Business Ideas : ಬೇಡಿಕೆ ಕಡಿಮೆಯಾಗದ ಈ ಮಳಿಗೆ ಗಳಿಕೆಗೆ ಬೆಸ್ಟ್
ವ್ಯಾಪಾರ ಶುರು ಮಾಡುವ ಆಲೋಚನೆಯಲ್ಲಿದ್ದರೆ ಹೂಡಿಕೆಗೆ ಮೊದಲು ಯಾವುದು ಒಳ್ಳೆಯ ವ್ಯಾಪಾರ ಎಂಬುದನ್ನು ಪರಿಶೀಲಿಸಿ. ಸದಾ ಬೇಡಿಕೆಯಲ್ಲಿರುವ ವ್ಯಾಪಾರವನ್ನು ಜನನಿಬಿಡಿ ಪ್ರದೇಶದಲ್ಲಿ ಶುರು ಮಾಡೋದನ್ನು ಮರೆಯಬೇಡಿ. ಕೈತುಂಬ ಲಾಭ ನೀಡುವ ವ್ಯಾಪಾರದಲ್ಲಿ ಗಿಫ್ಟ್ ಮಳಿಗೆಯೂ ಒಂದು.
ಉಡುಗೊರೆ ನೀಡುವ ಪದ್ಧತಿ ಹಿಂದೆ ವಿದೇಶದಲ್ಲಿ ಮಾತ್ರವಿತ್ತು. ಆ ಪದ್ಧತಿ ನಮ್ಮ ದೇಶಕ್ಕೆ ಬಂದು ಎಷ್ಟೋ ವರ್ಷ ಕಳೆದಿದೆ. ಇತ್ತೀಚಿನ ದಿನಗಳಲ್ಲಿ ಗಿಫ್ಟ್ ಟ್ರೆಂಡ್ ಹೆಚ್ಚಾಗಿದೆ. ಮದುವೆ, ವಾರ್ಷಿಕೋತ್ಸವ, ಪ್ರೇಮಿಗಳ ದಿನ, ಗೃಹ ಪ್ರವೇಶ, ಹುಟ್ಟುಹಬ್ಬ ಹೀಗೆ ಯಾವುದೇ ಕಾರ್ಯಕ್ರಮವಿರಲಿ ಗಿಫ್ಟ್ ನೀಡೋದು ಸಂಪ್ರದಾಯವಾಗ್ತಿದೆ. ಗಿಫ್ಟ್ ಐಟಂಗಳಿಗೆ ಸದಾ ಬೇಡಿಕೆ ಇದ್ದೇ ಇರುತ್ತದೆ. ಹೊಸದಾಗಿ ಬ್ಯುಸಿನೆಸ್ ಶುರು ಮಾಡ್ಬೇಕು ಎನ್ನುವವರು ಗಿಫ್ಟ್ ಮಳಿಗೆ ಶುರು ಮಾಡಿ ಹಣ ಗಳಿಕೆ ಮಾಡಬಹುದು. ನಾವಿಂದು ಗಿಫ್ಟ್ ಅಂಗಡಿ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ. ಗಿಫ್ಟ್ (Gift) ಶಾಪ್ ಕಾರ್ನರ್ (Corner) : ಬಟ್ಟೆ ಅಂಗಡಿ ಅಂದ್ರೆ ಅಲ್ಲಿ ಬಟ್ಟೆ ಸಿಗುತ್ತೆ ಹಾಗೆಯೇ ಗಿಫ್ಟ್ ಶಾಪ್ ಕಾರ್ನರ್ ಅಂದ್ರೆ ಅಲ್ಲಿ ಉಡುಗೊರೆ ವಸ್ತುಗಳು ಸಿಗುತ್ವೆ. ಮಕ್ಕಳಿಗೆ ಬೇಕಾಗುವ ವಸ್ತುಗಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ನೀಡಬಹುದಾದ ಉಡುಗೊರೆ ವಸ್ತುಗಳು ಅಲ್ಲಿ ಲಭ್ಯವಿರುತ್ತವೆ.
