Best business idea: ಹಳ್ಳಿಯಾಗಿರಲಿ, ದೆಹಲಿಯಾಗಿರಲಿ, ಮನಸ್ಸಿದ್ದರೆ ಗಳಿಕೆ ಸುಲಭ. ಹೆಚ್ಚು ಬೇಡಿಕೆಯ ಹಾಗೂ ಸದಾ ಲಾಭತರುವ ವ್ಯವಹಾರವನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ. ದೊಡ್ಡ ಮಟ್ಟದಲ್ಲಿ ಸಾಧ್ಯವಿಲ್ಲವೆನ್ನುವವರು ಸಣ್ಣ ಪ್ರಮಾಣದಲ್ಲಿ ವ್ಯವಹಾರ ಶುರು ಮಾಡಿ, ಲಾಭ ಪಡೆಯುವ ಬ್ಯುಸಿನೆಸ್ ಸಾಕಷ್ಟಿದೆ.
ಬ್ಯುಸಿನೆಸ್ ( Business) ಮಾಡ್ಬೇಕೆಂದು ಅನೇಕರ ಕನಸು (Dream) . ಕೊರೊನಾ ನಂತ್ರ ಉದ್ಯೋಗ ಬಿಟ್ಟು ಅನೇಕರು ಸ್ವಂತ ಉದ್ಯೋಗ ಶುರು ಮಾಡ್ತಿದ್ದಾರೆ. ಅನೇಕರು ಮನೆಯಲ್ಲಿಯೇ ಮಾಡುವ ಸಣ್ಣ – ಪುಟ್ಟ ಬ್ಯುಸಿನೆಸ್ ಗೆ ಒತ್ತು ನೀಡುತ್ತಿದ್ದಾರೆ. ಮತ್ತೆ ಕೆಲವರು ಹೆಚ್ಚು ಪ್ರಸಿದ್ಧಿಯಾಗಿರುವ ಹಾಗೂ ಸದಾ ಕಾಲ ಬೇಡಿಕೆಯಲ್ಲಿರುವ ವಸ್ತುಗಳ ವ್ಯಾಪಾರ ಶುರು ಮಾಡುವ ಪ್ಲಾನ್ ಮಾಡ್ತಿದ್ದಾರೆ. ಅನೇಕರಿಗೆ ಬ್ಯುಸಿನೆಸ್ ಮಾಡುವ ಬಯಕೆಯಿದೆ. ಆದ್ರೆ ಯಾವ ಬ್ಯುಸಿನೆಸ್ ಮಾಡ್ಬೇಕೆಂಬ ಗೊಂದಲವಿದೆ. ನೀವೂ ಇಂಥವರಲ್ಲಿ ಒಬ್ಬರಾಗಿದ್ದರೆ, ಸದಾ ಬೇಡಿಕೆಯಲ್ಲಿರುವ ಹಾಗೂ ಎಂದೂ ಬೇಡಿಕೆ ಕಡಿಮೆಯಾಗದ ಬ್ಯುಸಿನೆಸ್ ಒಂದರ ಬಗ್ಗೆ ನಾವು ಮಾಹಿತಿ ನೀಡ್ತೇವೆ. ಈ ಬ್ಯುಸಿನೆಸನ್ನು ನೀವು ಹಳ್ಳಿಯಾಗಿರಲಿ, ನಗರವೇ ಆಗಿರಲಿ, ಎಲ್ಲಿ ಬೇಕಾದ್ರೂ ಶುರು ಮಾಡಬಹುದು. ಹಾಗೆ ಎಲ್ಲಿ ಬೇಕಾದ್ರೂ ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಬಹುದು.
ನಾವು – ನೀವೆಲ್ಲ ಪ್ರತಿ ದಿನ ಬಳಸುವ ಉತ್ಪನ್ನಗಳಲ್ಲಿ ಸೋಪ್ (Soap) ಕೂಡ ಒಂದು. ಕೊರೊನಾ ಬರಲಿ, ಲಾಕ್ ಡೌನ್ ಆಗ್ಲಿ, ಜನರು ಸೋಪ್ ಬಳಕೆ ಕಡಿಮೆ ಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ನಾನಾ ಬಗೆಯ ಸೋಪ್ ಗಳಿವೆ. ಆದ್ರೆ ಈ ಕ್ಷೇತ್ರ ವಿಸ್ತಾರವಾಗಿರುವ ಕಾರಣ ಹಾಗೂ ನೀವು ಕೈನಲ್ಲಿಯೇ ಸೋಪ್ ತಯಾರಿಸುತ್ತಿದ್ದರೆ ಅದಕ್ಕೆ ಬೇಡಿಕೆ ಹೆಚ್ಚು. ಸೋಪನ್ನು ಯಂತ್ರದ ಮೂಲಕ ಅಥವಾ ಕೈಯಿಂದ ತಯಾರಿಸಬಹುದು ಮತ್ತು ಅದನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ನೀವು ಈ ಸೋಪಿನ ವ್ಯವಹಾರಕ್ಕೆ ದೊಡ್ಡ ಮಟ್ಟದ ಹಣ ಹೂಡಿಕೆ ಮಾಡ್ಬೇಕೆಂದೇನಿಲ್ಲ. ಸಣ್ಣ ಪ್ರಮಾಣದಲ್ಲಿಯೂ ನೀವು ವ್ಯವಹಾರ ಶುರು ಮಾಡಬಹುದು.
