ಪಾಕ್, ಶ್ರೀಲಂಕಾವನ್ನು ಸಾಲದ ಹೊರೆಯಲ್ಲಿ ಮುಳುಗಿಸಿದ ಚೀನಾದಿಂದ ಬಾಂಗ್ಲಾದೇಶಕ್ಕೆ ಶಾಕ್!

* ಚೀನಾದಿಂದ ಶಾಕಿಂಗ್ ನಡೆ

* ಪಾಕಿಸ್ತಾನ, ಶ್ರೀಲಂಕಾ ಮುಳುಗಿಸಿದ ಡ್ರ್ಯಾಗನ್ ಕಣ್ಣು ಈಗ ಬಾಂಗ್ಲಾದ ಮೇಲೆ

* ಸಹಾಯ ಮಾಡುವ ನೆಪದಲ್ಲಿ ಸಾಲದ ಹೊರೆ

Chinese firms linked to CPEC projects evade tax commitments in Bangladesh pod

ಬೀಜಿಂಗ್(ಡಿ.18): ಚೀನಾ ತನ್ನ ನೆರೆಹೊರೆಯ ದೇಶಗಳನ್ನು ಸಾಲದ ಹೊರೆಗೆ ಸಿಲುಕಿಸಿ ಶೋಷಿಸುವಲ್ಲಿ ನಿರತವಾಗಿದೆ. ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಭಾರೀ ಸಾಲದ ಹೊರೆಯಲ್ಲಿ ಮುಳುಗಿಸಿರುವ ಚೀನಾ, ಈಗ ಬಾಂಗ್ಲಾದೇಶವನ್ನು ಸಮಾಧಿ ಮಾಡಲು ಸಜ್ಜಾಗಿದೆ. ಚೀನಾದ ಕಂಪನಿಗಳು ಬಾಂಗ್ಲಾದೇಶ ಕೊಳ್ಳೆ ಹೊಡೆಯಲು ನಿರತವಾಗಿವೆ. ಈ ಕಂಪನಿಗಳು ಬಾಂಗ್ಲಾದೇಶದ ನೆಲದ ಕಾನೂನುಗಳನ್ನು ಉಲ್ಲಂಘಿಸುವ ಮೂಲಕ ಸರ್ಕಾರದ ಆದಾಯಕ್ಕೆ ಭಾರಿ ನಷ್ಟವನ್ನುಂಟುಮಾಡಿದೆ.

ವಾಸ್ತವವಾಗಿ, ಚೀನಾ ತನ್ನ ನೆರೆಯ ದೇಶಗಳಲ್ಲಿ ರಸ್ತೆ ಯೋಜನೆಗಳನ್ನು ವಿಸ್ತರಿಸುತ್ತಿದೆ. ಚೈನಾ ಕಮ್ಯುನಿಕೇಷನ್ಸ್ ಕನ್ಸ್ಟ್ರಕ್ಷನ್ ಕಂಪನಿಯ ಅಂಗಸಂಸ್ಥೆಯಾದ ಚೈನಾ ರೋಡ್ ಮತ್ತು ಬ್ರಿಡ್ಜ್ ಕಾರ್ಪೊರೇಷನ್ ಬಾಂಗ್ಲಾದೇಶದಲ್ಲಿ ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ವರದಿ ಪ್ರಕಾರ, ಈ ಯೋಜನೆಗಳಿಗೆ ನಿರ್ಮಾಣ ಸಾಮಗ್ರಿಗಳ ಆಮದು ಮಾಡಿಕೊಳ್ಳುವಲ್ಲಿ ಅವ್ಯಾಹತವಾಗಿ ತೆರಿಗೆ ವಂಚನೆ ನಡೆಯುತ್ತಿದೆ. ಇದರೊಂದಿಗೆ ಭೂ ಬಳಕೆ ಕಾನೂನು ಉಲ್ಲಂಘಿಸಿ ಆದಾಯಕ್ಕೂ ಕನ್ನ ಹಾಕುತ್ತಿದ್ದಾರೆ.

