ಎಸ್‌ಬಿಐ ಸಾಲ, ಠೇವಣಿ ಬಡ್ಡಿ ದರ ಮತ್ತೆ ಇಳಿಕೆ!

ಎಸ್‌ಬಿಐ ಸಾಲ, ಠೇವಣಿ ಬಡ್ಡಿ ದರ ಮತ್ತೆ ಇಳಿಕೆ| ಸಾಲದ ಮೇಲಿನ ಬಡ್ಡಿದರ ಶೇ.0.10ರಷ್ಟುಇಳಿಕೆ

SBI cuts FD rates twice in 15 days Latest fixed deposit rates here

ಮುಂಬೈ[ಸೆ.10]: ದೇಶದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪೈಕಿ ಅತಿದೊಡ್ಡ ಬ್ಯಾಂಕ್‌ ಆದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಸಾಲದ ಮೇಲಿನ ಬಡ್ಡಿದರವನ್ನು ಶೇ.0.10ರಷ್ಟುಇಳಿಕೆ ಮಾಡಿದೆ.

ಕಳೆದ ಏಪ್ರಿಲ್‌ ಬಳಿಕ ಬ್ಯಾಂಕ್‌ ಬಡ್ಡಿದರದಲ್ಲಿ ಇಳಿಕೆ ಮಾಡುತ್ತಿರುವುದು ಇದು 5ನೇ ಬಾರಿ. ಬಡ್ಡಿದರ ಇಳಿದ ಬೆನ್ನಲ್ಲೇ ಠೇವಣಿಗಳ ಮೇಲಿನ ಬಡ್ಡಿದರವೂ ಇಳಿಕೆಯಾಗಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹೆಚ್ಚಿನ ಹಣದ ಹರಿವು ಮತ್ತು ಬಡ್ಡಿದರ ಇಳಿಕೆ ಹಾದಿಯಲ್ಲಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ. ಇದೇ ವೇಳೆ ಮುಂದಿನ ದಿನಗಳಲ್ಲಿ ಬಡ್ಡಿದರ ಮತ್ತಷ್ಟು ಇಳಿಕೆಯಾಗಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

 ಬಡ್ಡಿದರವನ್ನು ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಶೇ.0.40ರಷ್ಟು ಕಡಿತಗೊಳಿಸಿದ್ದು, ಈ ಮೂಲಕ ಎಸ್‌ಬಿಐ ರಿಟೇಲ್‌ ಸಾಲದ ಬಡ್ಡಿ ದರ ಶೇ.8.25ರಿಂದ ಶೇ.8.15ಕ್ಕೆ ಇಳಿದಿದೆ.

ಆರ್‌ಬಿಐ ರೆಪೋ ದರಳ ಇಳಿಕೆಯಿಂದಾಗಿ ಎಸ್‌ಬಿಐ ಬಡ್ಡಿದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅತೀ ಕಡಿಮೆ ಬಡ್ಡಿದರ ಹೊಂದಿರುವ ಬ್ಯಾಂಕ್ ಎಂಬ ಹೆಗ್ಗಳಿಕೆಗೂ ಎಸ್‌ಬಿಐ ಪಾತ್ರವಾಗಿದೆ.

Latest Videos
Follow Us:
Download App:
  • android
  • ios