ನವದೆಹಲಿ(ಫೆ.02): ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ರಿದಾ ಚೆ ನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಹೆದ್ದಾರಿಯ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸುವ ಮಹತ್ವದ ಘೋಷಣೆ ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಹೊರಬಿದ್ದಿದೆ. ‘2023ಕ್ಕೆ ಮುಂಬೈ-ದಿಲ್ಲಿ ಹಾಗೂ ಇತರ 2 ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಶೀಘ್ರ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾಮಗಾರಿ ಆರಂಭಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಈಗ ಬೆಂಗಳೂರಿನಿಂದ ಹೊಸೂರು ಮಾರ್ಗವಾಗಿ ಚೆನ್ನೈಗೆ ಹೆದ್ದಾರಿ ಸಾಗುತ್ತದೆ. ಆದರೆ ಅದು ಎಕ್ಸ್‌ಪ್ರೆಸ್ ಹೆದ್ದಾರಿ ಅಲ್ಲ. ಆದರೆ ಪ್ರಸ್ತಾವಿತ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿಯು ಬೆಂಗಳೂರು ಹೊರವಲಯದ ಹೊಸಕೋಟೆಯಿಂದ ಆರಂಭವಾಗುತ್ತದೆ. ಆಂಧ್ರಪ್ರದೇಶದ ಮೂಲಕ ಅದು ತಮಿಳುನಾಡಿಗೆ ಸಂಪರ್ಕ ಕಲ್ಪಿಸಿ, ಶ್ರೀಪೆರಂಬದೂರು ಸಮೀಪದ ಚೆನ್ನೈ ಹೊರವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸಲಿದೆ. ಕರ್ನಾಟಕದಲ್ಲಿ 76 ಕಿ.ಮೀ.ನಷ್ಟು ಈ ಹೆದ್ದಾರಿಯ ವ್ಯಾಪ್ತಿ ಇರಲಿದೆ.

ನಿಮ್ಹಾನ್ಸ್‌ಗೆ 39 ಕೋಟಿ ಅನುದಾನ, ಬಜೆಟ್‌ನಲ್ಲಿ ಕರ್ನಾಟಕಕ್ಕೆ ಬೇರೇನೇನು ಸಿಕ್ತು...?

ಹೊಸೂರು ಮಾರ್ಗವಾಗಿ ಚೆನ್ನೈ ತಲುಪುವ ಈಗಿನ ಹೆದ್ದಾರಿ ಸುಮಾರು 350 ಕಿ.ಮೀ. ಇದೆ. ಸುಮಾರು ಆರೂವರೆ ತಾಸಿನಲ್ಲಿ ಚೆನ್ನೈ ತಲುಪಬಹುದಾಗಿದೆ. ಆದರೆ ಹೊಸಕೋಟೆ ಮಾರ್ಗದಲ್ಲಿ ಸಾಗುವ ಎಕ್ಸ್‌ಪ್ರೆಸ್ ಹೆದ್ದಾರಿ ಕೇವಲ 262 ಕಿ.ಮೀ.ನಲ್ಲಿ ಚೆನ್ನೈ ಸಂಪರ್ಕಿಸುತ್ತದೆ. ಇದು ಪ್ರಯಾಣದ ಸಮಯವನ್ನು ಸುಮಾರು ಎರಡೂವರೆ ತಾಸು ಕಡಿಮೆ ಮಾಡಬಲ್ಲದು ಎಂದು ಅಂದಾಜಿಸಲಾಗಿದೆ. ಅಂದರೆ ಸುಮಾರು 4 ತಾಸಿನಲ್ಲಿ ಚೆನ್ನೈ ತಲುಪಬಹುದಾಗಿದೆ. 2011ರಲ್ಲೇ ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣದ ಪ್ರಸ್ತಾವ ಸಿದ್ಧವಾಗಿತ್ತು. ಆದರೆ ಇದರ ಒಪ್ಪಿಗೆಗೆ ಕೇಂದ್ರ ಸರ್ಕಾರ 7 ವರ್ಷ ತೆಗೆದುಕೊಂಡಿತು.

ಕಾಮಗಾರಿಗೆ ಶೀಘ್ರ ಚಾಲನೆ

ಈಗಿನ 6.5 ತಾಸಿನ ಬದಲು ಕೇವಲ 4 ತಾಸಿನಲ್ಲಿ ಚೆನ್ನೈ ತಲುಪಿ ಈಗಿನ ಹೊಸೂರು ಬದಲು ಹೊಸಕೋಟೆ ಮಾರ್ಗದಲ್ಲಿ ಸಾಗುವ ಎಕ್ಸ್‌ಪ್ರೆಸ್ ಹೈವೇ ಹೊಸೂರು ಮಾರ್ಗದಲ್ಲಿ ಚೆನ್ನೈಗೆ 350 ಕಿ.ಮೀ. ಹೊಸಕೋಟೆ ಮಾರ್ಗದಲ್ಲಿ ಕೇವಲ 262 ಕಿ.ಮೀ.ನಲ್ಲಿ ತಲುಪಲಿದೆ.

ಬೆಂಗಳೂರು ಸಬರ್ಬನ್ ರೈಲಿಗೆ ಮೆಟ್ರೋ ದರ ₹18600 ಕೋಟಿ ವೆಚ್ಚದಲ್ಲಿ ಸಬರ್ಬನ್ ರೈಲು ಜಾಲ 148ಕಿ.ಮೀ. ವಿಸ್ತಾರದ ಬೆಂಗಳೂರು ಮೆಟ್ರೋ ಸಬರ್ಬನ್ ರೈಲು ಜಾಲ ಅಭಿವೃದ್ಧಿಪಡಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಮೆಟ್ರೋ ರೈಲುಗಳ ದರದ ಮಾದರಿಯಲ್ಲೇ ಸಬರ್ಬನ್ ರೈಲುಗಳ ದರವೂ ನಿಗದಿಯಾಗಲಿದೆ ಎಂದು ಘೋಷಿಸಲಾಗಿದೆ. ಬೆಂಗಳೂರು ಸಬರ್ಬನ್ ರೈಲು ಜಾಲವನ್ನು 18,600 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಕೇಂದ್ರ ಸರ್ಕಾರವು ಇದರಲ್ಲಿ ಶೇ.20 ಬಂಡವಾಳ ಹೂಡಲಿದೆ ಹಾಗೂ ಬಾಹ್ಯ ಸಹಾಯದ ಮೂಲಕ ಶೇ.60ರಷ್ಟು ವೆಚ್ಚವನ್ನು ಭರಿಸಲು ಸಹಾಯ ಮಾಡಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.