ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗುರುವಾರ ವಾಷಿಂಗ್ಟನ್ ವೈಟ್ ಹೌಸ್ ನಲ್ಲಿ ಆಯೋಜಿಸಿದ್ದ ಔತಣಕೂಟದಲ್ಲಿ ವಿಶ್ವದ ಪ್ರಮುಖ ಉದ್ಯಮಿಗಳು ಪಾಲ್ಗೊಂಡಿದ್ದರು.ಭಾರತದ ಉದ್ಯಮಿಗಳಾದ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ, ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಕೂಡ ಭಾಗವಹಿಸಿದ್ದರು. ಇನ್ನು ಗೂಗಲ್ ಸಿಇಒ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ಭಾರತೀಯ ಮೂಲದ ಪ್ರಮುಖ ಸಿಇಒಗಳು ಕೂಡ ಇದರಲ್ಲಿ ಪಾಲ್ಗೊಂಡಿದ್ದಾರೆ.
ವಾಷಿಂಗ್ಟನ್ (ಜೂ.23): ಅಮೆರಿಕ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ವೈಟ್ ಹೌಸ್ ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಔತಣಕೂಟ ಆಯೋಜಿಸಿದ್ದಾರೆ. ಈ ಔತಣಕೂಟದಲ್ಲಿ ಅಮೆರಿಕ ಹಾಗೂ ಭಾರತದ ನಡುವಿನ ಉದ್ಯಮ ಒಪ್ಪಂದಗಳನ್ನು ಇನ್ನಷ್ಟು ಬಲಗೊಳಿಸಲು ಅಮೆರಿಕ ಹಾಗೂ ಭಾರತದ ಪ್ರಮುಖ ಉದ್ಯಮಿಗಳಿಗೂ ಆಹ್ವಾನ ನೀಡಲಾಗಿದೆ. ಭಾರತದ ಪ್ರಮುಖ ಉದ್ಯಮಿಗಳಾದ ಮುಖೇಶ್ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ, ಆನಂದ್ ಮಹೀಂದ್ರಾ ಭಾಗವಹಿಸಿದ್ದಾರೆ. ಇನ್ನು ಭಾರತೀಯ ಮೂಲದ ಸಿಇಒಗಳಾದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ ಹಾಗೂ ಅಲ್ಫಾಬೆಟ್ ಇಂಕ್ ಸಿಇಒ ಸುಂದರ್ ಪಿಚೈ, ಪೆಪ್ಸಿಕೋ ಸಿಇಒ ಇಂದ್ರಾ ನೂಯಿ, ಅಡೋಬ್ ಸಿಇಒ ಶಂತನು ನಾರಾಯಣ್ ದಂಪತಿಗಳು ಕೂಡ ಈ ಔತಣಕೂಟದಲ್ಲಿ ಭಾಗವಹಿಸಿದ್ದಾರೆ. ಹಾಗೆಯೇ ಆಪಲ್ ಸಿಇಒ ಟಿಮ್ ಕುಕ್, ಜನರಲ್ ಎಲೆಕ್ಟ್ರಿಕ್ ಕೋ. ಸಿಇಒ ಲರೆ ಕುಲ್ಪ್ ಮುಂತಾದ ಜನಪ್ರಿಯ ಉದ್ಯಮ ದಿಗ್ಗಜರು ಹಾಗೂ ಕೆಲವು ಸೆಲೆಬ್ರೆಟಿಗಳು ಕೂಡ ಈ ಔತಣಕೂಟದಲ್ಲಿ ಭಾಗವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಗೌರವಾರ್ಥ ಆಯೋಜಿಸಿರುವ ಈ ಔತಣಕೂಟದಲ್ಲಿ ಎರಡೂ ರಾಷ್ಟ್ರಗಳ ಪ್ರಮುಖ ಉದ್ಯಮಿಗಳು ಭಾಗವಹಿಸಿರೋದು ಉಭಯ ರಾಷ್ಟ್ರಗಳ ನಡುವಿನ ವ್ಯಾಪಾರ-ಉದ್ಯಮ ಸಂಬಂಧವನ್ನು ಇನ್ನಷ್ಟು ಬಲಗೊಳಿಸುವ ನಿರೀಕ್ಷೆಯಿದೆ. ಅಮೆರಿಕಕ್ಕೆ ಭಾರತವನ್ನು ಉತ್ಪಾದನಾ ಹಾಗೂ ತಂತ್ರಜ್ಞಾನ ಪಾಲುದಾರನನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿ ಅವರ ಪರಿಶ್ರಮಕ್ಕೆ ಈ ಔತಣಕೂಟ ಇನ್ನಷ್ಟು ಬಲ ತುಂಬಲಿದೆ. ಜಗತ್ತಿನ ಜನಪ್ರಿಯ ಉದ್ಯಮಿಗಳ ಜೊತೆಗೆ ರಾಜತಾಂತ್ರಿಕ ಅಧಿಕಾರಿಗಳು ಕೂಡ ಭಾಗವಹಿಸಿರುವ ಕಾರಣ ಭಾರತಕ್ಕೆ ಇನ್ನಷ್ಟು ಹೂಡಿಕೆ ಹರಿದುಬರುವ ನಿರೀಕ್ಷೆ ಹೆಚ್ಚಿದೆ.
