Asianet Suvarna News Asianet Suvarna News

ಕಷ್ಟ ಯಾರಿಗ್ ಬರೋಲ್ಲ ಹೇಳಿ, ಇಂಥ ದೃತಿಗೆಡದ ನಾರಿ ಎಲ್ಲರಿಗೂ ಆಗ್ತಾರೆ ಮಾದರಿ!

ಅನೇಕ ಬಾರಿ ಸಮಯ ನಮ್ಮನ್ನು ಬದಲಿಸುತ್ತದೆ. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡ್ರೆ ಯಶಸ್ಸಿನ ದಾರಿ ಸುಲಭವಾಗುತ್ತದೆ. ಕಷ್ಟದ ಸಮಯದಲ್ಲೂ ದೃತಿಗೆಡದೆ ದಿಟ್ಟ ಹೆಜ್ಜೆಯಿಟ್ಟ ಈ ಮಹಿಳೆ ಎಲ್ಲರಿಗೂ ಮಾದರಿ.
 

Story Of Krishna Yadav Business Woman
Author
First Published Nov 7, 2022, 4:15 PM IST

ಜೀವನದಲ್ಲಿ ಕಷ್ಟ ಬಂದಾಗ ಕುಗ್ಗಬಾರದು, ನುಗ್ಗಿ ನಡೆದಾಗ ಮಾತ್ರ ಯಶಸ್ಸು ಸಾಧ್ಯ. ವಯಸ್ಸಾದ್ಮೇಲೂ, ಕಷ್ಟದ ಜೀವನದಲ್ಲೂ ಧೈರ್ಯ ಕಳೆದುಕೊಳ್ಳದೆ ಕೆಲಸ ಮಾಡಿದ್ರೆ ಮುಂದಿನ ದಾರಿ ಸುಗಮವಾಗುತ್ತದೆ. ಕಷ್ಟದಲ್ಲಿದ್ದಾಗ ಮನಸ್ಸು ಚಂಚಲಗೊಳ್ಳುತ್ತದೆ. ಏನು ಮಾಡ್ಬೇಕು ತಿಳಿಯೋದಿಲ್ಲ. ಆದ್ರೆ ಶಾಂತವಾದ ಮನಸ್ಸಿನಿಂದ ದೃಢ ನಿರ್ಧಾರ ತೆಗೆದುಕೊಂಡು ಕೆಲಸ ಶುರು ಮಾಡಿದ್ರೆ ಭವಿಷ್ಯ ಉಜ್ವಲವಾಗುತ್ತದೆ. ಕೆಲವೊಮ್ಮೆ ಒಂದು ಸಣ್ಣ ಆಲೋಚನೆಯು ಜಗತ್ತನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿರುತ್ತದೆ. ಇಂದು ನಾವು ಸಣ್ಣ ಆಲೋಚನೆಯೊಂದಿಗೆ, ಧೈರ್ಯ ಮತ್ತು ಉತ್ಸಾಹದಿಂದ ಮುನ್ನುಗ್ಗಿ ಉದ್ಯಮ ಕ್ಷೇತ್ರದಲ್ಲಿ ಮೇಲುಗೈ ಸಾಧಿಸಿದ  ಕೃಷ್ಣ ಯಾದವ್ ಕಥೆಯನ್ನು ನಿಮಗೆ ಹೇಳ್ತೇವೆ.

ಮಹಿಳೆಯರಿಗೆ ಈಕೆ ಮಾದರಿ: ಉತ್ತರ ಪ್ರದೇಶ (Uttar Pradesh)ದ ಕೃಷ್ಣ ಯಾದವ್ (Krishna Yadav) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗ್ತಿದ್ದಾರೆ. ಅವರ ಬದುಕು, ನೊಂದ, ಸಾಧನೆ ಮಾಡಬೇಕೆಂಬ, ಕಷ್ಟ (Difficult) ದಲ್ಲಿರುವ ಮಹಿಳೆಯರಿಗೆ ಮಾದರಿಯಾಗಿದೆ. ಕೇವಲ 500 ರೂಪಾಯಿಯಲ್ಲಿ ತನ್ನ ಬದುಕಿಗೆ ಹೊಸ ಆಯಾಮ ನೀಡಿದ ರೀತಿ ನಮ್ಮನ್ನು ಬಡಿದೆಬ್ಬಿಸುತ್ತದೆ. 

