ಭಾರತದ ಇವಿಎಂ ವ್ಯವಸ್ಥೆ ಬಗ್ಗೆ ಉದ್ಯಮಿ ಎಲಾನ್ ಮಸ್ಕ್ ಶ್ಲಾಘನೆ
ಎಲಾನ್ ಮಸ್ಕ್ ಭಾರತದ ಚುನಾವಣಾ ವ್ಯವಸ್ಥೆ ಮತ್ತು ಒಂದೇ ದಿನ 640 ಲಕ್ಷ ಮತಗಳ ಎಣಿಕೆ ಪ್ರಕ್ರಿಯೆಯನ್ನು ಶ್ಲಾಘಿಸಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಮತ ಎಣಿಕೆ ಮುಗಿಯದಿರುವುದನ್ನು ಉಲ್ಲೇಖಿಸಿ, ಭಾರತದ ವೇಗ ಮತ್ತು ದಕ್ಷತೆಯನ್ನು ಪ್ರಶಂಸಿಸಿದ್ದಾರೆ.
ಭಾರತದಲ್ಲಿ ಇಲೆಕ್ಟ್ರಾನಿಕ್ ಮತ ಪೆಟ್ಟಿಗೆ ಹಾಗೂ ಮತದಾನ ವ್ಯವಸ್ಥೆಯ ಬಗ್ಗೆ ವಿಪಕ್ಷಗಳು ಆಗಾಗ ಆರೋಪ ಮಾಡುವುದನ್ನು ನೀವು ಕೇಳಿರಬಹುದು, ಭಾರತದ ಚುನಾವಣಾ ಆಯೋಗ ಎಷ್ಟು ಬಾರಿ ಸ್ಪಷ್ಟನೆ ನೀಡಿದರೂ ಚುನಾವಣೆ ನಡೆದಾಗಲೆಲ್ಲ, ಕಾಂಗ್ರೆಸ್ ಹಾಗೂ ಕೆಲ ಪ್ರಾದೇಶಿಕ ಪಕ್ಷಗಳು ಈ ಇಲೆಕ್ಟ್ರಿಕ್ ಮತ ಪೆಟ್ಟಿಗೆ ಸರಿ ಇಲ್ಲ ಮತ ಪೆಟ್ಟಿಗೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಆಗಾಗ ಆರೋಪ ಮಾಡುತ್ತಲೇ ಬಂದಿವೆ. ಹೀಗಿರುವಾಗ ವಿಶ್ವದ ಶ್ರೀಮಂತ ಉದ್ಯಮಿ ಹಾಗೂ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ನ್ನು ಬೆಂಬಲಿಸಿರುವ ಸ್ಪೇಸ್ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಮಾತ್ರ ಭಾರತದ ಚುನಾವಣಾ ವ್ಯವಸ್ಥೆ ಹಾಗೂ ಮತ ಪೆಟ್ಟಿಗೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಭಾರತದಲ್ಲಿ ಹೇಗೆ ಒಂದೇ ದಿನ 640 ಮತಗಳನ್ನು ಎಣಿಸಲು ಸಾಧ್ಯ, ಕ್ಯಾಲಿಫೋರ್ನಿಯಾದಲ್ಲಿ ಮತಎಣಿಕೆ ಶುರುವಾಗಿ ಇಷ್ಟು ದಿನ ಕಳೆದರು ಇನ್ನು ಮತ ಎಣಿಕೆ ಕಾರ್ಯ ಮುಗಿದಿಲ್ಲ, ನಡೆಯುತ್ತಲೇ ಇದೆ ಎಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ಅವರು ಭಾರತದ ಚುನಾವಣಾ ವ್ಯವಸ್ಥೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಪೋಸ್ಟನ್ನು 10 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ಪೋಸ್ಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲಾನ್ ಮಸ್ಕ್ ಟ್ವಿಟ್‌ಗೆ ಅನೇಕರು ಪ್ರತಿಕ್ರಿಯಿಸುತ್ತಿದ್ದಾರೆ.
ಅಂದಹಾಗೆ ಅಮೆರಿಕಾದಲ್ಲಿ ದೇಶ ಮುಂದುವರೆದಿದ್ದರು ಇಂದಿಗೂ ಬ್ಯಾಲೆಟ್ ಪೇಪರ್ ಮೂಲಕ ಮತದಾನ ಮಾಡಲಾಗುತ್ತಿದೆ.
