ಖಾಂಡ್ವಾ(ಜ.15): ಭಾರತೀಯ ಕರೆನ್ಸಿ ನೋಟುಗಳ ಮೇಲೆ ಲಕ್ಶ್ಮಿದೇವಿಯ ಚಿತ್ರ ಹಾಕಿದರೆ ರೂಪಾಯಿ ಮೌಲ್ಯ ವೃದ್ದಿಸಲಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸ್ವಾಮಿ ವಿವೇಕಾನಂದ ವ್ಯಾಖ್ಯಾನ್ ಮಾಲಾ ಎಂಬ ಉಪನ್ಯಾಸ ಸರಣಿ ಉದ್ದೇಶಿಸಿ ಮಾತನಾಡಿದ ಸ್ವಾಮಿ, ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿದೇವಿಯ ಚಿತ್ರ ಹಾಕಿದರೆ ಡಾಲರ್ ಎದುರು ರೂಪಾಯಿ ಮೌಲ್ಯ ವೃದ್ಧಿಸಲಿದೆ ಎಂದು ಹೇಳಿದರು.

ಇಂಡೋನೇಷ್ಯಾದ ಕರೆನ್ಸಿಯಲ್ಲಿ ಮುದ್ರಿಸಲಾದ ಗಣೇಶನ ಚಿತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಸ್ವಾಮಿ, ಪ್ರಧಾನಿ ಮೋದಿ ಈ ಪ್ರಶ್ನೆಗೆ ಉತ್ತರಿಸಬಲ್ಲರು ಎಂದು ಹೇಳಿದರು.

ದೇಶದ ಅರ್ಥಮಂತ್ರಿಗೆ ಅರ್ಥಶಾಸ್ತ್ರವೇ ಗೊತ್ತಿಲ್ಲ: ಸ್ವಾಮಿ ವ್ಯಂಗ್ಯ!

ಒಂದು ವೇಳೆ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿದೇವಿ ಚಿತ್ರ ಹಾಕುವ ಕುರಿತು ಪ್ರಧಾನಿ ಮೋದಿ ನಿರ್ಣಯ ಕೈಗೊಂಡರೆ ಯಾವು ಅದಕ್ಕೆ ಬೆಂಬಲ ನೀಡುವುದಾಗಿ ಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಮರ ಮತ್ತು ಹಿಂದೂಗಳ ಡಿಎನ್‌ಎ ಬ್ರಾಹ್ಮಣರು ಮತ್ತು ದಲಿತರ ಡಿಎನ್‌ಎಗಳಂತಿದೆ ಎಂದು ಹೇಳಿದ ಸ್ವಾಮಿ, ಮುಸ್ಲಿಮರೂ ಕೂಡ ಹಿಂದೂ ಧರ್ಮದ ಭಾಗ ಎಂದು ಅಭಿಪ್ರಾಯಟ್ಟರು.

ಕಹಿ ಸತ್ಯ ಕೇಳುವ ಮನೋಭಾವ ಇರಲಿ: ಸ್ವಾಮಿ ಹೇಳಿಕೆಗೆ ಮೋದಿ ತಲೆ ಕೆದರಿಕೊಳ್ಳದಿರಲಿ!

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿ ಮಾತನಾಡಿದ ಸ್ವಾಮಿ, ಸಿಎಎ ಜಾರಿಗೆ ಈ ಹಿಂದೆಯೇ ಕಾಂಗ್ರೆಸ್ ಹಾಗೂ ಮಹಾತ್ಮಾ ಗಾಂಧಿ ಒತ್ತಾಯಿಸಿದ್ದರು ಎಂದು ಹೇಳಿದರು.