ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದ ಸ್ಮರಿಕಾ ಚಂದ್ರಕರ್, ಐದು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ನಂತರ ಕೃಷಿಯತ್ತ ಮುಖ ಮಾಡಿದರು. ಈಗ ವಿವಿಧ ತರಕಾರಿಗಳನ್ನು ಬೆಳೆದು ವಾರ್ಷಿಕ 1.5 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.
ತಮಗಿರುವ ಕೃಷಿ ಭೂಮಿ ಹಾಳು ಬೀಳಲು ಬಿಟ್ಟು ಅನೇಕ ಯುವ ಸಮುದಾಯ ಇಂದು ಉದ್ಯೋಗ ಅರಸುತ್ತ ನಗರ ಸೇರುತ್ತಿದೆ. ತಾವು ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗದಿರುವುದು ಇದಕ್ಕೆ ಕಾರಣ. ಹೀಗಾಗಿ ಕೃಷಿಕ ಪೋಷಕರು ಕೂಡ ಇಂದು ಯಾರು ತಮ್ಮ ಮಕ್ಕಳು ಕರಷಿಕರೇ ಆಗಲಿ ಎಂದು ಬಯಸುವುದು ತೀರಾ ಕಡಿಮೆ. ಆದರೆ ಕೃಷಿಯಲ್ಲಿ ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿದರೆ ಅಧುನಿಕ ತಂತ್ರಜ್ಞಾನವನ್ನು ಬಳಸಿದರೆ ಯಶಸ್ಸು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಅನೇಕ ಯುವ ಕೃಷಿಕರಿದ್ದಾರೆ ಅವರೊಲ್ಲಬರು ಛತ್ತೀಸ್‌ಗಢ ಮೂಲದ ಸ್ಮರಿಕಾ ಚಂದ್ರಕರ್...
ಛತ್ತಿಸ್‌ಗಢದ ಚಾರ್ಮುಡಿಯಾ ಎಂಬ ಹಳ್ಳಿಯಲ್ಲಿ ಕೃಷಿ ಕುಟುಂಬದಲ್ಲಿ ಕೃಷಿಯನ್ನು ನೋಡುತ್ತಲೇ ದೊಡ್ಡವಳಾದ ಸ್ಮರಿಕಾ ಓದಿದ್ದು, ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ. ಇಷ್ಟು ಓದಿದ ಅವರು ಪುಣೆಯಲ್ಲಿ 5 ವರ್ಷಗಳ ಕಾಲ ಹಿರಿಯ ಬ್ಯುಸಿನೆಸ್ ಡೆವಲಪ್‌ಮೆಂಟ್ ಎಕ್ಸಿಕ್ಯೂಟಿವ್ ಆಗಿಯೂ ಕೆಲಸ ಮಾಡಿದ್ದಾರೆ. ಐದು ವರ್ಷಗಳ ಕಾಲ ಹೊರಗೆ ಕೆಲಸ ಮಾಡಿದ ಅವರಿಗೆ ಆ ಕೆಲಸ ಸಾಕೆನಿಸಿದು ಕುಟುಂಬದ ಜೊತೆ ಕಳೆಯುವ ಉದ್ದೇಶದಿಂದ ಮರಳಿ ತನ್ನ ರಾಜ್ಯದ ರಾಯ್‌ಪುರಕ್ಕೆ ಬಂದಿದ್ದಾರೆ. ಇದು ಅವರಿಗೆ ಕನಿಷ್ಠ ವಾರಾಂತ್ಯವಾದರು ಮನೆಯಲ್ಲಿ ಕಳೆಯುವುದಕ್ಕೆ ಅವಕಾಶ ನೀಡಿತ್ತು.
ಆದರೆ ಅವರ ಮನಸ್ಸು ಮಾತ್ರ ಕೃಷಿ ಭೂಮಿಯತ್ತ ಸೆಳೆಯುತ್ತಲೇ ಇತ್ತು, ವೀಕೆಂಡ್‌ನಲ್ಲಿ ಮನೆಗೆ ಬರುತ್ತಿದ್ದವರು ಕೃಷಿ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದರು. ಮನೆಯಲ್ಲಿ ರಾತ್ರಿಯ ಊಟದ ಸಮಯದಲ್ಲಿ ಕೃಷಿಯಲ್ಲಿ ಲಾಭ ಮಾಡುವುದು ಹೇಗೆ ಎಂದು ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದ್ದವು.
