2024ರ ಬಜೆಟ್‌ನಲ್ಲಿ ಯುವ ಸಮುದಾಯಕ್ಕೆ ಘೋಷಿಸಲಾದ ಐದು ಪ್ರಮುಖ ಯೋಜನೆಗಳ ಪ್ರಸ್ತುತ ಸ್ಥಿತಿಗತಿಯನ್ನು ಈ ಲೇಖನ ವಿವರಿಸುತ್ತದೆ. ಕೆಲವು ಯೋಜನೆಗಳು ಪ್ರಗತಿಯಲ್ಲಿವೆ, ಆದರೆ ಇನ್ನು ಕೆಲವು ವಿಳಂಬವಾಗಿವೆ.
ನವದೆಹಲಿ: 2025ರ ಬಜೆಟ್‌ನಲ್ಲಿ ಯುವ ಸಮುದಾಯಕ್ಕಾಗಿ ಪ್ರಮುಖ ಯೋಜನೆಗಳನ್ನು ತರಲಾಗಿದೆ. ವೈದ್ಯಕೀಯ ಕಾಲೇಜುಗಳಲ್ಲಿ ಸೀಟ್‌ಗಳ ಹೆಚ್ಚಳ, ಫೆಲೋಶಿಪ್, ಕೌಶಲ್ಯ ತರಬೇತಿಗಾಗಿ 50 ಸಾವಿರ ಅಟಲ್ ಟಿಕರಿಂಗ್ ಲ್ಯಾಬ್ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ. 2024ರ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯುವ ಸಮುದಾಯಕ್ಕಾಗಿ 5 ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಿತ್ತು. ಆ ಐದು ಯೋಜನೆಗಳು ಜಾರಿಗೆ ಬಂದಿದೆವೆಯಾ ಅಥವಾ ಇಲ್ಲವಾ ಎಂಬುದರ ಮಾಹಿತಿ ಇಲ್ಲಿದೆ.
2024ರ ಬಜೆಟ್‌ನಲ್ಲಿ ನರೇಂದ್ರ ಮೋದಿ ಸರ್ಕಾರ ಯುವಕರಿಗಾಗಿ 5 ಪ್ರಮುಖ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು. ಇದರಲ್ಲಿ 4 ಯೋಜನೆಗಳು ಪ್ರೊಸೆಸ್‌ನಲ್ಲಿವೆ. 1 ಸ್ಕೀಮ್ ಹೋಲ್ಡ್ ನಲ್ಲಿದೆ. ಆ ಐದು ಯೋಜನೆಗಳು ಯಾವವು ಎಂದು ನೋಡೋಣ ಬನ್ನಿ.
1.ಟಾಪ್ ಕಂಪನಿಗಳಲ್ಲಿ ಇಂಟರ್ನಶಿಪ್ - ಹೋಲ್ಡ್
ದೇಶದ 500 ಟಾಪ್ ಕಂಪನಿಗಳಲ್ಲಿ ಪ್ರತಿ ವರ್ಷ 20 ಲಕ್ಷ ಯುವಕರಿಗೆ ಇಂಟರ್ನಶಿಪ್ ನೀಡಲಾಗುವುದು. ಈ ವೇಳೆ ಮಾಸಿಕ 5 ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುವುದು. ಈ ಯೋಜನೆಯಿಂದ 5 ವರ್ಷದಲ್ಲಿ 1 ಕೋಟಿ ಯುವಕರಿಗೆ ತರಬೇತಿ ಸಿಗುತ್ತೆ ಎಂದು ಹೇಳಲಾಗಿತ್ತು. ಈ ತರಬೇತಿಗಾಗಿ 12ನೇ ಅಕ್ಟೋಬರ್ 2024ರಂದು ಆನ್‌ಲೈನ್ ನೋಂದಣಿ ಶುರುವಾಗಿತ್ತು. 15ನೇ ನವೆಂಬರ್‌ವರೆಗೆ 6.21 ಲಕ್ಷ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದು, ಡಿಸೆಂಬರ್ 2ರಂದು ಈ ಯೋಜನೆ ಆರಂಭಗೊಳ್ಳಬೇಕಿತ್ತು. ಆದ್ರೆ ಕಾರಣಾಂತರಗಳಿಂದ ತಡೆ ಹಿಡಿಯಲಾಗಿದೆ. ಆದ್ರೆ ಇದುವರೆಗೂ ಹೊಸ ದಿನಾಂಕ ಪ್ರಕಟವಾಗಿಲ್ಲ.
