ಹಳ್ಳಿ ಜನರಿಗೂ ಇಷ್ಟವಾಗ್ತಿದೆ ಈ ಉತ್ಪನ್ನ…. ವ್ಯಾಪಾರ ಶುರು ಮಾಡಿ ಲಕ್ಷ ಗಳಿಸ್ತಿರುವ ಉದ್ಯಮಿ

ಈಗ ಹಳ್ಳಿಗಳು ನಗರವಾಗಿ ಬದಲಾಗ್ತಿದೆ. ಹಳ್ಳಿಯಲ್ಲಿ ವ್ಯಾಪಾರ ಮಾಡಲು ಜನರಿಗೆ ಸಾಕಷ್ಟು ಅವಕಾಶವಿದೆ. ನಿಮ್ಮ ಹಳ್ಳಿಯಲ್ಲಿ ಏನಿಲ್ಲ ಎಂಬುದನ್ನು ಪತ್ತೆ ಮಾಡಿ ಅದೇ ವ್ಯಾಪಾರಕ್ಕೆ ನೀವು ಕೈ ಹಾಕಿದ್ರೆ ಸಂಪಾದನೆ ಡಬಲ್ ಆಗೋದು ನಿಶ್ಚಿತ. 
 

Surabh Started Business By Taking Loan Make  Delicious Cake More Than Fifty Varieties roo

ಕೇಕ್ ಸೇರಿದಂತೆ ಬೇಕರಿ ಉತ್ಪನ್ನಗಳು ನಗರ – ಪಟ್ಟಣ ಪ್ರದೇಶದಲ್ಲಿ ಪ್ರಸಿದ್ಧಿಯಾಗಿವೆ. ಅಲ್ಲಿನ ಜನರು ಹುಟ್ಟುಹಬ್ಬ, ಪಾರ್ಟಿಗಳಲ್ಲಿ ಮಾತ್ರವಲ್ಲದೆ ಸಾಮಾನ್ಯ ದಿನಗಳಲ್ಲಿ ಕೇಕ್, ಬ್ರೆಡ್, ಸ್ವೀಟ್ ಸೇರಿದಂತೆ ಅನೇಕ ಆಹಾರ ಉತ್ಪನ್ನಗಳನ್ನು ತಿನ್ನುತ್ತಿರುತ್ತಾರೆ. ಹಿಂದೆ ಹಳ್ಳಿಗಳಲ್ಲಿ ಈ ಆಹಾರ ಹೆಚ್ಚು ಪ್ರಸಿದ್ಧಿಯಾಗಿರಲಿಲ್ಲ. ಹುಟ್ಟುಹಬ್ಬದಲ್ಲಿ ಕೇಕ್ ಕಟ್ ಮಾಡುವವರ ಸಂಖ್ಯೆ ಬಹಳ ಕಡಿಮೆ ಇತ್ತು. ಆದ್ರೀಗ ಹಳ್ಳಿಗಳು ನಗರಗಳಾಗ್ತಿವೆ. ಹಳ್ಳಿಯಲ್ಲಿನ ಜನರು ಬೇಕರಿ ವಸ್ತುಗಳು, ಕೇಕ್ ಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಕೇಕ್ ತಯಾರಿಸಿ ಅದನ್ನು ಕತ್ತರಿಸುವ ಪದ್ಧತಿ ಬೆಳೆದು ಬರ್ತಿದೆ. ಆದ್ರೆ ಪಟ್ಟಣದಲ್ಲಿ ಸಿಗುವಂತ ಕೇಕ್ ಹಳ್ಳಿಗಳಲ್ಲಿ ಸಿಗ್ತಿಲ್ಲ. ಕೇಕ್ ತಿನ್ನಬೇಕೆಂಬ ಆಸೆ ಆದ್ರೂ ಕೇಕ್ ಖರೀದಿ ಮಾಡಲು ಹಳ್ಳಿಯ ಜನರಿಗೆ ಸಾಧ್ಯವಾಗ್ತಿಲ್ಲ. ಪಟ್ಟಣಕ್ಕೆ ಹೋಗಿ ಕೇಕ್ ಖರೀದಿ ಮಾಡಿ ಬರೋದು ಸ್ವಲ್ಪ ದುಬಾರಿ. ಇದನ್ನೇ ಬಂಡವಾಳ ಮಾಡಿಕೊಂಡು ಅನೇಕರು ಈಗ ಹಳ್ಳಿಗಳಲ್ಲಿ ಕೇಕ್ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮನೆಯಲ್ಲಿರುವ ಅನೇಕ ಮಹಿಳೆಯರು ಕೇಕ್ ತಯಾರಿಕೆ ಕಲಿತು, ಸಣ್ಣ ಪ್ರಮಾಣದಲ್ಲಿ ಕೇಕ್ ಮಾರಾಟ ಶುರು ಮಾಡಿದ್ದಾರೆ. ಇದಕ್ಕೆ ಸೌರವ್ ಕುಮಾರ್ ಉತ್ತಮ ನಿದರ್ಶನ. ಅವರು ಕೂಡ ತಮ್ಮ ಹಳ್ಳಿಯಲ್ಲೇ ಕೇಕ್ ಅಂಗಡಿ ಶುರು ಮಾಡಿ ಯಶಸ್ವಿಯಾಗಿದ್ದಾರೆ.

