ದೃಷ್ಟಿ ಇಲ್ಲದಿದ್ರೂ ಸ್ವಾವಲಂಬಿ ಬದುಕು: ಸ್ಪರ್ಶದ ಮೂಲಕವೇ ಸುಲಭವಾಗಿ ಮಿಕ್ಸಿ, ಫ್ರಿಡ್ಜ್ ರಿಪೇರಿ!
ಕಣ್ಣಿಲ್ಲದಿದ್ದರೂ, ಸುರೇಶ್ ಉಪಕರಣಗಳನ್ನು ಇಟ್ಟುಕೊಂಡು, ತಂತಿಗಳು ಮತ್ತು ಭಾಗಗಳನ್ನು ಸ್ಪರ್ಶಿಸುವ ಮೂಲಕ ವಿದ್ಯುತ್ ಚಾಲ್ತಿಯಲ್ಲಿದೆ ಎಂದು ಗುರುತಿಸಿದರು. ನಂತರ, ಸಮಸ್ಯೆಯನ್ನು ಪತ್ತೆಹಚ್ಚಲು ಚಾಲನೆಯಲ್ಲಿರುವ ಉಪಕರಣಗಳನ್ನು ಆಲಿಸಿದ್ದಾರೆ.
ಕೊಯಮತ್ತೂರು (ಜುಲೈ 27, 2023): ತಮಿಳುನಾಡಿನ ಕೊಯಮತ್ತೂರಿನ ತನ್ನ ರಿಪೇರಿ ಅಂಗಡಿಗೆ ವ್ಯಕ್ತಿಯೊಬ್ಬ ತಂದಿದ್ದ ಮಿಕ್ಸಿಯನ್ನು ಸುರೇಶಕುಮಾರ್ (32) ಎತ್ತಿಕೊಂಡು, ಸಮಸ್ಯೆಯನ್ನು ಗುರುತಿಸಿ, 15 ನಿಮಿಷಗಳಲ್ಲಿ ಮಿಕ್ಸಿಯನ್ನು ಮತ್ತೆ ಸರಿ ಮಾಡಿದ್ದಾರೆ. ಇದ್ರಲ್ಲೇನು ದೊಡ್ಡ ವಿಷಯ ಅಂತೀರಾ? ಸುರೇಶ್ ಸಂಪೂರ್ಣ ಅಂಧ. ವಿಕಲ ಚೇತನರಾಗಿದ್ರೂ ಇವರು ಸಂಪುರ್ಣ ಸ್ವಾವಲಂಬಿ ಬದುಕು ನಡೆಸ್ತಿದ್ದಾರೆ.
ಅವರು ಮಿಕ್ಸರ್-ಗ್ರೈಂಡರ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಮತ್ತು ಎಲ್‌ಪಿಜಿ ಸ್ಟೌವ್‌ಗಳ ಸರ್ವಿಸ್ ಸೆಂಟರ್ ಅನ್ನು ಕೊಯಮತ್ತೂರಿನ ಕವುಂಡಂಪಾಳ್ಯಂ-ಟಿವಿಎಸ್ ನಗರ ರಸ್ತೆಯಲ್ಲಿ ನಡೆಸುತ್ತಿದ್ದಾರೆ. ಕಣ್ಣಿಲ್ಲದಿದ್ದರೂ, ಸುರೇಶ್ ಉಪಕರಣಗಳನ್ನು ಇಟ್ಟುಕೊಂಡು, ತಂತಿಗಳು ಮತ್ತು ಭಾಗಗಳನ್ನು ಸ್ಪರ್ಶಿಸುವ ಮೂಲಕ ವಿದ್ಯುತ್ ಚಾಲ್ತಿಯಲ್ಲಿದೆ ಎಂದು ಗುರುತಿಸಿದರು. ನಂತರ, ಸಮಸ್ಯೆಯನ್ನು ಪತ್ತೆಹಚ್ಚಲು ಚಾಲನೆಯಲ್ಲಿರುವ ಉಪಕರಣಗಳನ್ನು ಆಲಿಸಿದರು.
