Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ?

ಬೆಲೆ ಎಷ್ಟಾದ್ರೇನು, ಒಳ್ಳೆ ಲಿಪ್ಸ್ಟಿಕ್ ಬೇಕು ಅನ್ನೋರು ಮಹಿಳೆಯರು. ಬ್ಯೂಟಿಪಾರ್ಲರ್ ಗೆ ಹೋದ್ರೆ ಸಾವಿರಾರು ರೂಪಾಯಿ ನೀಡುವ ಹುಡುಗಿಯರಿಗೆ ಯಾಕೆ ಇಷ್ಟೆಲ್ಲ ಹಣ ನೀಡ್ಬೇಕು ಎಂಬ ಪ್ರಶ್ನೆ ಬರೋದೆ ಅಪರೂಪ. ಕೆಲ ಟ್ಯಾಕ್ಸ್ ಬಗ್ಗೆ ಅವರು ತಿಳಿದುಕೊಳ್ಳುವ ಗೋಜಿಗೂ ಹೋಗೋದಿಲ್ಲ. 
 

What Is Pink Tax

ಜಿಎಸ್‌ಟಿ, ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯ ಬಗ್ಗೆ  ಬಹುತೇಕ ಎಲ್ಲರೂ ಕೇಳಿರ್ತಾರೆ. ಆದ್ರೆ ಪಿಂಕ್ ಟ್ಯಾಕ್ಸ್  ಹೆಸರು ಕೇಳಿರೋದು ಅಪರೂಪ. ಪಿಂಕ್ ಟ್ಯಾಕ್ಸ್ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪಿಂಕ್ ಟ್ಯಾಕ್ಸ್ ಮಹಿಳೆಗೆ ಸಂಬಂಧಿಸಿದ್ದು. ಈ ತೆರಿಗೆಯು ಮಹಿಳೆಯರ ಜೇಬಿಗೆ ಕತ್ತರಿ ಹಾಕುತ್ತದೆ. ಗುಣಮಟ್ಟದಲ್ಲಿ ರಾಜಿಯಾಗದ ಮಹಿಳೆಯರು ದುಬಾರಿ ಬೆಲೆಗೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಆದ್ರೆ ಯಾಕೆ ಈ ವಸ್ತುವಿಗೆ ಇಷ್ಟೊಂದು ಬೆಲೆ ಎಂಬುದನ್ನು ಗಮನಿಸೋದಿಲ್ಲ. ಹಾಗೆ ಈ ವಸ್ತುಗಳಿಗೆ ನಾವು ಪಿಂಕ್ಸ್ ಟ್ಯಾಕ್ಸ್ ಪಾವತಿ ಮಾಡ್ತಿದ್ದೇವೆ ಎಂಬುದು ಕೂಡ ಅವರಿಗೆ ತಿಳಿದಿರೋದಿಲ್ಲ.

ಅನೇಕ ಬಹುರಾಷ್ಟ್ರೀಯ ಕಂಪನಿ (Company) ಗಳು ಮಹಿಳೆಯರ ಅಗತ್ಯತೆಗಳ ಉತ್ಪನ್ನಗಳ ಮೇಲೆ ತೆರಿಗೆ (Tax) ವಿಧಿಸುತ್ತವೆ. ಆದರೆ ಪುರುಷರ ಉತ್ಪನ್ನಗಳ ಮೇಲೆ ಈ ತೆರಿಗೆಯನ್ನು ಕಂಪನಿಗಳು ವಿಧಿಸುವುದಿಲ್ಲ. ಯಾಕೆ ಕಂಪನಿಗಳು ಮಹಿಳೆಯರ ಉತ್ಪನ್ನ (Product) ಗಳಿಗೆ ಮಾತ್ರ ಪಿಂಕ್ ಟ್ಯಾಕ್ಸ್ (Pink Tax) ವಿಧಿಸುತ್ತವೆ ಎಂಬುದನ್ನು ನಾವಿಂದು ಹೇಳ್ತೇವೆ.  

ಪಿಂಕ್ ಟ್ಯಾಕ್ಸ್ ಅಂದರೇನು? : ಪಿಂಕ್ ಟ್ಯಾಕ್ಸ್ ಅನ್ನು ಸರ್ಕಾರ (Govt) ವಿಧಿಸೋದಿಲ್ಲ ಎಂಬುದು ನಿಮಗೆ ತಿಳಿದಿರಲಿ. ಇದು ಸರ್ಕಾರದ ಯಾವುದೇ ತೆರಿಗೆ ಅಡಿ ಬರೋದಿಲ್ಲ. ಪಿಂಕ್ ಟ್ಯಾಕ್ಸ್, ಕಂಪನಿಗಳಿಗೆ ಸಂಬಂಧಿಸಿದ್ದಾಗಿದೆ. ಕಂಪನಿಗಳು ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ವಿಧಿಸಿ ಈ ಮೂಲಕ ಲಾಭ ಪಡೆಯುತ್ತವೆ. ಈ ಪಿಂಕ್ ಟ್ಯಾಕ್ಸನ್ನು ಮಹಿಳೆಯರು ತಮ್ಮ ಸರಕು ಮತ್ತು ಸೇವೆಗಳಿಗೆ ಪಾವತಿಸಬೇಕಾಗುತ್ತದೆ. ಇಲ್ಲಿಯೂ ಲಿಂಗ ತಾರತಮ್ಯ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದ್ರೆ ಪಿಂಕ್ ಟ್ಯಾಕ್ಸ್ ಬರೀ ಮಹಿಳೆಯರ ಉತ್ಪನ್ನಗಳಿಗೆ ಮಾತ್ರ ಸೀಮಿತವಾಗಿರುತ್ತದೆ.  

