Asianet Suvarna News Asianet Suvarna News

ನ.01ರವೆರೆಗೆ ಕಾಯಿರಿ: ಎಸ್‌ಬಿಐ ಕೊಡುವ ಕಹಿ ಸುದ್ದಿ ಏನೆಂದು ನೋಡಿರಿ!

ನ.01ಕ್ಕೆ ಕಹಿ ಸುದ್ದಿ ಕೊಡಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ| ಸಾರ್ವಜನಿಕ ವಲಯದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ| ಉಳಿತಾಯ ಖಾತೆ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಕಡಿತ| ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 10 ಬಿಪಿಎಸ್ ಕಡಿಮೆ| ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರ 30 ಬಿಪಿಎಸ್' ನಷ್ಟು ಕಡಿತ|

State Bank Of India Announces Lower Interest From November 1
Author
Bengaluru, First Published Oct 29, 2019, 4:27 PM IST
  • Facebook
  • Twitter
  • Whatsapp

ಮುಂಬೈ(ಅ.29): ಮಹತ್ವದ ಬೆಳವಣಿಗೆಯೊಂದರಲ್ಲಿ ಸಾರ್ವಜನಿಕ ವಲಯದ ಮುಂಚೂಣಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇದೇ ನವೆಂಬರ್ 1ರಿಂದ ಉಳಿತಾಯ ಖಾತೆಯ ಠೇವಣಿ ಮತ್ತು ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಮತ್ತೆ ಕಡಿತ ಮಾಡಲಿದೆ.

ಕಳೆದ ಆಗಸ್ಟ್‌ನಲ್ಲಷ್ಟೇ ಚಿಲ್ಲರೆ ದೀರ್ಘಾವಧಿಯ ಠೇವಣಿಗಳು, ಅಲ್ಪಾವಧಿ ಮತ್ತು ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರ ಕಡಿತಗೊಳಿಸಿದ್ದ ಎಸ್‌ಬಿಐ, ಇದೀಗ ಮತ್ತೆ ತನ್ನ ಬಡ್ಡಿದರ ಇಳಿಕೆ ಮಾಡುವ ನಿರ್ಧಾರ ಕೈಗೊಂಡಿದೆ.

SBI ಕ್ಯಾಶ್ ವಿತ್ ಡ್ರಾ ಲಿಮಿಟ್: ಒಂದೊಂದು ಕಾರ್ಡ್‌ಗೆ ಒಂದೊಂದು ಮೆರಿಟ್!

ಬ್ಯಾಂಕ್‌ಗೆ ಬರುವ ಹಣದ ಪ್ರಮಾಣ ಕಡಿಮೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರ ಇಳಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ. 1 ಲಕ್ಷ ರೂ.ವರೆಗಿನ ಉಳಿತಾಯ ಖಾತೆಯ ಹಣದ ಮೇಲಿನ ಬಡ್ಡಿ ದರವನ್ನು ಶೇ.3.50ರಿಂದ ಶೇ.3.25ಕ್ಕೆ ಇಳಿಸಲಾಗಿದೆ. ಅದರಂತೆ ಉಳಿತಾಯ ಖಾತೆಯ 1 ಲಕ್ಷ ರೂಪಾಯಿ ಮೇಲಿನ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಇನ್ನು ಚಿಲ್ಲರೆ ದೀರ್ಘಾವಧಿ ಠೇವಣಿ ಮೇಲಿನ ಬಡ್ಡಿ ದರ 10 ಬಿಪಿಎಸ್ ಕಡಿಮೆಯಾಗಲಿದ್ದು, ಬೃಹತ್ ಠೇವಣಿಗಳ ಮೇಲಿನ ಬಡ್ಡಿ ದರ 30 ಬಿಪಿಎಸ್' ನಷ್ಟು ಕಡಿತವಾಗಲಿದೆ ಎಂದು ಎಸ್‌ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಬಿಐ ಸಾಲ, ಠೇವಣಿ ಬಡ್ಡಿ ದರ ಮತ್ತೆ ಇಳಿಕೆ!

Follow Us:
Download App:
  • android
  • ios