Asianet Suvarna News Asianet Suvarna News

ಶೀಘ್ರದಲ್ಲೇ Patanjali ಬ್ರ್ಯಾಂಡ್‌ಗಳ 4 ಐಪಿಒ ಪ್ರಾರಂಭಿಸಲಿರುವ ಬಾಬಾ ರಾಮ್‌ದೇವ್‌

ಪತಂಜಲಿ ಆಯುರ್ವೇದ್, ಪತಂಜಲಿ ವೆಲ್‌ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸ್ಟೈಲ್ ಕಂಪನಿಗಳ ಐಪಿಒ ಪ್ರಾರಂಭಿಸುವುದಾಗಿ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಹಾಗೆ, ಮುಂದಿನ 5 ವರ್ಷಗಳಲ್ಲಿ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

 

 

ramdev to launch ipo of patanjali brands soon ash
Author
First Published Sep 12, 2022, 1:51 PM IST

ರಾಮ್‌ದೇವ್ ಶೀಘ್ರದಲ್ಲೇ ಪತಂಜಲಿ (Ptanjali) ಬ್ರ್ಯಾಂಡ್‌ಗಳ IPO ಅನ್ನು ಪ್ರಾರಂಭಿಸಲಿದ್ದಾರಂತೆ. ಈ ಬಗ್ಗೆ ಸ್ವತ: ಅವರೇ ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಪತಂಜಲಿ ಬ್ರ್ಯಾಂಡ್‌ಗಳ ನಾಲ್ಕು ಕಂಪನಿಗಳ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (Initial Public Offering) (ಐಪಿಒ) ಪ್ರಾರಂಭಿಸುತ್ತೇನೆ, ನಂತರ ಅದನ್ನು ಷೇರು ವಿನಿಮಯ ಕೇಂದ್ರದಲ್ಲಿ (Stock Exchange) ಪಟ್ಟಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಪತಂಜಲಿ ಆಯುರ್ವೇದ್, ಪತಂಜಲಿ ವೆಲ್‌ನೆಸ್, ಪತಂಜಲಿ ಮೆಡಿಸಿನ್ ಮತ್ತು ಪತಂಜಲಿ ಲೈಫ್‌ಸ್ಟೈಲ್ ಕಂಪನಿಗಳ ಐಪಿಒ ಪ್ರಾರಂಭಿಸುವುದಾಗಿ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಹಾಗೆ, ಮುಂದಿನ 5 ವರ್ಷಗಳಲ್ಲಿ ಕಂಪನಿಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ. 
ಈ ಮಧ್ಯೆ, 2019 ರಲ್ಲಿ, ಪತಂಜಲಿ ಆಯುರ್ವೇದ್ ರೆಸಲ್ಯೂಶನ್ ಪ್ರಕ್ರಿಯೆಯ ಅಡಿಯಲ್ಲಿ 4,350 ಕೋಟಿ ರೂ. ಗೆ ರುಚಿ ಸೋಯಾ ಕಂಪನಿಯನ್ನು ಖರೀದಿಸಿತು. ರುಚಿ ಸೋಯಾ ಕಂಪನಿಯು ಈಗಾಗಲೇ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲ್ಪಟ್ಟಿದೆ ಎಂದೂ ವರದಿಯಾಗಿದೆ. ನಂತರ, ಈ ಕಂಪನಿಯ ಹೆಸರನ್ನು ಪತಂಜಲಿ ಫುಡ್ಸ್ ಎಂದು ಬದಲಾಯಿಸಲಾಯಿತು. ಇನ್ನು, ಪತಂಜಲಿ ಫುಡ್ಸ್ ಷೇರು ಬೆಲೆ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದೂ ತಿಳಿದುಬಂದಿದೆ. ಶುಕ್ರವಾರ ಕಂಪನಿಯ ಷೇರು ಬೆಲೆ  1,380.35 ರೂ. ಆಗಿತ್ತು. ಹಾಗೂ, ವಹಿವಾಟಿನ ವೇಳೆ ಷೇರಿನ ಬೆಲೆ 1,400ಕ್ಕೆ ಏರಿತ್ತು.

