Asianet Suvarna News Asianet Suvarna News

ಅದೃಷ್ಟ ಅಂದ್ರೆ ಇದಪ್ಪಾ! ಷೇರು ಖರೀದಿಸಿ ಒಂದೇ ತಿಂಗಳಲ್ಲಿ 600 ಕೋಟಿ ರೂ.ಲಾಭ ಗಳಿಸಿದ 21 ವರ್ಷದ ವಿದ್ಯಾರ್ಥಿ

ಅದೃಷ್ಟ ಯಾವ ರೂಪದಲ್ಲಿ ಬೇಕಾದರೂ ಕೈ ಹಿಡಿಯಬಹುದು ಎಂಬುದಕ್ಕೆ ಕ್ಯಾಲಿಫೋರ್ನಿಯಾದ ಈ ಯುವಕ ಜ್ವಲಂತ ನಿದರ್ಶನ. 21 ವರ್ಷದ ಈ ಯವಕ ಇಂದು 664 ಕೋಟಿ ರೂ.ಒಡೆಯ,ಅದೂ ಬರೀ ಒಂದೇ ತಿಂಗಳಲ್ಲಿ! ಹಾಗಾದ್ರೆ ಅತೀಕಡಿಮೆ ಅವಧಿಯಲ್ಲಿಇಷ್ಟೊಂದು ಲಾಭ ತಂದುಕೊಟ್ಟ ಆ ಷೇರು ಯಾವುದು?
 

Stock market 21 year old student makes Rs 600 crores profit in just one month trading a meme stock
Author
First Published Sep 12, 2022, 2:53 PM IST

Business Desk: ಷೇರು ಮಾರುಕಟ್ಟೆ ಯಾವಾಗ ಯಾರ ಕೈ ಹಿಡಿಯುತ್ತದೆ ಎಂದು ಹೇಳೋದು ಕಷ್ಟ. ಇತ್ತೀಚಿನ ದಿನಗಳಲ್ಲಂತೂ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಶ್ರೀಮಂತ ಉದ್ಯಮಿಗಳು, ತಿಂಗಳ ವೇತನ ಪಡೆಯೋ ಉದ್ಯೋಗಿಗಳು, ಗೃಹಿಣಿಯರು, ವಿದ್ಯಾರ್ಥಿಗಳು ಕೂಡ ಷೇರು ಮಾರುಕಟ್ಟೆ ಮೇಲೆ ಆಸಕ್ತಿ ತಾಳುತ್ತಿದ್ದಾರೆ. ಇಂದು ಷೇರು ಮಾರುಕಟ್ಟೆಯ ಆಳ-ಅಗಲವನ್ನು ಅರಿಯಲು ತರಬೇತಿ ನೀಡುವ ಸಂಸ್ಥೆಗಳು ಕೂಡ ಇವೆ. ಹಿಂದೆಲ್ಲ ಷೇರು ಮಾರುಕಟ್ಟೆ ಅಂದ್ರೆ ಅಪಾಯ ಜಾಸ್ತಿ ಎಂಬ ಕಾರಣಕ್ಕೆ ಮಧ್ಯಮ ವರ್ಗದ ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿದ್ದರು. ಆದರೆ, ಇಂದು ಪರಿಸ್ಥಿತಿ ಬದಲಾಗಿದೆ. ಹೂಡಿಕೆಯಲ್ಲಿ ಅಪಾಯ ಎದುರಿಸಲು ಜನರು ಸಿದ್ಧರಾಗಿದ್ದಾರೆ. ಇದೇ ಕಾರಣಕ್ಕೆ ಷೇರು ಮಾರುಕಟ್ಟೆ ಕೂಡ ಇಂದು ಹೂಡಿಕೆಯ ನೆಚ್ಚಿನ ತಾಣವಾಗಿ ಬದಲಾಗಿದೆ. ಯಾವ ಕಂಪನಿಯ ಷೇರು ಮಾರುಕಟ್ಟೆಯಲ್ಲಿ ಚೆನ್ನಾಗಿ ಓಡುತ್ತಿದೆ? ಯಾವ ಷೇರಿನ ಮೇಲೆ ಹೂಡಿಕೆ ಮಾಡಿದ್ರೆ ಭವಿಷ್ಯದಲ್ಲಿ ಒಳ್ಳೆಯ ರಿಟರ್ನ್ಸ್ ಬರುತ್ತದೆ ಎಂಬುದನ್ನು ಲೆಕ್ಕಾಚಾರ ಹಾಕಿ ಷೇರುಗಳನ್ನು ಖರೀದಿಸುವ ಟ್ರೆಂಡ್ ಹೆಚ್ಚಿದೆ. ಕೆಲವರಂತೂ ದೀರ್ಘಾವಧಿ ಹೂಡಿಕೆಯ ಉದ್ದೇಶದಿಂದ ಕೂಡ ಷೇರುಗಳ ಮೇಲೆ ಹಣ ಹಾಕಿ ಸುಮ್ಮನಿದ್ದು ಬಿಡುತ್ತಾರೆ. ಇನ್ನೂ ಕೆಲವರು ಪ್ರತಿದಿನದ ಷೇರು ಮಾರುಕಟ್ಟೆ ಆಗುಹೋಗುಗಳನ್ನು ಗಮನಿಸಿ ಷೇರು ಖರೀದಿ, ಮಾರಾಟ ಮಾಡುತ್ತಲೇ ಇರುತ್ತಾರೆ. ಭಾರತದಲ್ಲಿ ಮಾತ್ರವಲ್ಲ, ಜಗತ್ತಿನ ಅನೇಕ ದೇಶಗಳಲ್ಲಿ ಕೂಡ ಜನರು ಷೇರಿನ ಮೇಲೆ ಹೂಡಿಕೆ ಮಾಡುತ್ತಾರೆ. ಹಾಗೆಯೇ ಕ್ಯಾಲಿಫೋರ್ನಿಯಾದ ವಿದ್ಯಾರ್ಥಿಯೊಬ್ಬ ಷೇರು ಮಾರುಕಟ್ಟೆಯಲ್ಲಿ 215 ಕೋಟಿ ರೂ. ಹೂಡಿಕೆ ಮಾಡಿ ಬರೀ ಒಂದು ತಿಂಗಳಲ್ಲಿ 664 ಕೋಟಿ ರೂ. ಗಳಿಸಿದ್ದಾನೆ.

