Sri Lanka Braves Forex Crisis: ತಪ್ಪದೇ ಸಾಲ ಕಟ್ಟುತ್ತೇವೆಂದು ಭರವಸೆ ನೀಡಿದ ಶ್ರೀಲಂಕಾ

  • ಶ್ರೀಲಂಕಾದಲ್ಲಿ ಹದಗೆಟ್ಟ ಆರ್ಥಿಕ ಸ್ಥಿತಿ
  • ಅಂತರರಾಷ್ಟ್ರೀಯ ಹಣಕಾಸು ನಿಧಿಯ ಬಳಿ ನೆರವು ಕೇಳುವುದಿಲ್ಲ ಎಂದ ಲಂಕಾ
  • ಆಮದು ಕಡಿಮೆ ಮಾಡಿಕೊಳ್ಳುವ ಮೂಲಕ ಸಾಲ ಕಟ್ಟುತ್ತೇವೆ ಎಂದ ಶ್ರೀಲಂಕಾ
     
Sri Lanka will not default on debt repayments despite forex crisis says finance minister basil rajapaksa gow

ಕೊಲಂಬೋ (ಡಿ.11): ಕೋವಿಡ್‌ ನೀಡಿದ ಆರ್ಥಿಕ ಶಾಕ್‌ನಿಂದ ಇನ್ನೂ ಚೇತರಿಸಿಕೊಳ್ಳದ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಸ್ಥಿತಿ ತುಂಬಾ ಹದಗೆಟ್ಟು ಹೋಗಿದೆ. ಗಂಭೀರ ಸ್ವರೂಪದ ವಿದೇಶೀ ವಿನಿಮಯ ಬಿಕ್ಕಟ್ಟು  ಎದುರಿಸುತ್ತಿದೆ. ಆದರೆ 2022ರ ಬಜೆಟ್​ ಮುಕ್ತಾಯ ಭಾಷಣದಲ್ಲಿ ಸಂಸತ್‌ನಲ್ಲಿ ಘೋಷಿಸಿರುವ ಹಣಕಾಸು ಸಚಿವರಾದ ಬಸಿಲ್ ರಾಜಪಕ್ಸ 2022ನೇ ಇಸವಿಯಲ್ಲಿ ಸಾಲ ಮರುಪಾವತಿಯನ್ನು ತಪ್ಪಿಸುವುದಿಲ್ಲ ಎಂದಿದ್ದಾರೆ. ಅಂತರರಾಷ್ಟ್ರೀಯ ಹಣಕಾಸು ನಿಧಿಯ (IMF) ಬಳಿ ಇದಕ್ಕಾಗಿ ನೆರವು ಕೇಳುವುದಿಲ್ಲ. ನಾವು ಪಾವತಿ ಮಾಡಬೇಕಾದ ಪ್ರತಿ ಡಾಲರ್​ ಅನ್ನು ನೀಡುತ್ತೇವೆ ಎಂದು ಸ್ಪಷ್ಟಪಡಿಸುತ್ತೇವೆ ದೇಶವು ಮುಖ್ಯವಾದ ವಿದೇಶೀ ವಿನಿಮಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ನಾವು ಗಂಭೀರವಾದ ಸನ್ನಿವೇಶದಲ್ಲಿ ಇದ್ದೇವೆ ಎಂದು ನನ್ನ ಬಜೆಟ್​ ಭಾಷಣದಲ್ಲಿ ಒಪ್ಪಿಕೊಂಡಿದ್ದೇನೆ ಎಂದು ಸಂಸತ್ ನಲ್ಲಿ ಹೇಳಿಕೆ ನೀಡಿದ್ದಾರೆ. 

ವಿಶ್ಲೇಷಕರು ಹೇಳಿದಂತೆ, ದ್ವೀಪರಾಷ್ಟ್ರದ ವಿದೇಶೀ ವಿನಿಮಯವು 1,587 ಮಿಲಿಯನ್ ಅಥವಾ ಒಂದು ತಿಂಗಳ ಆಮದಿಗೆ ಇಳಿಕೆ ಕಂಡಿದೆ. 2022ರ ಜನವರಿಯಲ್ಲಿ ಸರಕಾರವು 500 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಪಾವತಿ ಮಾಡಬೇಕು ಮತ್ತು ಇನ್ನೊಂದು ಬಿಲಿಯನ್ ಡಾಲರ್ ಪಾವತಿ ಜೂನ್ ಹೊತ್ತಿಗೆ ಆಗಬೇಕು. ಎಂದು ವಿರೋಧ ಪಕ್ಷದ ನಾಯಕರು ಕೇಳಿದ ಬ್ಯಾಲೆನ್ಸ್ ಆಫ್ ಪೇಮೆಂಟ್ ಕುರಿತಾದ ಪ್ರಶ್ನೆಗೆ  ಬಸಿಲ್ ರಾಜಪಕ್ಸ  ಅವರು ಉತ್ತರ ನೀಡಿದರು. ಆಮದು ಕಡಿಮೆ ಮಾಡಿಕೊಳ್ಳುವ ಮೂಲಕ ಮೀಸಲು ನಿಧಿಯನ್ನು ನಿಧಾನವಾಗಿ ಕಟ್ಟುತ್ತಾ ಸಾಗುತ್ತೇವೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿಯಿಂದ ನೆರವು ಕೇಳುವ ಪರಿಸ್ಥಿತಿ ಇಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಕಳೆದ ಅಕ್ಟೋಬರ್ ನಲ್ಲಿ ವಿದೇಶಿ ವಿನಿಮಯ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರುವ ಶ್ರೀಲಂಕಾ ಇಂಧನ ಖರೀದಿಗೆ ಭಾರತದಿಂದ ಸಾಲ ಕೇಳಿತ್ತು. ತೀವ್ರ ವಿದೇಶಿ ವಿನಿಮಯ ಬಿಕ್ಕಟ್ಟಿನ ಮಧ್ಯೆ ಕಚ್ಚಾ ತೈಲ(crude oil) ಖರೀದಿಸಲು ಭಾರತದಿಂದ ಬರೋಬ್ಬರಿ 500 ಮಿಲಿಯನ್ ಅಮೆರಿಕನ್ ಡಾಲರ್ ಸಾಲವನ್ನು ಕೇಳಿತ್ತು. ಜನವರಿಗೆ ವೇಳೆ ಶ್ರೀಲಂಕಾದಲ್ಲಿ ಇಂಧನ ಕೊರತೆ ತೀವ್ರವಾಗಿ ಕಾಡಲಿದೆ ಎಂದು ಶ್ರೀಲಂಕಾ ಇಂಧನ ಸಚಿವ ಉದಯ ಗಮ್ಮನಪಿಲಾ ಹೇಳಿದ್ದರು. 

