Online Shopping ನಲ್ಲೂ ಇದೆ ನಷ್ಟ, ನಿಮ್ಮ ದುಡ್ಡಿನ ಜಾಗೃತೆ ನೀವು ಮಾಡಬೇಕು!

ಸಮಯ ಉಳಿಯುತ್ತೆ, ಕಡಿಮೆ ಹಣದಲ್ಲಿ ವಸ್ತು ಖರೀದಿ ಮಾಡ್ಬಹುದು ಅಂತಾ ನಾವು ಆನ್ಲೈನ್ ಶಾಪಿಂಗ್ ಮಾಡ್ತೆವೆ. ಆದ್ರೆ ಈ ಆನ್ಲೈನ್ ಶಾಪಿಂಗ್ ನಮ್ಮ ಸಮಯ ಹಾಳು ಮಾಡುತ್ತೆ, ಜೇಬಿಗೂ ಹೆಚ್ಚುವರಿ ಕತ್ತರಿ ಬೀಳುತ್ತೆ ಅನ್ನೋದು ನಿಮಗೆ ಗೊತ್ತಾ?
 

Side Effects Of Online Shopping

ವಸ್ತುಗಳನ್ನು ಖರೀದಿ ಮಾಡ್ಬೇಕು ಅಂದಾಗ ಮೊದಲು ನಾವು ಮಾಡೋ ಕೆಲಸ ವೆಬ್ ಸೈಟ್ ಚೆಕ್ ಮಾಡೋದು. ಅಲ್ಲಿ ನಿಗದಿತ ಸಮಯಕ್ಕೆ ವಸ್ತುಗಳು ಮನೆಗೆ ಬರುತ್ತವೆಯೇ, ನಮಗೆ ಬೇಕಾದ ವಸ್ತು ಅಲ್ಲಿದೆಯೇ ಎಂಬುದನ್ನು ಪರಿಶೀಲನೆ ಮಾಡ್ತೇವೆ. ಉತ್ತರ ಇಲ್ಲ ಅಂತಾ ಬಂದ್ರೆ ಮಾತ್ರ ಮಾರ್ಕೆಟ್ ಗೆ ಹೋಗ್ತೇವೆ. ಇಲ್ಲ ಅಂದ್ರೆ ಮನೆಯಲ್ಲೇ ಕುಳಿತು ಅರೆ ಕ್ಷಣದಲ್ಲಿ ವಸ್ತುಗಳನ್ನು ಆರ್ಡರ್ ಮಾಡಿರ್ತೇವೆ. 

ಆನ್ಲೈನ್ (Online) ಶಾಪಿಂಗ್ ತುಂಬಾ ಸುಲಭ ಮತ್ತು ಆರ್ಥಿಕ ವಿಧಾನವೆಂದು ಪರಿಗಣಿಸಲಾಗಿದೆ. ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಸಮಯದ ಕೊರತೆಯಿರುವಾಗ ಆನ್‌ಲೈನ್ ಶಾಪಿಂಗ್ (Shopping) ವೆಬ್‌ಸೈಟ್‌ ಮೊರೆ ಹೋಗ್ತಿದ್ದಾರೆ. ಆನ್‌ಲೈನ್ ಶಾಪಿಂಗ್ ನಿಂದ  ಅನೇಕ ಪ್ರಯೋಜನವಿದೆ. ಆದ್ರೆ ನಾಣ್ಯಕ್ಕೆ ಎರಡು ಮುಖವಿದ್ದಂತೆ ಆನ್ಲೈನ್ ಶಾಪಿಂಗ್ ನಿಂದ ನಷ್ಟವೂ ಇದೆ.
ಆರ್ಡರ್ (Order) ಮಾಡಿದ್ದು ಒಂದು ಬಂದಿದ್ದು ಇನ್ನೊಂದು ವಸ್ತು ಎನ್ನುವ ಸುದ್ದಿಗಳನ್ನು ನಾವು ಕೇಳ್ತಿರುತ್ತೇವೆ. ಇದು ಆನ್ಲೈನ್ ನಲ್ಲಿ ಆಗುವ ದೊಡ್ಡ ನಷ್ಟವಾದ್ರೆ ಇನ್ನೂ ಅನೇಕ ಸಮಸ್ಯೆಗಳು ಆನ್ಲೈನ್ ವೆಬ್ಸೈಟ್ ನಲ್ಲಿ ವಸ್ತುಗಳನ್ನು ಖರೀದಿಸುವಾಗ ಆಗುತ್ತದೆ. ನಾವಿಂದು ಆನ್ಲೈನ್ ಶಾಪಿಂಗ್ ನಿಂದ ನಮಗಾಗುವ ನಷ್ಟವೇನು ಎಂಬುದನ್ನು ಹೇಳ್ತೆವೆ. 

