಯಷ್ಟೇ ಕೆಲವು ಪ್ರಾಜೆಕ್ಟ್ ಬಗ್ಗೆ ಮಾತನಾಡಿದ್ದೆ. ಆಗ ಚೆನ್ನಾಗಿಯೇ ಮಾತನಾಡಿದ್ದರು. ನಮ್ಮ ಕಂಪನಿಯಿಂದ ಹಲವು ಆರ್ಟಿಸ್ಟ್‌ಗಳ ಮ್ಯಾನೇಜಿಂಗ್ ಕೆಲಸ ಮಾಡುತ್ತಿದ್ದು, ಸಿಯಾ ಪ್ರತಿಭಾನ್ವಿತಳಾಗಿದ್ದರು ಎಂದಿದ್ದಾರೆ.

ಇವರು ದೆಹಲಿಉಯ ಪ್ರೀತ್ ವಿಹಾರ್‌ನಲ್ಲಿ ವಾಸವಿದ್ದರು.ಇವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕ್ರಿಯರಾಗಿದ್ದರು. ಇವರು ಇನ್‌ಸ್ಟಾಗ್ರಾಂನಲ್ಲಿ 104 ಸಾವಿರ ಜನ ಪಾಲೋವರ್ಸ್‌ಗಳನ್ನು ಹೊಂದಿದ್ದರು. ಟಿಕ್‌ಟಾಕ್‌ನಲ್ಲಿ 1.1 ಮಿಲಿಯನ್ ಫಾಲೋವರ್ಸ್‌ ಇದ್ದರು.

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]