ಭಾರತದಲ್ಲಿದೆ ಇಷ್ಟೊಂದು ಸೋಪ್ : ಭಾರತದಲ್ಲಿ ಮೂರು ರೀತಿಯ ಸೋಪುಗಳನ್ನು ಬಳಸಲಾಗುತ್ತದೆ. ಸೌಂದರ್ಯ ಸಾಬೂನು, ಲಾಂಡ್ರಿ ಸೋಪ್ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಸೋಪ್. ಇದಲ್ಲದೆ ಅಡುಗೆಮನೆಯಲ್ಲಿ ಮಾತ್ರೆಗಳನ್ನು ಸ್ವಚ್ಛಗೊಳಿಸಲು ಸುಗಂಧಭರಿತ ಸೋಪುಗಳನ್ನು ತಯಾರಿಸಲಾಗುತ್ತದೆ. ನಿಮ್ಮ ಸುತ್ತಲಿನ ಬೇಡಿಕೆ ಮತ್ತು ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ನೀವು ಈ ಯಾವುದೇ ವರ್ಗಗಳ ಸೋಪ್ ತಯಾರಿಸಬಹುದು.
ಇದನ್ನೂ ಓದಿ: LIC IPO: ಇಂದು ಹೂಡಿಕೆಗೆ ಕೊನೆಯ ಅವಕಾಶ; ಎಲ್ಐಸಿ ಷೇರಿನ GMP ಎಷ್ಟಿದೆ? ಮಾರುಕಟ್ಟೆ
ಸೋಪು ತಯಾರಿಸಲು ವೆಚ್ಚ ಮತ್ತು ಆದಾಯ : ಸಾಬೂನಿನ ಬೇಡಿಕೆಯ ಮೇಲೆ ಯಾವುದೇ ಭೌಗೋಳಿಕ ನಿರ್ಬಂಧಗಳಿಲ್ಲ. ನಗರ ಮತ್ತು ಹಳ್ಳಿಗಳಲ್ಲಿ ಇದರ ಬೇಡಿಕೆ ಇದ್ದೇ ಇದೆ. ಸುಮಾರು 4 ಲಕ್ಷ ರೂಪಾಯಿಗಳಲ್ಲಿ ಸೋಪ್ ತಯಾರಿಕೆಯ ಕೆಲಸವನ್ನು ಪ್ರಾರಂಭಿಸಬಹುದು. ಇದಕ್ಕಾಗಿ ಕೇಂದ್ರದ ಮುದ್ರಾ ಯೋಜನೆಯಡಿ ಶೇಕಡಾ 80ರ ವರೆಗೆ ಸಾಲ ಸಿಗುತ್ತದೆ. ಸುಮಾರು 750 ಚದರ ಅಡಿ ಜಾಗದ ಅವಶ್ಯಕತೆ ಇರುತ್ತದೆ. ಈ ಕೆಲಸಕ್ಕೆ ಎಲ್ಲ ಯಂತ್ರಗಳೂ ಸೇರಿದಂತೆ 8 ಬಗೆಯ ಉಪಕರಣಗಳನ್ನು ಬಳಸಲಾಗುವುದು. ನೀವು ಯಂತ್ರಗಳು ಮತ್ತು ಸಲಕರಣೆಗೆ 1-1.5 ಲಕ್ಷವನ್ನು ಖರ್ಚು ಮಾಡಬೇಕಾಗುತ್ತದೆ. ನೀವು ಪ್ರತಿ ವರ್ಷ ಸುಮಾರು 4 ಲಕ್ಷ ಕೆಜಿ ಸೋಪ್ ಉತ್ಪಾದಿಸಬಹುದು. ಒಂದು ವರ್ಷದಲ್ಲಿ 47 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಮತ್ತು ಎಲ್ಲ ಖರ್ಚುಗಳನ್ನು ಕಳೆದರೆ ವಾರ್ಷಿಕ 6 ಲಕ್ಷ ರೂಪಾಯಿವರೆಗೆ ಲಾಭ ಗಳಿಸಬಹುದು.
ಇದನ್ನೂ ಓದಿ: ಅಂಗವೈಕಲ್ಯಕ್ಕೆ ಬೆದರದೆ, ಸೋಲೊಪ್ಪದೇ ಉದ್ಯಮಿಯಾದ ಫಿರೋಜ್
ನಿಮಗೆ ಈ ಬ್ಯಾಂಕ್ ನಲ್ಲಿ ಸಿಗುತ್ತೆ ಸಾಲ : ಸಾಬೂನು ತಯಾರಿಕೆಗಾಗಿ ಕಾರ್ಖಾನೆ ಸ್ಥಾಪಿಸಲು ಒಟ್ಟು ವೆಚ್ಚ 15 ಲಕ್ಷ ರೂಪಾಯಿ. ಇದು ಸ್ಥಳ, ಯಂತ್ರೋಪಕರಣಗಳು, ಕಾರ್ಯನಿರತ ಬಂಡವಾಳ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ನೀವು ಸರ್ಕಾರದಿಂದ 80 ಪ್ರತಿಶತದಷ್ಟು ಸಾಲವನ್ನು ಪಡೆಯಬಹುದು. ಕೇವಲ 4 ಲಕ್ಷ ರೂಪಾಯಿಗಳನ್ನು ನೀವು ಹೂಡಿಕೆ ಮಾಡಬೇಕಾಗುತ್ತದೆ. ಉಳಿದ ಹಣವನ್ನು ಮುದ್ರಾ ಯೋಜನೆಯಡಿ ಯಾವುದೇ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಬಹುದು.