ಆನ್ಲೈನ್ ಶಾಪಿಂಗ್ ನಿಂದಾಗುತ್ತೆ ಈ ಎಲ್ಲ ನಷ್ಟ :

ಸಮಯ ಸರಿದ್ದಿದ್ದು ತಿಳಿಯೋದಿಲ್ಲ : ಹೌದು. ಇದು ನೂರಕ್ಕೆ ನೂರು ಸತ್ಯ. ನೀವು ಮಾರುಕಟ್ಟೆಗೆ ಹೋಗಿ ವಸ್ತುಗಳನ್ನು ತರುವುದಕ್ಕಿಂತ ಆನ್ಲೈನ್ ಶಾಪಿಂಗ್ ಹೆಚ್ಚು ಸಮಯ ತೆಗೆದುಕೊಳ್ಳುತ್ತೆ ಅಂದ್ರೆ ಅತಿಶಯೋಕ್ತಿ ಎನಿಸದು. ಆನ್ಲೈನ್ ಶಾಪಿಂಗ್ ಸಮಯ ಉಳಿಸುವ ವಿಧಾನ ಅಂತಾ ಹೆಸರು ಪಡೆದಿದ್ರೂ ಇದು ಅತಿ ಹೆಚ್ಚು ಸಮಯ ನುಂಗುತ್ತದೆ. ವೆಬ್ಸೈಟ್ ಓಪನ್ ಮಾಡಿ ನಮಗೆ ಯಾವ ವಸ್ತು ಬೇಕು ಅದನ್ನು ನೇರವಾಗಿ ಸರ್ಚ್ ಮಾಡಿ, ಖರೀದಿ ಮಾಡೋರು ಅಪರೂಪ. ವೆಬ್ಸೈಟ್ ಓಪನ್ ಮಾಡಿ, ಸ್ಕ್ರೋಲ್ ಮಾಡಿ, ಎಲ್ಲ ಚೆಕ್ ಮಾಡ್ತೆವೆ. ಅದ್ರಲ್ಲಿ ಕೆಲವೊಂದು ಹೊಸ ವಸ್ತು ಕಾಣುತ್ತದೆ. ಆಗ ಖರೀದಿಗೆ ಹೊರಟಿದ್ದ ವಸ್ತು ಮರೆತು ಹೊಸ ವಸ್ತು ಖರೀದಿ ಮಾಡ್ಬೇಕೋ ಬೇಡ್ವೋ ಎನ್ನುವ ಚಿಂತೆಯಲ್ಲಿ ಸಮಯ ಕಳೆಯುತ್ತೇವೆ. ಚೆಂದದ ಬಟ್ಟೆ, ವಸ್ತುಗಳು ಸಿಕ್ಕಾಗ ಸ್ಕ್ರೋಲ್ ಮಾಡ್ತಾ ಸಮಯ ಹೋಗಿದ್ದು ನಮಗೆ ತಿಳಿಯೋದಿಲ್ಲ.

