ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಹೊಸ ದಾಖಲೆ;ಎಲ್ಲ ಶಾರ್ಕ್ ಗಳ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾದ ಸ್ನೇಹಿತರು

ಶಾರ್ಕ್ ಟ್ಯಾಂಕ್ ಇಂಡಿಯಾ 3 ಸೀಸನ್ ನಲ್ಲಿ ಪಾಲ್ಗೊಂಡ ಅನಂತ್ ಬೋಧ್ ಹಾಗೂ ಅರ್ಪಿತ್ ಧೂಪರ್ ಎಲ್ಲ 5 ಮಂದಿ ತೀರ್ಪುಗಾರರನ್ನು ಮೆಚ್ಚಿಸಿ ಅವರಿಂದ ಹೂಡಿಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಇವರಿಬ್ಬರು ಈ ಸೀಸನ್ ನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. 

Shark Tank India 3 Pitchers Anand and Arpit get an interesting all sharks deal for Rs 1250 anu

Business Desk:ಜನಪ್ರಿಯ ರಿಯಾಲಿಟಿ ಶೋ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ -3 ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದೆ. ಈ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ತಮ್ಮ ವಿಭಿನ್ನ ಉತ್ಪನ್ನಗಳ ಮೂಲಕ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ಇತ್ತೀಚೆಗೆ ಪ್ರಸಾರವಾದ ಶಾರ್ಕ್ ಟ್ಯಾಂಕ್ ಇಂಡಿಯಾದ ಆವೃತ್ತಿಯಲ್ಲಿ ಪಾಲ್ಗೊಂಡ ಇಬ್ಬರು ಉದ್ಯಮಿಗಳು ಮಾತ್ರ ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಉದ್ಯಮಿಗಳಿಗೆ ಎಲ್ಲ ತೀರ್ಪುಗಾರರ ಮೆಚ್ಚುಗೆ ಪಡೆಯಲು ಸಾಧ್ಯವಾಗೋದಿಲ್ಲ. ಕೆಲವು ತೀರ್ಪುಗಾರರನ್ನು ಮಾತ್ರ ಮೆಚ್ಚಿಸಿ, ಅವರಿಂದ ಹೂಡಿಕೆ ಪಡೆಯುವಲ್ಲಿ ಸಫಲರಾಗುತ್ತಾರೆ. ಆದರೆ, ಈ ಬಾರಿ ಭಾಗವಹಿಸಿದ ಉದ್ಯಮಿಗಳಿಬ್ಬರು ವಿಶೇಷ ಎನ್ನುವಂತೆ ಎಲ್ಲ 5 ತೀರ್ಪುಗಾರರನ್ನು ಮೆಚ್ಚಿಸುವ ಜೊತೆಗೆ ಅವರಿಂದ ಹೂಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿನೂತನ ಹಾಗೂ ಕ್ರಾಂತಿಕಾರಿ ಬ್ರ್ಯಾಂಡ್ ಆಗಿರುವ ಇದು ಸುಸ್ಥಿರ ಹಾಗೂ ಪರಿಸರಸ್ನೇಹಿ ಉತ್ಪನ್ನಗಳನ್ನು ಸೃಷ್ಟಿಸುತ್ತಿದೆ. ಇದರ ಸ್ಥಾಪಕರಾಗಿರುವ ಶನಂದ್ ಬೋಧ್ ಹಾಗೂ ಅರ್ಪಿತ್ ಧೂಪರ್ ಈ ರಿಯಾಲ್ಟಿ ಶೋದಲ್ಲಿ ಪಾಲ್ಗೊಂಡಿದ್ದರು. ಇವರು 5 ಮಂದಿ ತೀರ್ಪುಗಾರರನ್ನು ಮೆಚ್ಚಿಸುವಲ್ಲಿ ಸಫಲರಾಗಿದ್ದಾರೆ.