ಇತ್ತೀಚೆಗೆ, ಸಂಶೋಧನಾ ಸಂಸ್ಥೆಯಾದ ಆಂಟಿಕ್ (Antique) ಸಿದ್ಧಪಡಿಸಿದ ವರದಿಯ ಪ್ರಕಾರ, ಪತಂಜಲಿ ಫುಡ್ಸ್ ಕಂಪನಿಯ ಬೆಳವಣಿಗೆಯಲ್ಲಿ ವಿಶ್ವಾಸವನ್ನು ತೋರಿಸಿದೆ ಮತ್ತು ಖರೀದಿ ರೇಟಿಂಗ್ ಅನ್ನು ಸೂಚಿಸಲಾಗಿದೆ. ಈ ಷೇರಿನ ಬೆಲೆ ₹1,725ಕ್ಕೆ ಏರಬಹುದು ಎಂದೂ ಈ ವರದಿ ಹೇಳಿದೆ. ಪತಂಜಲಿ ಫುಡ್ಸ್ ಭಾರತದಲ್ಲಿ ವೇಗವಾಗಿ ಚಲಿಸುವ ಗ್ರಾಹಕ ಸರಕುಗಳ (Fast Moving Consumer Goods) (ಎಫ್‌ಎಂಸಿಜಿ) ಸ್ಪರ್ಧಿಗಳ ಪೈಕಿ ಒಂದಾಗಿ ಹೊರಹೊಮ್ಮಿದೆ. ಅಲ್ಲದೆ,  ಇದು ಆರೋಗ್ಯಕರ ಶ್ರೇಣಿಯ ಖಾದ್ಯ ತೈಲಗಳ ಪ್ರಮುಖ ತಯಾರಕರು ಮತ್ತು ಮಾರಾಟಗಾರರಲ್ಲಿ ಸಹ ಒಂದಾಗಿದೆ. ಆಗಸ್ಟ್ 31 ರಂದು, ಕಂಪನಿಯು ಅರುಣಾಚಲ ಪ್ರದೇಶದಲ್ಲಿ ತೈಲ ತಾಳೆ ಗಿರಣಿಯನ್ನು ಸ್ಥಾಪಿಸಲು ಅಡಿಪಾಯ ಹಾಕಿತು. ನಿಯಂತ್ರಕ ಫೈಲಿಂಗ್ ಪ್ರಕಾರ, ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ನ ನಿಗ್ಲೋಕ್ ಜಿಲ್ಲೆಯ ಕೈಗಾರಿಕಾ ಬೆಳವಣಿಗೆ ಕೇಂದ್ರದಲ್ಲಿ ಗಿರಣಿ ಇದೆ. 

ಅಲೋಪಥಿ ವಿರುದ್ಧ ಬಾಬಾ ರಾಮ್‌ದೇವ್‌ ಟೀಕೆ: ಸುಪ್ರೀಂಕೋರ್ಟ್‌ ಆಕ್ರೋಶ

ಇನ್ನು, ಡಿಸೆಂಬರ್‌ ವೇಳೆಗೆ ಪತಂಜಲಿ ಫುಡ್ಸ್‌ ಕಂಪನಿ ಶೇಕಡ 6 ಹೆಚ್ಚುವರಿ ಪ್ರವರ್ತಕರ (Additional Promoters) ಪಾಲನ್ನು ಮಾರಾಟ ಮಾಡಲಿದೆ ಎಂದೂ ಮಾಧ್ಯಮವೊಂದಕ್ಕೆ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಪತಂಜಲಿ ಫುಡ್ಸ್‌ನಲ್ಲಿನ ಪಾಲನ್ನು ಮಾರಾಟ ಮಾಡುವುದು  ಕಡ್ಡಾಯ ನಿಯಮಗಳ ಭಾಗವಾಗಿದೆ.  ಇದು ಪಟ್ಟಿಮಾಡಿದ ಕಂಪನಿಯ ಹಿಡುವಳಿದಾರರನ್ನು 75% ಗೆ ಸೀಮಿತಗೊಳಿಸುತ್ತದೆ ಎಂದೂ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. ಪ್ರಸ್ತುತ, ಪ್ರವರ್ತಕರು ಪತಂಜಲಿ ಫುಡ್ಸ್‌ನಲ್ಲಿ 80% ರಷ್ಟು ಪಾಲನ್ನು ಹೊಂದಿದ್ದಾರೆ. "ನಾವು ನವೆಂಬರ್ ವೇಳೆಗೆ ಷೇರುಗಳನ್ನು ಕಡಿಮೆ ಮಾಡುವ ಯೋಜನೆಗಳನ್ನು ತರುತ್ತೇವೆ. ಈ ನಿಟ್ಟಿನಲ್ಲಿ ನಾವು ದೇಶೀಯ ಬ್ರೋಕರೇಜ್ ಸಂಸ್ಥೆ ಮೋತಿಲಾಲ್ ಓಸ್ವಾಲ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ" ಎಂದೂ ಬಾಬಾ ರಾಮ್‌ದೇವ್‌ ಹೇಳಿದ್ದಾರೆ. 

40 ರೂ. ಪೆಟ್ರೋಲ್‌ ಬಗ್ಗೆ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಮ್‌ದೇವ್‌ ಗರಂ

ಶುಕ್ರವಾರ 50,000 ಕೋಟಿ ಮಾರುಕಟ್ಟೆ ಮೌಲ್ಯವನ್ನು ಮುಟ್ಟಿದ ಪತಂಜಲಿ ಫುಡ್ಸ್ ಸಾಲ ಮುಕ್ತ ಸಂಸ್ಥೆಯಾಗಿ ಇರಲಿದೆ ಎಂದೂ ಬಾಬಾ ರಾಮ್‌ದೇವ್ ಹೇಳಿದ್ದಾರೆ. ಮತ್ತು, ನಾವು ಅದನ್ನು ವಿಶ್ವದ ಅತಿದೊಡ್ಡ ತಾಳೆ ತೋಟದ ಕಂಪನಿಯನ್ನಾಗಿ ಮಾಡಲು ಶ್ರಮಿಸುತ್ತೇವೆ. ತಾಳೆ ಎಣ್ಣೆ ವ್ಯವಹಾರದಿಂದ 2000 ಕೋಟಿ ರೂಪಾಯಿ ಲಾಭ ಗಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು. 

Follow Us:
Download App:
  • android
  • ios