ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆ; ಇಲ್ಲಿದ್ದಾರೆ ಬರೋಬ್ಬರಿ 568 ಮಿಲಿಯನ್ ಗೇಮರ್ಸ್
ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆಯಾಗಿದೆ. ವರದಿಯೊಂದರ ಪ್ರಕಾರ 2023ನೇ ಸಾಲಿನಲ್ಲಿ ಭಾರತ 568 ಮಿಲಿಯನ್ ಗೇಮರ್ಸ್ ಹೊಂದಿದ್ದು, 9.5 ಬಿಲಿಯನ್ ಗೂ ಅಧಿಕ ಗೇಮಿಂಗ್ ಆಪ್ ಗಳು ಡೌನ್ಲೋಡ್ ಆಗಿವೆ.
ನವದೆಹಲಿ (ಮಾ.25): ಭಾರತ ಈಗ ವಿಶ್ವದ ಅತೀದೊಡ್ಡ ಗೇಮಿಂಗ್ ಮಾರುಕಟ್ಟೆ. 2023ನೇ ಸಾಲಿನಲ್ಲಿ 568 ಮಿಲಿಯನ್ ಗೇಮರ್ಸ್ ಹೊಂದಿದ್ದು, 9.5 ಬಿಲಿಯನ್ ಗೂ ಅಧಿಕ ಗೇಮಿಂಗ್ ಆಪ್ ಗಳು ಡೌನ್ಲೋಡ್ ಆಗಿವೆ. ಈ ಮೂಲಕ ಭಾರತ ಗೇಮಿಂಗ್ ಮಾರುಕಟ್ಟೆಯಲ್ಲಿ ನಂ.1 ಸ್ಥಾನಕ್ಕೇರಿದೆ. 'ರೋಬಾಸ್ಟ್ ಫಂಡಮೆಂಟಲ್ಸ್ ಟು ಪವರ್ ಕಂಟಿನ್ಯೂಡ್ ಗ್ರೋಥ್' ಎಂಬ ವರದಿಯು ಭಾರತ ಗೇಮಿಂಗ್ ಮಾರುಕಟ್ಟೆಯ ಚಾಂಪಿಯನ್ ಆಗಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದ ಗೇಮಿಂಗ್ ವಲಯದ ಗಮನಾರ್ಹ ಪ್ರಗತಿಯ ಮೇಲೆ ಈ ವರದಿ ಬೆಳಕು ಚೆಲ್ಲಿದೆ. ಮೊಬೈಲ್ ಗೇಮಿಂಗ್ ಈ ಮಾರುಕಟ್ಟೆಗೆ ಶೇ.90ರಷ್ಟು ಕೊಡುಗೆ ನೀಡಿದೆ ಎಂದು ಅದು ತಿಳಿಸಿದೆ. ಈ ಮೂಲಕ ಮೊಬೈಲ್ ಗೇಮ್ಸ್ ಡೌನ್ಲೋಡ್ ನಲ್ಲಿ ಭಾರತ ಗೇಮಿಂಗ್ ವಲಯದ ದೈತ್ಯ ರಾಷ್ಟ್ರಗಳಾದ ಅಮೆರಿಕ ಹಾಗೂ ಚೀನಾವನ್ನು ಹಿಂದಿಕ್ಕಿದೆ. ಅಲ್ಲದೆ, ಜಗತ್ತಿನ ಒಟ್ಟು ಗೇಮಿಂಗ್ ಕೈಗಾರಿಕೆಯ ಅಂದಾಜು ಶೇ.20ರಷ್ಟು ಭಾಗವನ್ನು ಭಾರತ ಒಳಗೊಂಡಿದೆ.
ಭಾರತದಲ್ಲಿ ಗೇಮಿಂಗ್ ವಲಯ ಗಮನಾರ್ಹ ಬೆಳವಣಿಗೆ ದಾಖಲಿಸಲು ಮುಖ್ಯಕಾರಣ ಗೇಮಿಂಗ್ ಕಂಟೆಂಟ್ ಗಳ ಪ್ರಾದೇಶೀಕರಣ. ಅಂದರೆ ಭಾರತದ ಸ್ಥಳೀಯ ಭಾಷೆಗಳಲ್ಲಿ ಹಾಗೂ ಭಾರತೀಯ ವಿಚಾರಗಳನ್ನು ಪರಿಚಯಿಸುವ ಮೂಲಕ ಗೇಮಿಂಗ್ ಪ್ಲಾಟ್ ಫಾರ್ಮ್ ಗಳು ಇಂಗ್ಲಿಷ್ ಭಾಷೆ ಬಾರದ ಜನರನ್ನು ಅದರಲ್ಲೂ ಗ್ರಾಮೀಣ ಭಾಗವನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಈ ಬೆಳವಣಿಗೆ ಬಳಕೆದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಯಶಸ್ವಿಯಾಗಿರೋದು ಮಾತ್ರವಲ್ಲ, ಬದಲಿಗೆ ದೇಶದ ವಿವಿಧ ಭಾಷೆ ಹಾಗೂ ಸಂಸ್ಕೃತಿಯ ಜನರನ್ನು ತಲುಪುವಲ್ಲಿ ಕೂಡ ಯಶಸ್ಸು ಸಾಧಿಸಿದೆ.
ಐಪಿಎಲ್ ಧಮಾಕಾ, ಗ್ರಾಹಕರಿಗೆ ಹೆಚ್ಚುವರಿ ಡೇಟಾ ಸೇರಿ ಹಲವು ಆಫರ್ ಘೋಷಿಸಿದ ವಿ!
