ನಿರ್ಮಲಾ ಸೀತಾರಾಮನ್ 2025-26ರ ಸಾಲಿನ ಬಜೆಟ್ ಮಂಡಿಸಿದ್ದಾರೆ. ಮಹತ್ವದ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಕಲ ಘೋಷಣೆ ಮಾಡಿದ್ದಾರೆ. ಈ ಬಾರಿಯ ಬಜೆಟ್ ಮಂಡನೆ ಬಳಿಕ 3 ಪ್ರಮುಖ ಬದಲಾವಣೆಗಳು ಆಗಲಿದೆ. ಏನಿದು? 

ನವದೆಹಲಿ(ಫೆ.01) ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿದ ಕೇಂದ್ರ ಬಜೆಟ್ ಮಂಡನೆಯಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಬಜೆಟ್ ಮಂಡಿಸಿದ್ದಾರೆ. ಇದೀಗ ಎಲ್ಲೆಡೆ ತೆರಿಗೆ ವಿನಾಯಿತಿ ಕುರಿತು ಚರ್ಚೆಗಳು ನಡೆಯುತ್ತಿದೆ. ಎಷ್ಟು ತೆರಿಗೆ ವಿನಾಯಿತಿ ಸಿಕ್ಕಿದೆ, ಬದಲಾವಣೆ ಏನು ಅನ್ನೋ ಮಾತುಗಳೇ ಕೇಳಿಬರುತ್ತಿದೆ. ಪ್ರಮುಖವಾಗಿ ಈ ಬಾರಿಯ ಬಜೆಟ್ ಮಂಡನೆ ಬಳಿಕ ದೇಶದ ತೆರಿಗೆ ನೀತಿ, ಸೇರಿದಂತೆ ಕೆಲ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಯಾಗುತ್ತಿದೆ. ಈ ಪೈಕಿ ಮೂರು ಬದಲಾವಣೆ ಎಂದರೆ ಆದಾಯ ತೆರಿಗೆ ವಿನಾಯಿತಿ, ಟಿಡಿಎಸ್ ಹಾಗೂ ಸ್ಟಾರ್ಟ್ಅಪ್ ಬೂಸ್ಟರ್, ಆರೋಗ್ಯ, ಶಿಕ್ಷಣ ಸೇರಿದಂತೆ ಕೆಲ ಪ್ರಮುಖ ಕ್ಷೇತ್ರಗಳು. 

ಆದಾಯ ತೆರಿಗೆ ವಿನಾಯಿತಿ
ಹೊಸ ಆದಾಯ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. 7 ಲಕ್ಷ ರೂಪಾಯಿ ವರೆಗಿದ್ದ ತೆರಿಗೆ ವಿನಾಯಿಯನ್ನು 12 ಲಕ್ಷ ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಇದರಿಂದ 12 ಲಕ್ಷ ರೂಪಾಯಿ ವರೆಗೆ ಆದಾಯ ಇರುವ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡಬೇಕಿಲ್ಲ. ವಿಶೇಷ ಅಂದರೆ 12.75 ಲಕ್ಷ ರೂಪಾಯಿ ವರೆಗಿನ ವೇತನದಾರರಿಗೆ 75,000 ರೂಪಾಯಿ ಸ್ಟಾಂಡರ್ಡ್ ಡಿಡಕ್ಷನ್ ನೀಡಲಾಗಿದೆ. ಹೀಗಾಗಿ 12.75 ಲಕ್ಷ ರೂಪಾಯಿ ವರೆಗಿನ ವೇತನದಾರರು ತೆರಿಗೆ ವಿನಾಯಿತಿ ಲಾಭ ಪಡೆಯಲಿದ್ದಾರೆ. 

ತೆರಿಗೆ ಸ್ಲ್ಯಾಬ್ ಬದಲಾವಣೆ, ಮುಂದಿನ ವಾರ ಹೊಸ ಕಾಯ್ದೆ ಮಂಡನೆ...