Personal Finance: ಪತ್ನಿ ಭವಿಷ್ಯ ಭದ್ರವಾಗ್ಬೇಕೆಂದ್ರೆ ಮಾಡಿ ಇಲ್ಲಿ ಹೂಡಿಕೆ

ಕಂಪನಿ ಸುಗಂಧ ದ್ರವ್ಯ, ಹೇರ್ ಆಯಿಲ್ (Hair Oil), ಚಪ್ಪಲಿ,  ಬ್ಯಾಮ್ ಮತ್ತು ಬಟ್ಟೆ ಸೇರಿದಂತೆ ಅನೇಕ ವಸ್ತುಗಳನ್ನು ಮಹಿಳೆಯರಿಗಾಗಿಯೇ  ವಿನ್ಯಾಸಗೊಳಿಸುತ್ತದೆ. ಮಹಿಳೆಯರಿಗಾಗಿ ವಿನ್ಯಾಸಗೊಳಿಸಿದ ಆ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಮಹಿಳೆಯರ ವೈಯಕ್ತಿಕ ಆರೈಕೆಗೆ ಸಂಬಂಧಿಸಿದ ವಸ್ತುಗಳ ಮೇಲೆ ಪಿಂಕ್ ಟ್ಯಾಕ್ಸನ್ನು ಹೆಚ್ಚಿನ ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತದೆ. ಮಹಿಳೆಯರ ಉತ್ಪನ್ನಗಳ ಮೇಲೆ ಶೇಕಡಾ 7ರಷ್ಟು ಪಿಂಕ್ ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ. ಅದೇ ವೈಯಕ್ತಿಕ ಆರೈಕೆ ಉತ್ಪನ್ನಗಳ ವಿಷ್ಯ ಬಂದಾಗ ಇದು ಶೇಕಡಾ 13ರಷ್ಟಿರುತ್ತದೆ.  ಉದಾಹರಣೆಗೆ, ಸಲೂನ್‌ (Salon) ಗಳಂತಹ ಅನೇಕ ಸ್ಥಳಗಳಲ್ಲಿ  ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಶುಲ್ಕ (Fee) ವಿಧಿಸಲಾಗುತ್ತದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ಬಾಡಿ ವಾಶ್, ಸೋಪ್, ಕ್ರೀಮ್ ಬೆಲೆಗಳು ದುಬಾರಿಯಾಗಿರೋದನ್ನು ನೀವು ಗಮನಿಸಬಹುದು. ಇದಲ್ಲದೆ ಕೂದಲು ಕತ್ತರಿಸಲು ಕೂಡ ಪುರುಷರಿಗಿಂತ ಮಹಿಳೆಯರು ಹೆಚ್ಚು ಹಣ ನೀಡ್ತಾರೆ. 

Personal Finance : ಖರ್ಚು ಮಾಡಿದ್ದು ಸಾಕು, ನವೆಂಬರ್ ನಲ್ಲಿ ಉಳಿತಾಯ ಶುರು ಮಾಡಿ..

ಮಹಿಳೆಯರು ಯಾಕೆ ಈ ಪಿಂಕ್ ಟ್ಯಾಕ್ಸ್ ಪಾವತಿಸಬೇಕು? :  ಯಾವಾಗ್ಲೂ ಮಹಿಳೆಯರ ಉತ್ಪನ್ನಗಳು ದುಬಾರಿಯಾಗಿರುತ್ತವೆ. ಕಂಪನಿಗಳು ಆರಂಭದಲ್ಲಿಯೇ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುತ್ತದೆ. ಇದಕ್ಕೆ ಕಾರಣ ಮಹಿಳೆಯರೇ ಅಂದ್ರೆ ನೀವು ನಂಬ್ಲೇಬೇಕು. ಸಾಮಾನ್ಯವಾಗಿ ಮಹಿಳೆಯರು ಪ್ರೈಸ್ ಸೆನ್ಸಿಟಿವ್ ಆಗಿರೋದಿಲ್ಲ. ಬೆಲೆ ಬಗ್ಗೆ ಹೆಚ್ಚು ಸೂಕ್ಷ್ಮತೆ ಹೊಂದಿರೋದಿಲ್ಲ. ಅವರು ಬೆಲೆಗೆ ಅಂಟಿಕೊಳ್ಳದ ಕಾರಣ, ಇಷ್ಟವಾಗುವ ಉತ್ಪನ್ನಗಳನ್ನು ದುಬಾರಿ ಬೆಲೆಗೆ ಖರೀದಿಸಲು ಸಿದ್ಧವಿರುತ್ತಾರೆ. ಇದೇ ಕಾರಣಕ್ಕೆ ಕಂಪನಿಗಳು ಪುರುಷರಿಗಿಂತ ಮಹಿಳೆಯರ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುತ್ತದೆ. ಇದೇ ಕಾರಣದಿಂದ ಮಹಿಳೆಯರ ಉತ್ಪನ್ನದ ಮೇಲೆ ಕಂಪನಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಹಣ ವಸೂಲಿಕೆ ಕಂಪನಿಗಳ ಒಂದು ರೀತಿಯ ತಂತ್ರ ಇದಾಗಿದೆ ಎನ್ನಬಹುದು. ಕಂಪನಿಗಳು ಈ ಪಿಂಕ್ ಟ್ಯಾಕ್ಸ್  ಮೂಲಕ ತೆರಿಗೆ ಸಂಗ್ರಹಿಸುತ್ತವೆ.  
 

Latest Videos
Follow Us:
Download App:
  • android
  • ios