Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಸ್ವದೇಶಿ ಮೇಳಕ್ಕೆ ಸಿದ್ದಗೊಂಡಿದೆ ಬೃಹತ್ ಮೈದಾನ

ಇದೇ ಏಪ್ರಿಲ್ 6 ರಿಂದ 10 ರವರೆಗೂ ಜಯನಗರದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ 24ನೇ ಸ್ವದೇಶಿ ಮೇಳ ನಡೆಯಲಿದೆ.

Swadeshi Jagran Manch Organised Swadeshi Mela From April 6th In Bengaluru gow
Author
Bengaluru, First Published Apr 4, 2022, 9:18 PM IST

ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು(ಎ.3): ಸಿಲಿಕಾನ್ ಸಿಟಿಯಲ್ಲಿ  ಸ್ವದೇಶಿ ಹಬ್ಬದ ಸಂಭ್ರಮ ನಾಲ್ಕು ದಿನಗಳ ಸ್ವದೇಶಿ ಮೇಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಂದ (basavaraj bommai) ಸಿಗಲಿದೆ ಅದ್ದೂರಿ ಚಾಲನೆ ಮೇಳದಲ್ಲಿ ಆಕರ್ಷಿಸಲಿದೆ 200ಕ್ಕೂ ಹೆಚ್ಚು ಸ್ವದೇಶಿ ಮಳಿಗೆಗಳು, ಉದ್ಯಾನನಗರಿ ಬೆಂಗಳೂರಿನಲ್ಲಿ ಸ್ವದೇಶಿ ಸೊಗಡು ಪಸರಿಸಲಿದೆ. ಸ್ವದೇಶಿ ವಸ್ತುಗಳಿಗೆ ಉತ್ತೇಜನ ನೀಡುವ ಹಿನ್ನಲೆ ಎರಡು ವರ್ಷದ ಬಳಿಕ ಮತ್ತೆ ಸ್ವದೇಶಿ ಮೇಳವನ್ನು ಆಯೋಜಿಸಲಾಗಿದೆ. ಕೋವಿಡ್ ಕರಿನೆರಳಿನ ಹಿನ್ನಲೆ ಮೊಟಕುಗೊಂಡಿದ್ದ ಸ್ವದೇಶಿ ಮೇಳವನ್ನು ಮತ್ತೆ ಸ್ವದೇಶಿ ಜಾಗರಣ ಮಂಚ್ (Swadeshi Jagran Manch) ಆಯೋಜಿಸ್ತಿದೆ. ಇದೇ ಏಪ್ರಿಲ್ 6 ರಿಂದ 10 ರವರೆಗೂ ಜಯನಗರದ ಚಂದ್ರಗುಪ್ತಮೌರ್ಯ ಆಟದ ಮೈದಾನದಲ್ಲಿ 24ನೇ ಸ್ವದೇಶಿ ಮೇಳ ನಡೆಯಲಿದೆ.

 ಸ್ವದೇಶಿ ಮೇಳದಲ್ಲಿ ಏನೆನಿರಲಿದೆ?
ನಮ್ಮ ದೇಶದಲ್ಲಿ ಯಾವುದಕ್ಕೂ ಕೊರತೆಯಿಲ್ಲ. ಅಷ್ಟಾದ್ರೂ ಕೂಡ ವಿದೇಶಗಳಿಂದ ಆಮದಾಗುವ ವಸ್ತುಗಳಿಗೆ ಬಹು ಬೇಡಿಕೆ ಜೊತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗ್ತಿದೆ. ಇತ್ತೀಚೆಗೆ ವಿದೇಶಿ ಆಮದು 1ಲಕ್ಷ ಕೋಟಿ ಕಡಿಮೆಯಾಗಿದೆ. ವಿದೇಶಿ ವಸ್ತುಗಳಿಗೆ ಪೂರ್ಣಪ್ರಮಾಣದಲ್ಲಿ ಬ್ರೇಕ್ ಹಾಕಿ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಾಗ್ಬೇಕು ಎಂಬ ನಿಟ್ಟಿನಲ್ಲಿ ಸ್ವದೇಶಿ ಹಬ್ಬ ಆಯೋಜಿಸಲಾಗಿದೆ.