Suspected Alien: ಫೆಸಿಫಿಕ್ ಮಹಾಸಾಗರ ಮೇಲೆ ಪೈಲೆಟ್ ಗೆ ಕಾಣಿಸ್ತಾ ಏಲಿಯನ್?

ಶ್ರೀಲಂಕಾದ ಸಿಲೋನ್ ಪೆಟ್ರೋಲಿಯಂ ಕಾರ್ಪೋರೇಶನ್ ಸಂಸ್ಥೆ ಈಗಾಗಲೇ ಬ್ಯಾಂಕ್ ಆಫ್ ಸಿಲೋನ್ ಹಾಗೂ ಪೀಪಲ್ಸ್ ಬ್ಯಾಂಕ್‌ನಲ್ಲಿ ಈಗಾಗಲೇ 24,761 ಕೋಟಿ ರೂಪಾಯಿ ಸಾಲ ಉಳಿಸಿಕೊಂಡಿದೆ. ಕಚ್ಚಾ ತೈಲ ಖರೀದಿ ಹಾಗೂ ಆಮದಿಗೆ ಈ ಸಾಲ ಪಡೆದಿತ್ತು. ಇದೀಗ ಈ ಸಾಲ ಹಿಂತಿರುಗಿಸಿದ ಕಾರಣ ಲಂಕಾ ಸರ್ಕಾರಕ್ಕೆ ಮತ್ತೆ ತೈಲ ಖರೀದಿಗೆ ಸಾಲದ ಅವಕಾಶವಿಲ್ಲ. ಹೀಗಾಗಿ ಭಾರತ ಹಾಗೂ ಶ್ರೀಲಂಕಾ ಆರ್ಥಿಕ ಸಹಕಾರದಡಿ ಸಾಲ ಕೇಳಿತ್ತು. 

Afghans Sell Body Organs: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ

ಕಾರಣ ಏನು?:ಲಂಕಾದಲ್ಲಿ ಪ್ರವಾಸೋದ್ಯಮ ಆರ್ಥಿಕತೆಯ ಪ್ರಮುಖ ಮೂಲ. 30 ಲಕ್ಷಕ್ಕೂ ಹೆಚ್ಚು ಜನರಿಗೆ ಅದು ಉದ್ಯೋಗ ಕಲ್ಪಿಸಿದೆ. ಆದರೆ 2019ರಲ್ಲಿ ಈಸ್ಟರ್‌ ದಿನ ಚಚ್‌ರ್‍ ಮೇಲೆ ನಡೆದ ಬಾಂಬ್‌ ದಾಳಿಯ ಬಳಿಕ ಪ್ರವಾಸಿಗರ ಆಗಮನ ಕುಂಠಿತವಾಗಿದೆ. ಅದರ ಬೆನ್ನಲ್ಲೇ ಒಂದೂವರೆ ವರ್ಷದಿಂದ ಕೋವಿಡ್‌ ಕಾರಣ ಪ್ರವಾಸಿಗರ ಆಗಮನ ಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹ ಮತ್ತಷ್ಟುಕುಸಿದಿದೆ. ಮತ್ತೊಂದೆಡೆ ಸಾಲದ ಪ್ರಮಾಣವೂ ಭಾರೀ ಏರಿದೆ. ಈ ವರ್ಷವೊಂದರಲ್ಲೇ ಅದು 75000 ಕೋಟಿ ರು. ವಿದೇಶಿ ಸಾಲ ಮರುಪಾವತಿ ಮಾಡಬೇಕಿತ್ತು. ಅದರಲ್ಲಿ ಅಂದಾಜು 30000 ಕೋಟಿ ರು. ಬಾಕಿ ಇದೆ. ಇದರ ಜೊತೆಗೆ ದೇಶೀಯ ಸಾಲ ಕೂಡ ಇದೆ. (1 ಅಮೆರಿಕನ್‌ ಡಾಲರ್‌ಗೆ 200 ಶ್ರೀಲಂಕಾ ರುಪಿಗೆ ಸಮ).

Latest Videos
Follow Us:
Download App:
  • android
  • ios