ಇದುವರೆಗೆ ಸ್ಮರಿಕಾ ಅವರ ಕುಟುಂಬ ಭತ್ತ ಬೆಳೆಯುತ್ತಿದ್ದರು. ಆದರೆ ಭತ್ತಕ್ಕಿಂತಲೂ ತರಕಾರಿ ಕೃಷಿ ಲಾಭದಾಯಕ ಎಂದು ಸ್ಮರಿಕಾಗೆ ಅರಿವಾಯ್ತು. ಹಾಗೂ ಅವರು ನಿಧಾನವಾಗಿ ತಮ್ಮ ಭೂಮಿಯಲ್ಲಿ ತರಕಾರಿ ಬೆಳೆಯಲು ಶುರು ಮಾಡಿದರು. ಅವರ ಈ ಪ್ರಯೋಗ ಅವರನ್ನು 2021ರ ವೇಳೆಗೆ ಪೂರ್ಣ ಪ್ರಮಾಣದ ಕೃಷಿಕರಾಗಿ ಮಾಡಿತ್ತು ಹಾಗೂ ಅವರ 20 ಎಕರೆಗೂ ಹೆಚ್ಚು ಭೂಮಿ ತರಕಾರಿ ಕೃಷಿಯಿಂದ ನಳನಳಿಸಿತು.
ಕಳೆದ ಮೂರು ವರ್ಷಗಳಲ್ಲಿ ಅವರು ಎಕರೆಗೆ ಸುಮಾರು 50 ಟನ್ ಟೊಮೆಟೊ ಬೆಳೆದಿದ್ದು,ಇದರಿಂದ ಹಿಂದಿನ ಹಣಕಾಸು ವರ್ಷದಲ್ಲಿ 1.5 ಕೋಟಿ ರೂ. ವಹಿವಾಟು ನಡೆದಿದೆ ಎಂದು ಅವರು ಹೇಳಿದ್ದಾರೆ.
ಭತ್ತ ಗೋಧಿ ಮುಂತಾದ ಬೆಳೆಗಳು ಧೀರ್ಘಕಾಲಿನವು ಅವುಗಳನ್ನು ವರ್ಷಕ್ಕೆ ಎರಡು ಬಾರಿ ಬೆಳೆಯಬಹುದಷ್ಟೇ ಆದರೆ ತರಕಾರಿ ಕೃಷಿ ನಿಮಗೆ ಹಲವು ಕೊಯ್ಲುಗಳನ್ನು ನೀಡುತ್ತದೆ. ಹಾಘೂ ತರಕಾರಿ ಕೃಷಿ ಹಲವು ಪಟ್ಟು ಲಾಭಗಳನ್ನು ನೀಡುತ್ತದೆ. ಈ ವಿಚಾರ ಅರಿತ ಸ್ಮರಿಕಾ ತರಕಾರಿ ಕೃಷಿಗೆ ಭೂಮಿಯನ್ನು ಸಿದ್ಧಪಡಿಸುವ ಕೆಲಸ ಮಾಡಿದರು. ತರಕಾರಿ ಬೆಳೆಯುವುದಕ್ಕೆ ಕೃಷಿ ತಜ್ಞರ ಸಲಹೆಯನ್ನು ಕೂಡ ಪಡೆದರು.
ಮೊದಲಿಗೆ ಮಣ್ಣಿನ ಆರೋಗ್ಯವನ್ನು ಸುಧಾರಿಸುವುದಕ್ಕಾಗಿ ಹಸುವಿನ ಸಗಣಿ ಮತ್ತು ಹುಳು ಗೊಬ್ಬರವನ್ನು ಸೇರಿಸುವ ಮೂಲಕ ಮಣ್ಣಿನ ಆರೋಗ್ಯವನ್ನು ಸುಧಾರಿಸುವತ್ತ ಇವರು ಗಮನ ನೀಡಿದ್ದಾರೆ. ನಾವು ಕೆಲವು ತಿಂಗಳುಗಳ ಕಾಲ ಭೂಮಿನಯನ್ನು ಮುಕ್ತವಾಗಿ ಬಿಟ್ಟು, ಸೂರ್ಯನ ಬೆಳಕಿನಲ್ಲಿ ಮೈಯೊಡ್ಡಿ ನಿಂತೆವು. ಬೇಲಿಗಳನ್ನು ಸ್ಥಾಪಿಸಿ ಒಳಚರಂಡಿ ವ್ಯವಸ್ಥೆ ಸರಿಯಾಗಿದೆ ಮತ್ತು ಭೂಮಿ ಇಳಿಜಾರಾಗಿದೆ ಎಂದು ಖಚಿತಪಡಿಸಿಕೊಂಡೆವು ಎಂದು ತಮ್ಮ ಕೃಷಿ ಪ್ರಯಾಣದ ಆರಂಭದ ದಿನಗಳನ್ನು ನೆನೆಯುತ್ತಾರೆ ಸ್ಮರಿಕಾ.
