NHPC ಲಿಮಿಟೆಡ್‌ನಿಂದ ವರ್ಕ್ ಆರ್ಡರ್ ಪಡೆದ ನಂತರ ಶಾರಿಕಾ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಷೇರುಗಳು ಶೇ.5ರಷ್ಟು ಏರಿಕೆಯಾಗಿವೆ. ಈ ಒಪ್ಪಂದವು ಜಮ್ಮು ಮತ್ತು ಕಾಶ್ಮೀರದಲ್ಲಿ 4 MW ಸಾಮರ್ಥ್ಯದ ರೂಫ್‌ಟಾಪ್ ಸೌರ ಯೋಜನೆಗಳ ಅಭಿವೃದ್ಧಿಯನ್ನು ಒಳಗೊಂಡಿದೆ.
ಬೆಂಗಳೂರು (ಜ.29): ದೇಶದ ಪ್ರಮುಖ ಸೋಲಾರ್ ಕಂಪನಿಗಳಲ್ಲಿ ಒಂದಾದ ಶಾರಿಕಾ ಎಂಟರ್‌ಪ್ರೈಸಸ್ ಲಿಮಿಟೆಡ್ (Sharika Enterprises Ltd) ಬುಧವಾರದ ವಹಿವಾಟಿನಲ್ಲಿ ಭರ್ಜರಿ ಅಪ್ಪರ್ ಸರ್ಕ್ಯೂಟ್ ಹಿಟ್ ಆಗಿದೆ. ಶೇ. 5ಷ್ಟು ಅಪ್ಪರ್ ಸರ್ಕ್ಯೂಟ್ ರೀಚ್ ಆಗಿ, 20.74 ರೂಪಾಯಿಗೆ ವಹಿವಾಟು ಮುಕ್ತಾಯ ಮಾಡಿದೆ. ಮಂಗಳವಾರ ಈ ಕಂಪನಿಯ ಷೇುಗ ಬೆಗೆ 19.76 ರೂಪಾಯಿಯಲ್ಲಿ ಮುಕ್ತಾಯವಾಗಿತ್ತು. ಶಾರಿಕಾ ಕಂಪನಿಯ ಷೇರಿನ 52 ವಾರಷದ ಗರಿಷ್ಠ ಬೆಲೆ ಪ್ರತಿ ಷೇರಿಗೆ 32.48 ರೂಪಾಯಿ ಆಗಿದ್ದರೆ, 52 ವಾರಗಳ ಕನಿಷ್ಠ 8.39 ರೂಪಾಯಿ ಆಗಿದೆ. ಸೋಲಾರ್ ಕಂಪನಿಯು 89.8 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ಭಾರತ ಸರ್ಕಾರದ ನವರತ್ನ ಉದ್ಯಮವಾದ NHPC ಲಿಮಿಟೆಡ್ ನಿಂದ ಶಾರಿಕಾ ಎಂಟರ್‌ಪ್ರೈಸಸ್ ಲಿಮಿಟೆಡ್ (SEL) ವರ್ಕ್ ಆರ್ಡರ್ ಪಡೆದುಕೊಂಡಿದ್ದೇ ಶಾರಿಕಾ ಕಂಪನಿಯ ಷೇರುಗಳು ಅಪ್ಪರ್ ಸರ್ಕ್ಯೂಟ್ ಹಿಟ್ ಆಗಲು ಕಾರಣ ಎನ್ನಲಾಗಿದೆ. ಈ ದೇಶೀಯ ಒಪ್ಪಂದವು ಜಮ್ಮು ಮತ್ತು ಕಾಶ್ಮೀರ ವಿದ್ಯುತ್ ಕೇಂದ್ರಗಳ ZONE-1: UT ನಲ್ಲಿರುವ NHPC ಲಿಮಿಟೆಡ್ ಕಟ್ಟಡಗಳಲ್ಲಿ ಒಟ್ಟು 4 MW ಸಾಮರ್ಥ್ಯದ ರೂಫ್‌ಟಾಪ್ ಸೌರ ವಿದ್ಯುತ್ ಯೋಜನೆಗಳ ಅಭಿವೃದ್ಧಿಯನ್ನು ಒಳಗೊಂಡಿದೆ. ಈ ಯೋಜನೆಯು PM ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯ ಅಡಿಯಲ್ಲಿ ಬರುತ್ತದೆ. ಒಟ್ಟು ಒಪ್ಪಂದದ ಮೌಲ್ಯವು 15,57,81,437.37 ಆಗಿದೆ. ಅಂದರೆ, 15.57 ಕೋಟಿ ರೂಪಾಯಿ. ಯೋಜನೆಯ ಕಾರ್ಯಗತಗೊಳಿಸುವ ಸಮಯವು EPC ಭಾಗಕ್ಕೆ 09 ತಿಂಗಳುಗಳು ಮತ್ತು ಒಪ್ಪಂದದ ಪ್ರಕಾರ ನಂತರದ 05 ವರ್ಷಗಳ ಸಮಗ್ರ ಕಾರ್ಯಾಚರಣೆ ಮತ್ತು ನಿರ್ವಹಣೆ ಅವಧಿಯನ್ನು ಒಳಗೊಂಡಿದೆ.