ಇದನ್ನು ಓದಿ: ಬೀದಿ ನಾಯಿಗಳ ದಾಳಿಗೆ 11 ವರ್ಷದ ವಿಶೇಷಚೇತನ ಬಾಲಕ ಬಲಿ: ಕೇರಳ ಸರ್ಕಾರದ ವಿರುದ್ದ ಟೀಕೆ
ಇನ್ನು, ಬಗ್ಗೆ ಮಾಧ್ಯಮದೊಂದಿಗೆಮಾತನಾಡಿದ ಸುರೇಶ್ ಕುಮಾರ್, ‘ಆರಂಭದಲ್ಲಿ ಜನರು ತಮ್ಮ ಉಪಕರಣಗಳನ್ನು ರಿಪೇರಿಗೆ ನೀಡಲು ಹಿಂದೇಟು ಹಾಕುತ್ತಿದ್ದರು. ಆದರೆ ನನ್ನ ಕೆಲಸದ ಗುಣಮಟ್ಟ ನೋಡಿದ ನಂತರ ಅವರು ನನ್ನನ್ನು ನಂಬಲು ಪ್ರಾರಂಭಿಸಿದರು, ಈಗ ನಾನು ಡಬಲ್ ಡೋರ್ ರೆಫ್ರಿಜರೇಟರ್, ವಾಷಿಂಗ್ ಮಷಿನ್, ಮಿಕ್ಸರ್ ಗ್ರೈಂಡರ್, ಸೀಲಿಂಗ್ ಫ್ಯಾನ್ ಮತ್ತು ಗ್ಯಾಸ್ ಸ್ಟೌಗಳನ್ನು ಸರ್ವಿಸ್ ಮಾಡುತ್ತೇನೆ’’ ಎಂದಿದ್ದಾರೆ.
ಸುರೇಶ್ ಅವರು ಕೇವಲ ಆರು ವರ್ಷದವರಾಗಿದ್ದಾಗ ಮೆದುಳಿನ ಜ್ವರದ ನಂತರ ದೃಷ್ಟಿ ಕಳೆದುಕೊಂಡರಂತೆ. ನಂತರ, ದೃಷ್ಟಿ ವಿಕಲಚೇತನರ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿಯವರೆಗೆ ಓದಿದರು. ಆದರೆ ನಂತರ ಶಾಲೆ ತೊರೆದರು. "ನಾನು ಆರಂಭದಲ್ಲಿ ಭರವಸೆ ಕಳೆದುಕೊಂಡೆ. ನಂತರ ನನ್ನ ಅಕ್ಕ ರೇವತಿ ಒಂದು ದಶಕದ ಹಿಂದೆ ಕೊಯಮತ್ತೂರು ನಗರದ ಸರವಣಂಪಟ್ಟಿಯಲ್ಲಿರುವ ವಿದ್ಯುತ್ ಸರಕುಗಳ ಸೇವಾ ಕೇಂದ್ರವನ್ನು ಸಂಪರ್ಕಿಸಿದರು ಮತ್ತು ನನಗೆ ಕಲಿಯಲು ಅವಕಾಶ ನೀಡುವಂತೆ ಮನವಿ ಮಾಡಿದರು. ಅದು ನನ್ನ ಜೀವನದ ಟರ್ನಿಂಗ್ ಪಾಯಿಂಟ್’’ ಎಂದು ಸುರೇಶ್ ಸ್ಮರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಈ ಬಾಲಕಿಯ ಕಾಲು ಮುಟ್ಟಿದ್ರೂ ಅಸಾಧ್ಯ ನೋವು, ನಡೆದ್ರೆ ಪ್ರಾಣಾನೇ ಹೋದಂತಾಗುತ್ತೆ: ಇದೆಂತ ವಿಚಿತ್ರ ಕಾಯಿಲೆ!
ಸೇವಾ ಕೇಂದ್ರದ ಮಾಲೀಕ ಕೃಷ್ಣಮೂರ್ತಿ ಎಂಬುವರು ಸುರೇಶ್ ಅವರ ಬಳಿ ತಾಳ್ಮೆಯಿಂದ ಮಿಕ್ಸರ್ ಗ್ರೈಂಡರ್, ವಾಷಿಂಗ್ ಮೆಷಿನ್ ಮತ್ತು ರೆಫ್ರಿಜರೇಟರ್‌ಗಳ ವಿವಿಧ ಭಾಗಗಳನ್ನು ನೀಡಿ ಅದು ಏನೆಂದು ವಿವರಿಸುತ್ತಿದ್ದರು. ಕಾಲಕ್ರಮೇಣ ಸುರೇಶ್ ಅವುಗಳನ್ನು ಸ್ಪರ್ಶದಿಂದ ಪ್ರತ್ಯೇಕಿಸಲು ಕಲಿತರು. ಕಾಯಿಲ್ ವೈಂಡಿಂಗ್ ಮಾಡುವುದನ್ನು ಸುಲಭವಾಗಿ ಕಲಿತರು ಎಂದು ತಿಳಿದುಬಂದಿದೆ.