2.ಮೊದಲ ಸಂಬಳದ ಮೇಲೆ ಪ್ರೋತ್ಸಾಹ ಧನ
ತಯಾರಿಕಾ ವಲಯದಲ್ಲಿ ಮೊದಲ ಸಂಬಳ ಪಡೆಯುವ ಕಾರ್ಮಿಕರಿಗೆ ಪ್ರೋತ್ಸಾಹ (Incentives) ಸಿಗಲಿದೆ ಎಂದು ಹೇಳಲಾಗಿತ್ತು. ಉದ್ಯೋಗ ನೀಡುವ ಮತ್ತು ಉದ್ಯೋಗ ಪಡೆಯುವ ಇಬ್ಬರಿಗೂ ಸರ್ಕಾರ Incentives ನೀಡುತ್ತೆ ಎಂದು ಹೇಳಿತ್ತು. EPFOನಲ್ಲಿ ಜಮೆಯಾಗುವ 4 ವರ್ಷ ಠೇವಣಿ ಮೇಲೆ ಪ್ರೋತ್ಸಾಹಕ ಸಿಗುತ್ತೆ. ಇದರಿಂದ 30 ಲಕ್ಷ ಯುವಕರಿಗೆ ಲಾಭ ಸಿಗಲಿದೆ ಎಂದು ಸರ್ಕಾರ ಹೇಳಿತ್ತು. ಆದ್ರೆ ಈ ಯೋಜನೆ ಇನ್ನು ಆರಂಭಗೊಂಡಿಲ್ಲ.
ಮೊದಲ ಸಂಬಳ ಪಡೆಯುವ ನೌಕರರಿಗೆ EPFOನಲ್ಲಿ ನೋಂದಣಿ ಮಾಡಿಕೊಳ್ಳಲು 30ನೇ ನವೆಂಬರ್ 2024ರವರೆಗೆ ಸಮಯ ನೀಡಲಾಗಿತ್ತು. ನಂತರ ಈ ಗಡುವು ಡಿಸೆಂಬರ್ 15 ವಿಸ್ತರಣೆ ಮಾಡಲಾಗಿತ್ತು. ಮತ್ತೊಮ್ಮೆ 15ನೇ ಜನವರಿ 2025ಕ್ಕೆ ಡೆಡ್‌ಲೈನ್ ನೀಡಲಾಗಿತ್ತು. ಪ್ರೋತ್ಸಾಹ ಧನ ಎಷ್ಟಿರುತ್ತೆ ಮತ್ತು ಅದನ್ನು ಹೇಗೆ ಪಡೆದುಕೊಳ್ಳಬೇಕು ಎಂಬುದರ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
3.ಮೊದಲ ಬಾರಿಗೆ ಉದ್ಯೋಗ
ಮೊದಲ ಸಂಬಳಕ್ಕೆ ಸಮಾನವಾದ ಬೋನಸ್ ನೀಡುವ ಘೋಷಣೆ ಮಾಡಲಾಗಿತ್ತು. EPFOನಲ್ಲಿ ಮೊದಲ ಬಾರಿ ರಿಜಿಸ್ಟರ್ ಮಾಡಿಕೊಳ್ಳೋರಿಗೆ ಸರ್ಕಾರವೇ 15,000 ರೂಪಾಯಿ ನೀಡುವುದು. ಈ ಮೊತ್ತವನ್ನು ಸರ್ಕಾರ ಮೂರು ಕಂತುಗಳಲ್ಲಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುತ್ತದೆ. ತಿಂಗಳಿಗೆ 1 ಲಕ್ಷ ರೂ.ಗಿಂತಲೂ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ಈ ಯೋಜನೆ ಲಾಭ ಸಿಗುತ್ತದೆ. ಈ ಯೋಜನೆಯಿಂದ 2 ಕೋಟಿ 10 ಲಕ್ಷ ಯುವಕರಿಗೆ ಲಾಭ ಸಿಗಲಿದೆ ಎಂದು ಸರ್ಕಾರ ಹೇಳಿತ್ತು. ಆದ್ರೆ ಈ ಯೋಜನೆ ಇನ್ನೂ ಆರಂಭವಾಗಿಲ್ಲ.
ಮೊದಲ ಸಂಬಳ ಪಡೆಯುವ ನೌಕರರಿಗೆ EPFOನಲ್ಲಿ ನೋಂದಣಿ ಮಾಡಿಕೊಳ್ಳಲು 30ನೇ ನವೆಂಬರ್ 2024ರವರೆಗೆ ಸಮಯ ನೀಡಲಾಗಿತ್ತು. ನಂತರ ಈ ಗಡುವು ಡಿಸೆಂಬರ್ 15 ವಿಸ್ತರಣೆ ಮಾಡಲಾಗಿತ್ತು. ಮತ್ತೊಮ್ಮೆ 15ನೇ ಜನವರಿ 2025ಕ್ಕೆ ಡೆಡ್‌ಲೈನ್ ನೀಡಲಾಗಿತ್ತು. ಆದರೆ ಇದುವರೆಗೂ ಯಾವ ಉದ್ಯೋಗಿಗಳ ಖಾತೆಗೆ ಹಣ ಜಮೆಯಾಗಿರೋ ಕುರಿತು ಅಧಿಕೃತ ಪ್ರಕಟಣೆ ಹೊರ ಬಂದಿಲ್ಲ.