ನೀವು ಸಣ್ಣ ಪ್ರಮಾಣದಲ್ಲಿಯೂ ಇದನ್ನು ಶುರು ಮಾಡಬಹುದು. ನೀವು ಸಗಟು ವ್ಯಾಪಾರಸ್ಥ (Businessman) ರಿಂದ ಸರಕು ತಂದು ಮಾರಾಟ ಮಾಡಬಹುದು. ನೀವು ಅಂಗಡಿ ಎಲ್ಲಿ ತೆರೆಯುತ್ತೀರಿ ಎಂಬುದು ಮುಖ್ಯವಾಗುತ್ತದೆ. ಅಲ್ಲಿನ ಸುತ್ತಮುತ್ತಲಿರುವ ಜನರ ಆರ್ಥಿಕ ಸ್ಥಿತಿಗೆ ತಕ್ಕಂತೆ ನೀವು ವಸ್ತುಗಳನ್ನು ಇಡಬೇಕಾಗುತ್ತದೆ. ದುಬಾರಿ ಬೆಲೆ ವಸ್ತುಗಳನ್ನಿಟ್ಟರೆ ಅದು ಮಾರಾಟವಾಗದೆ ಇರಬಹುದು. ಹಳ್ಳಿ (Village) ಯಲ್ಲಾದ್ರೆ ಜನರು ಹುಡುಕಿಕೊಂಡು ನಿಮ್ಮ ಮಳಿಗೆಗೆ ಬರಬಹುದು. ಆದ್ರೆ ನಗರದಲ್ಲಿ ಹಾಗಲ್ಲ. ನೀವು ಜನನಿಬಿಡಿ ಪ್ರದೇಶ, ಮಾರುಕಟ್ಟೆ ಪ್ರದೇಶದಲ್ಲಿ ನಿಮ್ಮ ಗಿಫ್ಟ್ ಶಾಪ್ ತೆಗೆದ್ರೆ ಒಳ್ಳೆಯದು.
ಗಿಫ್ಟ್ ಕಾರ್ನರ್ ಗೆ ಪರವಾನಗಿ ಮತ್ತು ನೋಂದಣಿ : ಗಿಫ್ಟ್ ಕಾರ್ನರ್ ಸಣ್ಣ ಪ್ರಮಾಣದಲ್ಲಿ ತೆರೆಯುತ್ತಿದ್ದರೆ ಯಾವುದೇ ರೀತಿಯ ನೋಂದಣಿ ಮತ್ತು ಪರವಾನಗಿ ಅಗತ್ಯವಿಲ್ಲ. ಆದರೆ ನೀವು ಈ ವ್ಯವಹಾರವನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರೆ ನೀವು ಅಂಗಡಿಗಳು ಮತ್ತು ಸ್ಥಾಪನೆ ಕಾಯ್ದೆಯಡಿ ನೋಂದಾಯಿಸಿಕೊಳ್ಳಬೇಕು. ಇದಲ್ಲದೆ ಲಾಭವನ್ನು ಪರಿಗಣಿಸಿ ಜಿಎಸ್‌ಟಿ ನೋಂದಣಿಯನ್ನು ಸಹ ಮಾಡಬೇಕು.
ಗಿಫ್ಟ್ ಶಾಪ್ ಮಾರ್ಕೆಟಿಂಗ್ : ಪ್ರತಿ ವರ್ಗದ ಜನರು ಖರೀದಿಸಬಹುದಾದ ಉಡುಗೊರೆ ವಸ್ತುಗಳನ್ನು ನೀವು ಇಡಬೇಕು. ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು ಅಥವಾ ಶಾಲಾ ವಿದ್ಯಾರ್ಥಿಗಳು ಉಡುಗೊರೆಗಳನ್ನು ಖರೀದಿಸಲು ಆಸಕ್ತಿ ವಹಿಸುತ್ತಾರೆ. ಹಾಗಾಗಿ ಅವರನ್ನು ಸೆಳೆಯುವ ವಸ್ತುಗಳು ನಿಮ್ಮ ಶಾಪ್ ನಲ್ಲಿ ಅಗತ್ಯವಾಗಿ ಇರಬೇಕು.
