ನವದೆಹಲಿ[ಜೂ. 20]  ವೈಯಕ್ತಿಕ ಆದಾಯದ ಮೇಲೆ ತೆರಿಗೆ ವಿನಾಯಿತಿ ವಿಚಾರದಲ್ಲಿ ಪ್ರತಿ ಬಜೆಟ್ ಎದುರಾದಾಗಲೂ ನಿರೀಕ್ಷೆಗಳು ಇರುತ್ತವೆ. ಹಣಕಾಸು ಖಾತೆ ಜವಾಬ್ದಾರಿ ವಹಿಸಿಕೊಂಡಿರುವ ನಿರ್ಮಲಾ ಸೀತಾರಾಮನ್ ಯಾವ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಾರೆ ಎನ್ನುವುದು ಸಹ ಅಷ್ಟೇ ಮುಖ್ಯವಾದ ವಿಚಾರ.

2.5 ಲಕ್ಷಕ್ಕೆ ಇರುವ ವಾರ್ಷಿಕ  ಟ್ಯಾಕ್ಸ್ ಸ್ಲಾಬ್ ಅನ್ನು 3 ಲಕ್ಷ ರೂ. ಗೆ ಏರಿಕೆ ಮಾಡುವ ನಿರೀಕ್ಷೆ ಹಲವರದ್ದು.  ಯಾವುದೇ ಬಗೆಯ ತೆರಿಗೆ ವಿನಾಯಿತಿಯನ್ನು ನೀಡಿದರೆ ಅದು ಲಾಭ ತಂದುಕೊಡುವುದರಲ್ಲಿ ಅನುಮಾನ ಇಲ್ಲ.  ಒಂದು ವೇಳೆ ತೆರಿಗೆ ವಿನಾಯಿತಿಯನ್ನು 3 ಲಕ್ಷ ರೂ. ಗೆ ಏರಿಸಿದರೆ ದೇಶದ 5 ಕೋಟಿ ತೆರಿಗೆದಾರರ ಕಿಸೆಯಲ್ಲಿ ತಲಾ 2500 ರೂ. ಗೂ ಅಧಿಕ ಹಣ ಉಳಿಯಲಿದೆ. ಆದರೆ ಇದು ಮುಂದೆ ಬಜೆಟ್ ಹಣ ಹೊಂದಾಣಿಕೆ ಮೇಲೆ ಪರಿಣಾಮ ಬೀರಲಿದೆ.

ಸಿಗರೇಟ್ ರೀತಿ ಬೀಡಿಗೂ ಶೇ.28 ತೆರಿಗೆ: ತಜ್ಞರ ಮೊರೆ

ಉಳಿತಾಯ ಖಾತೆ ಮೇಲಿನ ಠೇವಣಿಗಳ ಮೇಲೆ, ಬಂಡವಾಳ ಹೂಡಿಕೆ ಮೇಲೆಯೂ ತೆರಿಗೆ ವಿನಾಯಿತಿ ನೀಡಲು ಕೇಂದ್ರ ಹಣಕಾಸು ಇಲಾಖೆ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿದೆ.  ಆದರೆ ಎಲ್ಲ ಊಹಾಪೋಹಗಳನ್ನು ಹಣಕಾಸು ಇಲಾಖೆ ವಕ್ತಾರ ಡಿ.ಎಸ್.ಮಲಿಕ್ ತಳ್ಳಿಹಾಕಿದ್ದು  ಎಲ್ಲ ವಿಚಾರಗಳು ಕಾನ್ಫಿಡೆನ್ಶಿಯಲ್ ಆಗಿದ್ದು ಜುಲೈ 5 ರಂದು ಬಜೆಟ್ ಮಂಡನೆ ವೇಳೆಯೇ ಬಹಿರಂಗವಾಗಲಿದೆ  ಎಂದು ತಿಳಿಸಿದ್ದಾರೆ.