ಜನರು ಕಸಕ್ಕೆ ಹಾಕ್ತಿದ್ದ ವಸ್ತು ಬಳಸಿಯೇ ಕೋಟ್ಯಾಂತರ ರೂ ಗಳಿಸ್ತಿರುವ ಮಹಿಳೆ..
ಅನೇಕ ವಸ್ತುಗಳನ್ನು ನಾವು ಅಪ್ರಯೋಜಕ ಎಂದು ಭಾವಿಸಿ ಅದನ್ನು ಕಸಕ್ಕೆ ಹಾಕ್ತೇವೆ. ಆದ್ರೆ ಅದೇ ಕಸದಿಂದ ರಸ ಮಾಡ್ಬಹುದು. ಈ ಗುಟ್ಟು ಕೆಲವೇ ಜನರಿಗೆ ಮಾತ್ರ ಗೊತ್ತು. ಈಗ ನಾವು ಹೇಳ್ತಿರುವ ಮಹಿಳೆ ಕೂಡ ಕಸವನ್ನೇ ಕಸುಬು ಮಾಡಿಕೊಂಡಿದ್ದಾರೆ.
ಒಂದ್ಕಾಲದಲ್ಲಿ ಅಲೆಮಾರಿಯಾಗಿ, ಕೆಲಸಕ್ಕೆ ಬಾರದವರು ಎನ್ನಿಸಿಕೊಂಡವರು ಕೂಡ ಮನಸ್ಸು ಮಾಡಿದ್ರೆ ದೊಡ್ಡ ಮಟ್ಟಕ್ಕೆ ಏರುತ್ತಾರೆ. ವ್ಯವಹಾರ ಶುರು ಮಾಡಿ ಅದನ್ನು ದೇಶ – ವಿದೇಶದಲ್ಲಿ ವಿಸ್ತರಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎನ್ನುವುದಕ್ಕೆ ಈ ಮಹಿಳೆ ಉತ್ತಮ ನಿದರ್ಶನ. ಭಾರತದಲ್ಲಿ ಪ್ರತಿಯೊಂದು ಬ್ಯುಸಿನೆಸ್ ಗೂ ಹೆಚ್ಚಿನ ಬೇಡಿಕೆ ಇದೆ. ನಿಮ್ಮ ಬ್ಯುಸಿನೆಸ್ ಹೇಗೆ ಶುರು ಮಾಡ್ತೀರಿ, ಅದನ್ನು ಹೇಗೆ ಜನರಿಗೆ ತಲುಪಿಸುತ್ತೀರಿ ಹಾಗೆ ಅದು ಜನರನ್ನು ಹೇಗೆ ಆಕರ್ಷಿಸುತ್ತೀರಿ ಎನ್ನುವುದರ ಮೇಲೆ ನಿಮ್ಮ ಲಾಭ ನಿಂತಿದೆ. ಈಗಿನ ದಿನಗಳಲ್ಲಿ ಈ ಎಲ್ಲರದ ಜೊತೆ ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ವಸ್ತುಗಳಿಗೆ ಹೆಚ್ಚು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಹಿಳೆಯೊಬ್ಬರು ವಿನೂತನ ವಸ್ತುಗಳನ್ನು ತಯಾರಿಸಿ, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಚರ್ಚೆಯಲ್ಲಿದ್ದಾರೆ. ಅವರ ಆಕರ್ಷಕ ವಸ್ತುಗಳಿಗೆ ಸಾಕಷ್ಟು ಬೇಡಿಕೆ ಇದೆ.
ವಿನೂತನ ವಸ್ತು ತಯಾರಿಸುವ ಮಹಿಳೆ ಹೆಸರು ಅಪೂರ್ವ. ಅವರು ಮೀರತ್ (Meerut) ನ ಮಾವಾನಾ ಗ್ರಾಮದವರು. ಪೇಪರ್ (Paper), ಮೊಟ್ಟೆಯಿಡುವ ಕ್ರೇಟ್ ಹಾಗೂ ಮುಲ್ತಾನ್ ಮಿಟ್ಟಿಯಿಂದ ಅಪೂರ್ವ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಅಪೂರ್ವ ಕಂಪನಿ (Company) ಯಲ್ಲಿ ಈಗ ಸುಮಾರು 100 ಮಹಿಳೆಯರು ಸೇರಿದಂತೆ 150 ಮಂದಿ ಕೆಲಸ ಮಾಡುತ್ತಿದ್ದಾರೆ.
ಟಾಟಾ ಗ್ರೂಪ್ ನಲ್ಲಿ ಒಂದೇ ಒಂದು ಷೇರು ಹೊಂದಿರುವ ನಿಗೂಢ ವ್ಯಕ್ತಿ ಇವರೇ ನೋಡಿ!
ಅಪೂರ್ವ ಅಗರ್ವಾಲ್, ವೈಭವ್ ಪಾಂಡೆ ಜೊತೆ ಪಾರ್ಟನರ್ ಶಿಪ್ ನಲ್ಲಿ ಕಂಪನಿ ಶುರು ಮಾಡಿದ್ದಾರೆ. ಇವರು ಕಮಿಂಗ್ ಸೀಸನ್ ಹೆಸರಿನ ಕಂಪನಿಯನ್ನು ಎರಡು ವರ್ಷಗಳ ಹಿಂದೆ ಶುರು ಮಾಡಿದ್ದಾರೆ. ಮುಲ್ತಾನಿ ಮಿಟ್ಟಿ ಹಾಗೂ ಪೇಪರ್ ನಿಂದ ವಸ್ತುಗಳನ್ನು ತಯಾರಿಸೋದು ಈಗಿನ ಪದ್ಧತಿಯಲ್ಲಿ. ಭಾರತದ ನಾಗರಿಕತೆಯಲ್ಲೇ ಇದು ಬೆಳೆದು ಬಂದಿದೆ. ಅದನ್ನೇ ಅಪೂರ್ವ ತಮ್ಮ ವ್ಯವಹಾರವಾಗಿ ಬದಲಿಸಿಕೊಂಡಿದ್ದಾರೆ.
