Asianet Suvarna News Asianet Suvarna News

ಸುಜ್ಲಾನ್ ಗ್ರೂಪ್ ಸಿಎಂಡಿ Tulsi Tanti ನಿಧನ: ಹೃದಯ ಸ್ತಂಭನಕ್ಕೆ ಮೃತಪಟ್ಟ ಖ್ಯಾತ ಉದ್ಯಮಿ

ಖ್ಯಾತ ಉದ್ಯಮಿ ತುಳಸಿ ತಂತಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಇವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗುಜರಾತ್‌ನಲ್ಲಿ ಕೊನೆಯ ಸುದ್ದಿಗೋಷ್ಠಿ ನಡೆಸಿದ್ದ ಅವರು ಕೆಲವೇ ಗಂಟೆಗಳ ನಂತರ ಬಲಿಯಾಗಿದ್ದಾರೆ. 

suzlon group cmd tulsi tanti dies of cardiac arrest ash
Author
First Published Oct 2, 2022, 4:17 PM IST

ಸುಜ್ಲಾನ್ ಗ್ರೂಪ್ (Suzlon Group) ಮತ್ತು ಸುಜ್ಲಾನ್ ಎನರ್ಜಿ ಲಿಮಿಟೆಡ್‌ನ (Suzlon Energy Limited) ಸಂಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾದ ತುಳಸಿ ತಂತಿ ಅವರು ಹೃದಯ ಸ್ತಂಭನದಿಂದ ನಿಧನರಾದರು. ಭಾರತದ ಹಸಿರು ಇಂಧನ ಕಾರ್ಯತಂತ್ರಗಳಿಗೆ ನಿರ್ದೇಶನ ನೀಡಲು ತುಳಸಿ ತಂತಿ ಅವರು ಭಾರತೀಯ ಕೈಗಾರಿಕಾ ಒಕ್ಕೂಟದ (Confederation of Indian Industry) (CII) ನವೀಕರಿಸಬಹುದಾದ ಇಂಧನ ಮಂಡಳಿಯ ಅಧ್ಯಕ್ಷರಾಗಿದ್ದರು. ಗುಜರಾತ್‌ನ ರಾಜ್‌ಕೋಟ್‌ನ 64 ವರ್ಷದ ಉದ್ಯಮಿ ತಮ್ಮ ಮಕ್ಕಳಾದ ನಿಧಿ ತಂತಿ ಮತ್ತು ಪ್ರಣವ್ ತಂತಿಯನ್ನು ಅಗಲಿದ್ದಾರೆ. ತುಳಸಿ ತಂತಿ ಅವರು ಅಹಮದಾಬಾದ್‌ನಲ್ಲಿ ತಮ್ಮ ವ್ಯಾಪಾರ ನಡೆಸುತ್ತಿದ್ದರು ಮತ್ತು 2004 ರಿಂದ ಇವರು ಪುಣೆಯಲ್ಲಿ ನೆಲೆಸಿದ್ದರು. 

“ಅಕ್ಟೋಬರ್ 1, 2022 ರಂದು ಸುಜ್ಲಾನ್ ಎನರ್ಜಿ ಲಿಮಿಟೆಡ್‌ನ ಸಂಸ್ಥಾಪಕರು, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು ಹಾಗೂ ಪ್ರವರ್ತಕರಲ್ಲಿ ಒಬ್ಬರಾದ ತುಳಸಿ ಆರ್. ತಂತಿ ಅವರ ಅಕಾಲಿಕ ನಿಧನದ ಬಗ್ಗೆ ನಾವು ನಿಮಗೆ ತೀವ್ರ ದುಃಖದಿಂದ ತಿಳಿಸುತ್ತೇವೆ. ಶ್ರೀ ತುಳಸಿ ತಂತಿ ಅವರು ಹೃದಯ ಸ್ತಂಭನದಿಂದ ಬಳಲುತ್ತಿದ್ದರು ಮತ್ತು ಅದೇ ದಿನ ನಿಧನರಾಗಿದ್ದಾರೆ ಎಂದು ಮಾಹಿತಿ ನೀಡಲಾಗಿದೆ. "ಅವರು ಪುಣೆಗೆ ಬಂದಿಳಿದ ಕೂಡಲೇ ಹೃದಯಾಘಾತಕ್ಕೆ ಒಳಗಾದರು ಮತ್ತು ಅದೇ ದಿನ ನಿಧನರಾದರು" ಎಂದು ಬೆಳವಣಿಗೆಯ ಮೂಲವೊಂದು ತಿಳಿಸಿದೆ.

ಇದನ್ನು ಓದಿ: Kodiyeri Balakrishnan: ಸಿಪಿಎಂ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

