ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ತನ್ನ ಉದ್ಯೋಗಿಗಳಿಗೆ 95 ಕೋಟಿ ರೂಪಾಯಿ ಬೋನಸ್ ನೀಡಲು ವಿಶಿಷ್ಟ ಕಾರ್ಯಕ್ರಮ ಆಯೋಜಿಸಿತ್ತು. 15 ನಿಮಿಷಗಳಲ್ಲಿ ಎಣಿಸಲು ಸಾಧ್ಯವಾದಷ್ಟು ಹಣವನ್ನು ತೆಗೆದುಕೊಂಡು ಹೋಗಬಹುದು ಎಂಬ ಷರತ್ತು ವಿಧಿಸಲಾಗಿತ್ತು.

ನವದೆಹಲಿ (ಜ.29): ಚೀನಾದ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ ನೂರಾರು ಜನ ತುಂಬಿರುವ ಕೋಣೆಯಲ್ಲಿ ಉದ್ದನೆಯ ಮೇಜನ್ನು ಇರಿಸಲಾಗಿದ್ದು, ಅದರ ಮೇಲೆ ಚೀನಿ ನೋಟುಗಳನ್ನು ಗುಡ್ಡೆಹಾಕಲಾಗಿತ್ತು. ಕಂಪನಿಯ ಮಾಲೀಕ ತನ್ನ ಉದ್ಯೋಗಿಗಳಿಗೆ ವಿಶಿಷ್ಟ ರೀತಿಯಲ್ಲಿ ಬೋನಸ್‌ ನೀಡುವ ಮಾರ್ಗವಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಈ ವಿಡಿಯೋ ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದು, ಇಂಥ ಕಂಪನಿಯಲ್ಲಿ ನಾವು ಕೆಲಸಕ್ಕೆ ಇರಬಾರದಾಗಿತ್ತೇ ಎಂದು ಕೈಕೈ ಹಿಸುಕಿಕೊಂಡಿದ್ದಾರೆ.

ಚೀನಾದ ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ತನ್ನ ಉದ್ಯೋಗಿಗಳಿಗೆ ಈ ವಿಶಿಷ್ಠವಾದ ಬೋನಸ್ ವಿತರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಕ್ರೇನ್ ಕಂಪನಿ ಅಧಿಕಾರಿಗಳು ಮೇಜಿನ ಮೇಲೆ 11 ಮಿಲಿಯನ್ ಡಾಲರ್ ಅಂದರೆ ಸುಮಾರು 95 ಕೋಟಿ ರೂಪಾಯಿಗಳನ್ನು ಇಟ್ಟಿದ್ದರು. ಇದು ಕಂಪನಿಯ ಉದ್ಯೋಗಿಗಳಿಗೆ ನೀಡುವ ಬೋನಸ್‌. ಆದರೆ, ಅದಕ್ಕಾಗಿ ತನ್ನ ಉದ್ಯೋಗಿಗಳಿಗೆ ಏಕೈಕ ಷರತ್ತು ವಿಧಿಸಿತ್ತು. 'ಸಮಯ ಕೇವಲ 15 ನಿಮಿಷ. ನಿಮಗೆ ಎಷ್ಟು ಮೊತ್ತವನ್ನು ಈ ಸಮಯದಲ್ಲಿ ಎಣಿಸಲು ಸಾಧ್ಯವಾಗುತ್ತದೆಯೋ ಅದೆಲ್ಲವೂ ನಿಮ್ಮ ಬೋನಸ್‌' ಎಂದು ತಿಳಿಸಿತ್ತು. ಹೆನಾನ್ ಮೈನಿಂಗ್ ಕ್ರೇನ್ ಕಂಪನಿ ಈ ವಿಡಿಯೋವನ್ನು ಚೀನಾದ ಸಾಮಾಜಿಕ ಮಾಧ್ಯಮಗಳಾದ ಡ್ಯುಯಿನ್, ವೈಬೋ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ. ನಂತರ ಅದು ವೈರಲ್ ಆಗಿದೆ.

Viral Video: ಚೀನಾಕ್ಕೂ ಗೊತ್ತು ಗಾನ ಗಂಧರ್ವ ಡಾ.ರಾಜ್‌ಕುಮಾರ್ ಗತ್ತು; ಚೀನಾದ ಸೂಪರ್‌ಮಾರ್ಕೆಟ್‌ನಲ್ಲಿ ಅಣ್ಣಾವ್ರ ಸಾಂಗ್‌!

ಈ ವಿಡಿಯೋದಲ್ಲಿ ನೂರಾರು ಜನರು ಮೇಜಿನ ಮುಂದೆ ನಿಂತು ಹಣವನ್ನು ಎಣಿಕೆ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಒಬ್ಬ ಉದ್ಯೋಗಿ 15 ನಿಮಿಷಗಳಲ್ಲಿ 1,00,000 ಯುವಾನ್ (11,93,519 ಲಕ್ಷ ರೂಪಾಯಿ) ಮೌಲ್ಯದ ಹಣವನ್ನು ಎಣಿಸಿದ್ದಾರೆ ಎಂದು ವರದಿಯಾಗಿದೆ. 'ಹೆನಾನ್ ಕಂಪನಿ ವರ್ಷಾಂತ್ಯದ ಬೋನಸ್ ಆಗಿ ಕೋಟಿಗಟ್ಟಲೆ ಹಣವನ್ನು ನೀಡಿದೆ, ಉದ್ಯೋಗಿಗಳು ಎಣಿಸಲು ಸಾಧ್ಯವಾದಷ್ಟು ಹಣವನ್ನು ತೆಗೆದುಕೊಂಡು ಹೋಗಬಹುದು ಎಂದು ಹೇಳಿತ್ತು' ಎಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಬರೆಯಲಾಗಿದೆ. ವಿಡಿಯೋ ವೈರಲ್ ಆದ ನಂತರ ಹಲವು ಕಾಮೆಂಟ್‌ಗಳು ಬಂದಿವೆ. 'ನನ್ನ ಕಂಪನಿಯೂ ಹೀಗೆಯೇ. ಆದರೆ ಹಣದ ಬದಲು ಕೆಲಸದ ಭಾರವನ್ನು ನೀಡುತ್ತದೆ' ಎಂದು ಒಬ್ಬ ಯೂಸರ್‌ ಬರೆದಿದ್ದಾನೆ. 'ನನಗೂ ಈ ರೀತಿಯ ಕೆಲಸ ಇಷ್ಟ. ಆದರೆ ನನ್ನ ಕಂಪನಿಗೆ ಬೇರೆ ಯೋಜನೆಗಳಿವೆ' ಎಂದು ಮತ್ತೊಬ್ಬರು ಬರೆದಿದ್ದಾರೆ. 2023 ರಲ್ಲೂ ಹೆನಾನ್ ಮೈನಿಂಗ್ ಕಂಪನಿ ತನ್ನ ಉದ್ಯೋಗಿಗಳಿಗೆ ದೊಡ್ಡ ಮೊತ್ತದ ಬೋನಸ್ ನೀಡಿತ್ತು ಎಂದು ವರದಿಯಾಗಿದೆ.

Bengaluru: ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ, ಇನ್ಮುಂದೆ ರೈಲಲ್ಲಿ ರಶ್‌ ಇರೋದೇ ಇಲ್ಲ!

View post on Instagram