ನವದೆಹಲಿ(ಫೆ.02): ಕೇಂದ್ರ ಸರ್ಕಾರ ತನ್ನ 2020-21ರ ಸಾಲಿನ ಆಯವ್ಯಯ ಪತ್ರದಲ್ಲಿ ರಾಜ್ಯದಲ್ಲಿರುವ ತನ್ನ ಸಂಸ್ಥೆಗಳು ಮತ್ತು ರಾಜ್ಯದಲ್ಲಿಯೂ ಜಾರಿಯಲ್ಲಿರುವ ಕೆಲವು ಯೋಜನೆಗಳಿಗೆ ಆನುದಾನ ಪ್ರಕಟಿಸಿದೆ.

ಈ ಅನುದಾನ ಮಾಹಿತಿ ಇಲ್ಲಿದೆ. ನಿಮ್ಹಾನ್ಸ್ ಸಂಸ್ಥೆಗೆ ₹39.19 ಕೋಟಿ, ಮೈಸೂರಿನ ಸ್ಪೀಚ್ ಅಂಡ್ ಹಿಯರಿಂಗ್ ಸಂಸ್ಥೆಗೆ ₹55.66 ಕೋಟಿ, ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ಸಸ್ ₹28.27 ಕೋಟಿ, ಬೆಂಗಳೂರಿನ ರಾಷ್ಟ್ರೀಯ ಯೂನಾನಿ ಔಷಧಿ ಸಂಸ್ಥೆಗೆ ₹23.50 ಕೋಟಿ, ಬೆಂಗಳೂರಿನ ಐಐಎಂಎಸ್‌ಗೆ ₹20 ಕೋಟಿ, ಭಾರತೀಯ ವಿಜ್ಞಾನ ಅಕಾಡೆಮಿಗೆ 14.52 ಕೋಟಿ, ಭಾರತೀಯ ಆ್ಯಸ್ಟ್ರೋ ಫಿಸಿಕ್ಸ್ ಸಂಸ್ಥೆಗೆ 71.72 ಕೋಟಿ, ರಾಮನ್ ಸಂಶೋಧನಾ ಸಂಸ್ಥೆಗೆ ₹58.77 ಕೋಟಿ, ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಎನರ್ಜಿ ಸ್ಥಾಪನೆಗೆ ₹1 ಕೋಟಿ, ಕಾಫಿ ಮಂಡಳಿಗೆ ₹2ಕೋಟಿ ಅನುದಾನ ಪ್ರಕಟಿಸಿದೆ.

ಬಜೆಟ್‌ನಲ್ಲಿ ಸಾಮಾಜಿಕ ಕಳಕಳಿಗೆ ಆದ್ಯತೆ: ಮಹಿಳೆಯ ವಿವಾಹ ವಯೋಮಿತಿ ಬದಲು..?

ಕರ್ನಾಟಕ ಸಂಯೋಜಿತ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ-2ಕ್ಕೆ ₹100 ಕೋಟಿ ನಿಗದಿಪಡಿಸಲಾಗಿದೆ. ಉಳಿದಂತೆ ರಾಜ್ಯದಲ್ಲಿ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಕೆಲ ಯೋಜನೆಗಳಿಗೆ ಅನುದಾನ ಘೋಷಿಸಲಾಗಿದ್ದು ಇದರಲ್ಲಿ ರಾಜ್ಯದ ಪಾಲನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಒಟ್ಟಾರೆ 100 ಸ್ಮಾರ್ಟ್ ಸಿಟಿ ಯೋಜನೆಗೆ ₹6,252 ಕೋಟಿ, ಐಐಐಟಿ ನಿರ್ವಹಣೆಗೆ ₹180 ಕೋಟಿ, ಐಐಟಿ ನಿರ್ವಹಣೆಗೆ ₹585 ಕೋಟಿ, ಅಮೃತ ಯೋಜನೆಗೆ ₹5841 ಕೋಟಿಗಳನ್ನು ತೆಗೆದಿರಿಸಲಾಗಿದೆ. ಇದರಲ್ಲಿ ರಾಜ್ಯಕ್ಕೆ ಬರಬೇಕಾದ ಹಣ ಇನ್ನಷ್ಟೆ ಬಹಿರಂಗವಾಗಬೇಕಿದೆ.

ಹೊಸ ಶೈಕ್ಷಣಿಕ ನೀತಿ ಜಾರಿಗೆ: ಆನ್‌ಲೈನ್‌ನಲ್ಲಿ ಡಿಗ್ರಿ ಕೋರ್ಸ್‌