ಅನಂತ್ ಬೋಧ್ ಹಾಗೂ ಅರ್ಪಿತ್ ಧೂಪರ್ ಅವರ ಇಕೋ -ಸಲ್ಯೂಷನ್ ಬ್ರ್ಯಾಂಡ್ ಥರ್ಮಾಕೋಲ್ ಗೆ ಪರ್ಯಾಯ ಉತ್ಪನ್ನವನ್ನು ಸೃಷ್ಟಿಸುತ್ತಿದೆ. ಇಂದಿನ ಪರಿಸರ ವ್ಯವಸ್ಥೆಯಲ್ಲಿ ಥರ್ಮಾಕೋಲ್ ಪ್ಲಾಸ್ಟಿಕ್ ಗಿಂತ ಅತಿದೊಡ್ಡ ಸಮಸ್ಯೆಯಾಗಿದೆ. ಅನಂತ್ ಹಾಗೂ ಅರ್ಪಿತಾ ಶಾರ್ಕ್ ಗಳಿಂದ (ತೀರ್ಪುಗಾರರಿಂದ) ಶೇ.1ರಷ್ಟು ಈಕ್ವಿಟಿಗೆ 1250ರೂ. ಹಾಗೂ 100 ಗಂಟೆಗಳನ್ನು ಕೋರಿದ್ದರು. ಇವರಿಬ್ಬರು ತಮ್ಮ ಉತ್ಪನ್ನದ ಬಗ್ಗೆ ನೀಡಿದ ವಿವರಣೆಯಿಂದ ತೀರ್ಪುಗಾರರಲ್ಲಿ ಒಬ್ಬರಾಗಿರುವ ಅಮನ್ ''ನಾನು ಶಾರ್ಕ್ ಟ್ಯಾಂಕ್ ನಲ್ಲಿ 200 ಪಿಚ್ಚಸ್ ನೋಡಿದ್ದೇನೆ. ಆದರೆ, ನಿನ್ನಂತಹ ವ್ಯಕ್ತಿಯನ್ನು ಮಾತ್ರ ನೋಡಿಲ್ಲ'' ಎಂದು ಮೆಚ್ಚುಗೆ ಸೂಚಿಸಿದರು. 

ಉದ್ಯಮ ಪ್ರಾರಂಭಿಸಲು ಕನಿಷ್ಠ ಎಷ್ಟು ಬಂಡವಾಳ ಬೇಕು? ಸ್ಟಾರ್ಟ್ ಅಪ್ ಪ್ರಾರಂಭಿಸೋರಿಗೆ ವಿನೀತಾ ಸಿಂಗ್ ಟಿಪ್ಸ್ ಹೀಗಿದೆ

ತೀರ್ಪುಗಾರರಲ್ಲಿ ಒಬ್ಬರಾಗಿರುವ ವಿನೀತಾ ಅವರು ಆನಂದ್ ಹಾಗೂ ಅರ್ಪಿತ್ ಅವರ ಹಿನ್ನೆಲೆ ಬಗ್ಗೆ ಪ್ರಶ್ನಿಸಿದ್ದರು. ಈ ಸಂದರ್ಭದಲ್ಲಿ ಅರ್ಪಿತ್ ತಾನು ಇಂಜಿನಿಯರಿಂಗ್ ಓದಿರೋದಾಗಿ ತಿಳಿಸಿದ್ದಾರೆ. ಅಲ್ಲದೆ, ಎಲ್ಲ ನಾಗರಿಕರಿಗೂ ಶುದ್ಧ ಗಾಳಿ ಸಿಗುವಂತೆ ಮಾಡಬೇಕೆಂಬ ಹಂಬಲ ಹೊಂದಿರೋದಾಗಿ ತಿಳಿಸಿದ್ದಾರೆ. ಇನ್ನು ಆನಂದ್, ತಾನು ಇಂಜಿನಿಯರಿಂಗ್ ಗೆ ಸೇರ್ಪಡೆಗೊಂಡಿದ್ದೆ. ಏಕೆಂದರೆ ನಮ್ಮದು ಇಂಜಿನಿಯರ್ ಕುಟುಂಬವಾಗಿತ್ತು. ಆದರೆ, ಸ್ವಲ್ಪ ದಿನದಲ್ಲೇ ಇದು ನನ್ನ ಆಸಕ್ತಿಯ ಕ್ಷೇತ್ರವಲ್ಲ ಎಂಬುದು ತಿಳಿಯಿತು. ಹೀಗಾಗಿ ಇಂಜಿನಿಯರಿಂಗ್ ಎರಡನೇ ವರ್ಷದಲ್ಲೇ ಅದನ್ನು ಬಿಟ್ಟು ಮನಶಾಸ್ತ್ರದ ವಿಷಯದಲ್ಲಿ ಪದವಿಗೆ ಸೇರ್ಪಡೆಗೊಂಡಿರೋದಾಗಿ ತಿಳಿಸಿದರು. ಅಲ್ಲದೆ, ಆನಂದ್ ಅವರಿಗೆ ಉದ್ಯಮದಲ್ಲಿ ತುಂಬಾ ಆಸಕ್ತಿಯಿತ್ತಂತೆ, ಅವರ ಮೊದಲ ಉದ್ಯೋಗ 'ಪಾಮ್ ಪಾಮ್ ಪಾಮ್ ಕಾರ್' ನಲ್ಲಿ ಆಗಿತ್ತು. ಇದನ್ನು ಕೇಳುತ್ತಿದ್ದಂತೆ ಅಮನ್ ಹಾಗೂ ವಿನೀತಾ ಜೋರಾಗಿ ನಗಲು ಪ್ರಾರಂಭಿಸಿದರು. 'ಇದು ಎಂಥ ಹೆಸರು?' ಎಂದು ಅಮನ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಆನಂದ್, ಇದೊಂದು ಕಾರ್ ಲೀಸಿಂಗ್ ಕಂಪನಿ' ಎಂದು ಆನಂದ್ ತಿಳಿಸಿದರು. 

ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಬೆಂಗಳೂರು ಸಹೋದರರ ಕಮಾಲ್; ಚ್ಯೂಯಿಂಗ್ ಗಮ್ ಬ್ರ್ಯಾಂಡಿಗೆ ಹರಿದುಬಂತು ಹೂಡಿಕೆ

ಅರ್ಪಿತ್ ಹಾಗೂ ಆನಂದ್ ತಮ್ಮ ಉದ್ಯಮದ ಕುರಿತು ಪ್ರಸ್ತಾಪಿಸಿದ ಮುನ್ನೋಟಗಳಿಂದ ತೀರ್ಪುಗಾರರಾದ ಅನುಪಮ್ ಹಾಗೂ ರಿತೀಶ್ ಪ್ರಭಾವಿತರಾದರು. ಅರ್ಪಿತ್ ಹಾಗೂ ಆನಂದ್ ತಮ್ಮ ಉತ್ಪನ್ನಗಳ ಡೆಮೋ ನೀಡಿದರು. ಉತ್ಪನ್ನ, ಆದಾಯ, ಯುನಿಟ್ ಎಕಾನಾಮಿಕ್ಸ್ ಹಾಗೂ ಇನ್ನೂ ಇತರ ವಿಚಾರಗಳನ್ನು ತಿಳಿದುಕೊಂಡ ಬಳಿಕ ಎಲ್ಲ ತೀರ್ಪುಗಾರರು ಇವರ ಉದ್ಯಮದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದರು. ಹೀಗಾಗಿ ಅನುಪಮ್ ಅವರಿಗೆ ಎಲ್ಲ 5 ತೀರ್ಪುಗಾರರು ಮುಂದಿನ ಮೂರು ತಿಂಗಳ ಕಾಲ ತಲಾ 2 ಗಂಟೆ ನೀಡಲಿದ್ದಾರೆ. ಒಂದು ವೇಳೆ ಅರ್ಪಿತ್ ಹೇಳಿರುವ ಎಲ್ಲ ವಿಚಾರಗಳು ಸರಿಯಾಗಿದ್ದರೆ ಈ ಹಿಂದೆ ಅವರು ಕೇಳಿರುವ ಮೌಲ್ಯಕ್ಕೆ ಉಳಿದ 80 ಗಂಟೆಗಳ ಸಮಯ ನೀಡಲಿದ್ದಾರೆ . ಆದರೆ, ಇದಕ್ಕೆ ಒಂದು ಷರತ್ತು ಕೂಡ ಇದೆ. ಅದೇನೆಂದ್ರೆ ಮುಂದಿನ ಸುತ್ತಿನಲ್ಲಿ ಅವರು ಈಕ್ವಿಟಿ ಮೇಲೆ ಶೇ20ರಷ್ಟು ಡಿಸ್ಕೌಂಟ್ ಪಡೆಯಬೇಕು. 


 

Latest Videos
Follow Us:
Download App:
  • android
  • ios