ಇದು ಮೊದಲ ಬಾರಿಗೆ ಆಗುತ್ತಿಲ್ಲ

ವರದಿಯ ಪ್ರಕಾರ, ಚೀನಾದ ಕಂಪನಿಗಳು ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಇದನ್ನು ಹಲವು ಬಾರಿ ಮಾಡಿವೆ. ಮೊದಲು ಡಿಸೆಂಬರ್ 2020 ರಲ್ಲಿ, ತೆರಿಗೆ ವಂಚನೆಯ ಅನುಮಾನದ ಮೇಲೆ ಚೀನಾದ ZTE ಕಾರ್ಪೊರೇಶನ್‌ನ ಅಂಗಸಂಸ್ಥೆಯಾದ ZTE ಬಾಂಗ್ಲಾದೇಶದ ಮೇಲೆ ರಾಷ್ಟ್ರೀಯ ಕಂದಾಯ ಮಂಡಳಿಯು ತನಿಖೆಯನ್ನು ಪ್ರಾರಂಭಿಸಿತು. ಇದರ ಜೊತೆಗೆ, ಯೋಜನೆಯ ವೆಚ್ಚವನ್ನು ಹೆಚ್ಚಿಸಲು ನಿಧಿ ಕಳ್ಳತನದ ಆರೋಪದ ನಂತರ ಬಾಂಗ್ಲಾದೇಶದ ಮೂರು ಮೂಲಸೌಕರ್ಯ ಯೋಜನೆಗಳಿಂದ ಚೀನಾ ಹಿಂದೆ ಸರಿಯಬೇಕಾಯಿತು.

ಚೀನಾದ ಕಂಪನಿಗಳು ದೇಶದ ಬಜೆಟ್‌ನ ಹೆಚ್ಚಿನ ಭಾಗವನ್ನು ಕದ್ದವು

ತೆರಿಗೆ ನ್ಯಾಯ ನೆಟ್‌ವರ್ಕ್‌ನ ಅಂದಾಜಿನ ಪ್ರಕಾರ, ಬಾಂಗ್ಲಾದೇಶದ ಬಹುರಾಷ್ಟ್ರೀಯ ಕಂಪನಿಗಳು ದೇಶದ ಬಜೆಟ್‌ನ ಗಣನೀಯ ಭಾಗವನ್ನು ಕದ್ದಿವೆ. ನಾವು ಅಂಕಿಅಂಶಗಳನ್ನು ನೋಡಿದರೆ, ಈ ಕಂಪನಿಗಳು ದೇಶದ ಆರೋಗ್ಯ ಬಜೆಟ್‌ನ ಕನಿಷ್ಠ 3/5 ಭಾಗವನ್ನು ಕದ್ದಿವೆ. ಇದು ದೇಶದ ಶಿಕ್ಷಣ ಬಜೆಟ್‌ನ ಸುಮಾರು 14 ಪ್ರತಿಶತಕ್ಕೆ ಸಮಾನವಾಗಿದೆ.

ವಿಶ್ವಬ್ಯಾಂಕ್ ಕೂಡ ಅನುಮಾನ ವ್ಯಕ್ತಪಡಿಸಿದೆ, ಹಲವರನ್ನು ಕಪ್ಪುಪಟ್ಟಿಗೆ ಸೇರಿಸಿದೆ

ಇತರ ದೇಶಗಳಲ್ಲಿ ಯೋಜನೆಗಳ ಹೆಸರಿನಲ್ಲಿ ತೆರಿಗೆ ವಂಚಿಸುವ ಚೀನಾದ ಕಂಪನಿಗಳ ಬಗ್ಗೆ ವಿಶ್ವಬ್ಯಾಂಕ್ ಕೂಡ ಅನುಮಾನ ವ್ಯಕ್ತಪಡಿಸಿದೆ. ಈ ಕಂಪನಿಗಳ ವಿರುದ್ಧ ವಿಶ್ವಬ್ಯಾಂಕ್ ಅಲರ್ಟ್ ಮಾನಿಟರಿಂಗ್ ಮೋಡ್‌ನಲ್ಲಿದೆ. ವ್ಯಾಪಾರದ ಹೆಸರಿನಲ್ಲಿ, ಈ ಕಂಪನಿಗಳು ಪ್ರಪಂಚದ ಇತರ ಭಾಗಗಳಲ್ಲಿ ತೆರಿಗೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ. ವಿಶ್ವಬ್ಯಾಂಕ್ ಕೂಡ ಹಲವು ಕಂಪನಿಗಳನ್ನು ಕಪ್ಪುಪಟ್ಟಿಗೆ ಸೇರಿಸಿದೆ.

Latest Videos
Follow Us:
Download App:
  • android
  • ios