ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಮೂಲಕ ಜಾಗತಿಕ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿರುವ ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸೂಸಿ ಬ್ಯಾಂಕನ್ನು ಅದೇ ದೇಶದ ದೈತ್ಯ ಬ್ಯಾಂಕ್‌ ಆಗಿರುವ ಯುಬಿಎಸ್‌ ಖರೀದಿ ಮಾಡಿದೆ.

ಜಿನೆವಾ: ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಮೂಲಕ ಜಾಗತಿಕ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಅಲ್ಲೋಲ-ಕಲ್ಲೋಲಕ್ಕೆ ಕಾರಣವಾಗಿರುವ ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸೂಸಿ ಬ್ಯಾಂಕನ್ನು ಅದೇ ದೇಶದ ದೈತ್ಯ ಬ್ಯಾಂಕ್‌ ಆಗಿರುವ ಯುಬಿಎಸ್‌ ಖರೀದಿ ಮಾಡಿದೆ. 26 ಸಾವಿರ ಕೋಟಿ ರು. ಮೊತ್ತದ ಡೀಲ್‌ ಇದಾಗಿದ್ದು, ಸ್ವಿಜರ್ಲೆಂಡ್‌ ಸರ್ಕಾರದ ಅಣತಿಯಂತೆ ನಡೆದಿದೆ. ಅಮೆರಿಕದ ಎರಡು ಬ್ಯಾಂಕುಗಳ ಪತನಾನಂತರ ಕ್ರೆಡಿಟ್‌ ಸೂಸಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿತ್ತು. ಅದರಿಂದ ಹೊರಬರಲು ಬ್ಯಾಂಕು 4.45 ಲಕ್ಷ ಕೋಟಿ ರು. ಸಾಲ ಸಂಗ್ರಹಕ್ಕೆ ಮುಂದಾಯಿತಾದರೂ ಅದು ಹೂಡಿಕೆದಾರರು ಹಾಗೂ ಬ್ಯಾಂಕಿನ ಗ್ರಾಹಕರ ವಿಶ್ವಾಸ ಗಳಿಸಲು ವಿಫಲವಾಯಿತು. ಹೀಗಾಗಿ ಸ್ವಿಜರ್ಲೆಂಡ್‌ ಸರ್ಕಾರ ಯುಬಿಎಸ್‌ ಬ್ಯಾಂಕ್‌ ವಶಕ್ಕೆ ಕ್ರೆಡಿಟ್‌ ಸೂಸಿಯನ್ನು ನೀಡಲು ವೇದಿಕೆ ಸಜ್ಜುಗೊಳಿಸಿತು.

ಷೇರುದಾರರ ಅನುಮತಿ ಪಡೆಯದೆ ಈ ಎರಡೂ ಬ್ಯಾಂಕುಗಳ ವಿಲೀನಕ್ಕೆ ಹಾದಿ ಸುಗಮ ಮಾಡಿಕೊಡಲು ಸ್ವಿಜರ್ಲೆಂಡ್‌ನ (Switzerland) ಕಾರ್ಯಾಂಗ ತುರ್ತು ಸುಗ್ರೀವಾಜ್ಞೆಯನ್ನೂ (emergency decree) ಹೊರಡಿಸಿತು. ಇದರಿಂದಾಗಿ ಖರೀದಿ ವ್ಯವಹಾರ ಸುಗಮವಾಯಿತು. ಜಾಗತಿಕವಾಗಿ ಅತ್ಯಂತ ಮಹತ್ವವಾದ 30 ಹಣಕಾಸು ಸಂಸ್ಥೆಗಳಲ್ಲಿ ಕ್ರೆಡಿಟ್‌ ಸೂಸಿ ಕೂಡ ಒಂದಾಗಿದೆ. ಹೀಗಾಗಿ ಅದರ ಪತನದ ಆತಂಕ ಸ್ವಿಜರ್ಲೆಂಡ್‌ ಸರ್ಕಾರಕ್ಕೆ ಕಾಡಿತ್ತು. ‘ಅಂತಾರಾಷ್ಟ್ರೀಯ ಹಣಕಾಸು ಸ್ಥಿತಿಗೆ ಈ ಖರೀದಿ ಒಪ್ಪಂದ ಮಹತ್ವದ್ದಾಗಿದೆ. ಕ್ರೆಡಿಟ್‌ ಸೂಸಿ ಯಾವುದೇ ನಿಯಂತ್ರಣವಿಲ್ಲದೆ ಪತನವಾಗಲು ಬಿಟ್ಟಿದ್ದರೆ, ಅದರಿಂದ ಸ್ವಿಜರ್ಲೆಂಡ್‌ ಹಾಗೂ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಊಹಿಸಲಾಗದಷ್ಟುಪರಿಣಾಮವಾಗುತ್ತಿತ್ತು’ ಎಂದು ಸ್ವಿಜರ್ಲೆಂಡ್‌ ಅಧ್ಯಕ್ಷ ಅಲೈನ್‌ ಬರ್ಸೆತ್‌ ತಿಳಿಸಿದ್ದಾರೆ.

ನಷ್ಟದಲ್ಲಿರುವ ಕ್ರೆಡಿಟ್‌ ಸೂಸಿ ಬ್ಯಾಂಕ್ ಖರೀದಿಗೆ ಯುಬಿಎಸ್‌ ಸಜ್ಜು

ಷೇರು ಕುಸಿತ:
ಖರೀದಿ ವ್ಯವಹಾರ ಘೋಷಣೆಯಾದ ಬೆನ್ನಲ್ಲೇ ಕ್ರೆಡಿಟ್‌ ಸೂಸಿ ಬ್ಯಾಂಕಿನ ಷೇರುಗಳ ಬೆಲೆ ಶೇ.63ರಷ್ಟುಕುಸಿತ ಕಂಡಿದೆ. ಮತ್ತೊಂದೆಡೆ ಯುಬಿಎಸ್‌ ಬ್ಯಾಂಕಿನ ಷೇರುಗಳು ಶೇ.14ರಷ್ಟುಇಳಿಕೆಯಾಗಿವೆ.

ಪತನದ ಭೀತಿಯಿಂದ ಪಾರಾದ ಸ್ವಿಜರ್ಲೆಂಡ್‌ ಮೂಲದ ಬ್ಯಾಂಕ್‌