Asianet Suvarna News Asianet Suvarna News

Kodiyeri Balakrishnan: ಸಿಪಿಎಂ ಹಿರಿಯ ನಾಯಕ ಕೊಡಿಯೇರಿ ಬಾಲಕೃಷ್ಣನ್ ನಿಧನ

Kodiyeri Balakrishnan Passed Away: ಸಿಪಿಎಂನ ಹಿರಿಯ  ನಾಯಕ ಹಾಗೂ  ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ವಿಧಿವಶರಾಗಿದ್ದಾರೆ

Veteran CPIM leader Kodiyeri Balakrishnan passed away mnj
Author
First Published Oct 1, 2022, 9:13 PM IST

ಕೇರಳ (ಅ. 01): ಸಿಪಿಎಂನ ಹಿರಿಯ  ನಾಯಕ ಹಾಗೂ  ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ (68) (Kodiyeri Balakrishnan) ವಿಧಿವಶರಾಗಿದ್ದಾರೆ. ಆಗಸ್ಟ್ 29 ರಂದು ಕ್ಯಾನ್ಸರ್‌ ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆ ಅವರನ್ನು ದಾಖಲಿಸಲಾಗಿತ್ತು. ಬಾಲಕೃಷ್ಣನ್ ಅನಾರೋಗ್ಯ ಕಾರಣಗಳಿಂದಾಗಿ ಇತ್ತೀಚೆಗೆ ಪಕ್ಷದ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೇರಳದ -ಅತ್ಯಂತ ಹಿರಿಯ ರಾಜಕಾರಣಿಗಳಲ್ಲಿ ಒಬ್ಬರಾದ ಕೊಡಿಯೇರಿ ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ 'ಸಿಪಿಎಂ ಪಾಲಿಟ್‌ಬ್ಯೂರೋ' ಸದಸ್ಯರಾಗಿದ್ದರು. 

2015 ರಿಂದ 2022 ರವರೆಗೆ, ಕೊಡಿಯೇರಿ ಬಾಲಕೃಷ್ಣನ್ ಸಿಪಿಐ (ಎಂ), ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ವಿ ಎಸ್ ಅಚ್ಚುದಾನಂದನ್ ಅವರ ಸಂಪುಟದಲ್ಲಿ ಅವರು ಗೃಹ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. 1987 ರಲ್ಲಿ, ಅವರು ಟೆಲಿಚೇರಿ ಕ್ಷೇತ್ರದಿಂದ ಕೇರಳ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. 

2001-2006 ಯುಡಿಎಫ್ ಸರ್ಕಾರದ ಆಡಳಿತದಲ್ಲಿ ವಿರೋಧ ಪಕ್ಷದ ಉಪ ನಾಯಕರಾಗಿದ್ದರು. ಅವರು 2011 ರಲ್ಲಿ ವಿರೋಧ ಪಕ್ಷದ ಉಪ ನಾಯಕನ  ಸ್ಥಾನವನ್ನು ಹೊಂದಿದ್ದರು. ಅವರು ಪಕ್ಷದ ರಾಜ್ಯ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಮರು ಆಯ್ಕೆಯಾದರು, ಆದರೆ ಇತ್ತೀಚೆಗೆ ಆರೋಗ್ಯ ಸಮಸ್ಯೆಗಳಿಂದಾಗಿ ರಾಜೀನಾಮೆ ನೀಡಬೇಕಾಯಿತು.

ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯಕ್ಕೆ: ಕೊಡಿಯೇರಿ ಬಾಲಕೃಷ್ಣನ್ ಅವರು ನವೆಂಬರ್ 16, 1953 ರಂದು ಜನಿಸಿದರು. ತಮ್ಮ ಶಿಕ್ಷಣವನ್ನು ಕೊಡಿಯೇರಿ ಓನಿಯನ್ ಹೈಸ್ಕೂಲ್, ಮಹಾತ್ಮ ಗಾಂಧಿ ಕಾಲೇಜು, ಮಾಹೆ ಮತ್ತು ಯುನಿವರ್ಸಿಟಿ ಕಾಲೇಜ್, ತಿರುವನಂತಪುರದಲ್ಲಿ ಪೂರ್ಣಗೊಳಿಸಿದರು. ಮಾಹೆಯ ಮಹಾತ್ಮಾ ಗಾಂಧಿ ಕಾಲೇಜಿನಲ್ಲಿ ಓದುತ್ತಿರುವಾಗ ಸಿಪಿಐ (ಎಂ) ವಿದ್ಯಾರ್ಥಿ ಘಟಕದ ಮೂಲಕ ರಾಜಕೀಯದಲ್ಲಿ ಸಕ್ರಿಯರಾದರು. 

ಕೊಡಿಯೇರಿ ಬಾಲಕೃಷ್ಣನ್ ಎಸ್‌ಎಫ್‌ಐನ ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿ ಮತ್ತು ಅದರ ಅಖಿಲ ಭಾರತ ಜಂಟಿ ಕಾರ್ಯದರ್ಶಿಯಾಗಿದ್ದರು. 1980ರ ದಶಕದ ಆರಂಭದಲ್ಲಿ ಡಿವೈಎಫ್‌ಐನ ಕಣ್ಣೂರು ಜಿಲ್ಲಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ 16 ತಿಂಗಳ ಕಾಲ ಜೈಲುವಾಸ ಅನುಭವಿಸಿದ್ದರು. ಅವರು ಎಸ್.ಆರ್. ವಿನೋದಿನಿ ಅವರನ್ನು ವಿವಾಹವಾದರು. ದಂಪತಿಗಳಿಗೆ ಬಿನೋಯ್ ಕೊಡಿಯೇರಿ ಮತ್ತು ಬಿನೀಶ್ ಕೊಡಿಯೇರಿ ಎಂಬ ಇಬ್ಬರು ಮಕ್ಕಳಿದ್ದಾರೆ.

Follow Us:
Download App:
  • android
  • ios