ಸೌರವ್ ಕುಮಾರ್ ಬಿಹಾರ (Bihar) ದ ಬಂಕಾ ಜಿಲ್ಲೆಯ ಚುಟಿಯಾ ಗ್ರಾಮದವರು. ಮಧ್ಯಮ ವರ್ಗದ ಸೌರವ್ ಕುಮಾರ್ ಗೆ ಆರ್ಥಿಕ ಸಮಸ್ಯೆ ಕಾಡಿದಕಾರಣ ವಿದ್ಯಾಭ್ಯಾಸ (Education) ಮುಂದುವರೆಸಲು ಸಾಧ್ಯವಾಗಲಿಲ್ಲ. ಅವರು ಓದು ಬಿಟ್ಟು ಕೆಲಸ ಹುಡುಕಲು ಹೊರಟ್ರು. ಬೇಕರಿ (Bakery) ಒಂದರಲ್ಲಿ ಕೆಲಸಗಿಟ್ಟಿಸಿಕೊಂಡ ಸೌರವ್ ಕುಮಾರ್, ಅಲ್ಲಿಯೇ ಕೇಕ್ ತಯಾರಿಸೋದನ್ನು ಕಲಿತರು.  ಕೇಕ್ ತಯಾರಿಕೆ ಬಗ್ಗೆ ಸಂಪೂರ್ಣ ಅರಿತ ಅವರು ಹಳ್ಳಿಯಲ್ಲಿ ಅದ್ರ ಅಗತ್ಯ ಎಷ್ಟಿದೆ ಎಂಬುದನ್ನು ತಿಳಿದು, ಹಳ್ಳಿಯಲ್ಲಿ ಕೇಕ್ ಶಾಪ್ ಶುರು ಮಾಡುವ ನಿರ್ಧಾರಕ್ಕೆ ಬಂದರು. ವಾಪಸ್ ತಮ್ಮ ಹಳ್ಳಿಗೆ ಬಂದ ಸೌರವ್ ಕುಮಾರ್, ಮುಖ್ಯಮಂತ್ರಿ ಉದ್ಯಮಿ ಯೋಜನೆಯಲ್ಲಿ 10 ಲಕ್ಷ ಸಾಲ ಪಡೆದು ಅಂಗಡಿ ಶುರು ಮಾಡಿದ್ರು.

ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆ; ಇಲ್ಲಿದ್ದಾರೆ ಬರೋಬ್ಬರಿ 568 ಮಿಲಿಯನ್ ಗೇಮರ್ಸ್