Mandya ಫೈನಾನ್ಸ್ ಕಂಪನಿಗೆ ಉಂಡೆ ನಾಮ ತಿಕ್ಕಿದ್ದ ಮ್ಯಾನೇಜರ್ ಬಂಧನ!

ಮೇಳದಲ್ಲಿ ತಾರಸಿ ತೋಟ, ಆಯುರ್ವೇದ ಮನೆ ಬಳಕೆ ವಸ್ತುಗಳು, ಸ್ವದೇಶಿ ಕ್ಲೆ ಪ್ರಾಡಕ್ಟ್, ಖಾದಿ ಉತ್ಪನ್ನಗಳು, ಗೋ ಉತ್ಪನ್ನಗಳು, ದೇಸಿ ಆಹಾರ ಮಳಿಗೆಗಳು, ಪ್ರಾಕೃತಿಕ ಸೌಂಧರ್ಯ ವರ್ಧಕಗಳು, ಗಾನದ ಎಣ್ಣೆ ತಯಾರಿ, ಚನ್ನಪಟ್ಟಣದ ಬೊಂಬೆಗಳ ತಯಾರಿ ಬಗ್ಗೆ ಮಾಹಿತಿ ಹಾಗೂ ತರಬೇತಿ ಕೂಡ ಸಿಗಲಿದೆ. ಮೇಳದ ಐದು ದಿನವೂ ವಿವಿಧ ರೀತಿಯ ಶಿಬಿರಗಳು, ಉಪನ್ಯಾಸ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ದೇಶೀಯ ಆಟಗಳು ಗಮನಸೆಳೆಯಲಿವೆ. ಇನ್ನು ರಾಜ್ಯದ ವಿವಿಧ ಭಾಗದ ಸುಮಾರು 200ಕ್ಕು ಹೆಚ್ಚು ಸ್ವದೇಶಿ ಮಳಿಗೆಗಳು ತಮ್ಮ ಉತ್ಪನ್ನಗಳನ್ನು ಪರಿಚಯಿಸಲಿದ್ದು ಲಕ್ಷಾಂತರ ಜನ ಬರುವ ನಿರೀಕ್ಷೆಯಿದೆ.

ಅಲ್ಲದೆ ಮಹಿಳೆಯರಿಗಾಗಿ ಭಾರತೀಯ ಪಾರಂಪರಿಕ ಉಡುಗೊರೆಯಾದ ಸೀರೆ ಧರಿಸಿಕೊಂಡು ಬಂದಲ್ಲಿ ಸೌಭಾಗ್ಯವತಿ ಉಡುಗೊರೆ ಕೂಡ ಸಿಗಲಿದೆ. ಸ್ವದೇಶಿ ಹಬ್ಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದು, ಸುತ್ತೂರು ಶ್ರೀಗಳು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.

ಅಮೆರಿಕದಿಂದ ನಭಕ್ಕೆ ಹಾರಿದ ಖಾಸಗಿ ಶಕುಂತಲಾ ಉಪಗ್ರಹ, ಕನ್ನಡಿಗನ ಸಾಧನೆ!

ಇನ್ನು ಇಂದು ಚಾಮರಾಪೇಟೆಯ ರಾಷ್ಟ್ರೋತ್ಥಾನ ಪರಿಷತ್ ನಲ್ಲಿ ಸುದ್ದಿಗೋಷ್ಟಿ ನಡೆಸಲಾಯ್ತು. ಸುದ್ದಿಗೋಷ್ಟಿಯಲ್ಲಿ ನಟ ಹಾಗೂ ಸ್ವದೇಶಿ ಜಾಗರಣ ಮಂಚ್ ಸಂಚಾಲಕ ಪ್ರಕಾಶ್ ಬೆಳವಾಡಿ, ಸಂಘಟಕರಾದ ಬಿ.ಹೆಚ್ ರಘುರಾಮ್, ಕ್ಷೇತ್ರಿಯ ಸಂಚಾಲಕ ಜಗದೀಶ್, ಪ್ರಚಾರ ವಿಭಾಗ ಪ್ರಮುಖ್ ಕಿಶೋರ್ ಪಟವರ್ದನ್ ಉಪಸ್ಥಿತರಿದ್ದರು.

Follow Us:
Download App:
  • android
  • ios