ಅಮೆರಿಕದಿಂದ ನಭಕ್ಕೆ ಹಾರಿದ ಖಾಸಗಿ ಶಕುಂತಲಾ ಉಪಗ್ರಹ, ಕನ್ನಡಿಗನ ಸಾಧನೆ!
- ಅಮೆರಿಕದ ಸ್ಪೆಸೆಕ್ಸ್ ನಿಂದ ಉಡಾವಣೆ
- ಚಿಕ್ಕಮಗಳೂರು ಯುವಕನಿಂದ ತಯಾರಿಕೆ
- ಅವೇಜ್ ಅಹಮದ್ ರ ಪಿಕ್ಸೆಲ್ ಏರೋಸ್ಪೇಸ್ ಕಂಪನಿಯಿಂದ ಉಡಾವಣೆ
- ಪಿಕ್ಸೆಲ್ ಏರೋಸ್ಪೇಸ್ ಕಂಪನಿ ಆರಂಭಿಸಿದ ಅವೇಜ್ ಅಹಮದ್
ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಎ.4) : ಕನಸು ಕಾಣೋದು ಕಾಮನ್.ಆದ್ರೆ ಆ ಕನಸಿನ ಗೋಪುರ ಕಟ್ಟಿ ಅದ್ರಲ್ಲಿ ಯಶಸ್ಸು ಕಂಡೋರು ಹಲವ್ರಿದ್ದಾರೆ.ಅಂತಹ ಕಾಫಿನಾಡಿನ ಕನಸುಗಾರ ಕನಸು ಕಂಡಿದ್ದು ಮಾತ್ರ ಅಂತಿಂತದ್ದಲ್ಲ. ದೇಶವೇ ಬೆರಗುಗೊಳಿಸಿ ಅತನತ್ತ ತಿರುಗಿನೋಡುವಂತೆ ಮಾಡಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಮೂಲದ ಅವೇಜ್ ಅಹಮದ್ (Awais Ahmed) ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ. ಬಡಕುಟುಂಬದ ಹಿನ್ನಲೆಯಿಂದ ಬಂದ ಯುವಕ ಇಂದು ಇಡೀ ರಾಷ್ಟ್ರವೇ ಹೆಮ್ಮಪಡುವಂತಹ ಸಾಧನೆಯನ್ನು ಮಾಡಿದ್ದಾರೆ.
ಆಲ್ದೂರು ಪಟ್ಟಣದ ನಿವಾಸಿ ಆಗಿರುವ ಅವೇಜ್ ತಂದೆ ನದೀಮ್ ಅಹಮದ್ ಮೆಡಿಕಲ್ ಶಾಪ್ ಓನರ್. ಸಿಇಟಿಯಲ್ಲಿ 477ನೇ ಬ್ಯಾಂಕ್ ಪಡೆದು ಆರ್ವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ,ಜೆಇಇ ಕಾಲೇಜಿನಲ್ಲಿ ಸೀಟು ಪಡೆದುಕೊಂಡರು. ಭಾರತದ ನಂ. 1 ಖಾಸಗಿ ಕಾಲೇಜು ಬಿಟ್ಸ್ -ಪಿಲಾನಿ (ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್) ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉನ್ನತ ಶಿಕ್ಷಣ ಮುಂದುವರಿಸಿದರು. ಅವೇಜ್ ಅಹಮದ್ ಓದಿನ ದಿನದಿಂದಲೂ ಸಾಧಿಸುವ ಛಲವನ್ನು ಬೆಳೆಸಿಕೊಂಡಿದ್ದರು. ಆರಂಭದಲ್ಲಿ ಇಸ್ರೋದಲ್ಲಿ ಕೆಲಕಾಲ ಕೆಲಸ ಮಾಡಿದ ಇವರು ತದನಂತರ ತನ್ನದೇ ಸ್ವಂತ ಏರೋಸ್ಪೇಸ್ ಕಂಪನಿ ಪ್ರಾರಂಭಿಸಿದರು.
UDUPI ಚಿನ್ನ ಕದ್ದ 24ಗಂಟೆಯೊಳಗೆ ಕಂಬಿಯೊಳಗೆ ಕಪಿಸೂರ್ಯ!