EPFO ಪೋರ್ಟಲ್ ನಲ್ಲಿ KYC ನವೀಕರಿಸೋದು ಹೇಗೆ? ಇಲ್ಲಿದೆ ಮಾಹಿತಿ

ಖರ್ಚು ಹೆಚ್ಚು : ಮೇಲೆ ಹೇಳಿದಂತೆ ನಾವು ಸ್ಕ್ರೋಲ್ ಮಾಡ್ತಾ ಹೋದಂತೆ ಅನೇಕ ವಸ್ತುಗಳು ಕಣ್ಣಿಗೆ ಬೀಳ್ತವೆ. ಕೆಲ ವಸ್ತುಗಳ ಬೆಲೆ ಅತಿ ಕಡಿಮೆ ಎನ್ನಿಸುತ್ತದೆ. ಅದ್ರ ಅಗತ್ಯ ನಮಗಿಲ್ಲವೆಂದ್ರೂ ಅದನ್ನು ನಾವು ಖರೀದಿ ಮಾಡ್ತೇವೆ. ನಾಯಿ ಸಾಕುವ ಮೊದಲೇ ನಾಯಿಗೆ ಊಟ ಹಾಕುವ ತಟ್ಟೆ ಖರೀದಿ ಮಾಡಿರ್ತೇವೆ. ಇದ್ರಿಂದ ವಿನಃ ಹಣ ಹಾಳಾಗುತ್ತದೆ. ನಾವು ಆನ್ಲೈನ್ ಪೇಮೆಂಟ್ ಮಾಡೋದ್ರಿಂದ ಎಷ್ಟು ಖರ್ಚಾಗಿದೆ ಎಂಬ ಕಲ್ಪನೆ ಕೂಡ ನಮಗೆ ಅನೇಕ ಬಾರಿ ಇರೋದಿಲ್ಲ.

ಹಿಂತಿರುಗಿಸುವ ಕಿರಿಕಿರಿ : ಆನ್ಲೈನ್ ನಲ್ಲಿ ಬಂದಿರುವ ವಸ್ತುಗಳು ಅನೇಕ ಬಾರಿ ತಪ್ಪಾಗಿ ಬಂದಿರುತ್ತವೆ. ಮತ್ತೆ ಕೆಲ ವಸ್ತುಗಳ ಹಾಳಾಗಿರುತ್ತವೆ. ಅದನ್ನು ಹಿಂದಿರುಗಿಸುವುದು ಕಿರಿಕಿರಿ. ಕೆಲ ವಸ್ತುಗಳಿಗೆ ರಿಟರ್ನ್ ಆಯ್ಕೆ ಇರೋದಿಲ್ಲ. ಆಗ ವಸ್ತು ಬೇಡವೆಂದ್ರೂ ನಾವದನ್ನು ಇಟ್ಟುಕೊಳ್ಳಬೇಕು. ಬದಲಿಸಬೇಕೆಂದ್ರೆ ಕಂಪನಿ ಜೊತೆ ಜಗಳಕ್ಕಿಳಿಯಬೇಕು. ಹಣ ಕೂಡ ವ್ಯರ್ಥವಾಗುತ್ತದೆ. 

Business Ideas : ಬೇಡಿಕೆ ಕಡಿಮೆಯಾಗದ ಈ ಮಳಿಗೆ ಗಳಿಕೆಗೆ ಬೆಸ್ಟ್

ಹೆಚ್ಚುವರಿ ಶುಲ್ಕ : ಕೆಲ ವಸ್ತುಗಳು ನಮಗೆ ತುರ್ತು ಅಗತ್ಯವಿರುತ್ತದೆ. ನಾವದನ್ನು ಆನ್ಲೈನ್ ನಲ್ಲಿ ಬುಕ್ ಮಾಡ್ತೇವೆ. ನಮಗೆ ಅಗತ್ಯವಿರುವ ಸಮಯಕ್ಕೆ ಅದು ತಲುಪದೆ ತೊಂದರೆಯಾಗುತ್ತದೆ. ಮತ್ತೆ ಕೆಲವೊಮ್ಮೆ ಇದಕ್ಕೆ ನಾವು ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಆನ್ಲೈನ್ ಶಾಪಿಂಗ್ ಕೆಟ್ಟದ್ದೇನಲ್ಲ. ಆದ್ರೆ ಶಾಪಿಂಗ್ ಮಾಡುವಾಗ ನಾವು ಮೇಲಿನ ಎಲ್ಲ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಮುಖ್ಯ.
 

Latest Videos
Follow Us:
Download App:
  • android
  • ios