ಸೌತ್ ಕ್ಯಾಲಿಫೋರ್ನಿಯಾ (South California) ವಿಶ್ವವಿದ್ಯಾಲಯದ (University) 21 ವರ್ಷದ ವಿದ್ಯಾರ್ಥಿ ಜಾಕೆ ಫ್ರೀಮ್ಯಾನ್ (Jake Freeman) ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ (Bed Bath and Beyond company) ಷೇರುಗಳನ್ನು (Shares) ಖರೀದಿಸಿದ್ದರು, ಈ ಷೇರುಗಳ ಮೂಲಕ ಅವರು ಕೇವಲ ಒಂದೇ ತಿಂಗಳಲ್ಲಿ ಕೋಟ್ಯಂತರ ರೂಪಾಯಿ ಗಳಿಸಿದ್ದಾರೆ. 215 ಕೋಟಿ ರೂ. ಹೂಡಿಕೆ (Invest) ಮಾಡಿ ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ ಷೇರುಗಳನ್ನು ಖರೀದಿಸಿದ್ದರು. ಇದ್ರಿಂದ ಅವರು ಅಂದಾಜು 878 ಕೋಟಿ ರೂ. ಗಳಿಸಿದ್ದಾರೆ. ಅಂದರೆ  ಜಾಕೆ ಫ್ರೀಮ್ಯಾನ್ ಕೇವಲ ಒಂದು ತಿಂಗಳಲ್ಲಿ 664 ಕೋಟಿ ರೂ. ಲಾಭ ಗಳಿಸಿದ್ದಾರೆ. 

ನಿಮಗೆ ಗೊತ್ತಿಲ್ಲದೇ ಅದು, ಇದು ಅಂಥ ಸರ್ವಿಸ್ ಚಾರ್ಜ್ ಹಾಕುತ್ತೆ ಬ್ಯಾಂಕ್, ಇರಲಿ ಗಮನ

ಈ ವಿದ್ಯಾರ್ಥಿ ಬೆಡ್ ಬಾತ್ ಆಂಡ್ ಬಿಯಾಂಡ್ ಕಂಪನಿಯ 50 ಲಕ್ಷ ಷೇರುಗಳನ್ನು (Shares)ಜುಲೈನಲ್ಲಿ ಖರೀದಿಸಿದ್ದ. ಈತ ಪ್ರತಿ ಷೇರಿಗೆ 440ರೂ. ನೀಡಿ ಖರೀದಿಸಿದ್ದ.ಕೇವಲ ಒಂದು ತಿಂಗಳ ಬಳಿಕ ಜಾಕೆ ಈ ಷೇರುಗಳನ್ನು ಮಾರಾಟ ಮಾಡುವಾಗ ಪ್ರತಿ ಷೇರಿನ ಮೌಲ್ಯ  2,160ರೂ. ಆಗಿತ್ತು. 

ಶೀಘ್ರದಲ್ಲೇ Patanjali ಬ್ರ್ಯಾಂಡ್‌ಗಳ 4 ಐಪಿಒ ಪ್ರಾರಂಭಿಸಲಿರುವ ಬಾಬಾ ರಾಮ್‌ದೇವ್‌

ಜಾಕೆ ಈ ಷೇರುಗಳನ್ನು ಖರೀದಿಸಲು ತನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರಿಂದ ಹಣ ಸಾಲ ಪಡೆದಿದ್ದರು. ಹೀಗೆ ಒಟ್ಟುಗೂಡಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ತನ್ನ ಮಾಮಾನೊಂದಿಗೆ ಚರ್ಚಿಸಿ ಈ ಷೇರುಗಳ ಮೇಲೆ 200 ಕೋಟಿ ರೂ. ಹೂಡಿಕೆ ಮಾಡಿದ್ದರು. ಆದರೆ, ತಾನು ಇಷ್ಟೊಂದು ದೊಡ್ಡ ಮೊತ್ತದ ಲಾಭವನ್ನು ನಿರೀಕ್ಷಿಸಿರಲಿಲ್ಲ ಎಂದು ಜಾಕೆ ಡೈಲಿ ಮೇಲ್  (Daily Mail) ಜೊತೆಗೆ ನಡೆಸಿದ ಸಂಭಾಷಣೆಯಲ್ಲಿ ತಿಳಿಸಿದ್ದಾರೆ. ಅದಕ್ಕೇ ಹೇಳೋದು ಅದೃಷ್ಟವನ್ನು ಪಡೆದುಕೊಂಡು ಬಂದಿರಬೇಕು ಎಂದು. ಯಾರ ಅದೃಷ್ಟ ಎಲ್ಲಿ ಖುಲಾಯಿಸುತ್ತದೆ ಎಂದು ಹೇಳಲಾಗದು ಅಲ್ವಾ?

Follow Us:
Download App:
  • android
  • ios