ಈ ಹಿಂದೆ, ಕಂಪನಿಗೆ ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಪವರ್‌ಗ್ರಿಡ್ ಎನರ್ಜಿ ಸರ್ವೀಸಸ್ ಲಿಮಿಟೆಡ್‌ನಿಂದ ವರ್ಕ್ ಆರ್ಡರ್ ನೀಡಲಾಗಿತ್ತು. ಈ ಒಪ್ಪಂದವು ಲಡಾಖ್ ಮತ್ತು ರಾಜಸ್ಥಾನದ ಸರ್ಕಾರಿ ಕಟ್ಟಡಗಳ ಮೇಲೆ ಹಾಗೂ ಉತ್ತರ ಪ್ರದೇಶದ ಪವರ್‌ಗ್ರಿಡ ಕಟ್ಟಡಗಳ ಮೇಲೆ ಮೇಲ್ಛಾವಣಿ ಸೌರ ವ್ಯವಸ್ಥೆಗಳ ಪೂರೈಕೆ ಮತ್ತು ಸ್ಥಾಪನೆಯನ್ನು ಒಳಗೊಂಡಿರುತ್ತದೆ. ಈ ಯೋಜನೆಯು ಪ್ರಧಾನ ಮಂತ್ರಿ ಸೂರ್ಯ ಘರ್-ಮುಫ್ತಿ ಬಿಜ್ಲಿ ಯೋಜನೆಯಡಿಯಲ್ಲಿ ಬರುತ್ತದೆ ಮತ್ತು ಇದರ ಮೌಲ್ಯ 5.74 ಕೋಟಿ ರೂಪಾಯಿ ಆಗಿದೆ. ಈ ಯೋಜನೆಯು 6 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
3 ಲಕ್ಷದ ಗಡಿ ಮುಟ್ಟಿದ ಎಲ್ಸಿಡ್ ಷೇರು, ಇದರಲ್ಲಿ ನಿಫ್ಟಿ 100ನ ಒಂದೊಂದು ಸ್ಟಾಕ್ ಖರೀದಿ ಮಾಡ್ಬಹುದು!
ಶಾರಿಕಾ ಎಂಟರ್‌ಪ್ರೈಸಸ್ ಬಗ್ಗೆ: ವಿದ್ಯುತ್ ವಲಯದಲ್ಲಿ ದಶಕಗಳ ಪರಂಪರೆಯನ್ನು ಹೊಂದಿರುವ ಶಾರಿಕಾ ಎಂಟರ್‌ಪ್ರೈಸಸ್ ಲಿಮಿಟೆಡ್, ಇತ್ತೀಚಿನ ವರ್ಷಗಳಲ್ಲಿ ಸೌರಶಕ್ತಿ ವಲಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಸರ್ಕಾರಿ ಸಂಸ್ಥೆಗಳು, ಪಿಎಸ್‌ಯುಗಳು, ಶಾಲೆಗಳು, ಖಾಸಗಿ ವಲಯಗಳು ಮತ್ತು ಹೆಚ್ಚಿನವುಗಳೊಂದಿಗೆ ಸಕ್ರಿಯವಾಗಿ ಸಹಕರಿಸುವ ಶಾರಿಕಾ ಎಂಟರ್‌ಪ್ರೈಸಸ್ ಕಳೆದ 4-5 ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಸೌರ ಪಿವಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಈ ಷೇರು 52 ವಾರಗಳ ಕನಿಷ್ಠ ಮಟ್ಟವಾದ ಪ್ರತಿ ಷೇರಿಗೆ 8.39 ರೂ.ಗಳಿಂದ 147 ಪ್ರತಿಶತದಷ್ಟು ಮಲ್ಟಿಬ್ಯಾಗರ್ ಆದಾಯವನ್ನು ನೀಡಿದೆ. ಹೂಡಿಕೆದಾರರು ಈ ಮೈಕ್ರೋ-ಕ್ಯಾಪ್ ಸ್ಟಾಕ್ ಮೇಲೆ ಕಣ್ಣಿಡಬಹದು.
Viral Video: 15 ನಿಮಿಷದಲ್ಲಿ ಬಾಚಿಕೊಂಡಷ್ಟು ಹಣ ಬೋನಸ್ ಕೊಟ್ಟ ಕಂಪನಿಯ ಮಾಲೀಕ!
Disclaimer: ಲೇಖನವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ಹೂಡಿಕೆ ಸಲಹೆಗಾಗಿ ಅಲ್ಲ.