ಒಂದೇ ದಿನದಲ್ಲಿ ಫಲಿತಾಂಶ್ ಪ್ರಕಟ ಮಾಡಿದ ಭಾರತದ ಇಲೆಕ್ಟ್ರಲ್ ಸಿಸ್ಟಂ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಎಲಾನ್ ಮಸ್ಕ್ ಇದೇ ವೇಳೆ ಎಣಿಕೆ ಶುರು ಮಾಡಿ ಇಷ್ಟು ದಿನವಾದರು ಮತ ಎಣಿಕೆ ಪೂರ್ಣಗೊಳ್ಳದ ಅಮೆರಿಕಾದ ಕ್ಯಾಲಿಫೋರ್ನಿಯಾದ ಚುನಾವಣಾ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹೌ ಇಂಡಿಯಾ ಕೌಂಟೆಡ್ 640 ಮಿಲಿಯನ್ ವೋಟ್ ಇನ್ ಡೇ ಎಂಬ ಹೆಡ್ಡಿಂಗ್ ಇರುವ ನ್ಯೂಸ್ ಲಿಂಕೊಂದನ್ನು ತಮ್ಮ ಟ್ವಿಟ್ ಜೊತೆಯಲ್ಲಿ ಎಲಾನ್ ಮಸ್ಕ್ ಶೇರ್ ಮಾಡಿಕೊಂಡಿದ್ದಾರೆ.
ಇದನ್ನು ಓದಿ: ದೊಡ್ಡ ಮುನ್ನಡೆಯ ಬಳಿಕ ಸೋಲು ಕಂಡ ಸ್ವರ ಭಾಸ್ಕರ್ ಪತಿ, ಇವಿಎಂ ಮೇಲೆ ಆರೋಪ ಮಾಡಿದ ನಟಿ
ಯಾಕೆ ಕ್ಯಾಲಿಫೋರ್ನಿಯಾ ಫಲಿತಾಂಶ ಇನ್ನೂ ಘೋಷಣೆ ಆಗಿಲ್ಲ
ಕ್ಯಾಲಿಫೋರ್ನಿಯಾ ಚುನಾವಣೆಯ ಮತ ಎಣಿಕೆ ಆರಂಭವಾಗಿ 18 ದಿನಗಳು ಕಳೆದಿವೆ. ಆದರೆ ಇನ್ನು 3 ಲಕ್ಷ ಮತ ಎಣಿಕೆ ಮಾಡಲು ಬಾಕಿ ಉಳಿದಿದೆ. ಕ್ಯಾಲಿಫೋರ್ನಿಯಾವೂ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಅಮೆರಿಕಾದ ರಾಜ್ಯವಾಗಿದ್ದು, 39 ಮಿಲಿಯನ್ ಜನ ಅಲ್ಲಿ ವಾಸ ಮಾಡ್ತಿದ್ದಾರೆ.
ಅದರಲ್ಲಿ ನವಂಬರ್ 5 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ 16 ಮಿಲಿಯನ್ ಜನ ಮತ ಚಲಾಯಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕ್ಯಾಲಿಫೋರ್ನಿಯಾ ಅತ್ಯಂತ ನಿಧಾನವಾಗಿ ಮತ ಎಣಿಕೆ ಮಾಡಿ ಫಲಿತಾಂಶ ದಾಖಲಿಸುವ ರಾಜ್ಯ ಎನಿಸಿದೆ. ಪ್ರಾಥಮಿಕವಾಗಿ ಅದರ ರಾಜ್ಯದ ದೊಡ್ಡ ಗಾತ್ರ ಮತ್ತು ಇ ಮೇಲ್ ಮತ ಎಣಿಕೆಯ ಸಂಖ್ಯೆ ಹೆಚ್ಚಳವೂ ಈ ನಿಧಾನಗತಿಯ ಮತ ಎಣಿಕೆಗೆ ಕಾರಣವಾಗಿದೆ.
ಇದನ್ನು ಓದಿ :ಹರ್ಯಾಣದ 20 ಕ್ಷೇತ್ರಗಳಲ್ಲಿ ಇವಿಎಂ ಹ್ಯಾಕ್: ಕಾಂಗ್ರೆಸ್‌ನಿಂದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