ಸಣ್ಣ ಉಳಿತಾಯ ಯೋಜನೆ ಹೂಡಿಕೆದಾರ ನಾಮಿನಿ ಹೆಸರಿಸದೆ ಮರಣ ಹೊಂದಿದ್ರೆ ಹಣ ಯಾರಿಗೆ ಸಿಗುತ್ತೆ?
ಗಿಫ್ಟ್ ಶಾಪ್ ವ್ಯವಹಾರಕ್ಕೆ ತಗಲುವ ವೆಚ್ಚ : ಗಿಫ್ಟ್ ಶಾಪ್ ಶುರು ಮಾಡಲು ತಗಲುವ ವೆಚ್ಚ ನಿಮಗೆ ಬಿಟ್ಟದ್ದು. ನಿಮ್ಮ ಸ್ವಂತ ಜಾಗವಿದ್ದರೆ ಖರ್ಚು ಕಡಿಮೆ. ಬಾಡಿಗೆ ಪಡೆದು ವ್ಯವಹಾರ ಶುರು ಮಾಡ್ತಿದ್ದರೆ ಖರ್ಚು ಹೆಚ್ಚು. ಮಳಿಗೆ ಗಾತ್ರ, ಯಾವ ಜಾಗ ಎಂಬುದು ಕೂಡ ವೆಚ್ಚವನ್ನು ನಿರ್ಧರಿಸುತ್ತದೆ. ನೀವೊಬ್ಬರೆ ಕೆಲಸ ಮಾಡ್ತಿದ್ದರೆ ಸಂಬಳಕ್ಕೆ ಹಣ ಹೊಂದಿಸಬೇಕಾಗುವುದಿಲ್ಲ. ಕೆಲಸದವರನ್ನು ನೇಮಿಸಿಕೊಂಡ್ರೆ ಅವರಿಗೆ ಸಂಬಳ ನೀಡಬೇಕಾಗುತ್ತದೆ. ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಮಾಡಲು ಬಯಸಿದರೆ ನೀವು ಸುಮಾರು 1 ರಿಂದ 2 ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ. ಈ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಮಾಡುತ್ತಿದ್ದರೆ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ರೂಪಾಯಿಯಂತೂ ನೀವು ಖರ್ಚು ಮಾಡ್ಬೇಕಾಗುತ್ತದೆ.
ಹೆಂಡ್ತಿ ಹೆಸರಲ್ಲಿ ಮನೆ ತಗೊಂಡರೆ ಇಷ್ಟೆಲ್ಲಾ ಲಾಭವಿದೆ ನೋಡಿ!
ಗಿಫ್ಟ್ ಶಾಪ್ ನಿಂದ ಲಾಭ : ಎಲ್ಲ ಋತುವಿನಲ್ಲೂ ಬೇಡಿಗೆ ಹೊಂದಿರುವ ವ್ಯವಹಾರ ಇದು. ಎಂದಿಗೂ ಈ ವ್ಯವಹಾರ ಸಂಪೂರ್ಣವಾಗಿ ನಿಲ್ಲಲು ಸಾಧ್ಯವಿಲ್ಲ. ಮಳಿಗೆಯಲ್ಲಿ ಆಕರ್ಷಕ ವಸ್ತುಗಳನ್ನು ನೀವು ಇಟ್ಟರೆ ಹೆಚ್ಚೆಚ್ಚು ಗ್ರಾಹಕರನ್ನು ಸೆಳೆಯಬಹುದು. ತಿಂಗಳಿಗೆ ಲಕ್ಷಗಟ್ಟಲೆ ಹಣ ಸಂಪಾದನೆ ಮಾಡಬಹುದು.