ತುಳಸಿ ತಂತಿಯ ಸಾವು ಸುಜ್ಲಾನ್ ಗ್ರೂಪ್ ಮತ್ತು ಸುಜ್ಲಾನ್ ಎನರ್ಜಿ ಲಿಮಿಟೆಡ್‌ಗೆ ದೊಡ್ಡ ಹಿನ್ನಡೆಯಾಗಿದೆ ಎಂದೇ ಹೇಳಬಹುದು. ಅಕ್ಟೋಬರ್ 11 ರಂದು 1,200 ಕೋಟಿ ರೂಪಾಯಿ ಮೌಲ್ಯದ ಕಂಪನಿಯ ಹಕ್ಕುಗಳ ವಿತರಣೆಯ ಉದ್ಘಾಟನೆಯನ್ನು ಘೋಷಿಸಲು ಅವರು ಶನಿವಾರ ಅಹಮದಾಬಾದ್‌ನಲ್ಲಿ ಮಾಧ್ಯಮಗೋಷ್ಠಿ ನಡೆಸಿದ್ದರು. 
ಈ ವೇಳೆ “ಸುಜ್ಲಾನ್ ಎನರ್ಜಿ ತನ್ನ ಸಾಲವನ್ನು ಮರುಪಾವತಿಸಲು ಮತ್ತು ನಿಧಿಯನ್ನು ಬಳಸಿಕೊಂಡು ಅದರ ಬಡ್ಡಿ ಹೊಣೆಗಾರಿಕೆಗಳನ್ನು ಕಡಿಮೆ ಮಾಡಲು, ಕಾರ್ಯನಿರತ ಬಂಡವಾಳದ ಅಗತ್ಯಗಳನ್ನು ಪೂರೈಸಲು ಮತ್ತು ಕಾರ್ಪೊರೇಟ್ ಅವಶ್ಯಕತೆಗಳಿಗಾಗಿ ಉಳಿದ ನಿಧಿಯನ್ನು ನಿಯೋಜಿಸಲು ಯೋಜಿಸಿದೆ”ಎಂದು ತುಳಸಿ ತಂತಿ ಅವರು ಮಾಧ್ಯಮಕ್ಕೆ ತಿಳಿಸಿದರು. ಇದೇ ಅವರ ಕೊನೆಯ ಸುದ್ದಿಗೋಷ್ಠಿಯಾಗಿದೆ.

ಅಲ್ಲದೆ, ಭಾರತದ ಶುದ್ಧ ಇಂಧನ (Clean Energy) ಬದ್ಧತೆಗಳ ಬಗ್ಗೆ ಮಾತನಾಡಿದ್ದ ಇವರು,  ಭಾರತದ ಇಂಧನ ಆಮದು ಅವಲಂಬನೆ ಕಡಿಮೆ ಮಾಡುವ ಪ್ರಾಮುಖ್ಯತೆಯ ಬಗ್ಗೆ ಹೇಳಿದ್ದರು. "ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ವ್ಯಾಪಾರ ಮಾಡಲು ಇದು ಸರಿಯಾದ ಸಮಯ. ನಾವು ಕೇವಲ 2 ದಶಕಗಳ ಮೊದಲೇ ಬಂದಿದ್ದೇವೆ”ಎಂದು ತುಳಸಿ ತಂತಿ ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು ಮಾಧ್ಯಮಗಳೊಂದಿಗೆ ಸಂವಹನ ನಡೆಸುವಾಗ ವ್ಯಂಗ್ಯವಾಡಿದ್ದರು.

ಭಾರತದಲ್ಲಿ ಪವನ ಶಕ್ತಿ ವ್ಯವಹಾರದ ಪ್ರವರ್ತಕರಲ್ಲಿ ಒಬ್ಬರು ಮತ್ತು ಶುದ್ಧ ಇಂಧನದಲ್ಲಿ ಜಾಗತಿಕವಾಗಿ ಹೆಸರಾಂತ ಪರಿಣಿತರಾದ ತುಳಸಿ ತಂತಿ ಅವರು 1995 ರಲ್ಲಿ ಭಾರತೀಯ ನವೀಕರಿಸಬಹುದಾದ ಇಂಧನ ಉದ್ಯಮದಲ್ಲಿ ಅವಕಾಶವನ್ನು ಕಲ್ಪಿಸಿದರು. ಈ ಸಮಯದಲ್ಲಿ ಜಾಗತಿಕ ಪವನ ಶಕ್ತಿ ಮಾರುಕಟ್ಟೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾತ್ರ ಪ್ರಾಬಲ್ಯ ಹೊಂದಿತ್ತು.

ಇದನ್ನೂ ಓದಿ: Raichur: ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ; ಶವ ನೋಡದಿದ್ದರೆ ದೆವ್ವವಾಗಿ ಕಾಡುತ್ತೇನೆಂದು ಬೆದರಿಕೆ..!

ತುಳಸಿ ತಂತಿ ಅವರ ನಾಯಕತ್ವದಲ್ಲಿ, ಸುಜ್ಲಾನ್ ಎನರ್ಜಿ ಈಗ ದೇಶದ ಅತಿದೊಡ್ಡ ಪವನ ಶಕ್ತಿ ಮಾರುಟ್ಟೆಯಾಗಿದ್ದು, ಇದು 19.4 ಗಿಗಾವ್ಯಾಟ್ (Giga Watt) (GW) ಸಂಚಿತ ಸ್ಥಾಪಿತ ಪವನ ಶಕ್ತಿ ಸಾಮರ್ಥ್ಯವನ್ನು ಅಂದರೆ ಭಾರತದಲ್ಲಿ 33% ಮಾರುಕಟ್ಟೆ ಪಾಲನ್ನು ಹೊಂದಿದ್ದು ಮತ್ತು 17 ದೇಶಗಳಲ್ಲಿ ಅಸ್ತಿತ್ವದಲ್ಲಿದೆ.
ತುಳಸಿ ತಂತಿ ಅವರು ಇಂಡಿಯನ್ ವಿಂಡ್ ಟರ್ಬೈನ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ​​(Indian Wind Turbine Manufactures Asssociation) (IWTMA) ನ ಅಧ್ಯಕ್ಷರು ಮತ್ತು ದೆಹಲಿಯ TERI ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರೂ ಆಗಿದ್ದಾರೆ.

Follow Us:
Download App:
  • android
  • ios