ನವದೆಹಲಿ[ಜೂ.20]: ಸಾರ್ವಜನಿಕರು ಬೀಡಿ ಸೇವನೆಯಿಂದ ಹೊರಬರುವಂತೆ ಮಾಡುವ ನಿಟ್ಟಿನಲ್ಲಿ ಬೀಡಿ ಮೇಲೆ ಅತಿಹೆಚ್ಚು ಶೇ. 28ರಷ್ಟು ತೆರಿಗೆ ವಿಧಿಸಬೇಕು ಎಂದು ಸಾರ್ವಜನಿಕ ಆರೋಗ್ಯ ಸಂಘಟನೆಗಳು ಮತ್ತು ವೈದ್ಯರು ಹಾಗೂ ಆರ್ಥಿಕ ತಜ್ಞ ತಂಡ ಜಿಎಸ್‌ಟಿ ಮಂಡಳಿಗೆ ಒತ್ತಾಯಿಸಿದೆ. ಇದರಿಂದ ಲಕ್ಷಾಂತರ ಮಂದಿಯ ಪ್ರಾಣ ರಕ್ಷಣೆ ಮಾಡಿದಂತಾಗಲಿದೆ ಎಂದಿದೆ.

ಆದರೆ ಒಂದು ವೇಳೆ ಸರ್ಕಾರ ತೆರಿಗೆ ಹೆಚ್ಚಿಸಿದರೆ, ಬಿಡಿ ಉದ್ಯಮಕ್ಕೆ ಹೊಡೆತ ಬೀಳಲಿದ್ದು, ಕರ್ನಾಟಕ ಸೇರಿದಂತೆ ಇತರೆಡೆಗಳಲ್ಲಿ ಇದೇ ಉದ್ಯಮ ನೆಚ್ಚಿಕೊಂಡಿರುವವರು ಸಂಕಷ್ಟಕ್ಕೀಡಾಗಲಿದ್ದಾರೆ ಎನ್ನಲಾಗಿದೆ.

ದೇಶದ 2.68 ಕೋಟಿ ಜನತೆ ಮೇಲೆ ಪರಿಣಾಮ ಬೀರುವ ಸಿಗರೇಟು ಮತ್ತು ತಂಬಾಕು ಮೇಲೆ ಅತಿಹೆಚ್ಚು ಜಿಎಸ್‌ಟಿ ವಿಧಿಸುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಈ ತಜ್ಞರ ತಂಡ, ಬೀಡಿ ಯನ್ನು ಸಹ ಕೆಟ್ಟ ಸರಕು ಎಂದು ಪರಿಗಣಿ ಸಬೇಕು. ಅಲ್ಲದೆ, ಶೇ.೨೮ರಷ್ಟು ಜಿಎಸ್‌ಟಿ ವಿಧಿಸಬೇಕು ಎಂದು ಕೋರಿಕೊಂಡಿದೆ.