ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿದರದಲ್ಲಿ ಸಿಗುತ್ತೆ ಎಲ್ಐಸಿ ವೈಯಕ್ತಿಕ ಸಾಲ, ಪಡೆಯೋದು ಹೇಗೆ?
ಹಣದ ತುರ್ತು ಅಗತ್ಯ ಉಂಟಾದಾಗ ಸಾಲ ಮಾಡೋದು ಅನಿವಾರ್ಯ. ಆದ್ರೆ ಎಲ್ಲಿ ಸಾಲ ಮಾಡೋದು? ಯಾವ ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ ಎಂಬ ಗೊಂದಲವಂತೂ ಇದ್ದೇಇರುತ್ತದೆ. ಪಾಲಿಸಿದಾರರು ಎಲ್ಐಸಿಯಿಂದ ಬ್ಯಾಂಕ್ ಗಿಂತಲೂ ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದು. ಹಾಗಾದ್ರೆ ಎಲ್ಐಸಿ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಎಷ್ಟಿದೆ? ಇಎಂಐ ಎಷ್ಟು? ಇಲ್ಲಿದೆ ಮಾಹಿತಿ.
ನವದೆಹಲಿ (ನ.2): ಹೂಡಿಕೆಗೆ ವಯಸ್ಸಿನ ಹಂಗಿಲ್ಲ. ಈಗಷ್ಟೇ ಉದ್ಯೋಗ ಸಿಕ್ಕಿದವನಿಂದ ಹಿಡಿದು ನಿವೃತ್ತಿ ಅಂಚಿನಲ್ಲಿರುವ ವ್ಯಕ್ತಿ ತನಕ ಎಲ್ಲರೂ ಭವಿಷ್ಯಕ್ಕಾಗಿ ಹೂಡಿಕೆ ಮಾಡಿಯೇ ಮಾಡುತ್ತಾರೆ. ಇಂದು ನೆಮ್ಮದಿಯಾಗಿದ್ದರೆ ಸಾಲದು, ನಾಳೆ ಕೂಡ ಅದೇ ನೆಮ್ಮದಿ ಇರಬೇಕು ಎಂಬ ಕಾರಣಕ್ಕೆ ಹೂಡಿಕೆ ಮಾಡುತ್ತೇವೆ. ಹೂಡಿಕೆ ಮಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ನಾವೆಲ್ಲರೂ ಉತ್ತಮ ರಿಟರ್ನ್ಸ್ ನೀಡುವ ಸಾಧನಗಳನ್ನೇ ಆಯ್ದುಕೊಳ್ಳುತ್ತೇವೆ. ಇನ್ನು ನಿವೃತ್ತಿ ಬದುಕಿಗಾಗಿ ನಾವು ನಮ್ಮ ಆಯ್ಕೆಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತೇವೆ. ಆದರೆ, ಕೆಲವೊಮ್ಮೆ ಯಾವುದೋ ತುರ್ತು ಕೆಲಸ ಎದುರಾಗುತ್ತದೆ. ಆಗ ಹಣದ ಅವಶ್ಯಕತೆ ಉಂಟಾಗುತ್ತದೆ. ಇಂಥ ಸಂದರ್ಭದಲ್ಲಿ ನೀವು ಹೂಡಿಕೆ ಮಾಡಿದ ಸಂಸ್ಥೆಯಿಂದಲೇ ನಿಮಗೆ ಸಾಲ ಸಿಕ್ಕರೆ ಬೇರೆ ಕಡೆ ಸಾಲಕ್ಕಾಗಿ ಅಲೆದಾಡಬೇಕಾದ ಅನಿವಾರ್ಯತೆ ಇರೋದಿಲ್ಲ. ಇಂಥ ಅವಕಾಶ ಭಾರತೀಯ ಜೀವ ವಿಮಾ ನಿಗಮದ ಪಾಲಿಸಿಗಳಲ್ಲಿ ಹೂಡಿಕೆ ಮಾಡಿದವರಿಗಿದೆ. ಅದೂ ಬ್ಯಾಂಕಿಗಿಂತ ಕಡಿಮೆ ಬಡ್ಡಿದರದಲ್ಲಿ. ಹಾಗಾದ್ರೆ ಎಲ್ ಐಸಿಯಲ್ಲಿ ಎಷ್ಟು ಅವಧಿಗೆ ಸಾಲ ಸಿಗುತ್ತದೆ? ಯಾರು ಈ ಸಾಲ ಸೌಲಭ್ಯ ಪಡೆಯಬಹುದು? ಬಡ್ಡಿದರ ಎಷ್ಟು? ಇಲ್ಲಿದೆ ಮಾಹಿತಿ.
ಎಲ್ಐಸಿ ವೈಯಕ್ತಿಕ ಸಾಲ
ಬ್ಯಾಂಕ್ (Bank) ಸೇರಿದಂತೆ ಸಾಲ ನೀಡುವ ಇತರ ಸಂಸ್ಥೆಗಳಿಗೆ ಹೋಲಿಸಿದ್ರೆ ಭಾರತೀಯ ಜೀವ ವಿಮಾ ನಿಗಮದಿಂದ (LIC) ಕಡಿಮೆ ಬಡ್ಡಿದರಕ್ಕೆ (Interest rate) ನೀವು ವೈಯಕ್ತಿಕ ಸಾಲ (Personal loan) ಪಡೆಯಹುದು. ಬಡ್ಡಿದರ ಶೇ.9ರಿಂದ ಪ್ರಾರಂಭವಾಗುತ್ತದೆ ಹಾಗೂ ಸಾಲದ ಅವಧಿ 5 ವರ್ಷಗಳ ತನಕ ಇರುತ್ತದೆ. ಇನ್ನು ಅವಧಿಗೂ ಮುನ್ನವೇ ನೀವು ಸಾಲ (loan) ಮರುಪಾವತಿ (Repayment) ಮಾಡಿದ್ರೆ ಹೆಚ್ಚುವರಿ ಶುಲ್ಕಗಳಿಂದ (fees) ನಿಮಗೆ ವಿನಾಯ್ತಿ ಸಿಗುತ್ತದೆ.