ಭಾರತದ ಗೇಮಿಂಗ್ ಬಳಕೆದಾರರಲ್ಲಿ ಅಂದಾಜು ಶೇ.40ರಷ್ಟು ಜನರು ಮಹಿಳೆಯರಾಗಿದ್ದಾರೆ ಎಂದು ವರದಿ ತಿಳಿಸಿದೆ. ಮಹಿಳಾ ಗೇಮರ್ ಗಳಲ್ಲಿನ ಈ ಏರಿಕೆ ಕ್ಯಾಶುವಲ್ ಹಾಗೂ ಹೈಪರ್ ಕ್ಯಾಶುವಲ್ ಗೇಮಿಂಗ್ ಅನುಭವದಲ್ಲಿನ ಏರಿಕೆಯನ್ನು ತಿಳಿಸುತ್ತದೆ. ಮೂರು ವರ್ಷಗಳ ಹಿಂದೆ ಭಾರತದಲ್ಲಿನ ಐವರು ಗೇಮರ್ ಗಳಲ್ಲಿ ಒಬ್ಬರು ಮಹಿಳೆಯಾಗಿದ್ದರು.
ಈ ವರದಿ ಇನ್ನೊಂದು ಆಸಕ್ತಿಕರ ಸಂಗತಿಯನ್ನು ಬಹಿರಂಗಪಡಿಸಿದೆ. ಅದರ ಅನ್ವಯ ಹಣ ಪಾವತಿಸಿ ಗೇಮಿಂಗ್ ಆಪ್ ಗಳನ್ನು ಬಳಸುತ್ತಿರೋರ ಸಂಖ್ಯೆ ಹೆಚ್ಚಿದೆ ಎಂದು ತಿಳಿಸಿದೆ. ಭಾರತದಲ್ಲಿನ ಅಂದಾಜು ಶೇ.20 ಗೇಮಿಂಗ್ ಬಳಕೆದಾರರು ಹಣ ಪಾವತಿಸಿ ಗೇಮ್ ಆಡುತ್ತಿದ್ದಾರೆ. ಈ ರೀತಿ ಹಣ ಪಾವತಿಸಿ ಗೇಮ್ ಆಡುತ್ತಿರೋರ ಟಾಪ್ ಆಯ್ಕೆಗಳಲ್ಲಿ ಪೇ ಟು ಪ್ಲೇ, ಕ್ಯಾಶುವಲ್ ಹಾಗೂ ಕೋರ್ ಗೇಮ್ ಗಳು ಸೇರಿವೆ. ಇನ್ನು ಇನ್ ಆಪ್ ಖರೀದಿಯಲ್ಲಿ ಶೇ.35ಷ್ಟು ಏರಿಕೆ ಕಂಡುಬಂದಿದೆ.
ಆನ್‌ಲೈನ್ ಗೇಮ್‌ನಿಂದ ಕಳ್ಕೊಂಡ ಹಣ ಹಿಂದಿರುಗಿಸಲು ತಾಯಿಯನ್ನೇ ಕೊಂದ ಮಗ!
ವಿವಿಧ ವಯೋಮಾನದ ಪಾವತಿಸಿ ಆಡುವ ಬಳಕೆದಾರರ ಪ್ರಮಾಣದಲ್ಲಿ ಏರಿಕೆಯಾಗಿರೋದು ಮಾತ್ರವಲ್ಲ, ಬದಲಿಗೆ ಅವರ ಆಯ್ಕೆ ಹಾಗೂ ವೆಚ್ಚದ ಅಭ್ಯಾಸದಲ್ಲಿ ಕೂಡ ಬದಲಾವಣೆಗಳಾಗಿವೆ. ಜಾಗತಿಕ ಗೇಮಿಂಗ್ ವಲಯದಲ್ಲಿ ಭಾರತದ ಸ್ಥಾನ ಏರಿಕೆಯಾಗಿರೋದನ್ನು ಈ ವರದಿ ಸಾಬೀತುಪಡಿಸಿದೆ.
ಬೆಳೆಯುತ್ತಿರುವ ಬಳಕೆದಾರರ ಸಂಖ್ಯೆ, ಸ್ಥಳೀಯ ಕ್ರಮಗಳ ಅನ್ವೇಷಣೆ ಹಾಗೂ ಹೊಸ ಟ್ರೆಂಡ್ ಗಳ ಸೃಷ್ಟಿಯಿಂದ ಭಾರತ ಗೇಮಿಂಗ್ ಕ್ರಾಂತಿಯಲ್ಲಿ ಮುಂಚೂಣಿಯಲ್ಲಿ ನಿಂತಿದೆ. ಈ ಮೂಲಕ ವರ್ಷದಿಂದ ವರ್ಷಕ್ಕೆ ಭಾರತದ ಗೇಮಿಂಗ್ ವಲಯದ ಬೆಳವಣಿಗೆ ನಿರಂತರವಾಗಿದೆ. ಅಲ್ಲದೆ, ಭಾರತದ ಗೇಮಿಂಗ್ ವಲಯದಲ್ಲಿ ಹೊಸ ಹೊಸ ಬೆಳವಣಿಗೆಗಳು ಕಂಡುಬರುತ್ತಿವೆ. ಹೀಗಾಗಿ ಮುಂದಿ ದಿನಗಳಲ್ಲಿ ಭಾರತದಲ್ಲಿ ಈ ವಲಯ ಇನ್ನಷ್ಟು ಬೆಳವಣಿಗೆ ದಾಖಲಿಸುವ ನಿರೀಕ್ಷೆಯಿದೆ. ಡಿಜಿಟಲ್ ಮನೋರಂಜನೆ ವಲಯದಲ್ಲಿ ಭಾರತ ತನ್ನ ಸ್ಥಾನವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನು ಇಡುತ್ತಿದೆ.