ಈ ಟೊಮೆಟೋ ಕೃಷಿಗಾಗಿ ಅವರು ಹನಿ ನೀರಾವರಿಯನ್ನು ಶುರು ಮಾಡಿದರು. ಹಾಗೆಯೇ ಮಣ್ಣಿನ ತೇವಾಂಶವನ್ನು ಸಂರಕ್ಷಿಸಲು ಮತ್ತು ಫಲವತ್ತತೆಯನ್ನು ಸುಧಾರಿಸಲು ಮಣ್ಣಿನ ಪ್ರದೇಶದ ಮೇಲ್ಮೈಗೆ ಪದರ ಹಾಸಿದರು. 2019 ಮತ್ತು 2021 ರ ನಡುವೆ ವಾರದ ಕೊನೆಯಲ್ಲಿ ಪ್ರಯೋಗ ಮಾಡುತ್ತಿದ್ದ ಸ್ಮರಿಕಾ ನಂತರ ಪೂರ್ಣ ಪ್ರಮಾಣದಲ್ಲಿ ಕೃಷಿಗೆ ಧುಮುಕಿದರು. ಸ್ಥಳೀಯ ನರ್ಸರಿಯಿಂದ ಖರೀದಿಸಿದ ಬೀಜದಿಂದ ಬೆಳೆ ಬೆಳೆದ ಚಂದ್ರಕರ್ ಕುಟುಂಬವು 2021 ರಲ್ಲಿ ತಮ್ಮ ಮೊದಲ ಟೊಮೆಟೊ ಕೊಯ್ಲನ್ನು ತೆಗೆದರು.
ಮೊದಲ ವರ್ಷ ನಮಗೆ ಎಕರೆಗೆ ಸುಮಾರು 50 ಟನ್‌ಗಳಷ್ಟು ಉತ್ತಮ ಫಸಲು ಸಿಕ್ಕಿತು. ನಾವು ಅದನ್ನು ಸ್ಥಳೀಯ ಮಂಡಿಗಳಲ್ಲಿ ಮತ್ತು ವಿಶಾಖಪಟ್ಟಣಂ, ಪಾಟ್ನಾ, ಕೋಲ್ಕತ್ತಾ, ನವದೆಹಲಿ, ಬೆಂಗಳೂರು ಮತ್ತು ಇತರ ನಗರಗಳಲ್ಲಿ ಮಾರಾಟ ಮಾಡಿದೆವು. ನಾನು ದರಗಳನ್ನು ಮೊದಲೇ ನಿರ್ಧರಿಸುವ ದಲ್ಲಾಳಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುತ್ತೇನೆ ಎಂದು ಅವರು ಹೇಳುತ್ತಾರೆ.
ಈಗ ಅವರು ಟೊಮೆಟೊ ಜೊತೆಗೆ ಸೋರೆಕಾಯಿ, ಸೌತೆಕಾಯಿ ಮತ್ತು ಬದನೆಕಾಯಿಗಳನ್ನು ಸಹ ಬೆಳೆಯುತ್ತಾರೆ. ಬಿತ್ತನೆ ಮತ್ತು ಕೊಯ್ಲು ಕಾಲವು ಮೇ ನಿಂದ ಮಾರ್ಚ್ ವರೆಗೆ ಇರುತ್ತದೆ, ಮತ್ತು ಈ ಅವಧಿಯು ಸರಿಸುಮಾರು ಮೂರು ತಿಂಗಳುಗಳವರೆಗೆ ಇರುತ್ತದೆ ಎಂದು ಸ್ಮರಿಕಾ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ, ಸ್ಮರಿಕಾ ತನ್ನ ಭೂಮಿಯಲ್ಲಿ ವಿವಿಧ ರೀತಿಯ ತರಕಾರಿಗಳನ್ನು ಬೆಳೆಸುತ್ತಿದ್ದಾರೆ . ಕಳೆದ ವರ್ಷ, ನಾವು ಪ್ರತಿ ಎಕರೆಗೆ 55 ಟನ್ ಟೊಮೆಟೊ ಫಸಲನ್ನು ಪಡೆದಿದ್ದೇವೆ. ಇದರೊಂದಿಗೆ, 23-24ನೇ ಹಣಕಾಸು ವರ್ಷದಲ್ಲಿ ನಮ್ಮ ವಹಿವಾಟು 1.5 ಕೋಟಿ ರೂ.ಗಳಿಗಿಂತ ಹೆಚ್ಚಿತ್ತು ಎಂದು ಅವರು ಹೇಳುತ್ತಾರೆ.
ಕೃಷಿ ಮಾಡಿ ಕೈ ಸುಟ್ಟುಕೊಂಡ ಹಲವರು ನಮ್ಮ ನಡುವೆ ಇದ್ದಾರೆ ಆದರೆ ದುಡಿಮೆಯ ಜೊತೆಗೆ ಬುದ್ಧಿವಂತಿಕೆಯಿಂದ ಕೃಷಿಯಲ್ಲಿ ಹೂಡಿಕೆ ಮಾಡಿದರೆ ಸೋಲೇ ಇಲ್ಲ ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ.