ಕಳೆದ ಕೆಲ ವರ್ಷಗಳ ಹಿಂದೆ ಏರೋಸ್ಪೆಸ್ ಪಿಕ್ಸಲ್ (Pixxel) ಅನ್ನೋ ಸ್ವಂತ ಕಂಪೆನಿಯನ್ನು ಆರಂಭಿಸಿದರು. ಈ ಕಂಪೆನಿಯಲ್ಲಿ ತಯಾರಿಸೋದೆನೂ ಅಂತಿದ್ದಲ್ಲ. ಆ ಕಂಪನಿಯಲ್ಲಿ ತಯಾರಾಗ್ತಾ ಇರೋದು ಉಪಗ್ರಹಗಳು. ಅವೇಜ್ ತಯಾರಿಸಿರುವ ಉಪಗ್ರಹಗಳನ್ನು (satellite ) ಇಸ್ರೋದಿಂದಲೇ ಉಡಾವಣೆ ಮಾಡಿಸೋ ಹಂಬಲವನ್ನು ಇಟ್ಕೊಂಡಿದ್ದಾರೆ. 2020 ಕ್ಕೆ ಉಪಗ್ರಹಗಳನ್ನು ತಯಾರಿಸಿಟ್ಟುಕೊಂಡಿದ್ದು ಕೊರೊನಾ ಉಡಾವಣೆಗೆ ಅಡ್ಡಿಮಾಡಿತ್ತು.
ಶಕುಂತಲಾ ಉಪಗ್ರಹ ಅಮೆರಿಕದ ಸ್ಪೆಸೆಕ್ಸ್ ನಿಂದ ಉಡಾವಣೆ: ಇಸ್ರೋದಿಂದಲೇ (Isro) ತಮ್ಮ ಪ್ರಥಮ ಉಪಗ್ರಹ 'ಆನಂದ್' ಅನ್ನು ಉಡಾವಣೆ ಮಾಡುವ ಮಹತ್ವಕಾಂಕ್ಷೆ ಅವೇಜ್, ಅವರದಾಗಿತ್ತು. ಕೊರೋನಾದಿಂದ ಉಡಾವಣೆಗೆ ಅಡ್ಡಿ ಉಂಟಾಯಿತು. ತದನಂತರ ಏರೋಸ್ಪೆಸ್ ಪಿಕ್ಸಲ್ ನಿಂದ ಶಕುಂತಲಾ (Shakuntala) ಉಪಗ್ರಹವನ್ನು ಅಮೆರಿಕದ ಸ್ಪೆಸೆಕ್ಸ್ ನಿಂದ ಶನಿವಾರ ಉಡಾವಣೆ ಮಾಡಲಾಗಿದೆ. ಅವೇಜ್ ಅಹಮದ್ ಅವರ ಸಂಶೋಧನೆಯ ಉಪಗ್ರಹ ಬೇರೆ ಎಲ್ಲ ಉಪಗ್ರಹಗಳಿಗಿಂತ ಶೇ.50ಕ್ಕೂ ಹೆಚ್ಚು ಡೇಟಾವನ್ನು ಬಿಡುಗಡೆಗೊಳಿಸುತ್ತದೆ. ಉಪಗ್ರಹ ಭೂಮಿಯ ಚಲನವಲನದ ಸೇರಿದಂತೆ ವಿವಿಧ ರೀತಿಯ ರವಾನಿಸುತ್ತದೆ, ಅಮೆರಿಕದ ಸ್ಪೆಸೆಕ್ಸ್ನಿಂದ ಶಕುಂತಲಾ ಉಪಗ್ರಹವನ್ನು ಯಶಸ್ವಿ ಉಡಾವಣೆ ಮಾಡಲಾಗಿದೆ.
ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದ್ರೆ ಸೂಕ್ತ: ಸಚಿವ ಈಶ್ವರಪ್ಪ
ಅಮೆರಿಕದ ಸ್ಪೆಸೆಕ್ಸ್ನಿಂದ ಉಡಾವಣೆಯಾದ ಉಪಗ್ರಹದಿಂದ ಕೃಷಿ ಪ್ರಗತಿ, ಹವಮಾನದ ಬಗ್ಗೆ ಮಾಹಿತಿ ರವಾಸಿಸುತ್ತೆ.ಇನ್ನು 4 ಉಪಗ್ರಹಗಳು ಉಡಾವಣೆಗೆ ಸಿದ್ಧ ಇವೆ.ಈ ಯುವಕನ ಸಾಧನೆಗೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.ನಮ್ಮ ಮುಂದೆ ಆಡಿ ಬೆಳೆದ ಈ ಯುವಕ ಇಂದು ದೇಶವೇ ಹೆಮ್ಮೆ ಪಡುವ ಕೆಲಸ ಮಾಡಿದ್ದು,ನಮ್ಮೂರಿಗೆ ಹೆಮ್ಮೆ ಅಂತ್ತಾರೆ ಸ್ಥಳೀಯರಾದ ರವಿ .ಒಟ್ಟಾರೆ ಅಲ್ದೂರಿನ ಅವೇಜ್ ಅಹಮದ್ ಸಾಧನೆಗೆ ಕಾಫಿ ನಾಡಿನ ಜನ್ರಂತೂ ಭೇಷ್ ಅಂತಿದ್ದಾರೆ.