ಇದನ್ನೂ ಓದಿ: Budget 2025: ಟೆಲಿಕಾಂ & ಐಟಿ ಸೆಕ್ಟರ್‌ಗೆ 95,298 ಕೋಟಿ ಮೀಸಲಿಟ್ಟ ಸರ್ಕಾರ
4.ಉದ್ಯೋಗದಾತರಿಗೆ ಬೆಂಬಲ
ಕಳೆದ ಬಜೆಟ್‌ನಲ್ಲಿ ಉದ್ಯೋಗದಾತ ಕಂಪನಿಗಳ ಇಪಿಎಫ್ ಮರುಪಾವತಿ ಮಾಡುವ ಘೋಷಣೆ ಮಾಡಲಾಗಿತ್ತು. ಇಪಿಎಫ್‌ಒಗೆ ಹೊಸ ಉದ್ಯೋಗಿಗಳನ್ನು ಸೇರಿಸಿದ ಕಂಪನಿಗೆ ಮರುಪಾವತಿಯನ್ನು ನೀಡಲಾಗುವುದು ಎಂದು ಹೇಳಿತ್ತು. 1 ಲಕ್ಷಕ್ಕಿಂತ ಕಡಿಮೆ ಸಂಬಳ ಹೊಂದಿರುವ ಉದ್ಯೋಗಿಗಳು EPFO ಗೆ ಸೇರುವ ಮೂಲಕ ಈ ಪ್ರಯೋಜನವನ್ನು ಪಡೆಯುತ್ತಾರೆ. ಉದ್ಯೋಗದಾತರಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು ರೂ 3,000 ಮರುಪಾವತಿಯನ್ನು ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಯೋಜನೆ ಇನ್ನು ಆರಂಭವಾಗಿಲ್ಲ. 15 ಜನವರಿ 2025ರೊಳಗೆ ಹೊಸ ಉದ್ಯೋಗಿಗಳ EPFO ನೋಂದಣಿಗೆ ಅವಕಾಶ ನೀಡಲಾಗಿತ್ತು. ವರದಿಗಳ ಪ್ರಕಾರ, ಇದುವರೆಗೂ ಯಾರಿಗೂ ಹಣ ಜಮೆಯಾಗಿಲ್ಲ.
5.ಉನ್ನತ ಶಿಕ್ಷಣ
ಉನ್ನತ ಶಿಕ್ಷಣ ಪಡೆಯೋ ವಿದ್ಯಾರ್ಥಿಗಳಿಗೆ ಸರ್ಕಾರದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. 7.5 ಲಕ್ಷ ರೂ.ವರೆಗೆ ಶೇ.75ವರೆಗೆ ಸರ್ಕಾರವೇ ಗ್ಯಾರಂಟಿ ನೀಡುತ್ತದೆ. ಅಂದರೆ ಸಾಲವನ್ನು ಮರುಪಾವತಿ ಮಾಡದಿದ್ದರೆ, ಬ್ಯಾಂಕ್ ಸರ್ಕಾರದಿಂದ 75% ಹಣವನ್ನು ವಸೂಲಿ ಮಾಡುತ್ತದೆ. ಶೇ.3ರ ಬಡ್ಡಿದರದಲ್ಲಿ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದ್ರೆ ಈ ಯೋಜನೆ ಇನ್ನು ಆರಂಭವಾಗಿಲ್ಲ. 6 ನವೆಂಬರ್ 2024ರಲ್ಲಿ ಸರ್ಕಾರ ವಿದ್ಯಾಲಕ್ಷ್ಮೀ ಯೋಜನೆಗೆ ಚಾಲನೆ ನೀಡಿತ್ತು. ಫೆಬ್ರವರಿಯಲ್ಲಿ ಈ ಯೋಜನೆ ಆರಂಭಗೊಳ್ಳಲಿದೆ.
ಇದನ್ನೂ ಓದಿ: ಈ ಬಾರಿಯ ಕೇಂದ್ರ ಬಜೆಟ್‌ನಿಂದ ಆಗಲಿರುವ 3 ಮಹತ್ವದ ಬದಲಾವಣೆ ಏನು?