Pink Tax ಅಂದ್ರೇನು? ಮಹಿಳೆಯರು ಯಾಕೆ ನೀಡ್ಬೇಕು ಗೊತ್ತಾ
ಇಎಂಐ ಕ್ಯಾಲ್ಕುಲೇಟರ್
ಎಲ್ಐಸಿಯಿಂದ ನೀವು ಪಡೆಯುವ ವೈಯಕ್ತಿಕ ಸಾಲಕ್ಕೆ ಅವಧಿಯ ಆಧಾರದಲ್ಲಿ ಇಎಂಐ ನಿರ್ಧರಿತವಾಗುತ್ತದೆ. ಒಂದು ವೇಳೆ ನೀವು ಒಂದು ವರ್ಷದ ಅವಧಿಗೆ ಶೇ.9 ಬಡ್ಡಿದರದಲ್ಲಿ 1ಲಕ್ಷ ರೂ. ಸಾಲ ಪಡೆದರೆ, ಆಗ 8,745ರೂ. ಇಎಂಐ ಪಾವತಿಸಬೇಕಾಗುತ್ತದೆ. ಒಂದು ವೇಳೆ ನೀವು ಇದನ್ನು ಎರಡು ವರ್ಷಗಳ ಅವಧಿಗೆ ತೆಗೆದುಕೊಂಡರೆ ಆಗ ಇಎಂಐ 4,568ರೂ. ಆಗಿರುತ್ತದೆ. ಒಂದು ವೇಳೆ ನೀವು 5 ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ರೆ ತಿಂಗಳಿಗೆ 2076ರೂ. ಪಾವತಿಸಬೇಕು. ಇನ್ನು ನೀವು 1 ವರ್ಷಕ್ಕೆ 5ಲಕ್ಷ ರೂ. ಸಾಲ ತೆಗೆದುಕೊಂಡಿದ್ರೆ ಇಎಂಐ ಮೊತ್ತ 44,191ರೂ. ಎರಡು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ರೆ ಇಎಂಐ 23,304ರೂ. ಮೂರು ವರ್ಷಗಳ ಅವಧಿಗೆ ಸಾಲ ತೆಗೆದುಕೊಂಡಿದ್ರೆ ತಿಂಗಳಿಗೆ 18,472ರೂ. ಇಎಂಐ ಪಾವತಿಸಬೇಕು. ಇನ್ನು 4 ವರ್ಷಗಳ ಅವಧಿಗೆ 15,000ರೂ. ಇಎಂಐ ಪಾವತಿಸಬೇಕು. 5 ವರ್ಷಗಳ ಅವಧಿಗೆ 12,917 ರೂ. ಇಎಂಐ ಪಾವತಿಸಬೇಕು.
Twitter ಭಾಗವಾಗಿಲ್ಲ ಎಂದು ಪರಾಗ್ ಅಗರ್ವಾಲ್ ಸ್ಪಷ್ಟನೆ : ಭಾರತೀಯ ಮೂಲದವರಿಗೆ ಸಿಗುವ ಪರಿಹಾರ ಎಷ್ಟು ಗೊತ್ತಾ.
ಎಲ್ಐಸಿಯಿಂದ ವೈಯಕ್ತಿಕ ಸಾಲ ಪಡೆಯೋದು ಹೇಗೆ?
-ಎಲ್ಐಸಿ ಅಧಿಕೃತ ವೆಬ್ ಸೈಟ್ www.licindia.in ಭೇಟಿ ನೀಡಿ.
-ಪಾಲಿಸಿ (Policy) ಸಾಲದ ಆಯ್ಕೆಯನ್ನು ಆಯ್ಕೆ ಮಾಡಿ.
-ಸಾಲದ ಅರ್ಜಿ ಡೌನ್ ಲೋಡ್ (Download) ಮಾಡಿ.
-ಅರ್ಜಿ ಭರ್ತಿ ಮಾಡಿ.
-ಅರ್ಜಿಯನ್ನು ಸ್ಕ್ಯಾನ್ (Scan) ಮಾಡಿ ಅಪ್ಲೋಡ್ ಮಾಡಿ.
-ಇದಾದ ಬಳಿಕ ಎಲ್ಐಸಿ ನಿಮ್ಮ ಸಾಲದ ಮನವಿ ಅರ್ಜಿಯನ್ನು ಪರಿಶೀಲಿಸಲಿದೆ.
-ಒಂದು ವೇಳೆ ಸಾಲಕ್ಕೆ (loan) ಅನುಮೋದನೆ ಸಿಕ್ಕರೆ, ಸಾಲದ ಮೊತ್ತವನ್ನು ನಿಮ್ಮ ಖಾತೆಗೆ (account) ಜಮೆ (Credit) ಮಾಡಲಾಗುತ್ತದೆ.