ಇನ್ನು ಔತಣಕೂಟದಲ್ಲಿ ಮನೋರಂಜನ ಕಾರ್ಯಕ್ರಮ ಕೂಡ ಇದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ಅಮೆರಿಕನ್ ವಯೋಲಿನ ವಾದಕ ಜೋಶುಹ ಬೆಲ್ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಹಾಗೆಯೇ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸ್ಥಾಪಿಸಿರುವ ದಕ್ಷಿಣ ಏಷ್ಯಾದ ಕಾಪ್ಪೆಲ್ಲಾ ಗ್ರೂಪ್ ಹಾಗೂ ಅಮೆರಿಕದ ಮರೈನ್ ಬ್ಯಾಂಡ್ ಚೇಂಬರ್ ಆರ್ಚೆಸ್ಟ್ರಕೂಡ ಕಾರ್ಯಕ್ರಮ ನೀಡಲಿದೆ.
ವಿಶೇಷ ಮೆನು
ಪ್ರಧಾನಿ ನರೇಂದ್ರ ಮೋದಿ ಅವರ ಅತಿಥ್ಯಕ್ಕೆ ವಿಶೇಷ ಮೆನು ಸಿದ್ಧಪಡಿಸಲಾಗಿದೆ. ಈ ಮೆನುವನ್ನು ಪ್ರಥಮ ಮಹಿಳೆ ಜಿಲ್ ಬೈಡೆನ್ ಮಾರ್ಗದರ್ಶನದಲ್ಲಿಅತಿಥಿ ಬಾಣಸಿಗ ನೀನಾ ಕರ್ಟಿಸ್, ಶ್ವೇತಭವನದ ಕಾರ್ಯನಿರ್ವಾಹಕ ಬಾಣಸಿಗ ಕ್ರಿಸ್ ಕಾಮರ್‌ಫೋರ್ಡ್, ಶ್ವೇತಭವನದ ಕಾರ್ಯನಿರ್ವಾಹಕ ಪೇಸ್ಟ್ರಿ ಬಾಣಸಿಗ ಸೂಸಿ ಮಾರಿಸನ್ ಅವರ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ.
ಭಾರತ-ಅಮೆರಿಕ ನಡುವೆ ಮಹಾ ಒಪ್ಪಂದ: ಬಾಹ್ಯಾಕಾಶ, ರಕ್ಷಣೆ ಸೇರಿ ಹಲವು ಕ್ಷೇತ್ರಗಳಲ್ಲಿ ಸಹಭಾಗಿತ್ವ
ಇನ್ನು ಭೋಜನದ ಮೊದಲ ಕೋರ್ಸ್ ನಲ್ಲಿ ಮ್ಯಾರಿನೇಡ್ ರಾಗಿ ಮತ್ತು ಗ್ರಿಲ್ಡ್ ಕಾರ್ನ್ ಕರ್ನಲ್ ಸಲಾಡ್, ಸಂಕುಚಿತ ಕಲ್ಲಂಗಡಿ ಮತ್ತು ಟ್ಯಾಂಗಿ ಆವಕಾಡೊ ಸಾಸ್ ಇವೆ. ಹಾಗೆಯೇ ಮುಖ್ಯ ಕೋರ್ಸ್ ನಲ್ಲಿ
ಮುಖ್ಯ ಕೋರ್ಸ್‌ಗಳಲ್ಲಿ ಸ್ಟಫ್ಡ್ ಪೋರ್ಟೊಬೆಲ್ಲೊ ಅಣಬೆಗಳು ಮತ್ತು ಕೆನೆ ಕೇಸರಿ-ಇನ್ಫ್ಯೂಸ್ಡ್ ರಿಸೊಟ್ಟೊ ಸೇರಿವೆ. ಸುಮಾಕ್-ರೋಸ್ಟೆಡ್ ಸೀ ಬಾಸ್, ಲೆಮನ್-ಡಿಲ್ ಮೊಸರು ಸಾಸ್, ಕ್ರಿಸ್ಪಿ ಮಿಲ್ಲೆಟ್ ಕೇಕ್ಸ್ ಮತ್ತು ಸಮ್ಮರ್ ಸ್ಕ್ವಾಷ್ ಕೂಡ ಇದೆ. ಇನ್ನು ಸ್ಟ್ರಾಬೆರಿ ಶಾರ್ಟ್‌ಕೇಕ್ ಅನ್ನು ಡೆಸರ್ಟ್ ಗುಲಾಬಿ ಮತ್ತು ಏಲಕ್ಕಿಯೊಂದಿಗೆ ಸಿದ್ಧಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಅಮೆರಿಕ ಪ್ರವಾಸದಲ್ಲಿದ್ದು, ಇಂದು ಕೊನೆಯ ದಿನವಾಗಿದೆ.ಶ್ವೇತಭವನದ ಓವಲ್ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರ ಸಭೆಯ ನಂತರ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದರು. ಇನ್ನು ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಹಾಗೂ ಅವರ ಪತ್ನಿ ಜಿಲ್ ಬೈಡೆನ್ ಅವರಿಗೆ ವಿಶೇಷ ಉಡುಗೊರೆಗಳನ್ನು ಕೂಡ ನೀಡಿದ್ದಾರೆ. ಮೋದಿ ಅವರಿಗೆ ಕೂಡ ಅಮೆರಿಕ ಅಧ್ಯಕ್ಷರು ವಿಶೇಷ ಉಡುಗೊರೆ ನೀಡಿ ಸತ್ಕರಿಸಿದ್ದಾರೆ.