2025-26ರ ಹೊಸ ಆದಾಯ ತೆರಿಗೆ ಸ್ಲ್ಯಾಬ್
0-4 ಲಕ್ಷ ರೂಪಾಯಿ ಆದಾಯ:0 %
4 ರಿಂದ 8 ಲಕ್ಷ ರೂಪಾಯಿ : 5%
8 ರಿಂದ 12 ಲಕ್ಷ ರೂಪಾಯಿ: 10 %
12 ರಿಂದ 16 ಲಕ್ಷ ರೂಪಾಯಿ:15 %
16 ರಿಂದ 20 ಲಕ್ಷ ರೂಪಾಯಿ:20 %
20 ರಿಂದ 24 ಲಕ್ಷ ರೂಪಾಯಿ: 25 %
24 ಲಕ್ಷಕ್ಕಿಂತ ಮೇಲ್ಪಟ್ಟ: 30 %

ಟಿಡಿಎಸ್, ಟಿಸಿಎಸ್ ನೀತಿಯಲ್ಲಿ ಬದಲಾವಣೆ
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆ ಸುಧಾರಣೆಗಳನ್ನು ತರಲಾಗಿದೆ. ಈ ಮೂಲಕ ತೆರಿಗೆದಾರರ ಮೇಲಿನ ಹೊರೆ ಕಡಿಮೆ ಮಾಡಲು ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಆದಾಯ ಮೂಲದಲ್ಲಿ ಕಡಿತಗೊಳಿಸುವ ಟಿಡಿಎಸ್ ತರ್ಕಬದ್ಧಗೊಳಿಲಾಗಿದೆ. ಟಿಸಿಎಸ್ ಮಿತಿಯನ್ನು 7 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ವರೆಗೆ ಹೆಚ್ಚಿಸಲಾಗಿದೆ. ಇನ್ನು ಬಾಡಿಗೆ ಮೇಲಿನ ಟಿಡಿಎಸ್ ಮಿತಿಯನ್ನು 6 ಲಕ್ಷ ರೂಪಾಯಿ ವರೆಗೆ ಏರಿಕೆ ಮಾಡಲಾಗಿದೆ. ಇದರಿಂದ ಮಧ್ಯಮ ವರ್ಗ ನಿಟ್ಟುಸಿರು ಬಿಟ್ಟಿದ್ದಾರೆ. ಶಿಕ್ಷಣ ಸಾಲದ ಮೇಲಿನ ಟಿಸಿಎಸ್ ಮಿತಿಯನ್ನು 10 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಟಿಸಿಎಸ್ ಪಾವತಿ ವಿಳಂಭವನ್ನು ಅಪರಾಧ ಎಂದು ಪರಿಗಣಿಸುವ ನೀತಿಗೆ ಬ್ರೇಕ್ ಹಾಕಲಾಗಿದೆ. ಇದೀಗ ಟಿಸಿಎಸ್ ಪಾವತಿಯನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. 

ತೆರಿಗೆದಾರರಿಗೆ ಪ್ರಧಾನಿ ಮೋದಿ ಗುಡ್ ನ್ಯೂಸ್, ₹12 ಲಕ್ಷವರೆಗೆ ಯಾವುದೇ ಆದಾಯ ತೆರಿಗೆ ಇಲ್ಲ

ಆರೋಗ್ಯ ಕ್ಷೇತ್ರದಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗಿದೆ. ಜೀವ ಉಳಿಸುವ 36 ಔಷಧಗಳ ಮೇಲಿನ ಸುಂಕವನ್ನು ಸಂಪೂರ್ಣ ಕಡಿತಗೊಳಿಸಲಾಗಿದೆ. ಸಮಾಜ ಕಲ್ಯಾಣಗಳ ಸರ್ಚಾರ್ಜ್ ಮೇಲೆ ಸದ್ಯ 82 ಟ್ಯಾರಿಫ್ ಲೈನ್ಸ್ ಅಡಿಯಲ್ಲಿ ಸುಂಕ ವಿನಾಯಿತಿ ನೀಡಲಾಗುತ್ತದೆ.

ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಇದೀಗ ಹಲವು ಬದಲಾವಣೆಗಳನ್ನು ಮಾಡಲಾಗಿದೆ.