ಕಷ್ಟದಲ್ಲೂ ಧೈರ್ಯ ಕಳೆದುಕೊಳ್ಳದ  ಕೃಷ್ಣ: ಪುಟ್ಟ ಗ್ರಾಮದ ಕೃಷ್ಣ ಅವರ ಪತಿ ಅನಾರೋಗ್ಯಕ್ಕೆ ಒಳಗಾಗಿದ್ದರಂತೆ. ಆಗ ಕೃಷ್ಣ ಮೈಮೇಲೆ ಮನೆ ಜವಾಬ್ದಾರಿ ಬಿದ್ದಿತ್ತಂತೆ. ಹಾಗಾಗಿ ಕೃಷ್ಣ ಕುಟುಂಬ ಸಮೇತ ಹಳ್ಳಿಯಿಂದ ದೆಹಲಿಗೆ ಶಿಫ್ಟ್ ಆಗಿದ್ದರಂತೆ. ಮಕ್ಕಳು, ಮನೆ ಹಾಗೂ ಗಂಡನ ಅನಾರೋಗ್ಯ ಈ ಎಲ್ಲವನ್ನು ತೂಗಿಸಿಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಮೂರು ಪುಟ್ಟ ಮಕ್ಕಳನ್ನಿಟ್ಟುಕೊಂಡರೂ ಕೃಷ್ಣ ಎದೆಗುಂದಲಿಲ್ಲ. ಕೃಷ್ಣ ಯಾದವ್ ಹಾಗೂ ಅವರ ಪತಿ ಇಬ್ಬರೂ ಕೃಷಿ ಕುಟುಂಬದಿಂದ (Agriculture Family) ಬಂದವರು. ದೆಹಲಿಯಲ್ಲಿ ಸಣ್ಣ ಜಾಗವನ್ನು ಬಾಡಿಗೆ ತೆಗೆದುಕೊಂಡು ಅಲ್ಲಿಯೇ ಸಣ್ಣಪುಟ್ಟ ತರಕಾರಿ ಬೆಳೆದಿದ್ದರಂತೆ. ತರಕಾರಿ ಮಾರಾಟ ಮಾಡಿ ಜೀವನ ನಡೆಸಲು ಶುರು ಮಾಡಿದ್ದರಂತೆ. 

Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ?

ಜೀವನ ಬದಲಿಸಿದ ಉಪ್ಪಿನಕಾಯಿ : 2001ರಲ್ಲಿ ಕೃಷ್ಣ, 3 ತಿಂಗಳ ಆಹಾರ ಸಂಸ್ಕರಣಾ ತರಬೇತಿಗೆ (Food Processing Training) ಹಾಜರಾಗಿದ್ದರಂತೆ. ಅಲ್ಲಿ 2 ರೀತಿಯ ಉಪ್ಪಿನಕಾಯಿಗಳನ್ನು ಮಾಡಲು ಕಲಿತರಂತೆ. ಇದಾದ ನಂತರ 3000 ರೂಪಾಯಿಗೆ ಉಪ್ಪಿನಕಾಯಿ (Pickle) ಮಾಡಿ ಅದನ್ನು 5250 ರೂಪಾಯಿಗೆ ಮಾರಾಟ ಮಾಡಿದ್ದರಂತೆ. ಇದು ನಮಗೆ ದೊಡ್ಡ ಮೊತ್ತವಲ್ಲದೇ ಇರಬಹುದು ಆದ್ರೆ ಕೃಷ್ಣಗೆ ಇದು ದೊಡ್ಡ ಮೊತ್ತವಾಗಿತ್ತಂತೆ. ಇಷ್ಟೇ ಅಲ್ಲ ಇದೇ ಉದ್ಯೋಗವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದಿದ್ದರಂತೆ ಕೃಷ್ಣ. ಹಾಗಾಗಿ ಉಪ್ಪಿನಕಾಯಿ ಸಿದ್ಧಪಡಿಸಿ ಅದನ್ನು ಮಾರಾಟ ಮಾಡಲು ಆರಂಭಿಸಿದ್ದರಂತೆ. ಪತಿ, ಗಲ್ಲಿ ಗಲ್ಲಿಯನ್ನು ಸುತ್ತಿ ಉಪ್ಪಿನಕಾಯಿ ನೀಡಿದ್ರೆ ಕೃಷ್ಣ ಸಣ್ಣ ಜಾಗವನ್ನು ಬಾಡಿಗೆ ಪಡೆದು ಉಪ್ಪಿನಕಾಯಿ (Pickles) ಅಂಗಡಿಯನ್ನು ತೆರೆದಿದ್ದರಂತೆ. 

