Asianet Suvarna News Asianet Suvarna News

ರೈತನ ಕೈಹಿಡಿದ ಹಸುಗಳು: ಹಾಲು ಸೆಗಣಿ ಮಾರಿಯೇ ಕೋಟಿ ಮೌಲ್ಯದ ಬಂಗಲೆ ನಿರ್ಮಿಸಿದ ರೈತ

ಹಸು ಸಾಕಿ ಕೆಟ್ಟವರಿಲ್ಲ, ಕೈ ಹಿಡಿದವರಿಗೆ ಹಸು ಕಾಮಧೇನು, ಹಾಗೆಯೇ  ಇಲ್ಲೊಬ್ಬರು ರೈತರು ಹಸುವಿನ ಹಾಲು ಮಾರಿಯೇ ದೊಡ್ಡದಾದ ಬಂಗಲೆಯೊಂದನ್ನು ನಿರ್ಮಿಸಿದ್ದು ಅದಕ್ಕೆ ಗೋಧನ್ ನಿವಾಸ್ ಎಂದು ಹೆಸರಿಟ್ಟಿದ್ದಾರೆ.

Solapur dairy farming changed Life Farmer build a bunglow worth one crore named Godhan Niwas for Paying tribute to cows akb
Author
First Published Jun 29, 2023, 7:09 PM IST

ಸೋಲಾಪುರ: ಹಸು ಸಾಕಿ ಕೆಟ್ಟವರಿಲ್ಲ, ಕೈ ಹಿಡಿದವರಿಗೆ ಹಸು ಕಾಮಧೇನು, ಹಸುವಿನ ಪಾಲನೆ ಮಾಡಿ ಅವುಗಳ ಹಾಲು ಮಾರಿಯೇ ಯೇ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟೋ ಕುಟುಂಬಗಳು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಹಾಗೆಯೇ ಇಲ್ಲೊಬ್ಬರು ರೈತರು ಹಸುವಿನ ಹಾಲು ಮಾರಿಯೇ ದೊಡ್ಡದಾದ ಬಂಗಲೆಯೊಂದನ್ನು ನಿರ್ಮಿಸಿದ್ದು ಅದಕ್ಕೆ ಗೋಧನ್ ನಿವಾಸ್ ಎಂದು ಹೆಸರಿಟ್ಟಿದ್ದಾರೆ. ಹಸುವನ್ನು ದೇವರಂತೆ ಪೂಜಿಸುವ ಇವರ ಮನೆ ದೇವರ ಕೋಣೆಯಲ್ಲಿ ಹಸುವಿನ ಫೋಟೋವಿದ್ದು, ಬಂಗಲೆಯ ತುತ್ತತುದಿಯಲ್ಲಿ ಹಸುವಿನ ಪ್ರತಿಮೆಯೊಂದನ್ನು ನಿಲ್ಲಿಸಿ ಗೋವಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಅಂದಹಾಗೆ ಈ ರೈತನ ಹೆಸರು ಪ್ರಕಾಶ ಇಮ್ಡೆ, ಸ್ಥಳೀಯರ ಪಾಲಿಗೆ ಇವರು ಬಾಬು ಎಂದೇ ಚಿರಪರಿಚಿತ ಮಹಾರಾಷ್ಟ್ರದ ಸೋಲಾಪುರ (Solapur) ಜಿಲ್ಲೆಯ ಇವರ ಸಾಹಸಗಾಥೆ ಈಗ ಹಲವರ ಪಾಲಿಗೆ ಹೈನುಗಾರಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ ಪ್ರೇರಣೆಯಾಗಿದೆ. ಕೇವಲ ಒಂದು ಹಸುವಿನಿಂದ ಈ ಉದ್ಯಮ ಅರಂಭಿಸಿದ ಪ್ರಕಾಶ್ ಆಮ್ಡೆ ಇಂದು 150 ಹಸುಗಳ ಒಡೆಯ, ಹಾಲು ಮಾತ್ರವಲ್ಲದೇ ಹಸುವಿನ ಸೆಗಣಿ (cow Dung) ಮಾರಿ ಇವರು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ.  ಸದ್ಯಕ್ಕೆ ಅವರು ಕಟ್ಟಿದ ಒಂದು ಕೋಟಿ ಮೌಲ್ಯದ ಬಂಗಲೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. 

ಮತಾಂತರ ಹುಟ್ಟಿದ್ದು ಬಾಲಿವುಡ್‌ನಿಂದ, ಮುಸ್ಲಿಮರು ಗೋ ರಕ್ಷಕರಾಗಬೇಕು; IAS ಅಧಿಕಾರಿ ನಿಯಾಝ್ ಖಾನ್!