ಸುರೇಶ್ ಅವರು ಸ್ವಂತವಾಗಿ ದುರಸ್ತಿ ಮಾಡಿದ ಮೊದಲ ಉಪಕರಣವೆಂದರೆ ಮಿಕ್ಸರ್ ಗ್ರೈಂಡರ್ ಅಂತೆ. "ಪುಷ್‌ಪ್ಲೇಟ್‌ಗೆ ಹಾನಿಯಾಗಿತ್ತು ಮತ್ತು ನಾನು ಅದನ್ನು ಬದಲಾಯಿಸಿದೆ. ಉಪಕರಣವು ಸರಾಗವಾಗಿ ಚಲಿಸಿದಾಗ ನನಗೆ ಏನನಿಸಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ. ಇದು ನನ್ನ ಜೀವನವನ್ನು ನಾನು ಸ್ವತಂತ್ರವಾಗಿ ಬದುಕಬಲ್ಲೆ ಎಂಬ ಹೊಸ ವಿಶ್ವಾಸ ನೀಡಿತು" ಎಂದು ಹೇಳಿದರು. ಆರು ತಿಂಗಳ ಹಿಂದೆ ಸುರೇಶ್ ಸ್ವಂತವಾಗಿ 'ಮಾರಿ ಎಲೆಕ್ಟ್ರಿಕಲ್' ಸರ್ವೀಸ್ ಸೆಂಟರ್ ಓಪನ್ ಮಾಡಿದ್ದಾರೆ.
ಇದನ್ನೂ ಓದಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಏಕಾಂಗಿಯಾಗಿ ಬೈಕ್ ಸವಾರಿ ಮುಗಿಸಿದ ದೃಷ್ಟಿಹೀನ ಪ್ರಸನ್ನಕುಮಾರ್
ದೊಡ್ಡ ಸ್ಥಳೀಯ ವಿದ್ಯುತ್ ಉಪಕರಣಗಳ ಅಂಗಡಿಯು ಇವರಿಗೆ ಸೇವೆ ಮತ್ತು ದುರಸ್ತಿಗಾಗಿ ಬಹಳಷ್ಟು ಉಪಕರಣಗಳನ್ನು ನೀಡುತ್ತದೆ. ಕರೆನ್ಸಿ ನೋಟುಗಳ ಮೌಲ್ಯವನ್ನು ಗುರುತಿಸಲು ಸಾಧ್ಯವಾಗದ ಕಾರಣ ಜನರು ತನಗೆ ಪಾವತಿಸಲು ಯುಪಿಐ ಬಳಸಲು ಕೇಳಿಕೊಳ್ಳುತ್ತೇನೆ ಎಂದು ಸುರೇಶ್ ಹೇಳಿದ್ದು,ಈ ಸಮಸ್ಯೆ ಹೋಗಲಾಡಿಸಲು ಬ್ರೈಲ್ ಕಲಿಯಲು ಯೋಜಿಸುತ್ತಿದ್ದಾರೆ.
ಜತೆಗೆ, ದೃಷ್ಟಿ ವಿಕಲಚೇತನರಿಗೆ ತರಬೇತಿ ನೀಡಲು ಅವರು ಈಗ ಸಂಸ್ಥೆಯನ್ನು ಸ್ಥಾಪಿಸಲು ಬಯಸುತ್ತಾರೆ. ಈ ಮೂಲಕ, ದೃಷ್ಟಿ ವಿಕಲಚೇತನರಿಗೆ ಎಲೆಕ್ಟ್ರಿಕಲ್ ಉಪಕರಣಗಳನ್ನು ರಿಪೇರಿ ಮಾಡಲು ನಾನು ಕಲಿಸುತ್ತೇನೆ, ಇದರಿಂದ ಅವರು ರೈಲು ಮತ್ತು ಬಸ್‌ಗಳಲ್ಲಿ ಭಿಕ್ಷೆ ಭಿಕ್ಷೆ ಬೇಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಶಿವಪ್ಪ ಜಮಾದಾರ್: ಕಾಲಿಲ್ಲದಿದ್ದರೂ ಕೃಷಿಯಲ್ಲಿ ಕಮಾಲ್ ಮಾಡಿದ ಕೃಷಿಕ..!