60ಕ್ಕೇ ಗೃಹೋದ್ಯಮದಲ್ಲಿ ಯಶಸ್ಸು ಕಂಡ ನಾಗಮಣಿ ಅವರಿಗೀಗ ವಯಸ್ಸು 88

ಯಾವುದೇ ಬಾಕ್ಸ್ ಅಥವಾ ಕವರ್ ನಲ್ಲಿ ಪ್ಯಾಕ್ ಮಾಡದ ಕಾರಣ ಆರಂಭದಲ್ಲಿ ಅದನ್ನು ಖರೀದಿ ಮಾಡಲು ಜನರು ಹಿಂದೇಟು ಹಾಕ್ತಿದ್ದರಂತೆ. ಆದ್ರೆ ಕೃಷ್ಣ ಮತ್ತವರ ಪತಿ ಛಲ ಬಿಡಲಿಲ್ಲ. ನಿಧಾನವಾಗಿ ಉಪ್ಪಿನಕಾಯಿಗೆ ಬೇಡಿಕೆ ಬರಲು ಶುರುವಾಗಿತ್ತಂತೆ. ದೊಡ್ಡ ದೊಡ್ಡ ಆರ್ಡರ್ ಗಳು ಬರಲು ಶುರುವಾದ್ವಂತೆ. ಆರಂಭದಲ್ಲಿ ತುಂಬಾ ಕಷ್ಟವಾಗಿತ್ತು. ನಾನೇ ಉಪ್ಪಿನಕಾಯಿಗೆ ಸಂಬಂಧಿಸಿದ ಎಲ್ಲ ಕೆಲಸವನ್ನೂ ಮಾಡ್ತಿದ್ದೆ ಎನ್ನುತ್ತಾರೆ ಕೃಷ್ಣ. ನಂತ್ರ ಮೂರ್ನಾಲ್ಕು ಉತ್ಪನ್ನಗಳ ಮಾರಾಟ ಶುರು ಮಾಡಿದ್ರಂತೆ ದಂಪತಿ.ಈಗ ಕೃಷ್ಣ ನಾಲ್ಕ ಕಂಪನಿಯ ಮಾಲಿಕರಾಗಿದ್ದಾರೆ. ಬೇರೆ ಬೇರೆ ಉತ್ಪನ್ನಗಳ ಕಂಪನಿ ಹೊಂದಿದ್ದು ಅವರು ಅನೇಕರಿಗೆ ಉದ್ಯೋಗ ನೀಡಿದ್ದಾರೆ.  ಕೆಲಸ ಮಾಡದೆ, ಧೈರ್ಯವಾಗಿ ಮುನ್ನುಗ್ಗದೆ, ಏನೂ ಇಲ್ಲ ಎಂದು ದಿನವಿಡಿ ಕೊರಗುತ್ತ ಕೂರುವ ಜನರಿಗೆ ಕೃಷ್ಣ ಮಾದರಿ ಎಂದ್ರೆ ತಪ್ಪಾಗಲಾರದು. 

Follow Us:
Download App:
  • android
  • ios