ತಮ್ಮ ಮನೆಯ ಮೊದಲ ಹಸು ಲಕ್ಷ್ಮಿಗೆ ನಮಿಸುತ್ತ ತಮ್ಮ ದೈನಂದಿನ ಚಟುವಟಿಕೆ ಆರಂಭಿಸುವ ಪ್ರಕಾಶ್ ಆಮ್ಡೆ, ತಾವು ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸಲು ಕಾರಣವಾದ ಹಸುಗಳ ಗೌರವಾರ್ಥವಾಗಿ ತಮ್ಮ ನಿವಾಸಕ್ಕೆ ಗೋಧನ್ ಎಂದು ಹೆಸರಿಟ್ಟಿದ್ದಾರೆ.  ಪ್ರಕಾಶ್ ಇಮ್ಡೆ (Prakash Imde) ತಮಗೆ ಪಿತ್ರಾರ್ಜಿತವಾಗಿ ಬಂದ ನಾಲ್ಕು ಎಕರೆ ಪೂರ್ವಜರ ಜಮೀನು ಶುಷ್ಕವಾಗಿರುವುದರಿಂದ ಅದರಲ್ಲಿ ಕೃಷಿ ಮಾಡುವುದು ಅಸಾಧ್ಯವೆಂದು ತಿಳಿದು 1998ರಲ್ಲಿ ಮೊದಲಿಗೆ ಹಸುವಿನ ಹಾಲು ಹಾಗೂ ಸಗಣಿ ಮಾರಾಟ ಮಾಡುವ ಉದ್ಯಮ ಆರಂಭಿಸಿದರು. ಪ್ರಾರಂಭದಲ್ಲಿ ಒಂದು ಹಸುವಿನಿಂದ ಆರಂಭಿಸಿದ ಈ ಡೈರಿ ಫಾರ್ಮ್, ಪ್ರಸ್ತುತ 150 ಹಸುಗಳನ್ನು ಹೊಂದಿದ್ದು,  ದಿನಕ್ಕೆ ಸಾವಿರ ಲೀಟರ್ ಹಾಲು ಮಾರಾಟ ಮಾಡುತ್ತಿದ್ದಾರೆ. 

ಇಮ್ಡೆ ಅವರ ಇಡೀ ಕುಟುಂಬವೇ ಈ ಹೈನುಗಾರಿಕೆ (Dairy farming) ವ್ಯವಹಾರದಲ್ಲಿ ತೊಡಗಿದ್ದು, ಹಸುಗಳಿಗೆ ಮೇವುಗಳನ್ನು ತಂದು ಹಾಕುವುದರಿಂದ ಹಿಡಿದು ಹಾಲು ಕರೆದು ಹಾಲು ಮಾರುವವರೆಗೆ ಎಲ್ಲವನ್ನು ಅವರ ಕುಟುಂಬವೇ ನೋಡಿಕೊಳ್ಳುತ್ತಿದೆ.  ಇದುವರೆಗೆ ತಮ್ಮ ಮನೆಯಲ್ಲಿ ಜನಿಸಿದ ಒಂದೇ ಒಂದು ಹಸುವನ್ನು ಕೂಡ ಅವರು ಮಾರಾಟ ಮಾಡಿಲ್ಲ, ಮೊದಲ ಹಸು ಲಕ್ಷ್ಮಿ 2006 ರಲ್ಲಿ ಸಾವನ್ನಪ್ಪಿದ ನಂತರ ಅದರ ವಂಶಾವಳಿಯನ್ನು ಸಾಕುತ್ತಾ ಬಂದಿರುವ ಆಮ್ಡೆ ಇಂದು 150 ಹಸುಗಳ ಒಡೆಯ. ಜೊತೆಗೆ ಬಂಗ್ಲೆಯೊಂದರ ಅಧಿಪತಿ. 

ಈ ಹಸುಗಳಿಗೆ ದಿನಕ್ಕೆ ನಾಲ್ಕೈದು ಟನ್‌ಗಳಷ್ಟು ಹಸಿರು ಮೇವು ಬೇಕಾಗುತ್ತದೆ. ಅವರು ಸಾಧ್ಯವಾದಷ್ಟು ಮೇವನ್ನು ತಮ್ಮದೇ ಜಮೀನಿನಲ್ಲಿ ಬೆಳೆದು ಉಳಿದದ್ದನ್ನು ಹೊರಗಿನ ಮೂಲಗಳಿಂದ ಖರೀದಿಸುತ್ತಾರೆ. ಹಸುಗಳ ಸಾಕಾಣೆ ಅವರನ್ನು ಉದ್ಯಮಿಯಾಗಿ ಬದಲಾಯಿಸಿದ್ದು, ಗ್ರಾಮದ ಜನರಿಗೆ ವಿಫುಲ ಉದ್ಯೋಗವಕಾಶವನ್ನು ಈ ರೈತ ನೀಡಿದ್ದಾರೆ. ಇದರ ಜೊತೆಗೆ ಬೇರೆ ರಾಜ್ಯದವರೂ ಕೂಡ ಇಲ್ಲಿಗೆ ಆಗಮಿಸಿ ಇವರ ಉದ್ಯಮದ ಬಗ್ಗೆ ಜ್ಞಾನ ಪಡೆಯುತ್ತಾರೆ. ಒಟ್ಟಿನಲ್ಲಿ ಪ್ರಕಾಶ್ ಅವರ ಹಲವು ವರ್ಷಗಳ ಪರಿಶ್ರಮ ಇದೀಗ 1 ಕೋಟಿ ರೂಪಾಯಿ ಮೌಲ್ಯದ ಬಂಗಲೆಯಾಗಿ ರೂಪುಗೊಂಡಿದೆ. ಬಂಗಲೆಯ ಮೇಲೆ ಹಸುವಿನ ಪ್ರತಿಮೆ ಮತ್ತು ಹಾಲಿನ ಮಂಥನದ ಪ್ರತಿಮೆ ಎದ್ದು ನಿಂತಿದ್ದು ಗೋವುಗಳ ಕೊಡುಗೆಯನ್ನು ನೆನಪಿಸುತ್ತಿದೆ. 

Davanagere: ಚಿರತೆ ದಾಳಿಯಿಂದ ಮಾಲೀಕ ಮತ್ತು ಮನೆ ನಾಯಿಯನ್ನು ಕಾಪಾಡಿದ ಹಸು!

Latest Videos
Follow Us:
Download App:
  • android
  • ios