ಹಳೆ ಪೇಪರ್, ಮೊಟ್ಟೆ ಕ್ರೇಟ್ ಮತ್ತು ಮುಲ್ತಾನಿ ಮಿಟ್ಟಿಯನ್ನು ಮೊದಲು ನೀರಿನಲ್ಲಿ ನೆನಸಲಾಗುತ್ತದೆ. ನಂತ್ರ ಅದರಿಂದ ವಿವಿಧ ರೀತಿಯ ಉತ್ಪನ್ನಗಳನ್ನು ಮಹಿಳೆಯರು ಕೈ ಅಚ್ಚಿನಿಂದ ತಯಾರಿಸುತ್ತಾರೆ. ಅದು ಒಣಗಿದ ಮೇಲೆ ಅದಕ್ಕೆ ಬಣ್ಣ ಹಚ್ಚಲಾಗುತ್ತದೆ.
ಅಪೂರ್ವ ಈ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ನಾನಾ ರೀತಿಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಟೇಬಲ್ ವಾಸ್, ವಾಲ್ ಹ್ಯಾಂಗಿಂಗ್, ಪ್ಲಾಂಟರ್, ಹೂದಾನಿ, ಮೀರರ್ ಚೌಕಟ್ಟು, ಟೇಬಲ್ ಲ್ಯಾಂಪ್ ಶೇಡ್, ಕ್ಯಾಂಡಲ್ ಹೋಲ್ಡರ್, ಪೀಠೋಪಕರಣ, ಟೇಬಲ್, ಕುರ್ಚಿ, ಸ್ಟೂಲ್, ಪೀಠೋಪಕರಣಗಳ ಶೆಲ್ಫ್ ಸೇರಿದಂತೆ ನಾನಾ ಅಲಂಕಾರಿಕ ವಸ್ತುಗಳನ್ನು ಅಪೂರ್ವ ಅಗರ್ವಾಲ್ ಕಂಪನಿ ತಯಾರಿಸುತ್ತದೆ.
ಅಪೂರ್ವ ಅವರ ಕಮಿಂಗ್ ಸೀಸನ್ ಕಾರ್ಖಾನೆ ಸದ್ಯ ರಾಜಸ್ಥಾನದ ಚುರು, ಹಾಪುರ್, ನೋಯ್ಡಾ ಮತ್ತು ಮೊರಾದಾಬಾದ್‌ನಲ್ಲಿದೆ. ಅಪೂರ್ವ ತಮ್ಮ ಗ್ರಾಮದಲ್ಲೂ ಕಾರ್ಖಾನೆ ಶುರು ಮಾಡುವ ಆಲೋಚನೆ ಹೊಂದಿದ್ದಾರೆ. ಇದ್ರಿಂದ ಅನೇಕ ಮಹಿಳೆಯರಿಗೆ ಕೆಲಸ ಸಿಗುತ್ತದೆ. ಹಾಗಾಗಿ ತಮ್ಮ ಮಾವಾದಲ್ಲಿ ಕಾರ್ಖಾನೆ ಶುರು ಮಾಡ್ತೇನೆ ಎಂದು ಅಪೂರ್ವ ಹೇಳಿದ್ದಾರೆ.
500 ರೂ. ಸಾಲ ಮಾಡಿ ಬ್ಯುಸಿನೆಸ್ ಶುರು ಮಾಡಿದವಳೀಗ ವಾರ್ಷಿಕ 7 ಕೋಟಿ ವಹಿವಾಟು ನಡೆಸ್ತಾರೆ!
ಅಪೂರ್ವ ಅಗರ್ವಾಲ್ ತಮ್ಮ ಕಂಪನಿ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ. ವಿದೇಶದಲ್ಲೂ ಅವರ ಉತ್ಪನ್ನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕಂಪನಿ ಶುರು ಮಾಡಿದ ಎರಡೇ ವರ್ಷದಲ್ಲಿ ಹತ್ತು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ ಕಮಿಂಗ್ ಸೀಸನ್. ಅಪೂರ್ವ ಅಗರ್ವಾಲ್ ಅವರ ಕೆಲಸಕ್ಕೆ ಅನೇಕ ಪ್ರಶಸ್ತಿ ಕೂಡ ಸಿಕ್ಕಿದೆ. ಟಾಪ್ 10 ವೇಸ್ಟ್ ಫ್ಯಾಶನ್ ಕಂಪನಿ ಪ್ರಶಸ್ತಿ, ಐರನ್ ಲೇಡಿ ಅವಾರ್ಡ್, ವಾಣಿಜ್ಯೋದ್ಯಮಿ ಪ್ರಶಸ್ತಿ, ವುಮೆನ್ ಬೂಸ್ಟಿಂಗ್ ಎಕಾನಮಿ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಯನ್ನು ಅಪೂರ್ವ ಅಗರ್ವಾಲ್ ಬಾಚಿಕೊಂಡಿದ್ದಾರೆ.