ಸೌರವ್ ಕುಮಾರ್ ಉತ್ತಮ ಗುಣಮಟ್ಟದ ಕೇಕ್ ತಯಾರಿಸುತ್ತಿದ್ದಾರೆ. ಅವರ ಕೇಕ್ ರುಚಿ ಸುತ್ತಮುತ್ತಲಿನ ಜನರನ್ನು  ಸೆಳೆದಿದೆ. ಹಾಗಾಗಿಯೇ ಕಡಿಮೆ ಸಮಯದಲ್ಲಿಯೇ ಸೌರವ್ ಕುಮಾರ್ ಅಂಗಡಿ ಹೆಚ್ಚು ಪ್ರಸಿದ್ಧಿ ಪಡೆಯಿತು. ಸೌರವ್ ಕುಮಾರ್ ಕೇಕ್ ವಿಶೇಷವೆಂದ್ರೆ ಅವರು ಕೇಕ್ ಗೆ ಮೊಟ್ಟೆ ಹಾಕುವುದಿಲ್ಲ. ಇದು ಸಂಪೂರ್ಣ ಸಸ್ಯಹಾರವಾಗಿರುವ ಕಾರಣ ಎಲ್ಲರೂ ಅದನ್ನು ಸೇವನೆ ಮಾಡಬಹುದು. 

ಸೌರವ್ ಕುಮಾರ್ ತಮ್ಮ ಅಂಗಡಿಯಲ್ಲಿ ಐವತ್ತಕ್ಕೂ ಹೆಚ್ಚು ವೆರೈಟಿ ಕೇಕ್ ತಯಾರಿಸುತ್ತಾರೆ. ದಿನಕ್ಕೆ 35 ರಿಂದ 40 ಆರ್ಡರ್ ಬರೋದಿದೆ. ಪ್ರತಿ ಕೇಕ್ ಗೆ 250 ರೂಪಾಯಿ ಚಾರ್ಜ್ ಮಾಡುತ್ತಾರೆ ಸೌರವ್ ಕುಮಾರ್.  ಕಡಿಮೆ ಬಂಡವಾಳ ಬಳಸಿ ವ್ಯಾಪಾರ ಶುರು ಮಾಡಿರುವ ಸೌರವ್ ಕುಮಾರ್, ಈಗ ವಾರ್ಷಿಕವಾಗಿ 7 ಲಕ್ಷ ರೂಪಾಯಿಗಿಂತಲೂ ಹೆಚ್ಚು ಸಂಪಾದನೆ ಮಾಡುತ್ತಾರೆ. 2022ರಲ್ಲಿ ಅವರು ಈ ಕೇಕ್ ಅಂಗಡಿ ಶುರು ಮಾಡಿದ್ರೂ ಕಡಿಮೆ ಸಮಯದಲ್ಲಿಯೇ ಅವರು ಹೆಚ್ಚು ಪ್ರಸಿದ್ಧಿಪಡೆದಿದ್ದಾರೆ. 

ಆಸ್ತಿಗಾಗಿ 9ವರ್ಷ ಅಪ್ಪನನ್ನೇ ಬೀದಿಲಿಟ್ಟ ರೇಮಂಡ್‌ ಮುಖ್ಯಸ್ಥನಿಗೆ ಹೆಂಡತಿ ಬಿಟ್ಟು ಹೋದ ಮೇಲೆ ತಂದೆ ಬೇಕಾಯ್ತು!

ಸೌರವ್ ಕುಮಾರ್, ವೆನಿಲ್ಲಾ, ಬ್ಲೂಬೆರಿ (Blueberry), ಬಟರ್ ಸ್ಕಾಚ್ (Buttor Schoch), ಚಾಕೋಲೇಟ್ (Chocolate), ಜರ್ಮನ್ ಕ್ರಂಚ್ (German Crunch), ಚೋಕೋ ಚಿಪ್ಸ್ (Choco Chips) ಸೇರಿದಂತೆ ಐವತ್ತಕ್ಕೂ ಹೆಚ್ಚು ವೆರೈಟಿ ಕೇಕ್ ಗಳು ಸೌರವ್ ಕುಮಾರ್ ಅಂಗಡಿಯಲ್ಲಿ ಸಿಗುತ್ತವೆ. ಸೌರವ್ ಬೇರೆ ಬೇರೆ ಕಡೆಯಿಂದ ಆರ್ಡರ್ ಪಡೆದು ಕೇಕ್ ಸಿದ್ಧಪಡಿಸುತ್ತಾರೆ.  

Latest Videos
Follow Us:
Download App:
  • android
  • ios